• Home
 • »
 • News
 • »
 • udupi
 • »
 • Koragajja Miracle: ಸಾಗರದ 4 ತಿಂಗಳ ಬಾಲೆಯನ್ನು ಕಾಪಾಡಿದ ಉಡುಪಿಯ ಕೊರಗಜ್ಜ!

Koragajja Miracle: ಸಾಗರದ 4 ತಿಂಗಳ ಬಾಲೆಯನ್ನು ಕಾಪಾಡಿದ ಉಡುಪಿಯ ಕೊರಗಜ್ಜ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

19 ದಿನಗಳ ಜೀವನ್ಮರಣ ಹೋರಾಟದ ನಂತರ ಮತ್ತೆ ಹೆತ್ತಮ್ಮಳ ಕೈ ಸೇರಿತು. ಹೃದಯ ಬಡಿತವೇ ನಿಂತು ಹೋಯಿತು ಎಂದಿದ್ದ ಮಗು ಕೊರಗಜ್ಜನ ಕಾರಣಿಕದಿಂದ ಮತ್ತೆ ಕಿಲಕಿಲ ನಗುತ್ತಿರುವುದನ್ನ ಕಂಡ ಕುಟುಂಬಸ್ಥರ ಸಂತೋಷಪಟ್ಟರು.

 • Share this:

  ಉಡುಪಿ: ಮಗುವನ್ನು ಎತ್ತಿಕೊಂಡಿರೋ ತಾಯಿ.ಭಾವುಕರಾಗಿ ದೇವರಿಗೆ ಕೈ ಮುಗಿದು ನಿಂತಿರೋ ಪೋಷಕರು. ಇದು ದೈವದ ಮುಂದೆ ಮರುಜನ್ಮ ಪಡೆದ ಕುಟುಂಬದ ಕಥೆ. ಅಷ್ಟೇ ಅಲ್ಲ ತುಳುನಾಡ ಕಾರಣಿಕ ದೈವ ಸ್ವಾಮಿ ಕೊರಗಜ್ಜನ (Koragajja) ಮಹಿಮೆಯ ಕಥೆ. ಕಾಂತಾರ ಸಿನೆಮಾ (Kantara Film) ಬಿಡುಗಡೆಯಾದ್ಮೇಲೆ ಇಡೀ ದೇಶಕ್ಕೆ ತುಳುನಾಡಿನ ದೈವದ ಆವೇಶ, ಕಾರಣಿಕ ಪರಿಚಯವಾಗಿದೆ. ಇದೇ ಸಮಯದಲ್ಲಿ ಉಡುಪಿಯಲ್ಲಿ ನಡೆದ ಒಂದು ಕಾರಣಿಕ ಘಟನೆ ತುಳುನಾಡಿನ ದೈವಗಳ (TuluNadu Daivaradhane) ಮೇಲಿನ ನಂಬಿಕೆ ಹೆಚ್ಚಿಸಿದೆ. ವೈದ್ಯಲೋಕಕ್ಕೇ ಸವಾಲೆನಿಸಿದ್ದ ಅನಾರೋಗ್ಯವನ್ನ ಇಲ್ಲಿ ಕೊರಗಜ್ಜ ಕೆಲವೇ ದಿನಕ್ಕೆ ವಾಸಿ ಮಾಡಿದ್ದಾನೆ ಅಂತ ಭಕ್ತರು ಕೊಂಡಾಡ್ತಿದ್ದಾರೆ.


  ಹೃದಯದ ಬಡಿತವೇ ನಿಂತು ಹೋಗುತ್ತೆ ಎಂದು ಭಾವಿಸಲಾಗಿದ್ದ ಮಗು ಮತ್ತೆ ಕಿಲಕಿಲ ನಗುವಂತಾಗಿದೆ. ಕೊರಗಜ್ಜನ ಈ ಮಹಿಮೆ ಕಂಡು ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಿಸಿದ ತಂದವರೇ ಕೊರಗಜ್ಜನ ಮಡಿಲಿಗೆ ಹಾಕಿದ್ದಾರೆ.


  ಅಷ್ಟಕ್ಕೂ ಆಗಿದ್ದಿಷ್ಟು
  ಅಷ್ಟಕ್ಕೂ ಆಗಿದ್ದೇನೆಂದ್ರೆ ಅದೊಂದು ಸಾಗರ ಮೂಲದ ಕುಟುಂಬ. ಆ ಕುಟುಂಬಕ್ಕೆ ನಾಲ್ಕು ತಿಂಗಳ ಪುಟ್ಟ ಮುದ್ದಾದ ಹೆಣ್ಣುಮಗು. ಇತ್ತೀಚೆಗೆ ಆ ಮಗು ತೀವ್ರ ಜ್ವರಕ್ಕೆ ತುತ್ತಾಗಿತ್ತು. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು ಅಳು ನಿಲ್ಲಿಸಿರ್ಲಿಲ್ಲ. ಹೀಗಾಗಿ ಚಿಕಿತ್ಸೆ ನೀಡುವ ಸಲುವಾಗಿ ಕುಂದಾಪುರದ ಅಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಮಗುವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದ ವೈದ್ಯರು ಮಗುವಿಗೆ ಫಿಟ್ಸ್ ಇರುವುದಾಗಿ ತಿಳಿಸಿದ್ದರು. ಹೀಗಾಗಿ ಸೂಕ್ತಚಿಕಿತ್ಸೆ ನೀಡುವ ನಿಟ್ಟಿನಲ್ಲಿ ತಕ್ಷಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸುವಂತೆ ಕುಂದಾಪುರದ ವೈದ್ಯರು ತಿಳಿಸಿದ್ದಾರೆ.


  ಪದೇ ಪದೇ ಮಗುವಿನ ಹೃದಯ ಸ್ಥಂಭನ
  ವೈದ್ಯರ ಪರೀಕ್ಷಾ ವರದಿ ಹಿಡಿದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬಂದ ಪೋಷಕರು ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅಷ್ಟ್ರಲ್ಲೇ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತಾದ್ರೂ, ಆರೋಗ್ಯ ಚಿಂತಾಜನಕವಾಗಿತ್ತು. ಅಷ್ಟೇ ಅಲ್ಲ ಪದೇ ಪದೇ ಮಗುವಿನ ಹೃದಯ ಸ್ತಬ್ಧವಾದ ಬಗ್ಗೆ ವೈದರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದ್ಯರ ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರೂ ಮಗುವಿನ ಪ್ರಾಣ ಉಳಿಯುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.


  ಕೊರಗಜ್ಜನ ಕ್ಷೇತ್ರದಲ್ಲಿ ಪ್ರಾರ್ಥನೆ
  ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಪರಿಸ್ಥಿತಿ ಕಂಡ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದರು. ಅಷ್ಟರಲ್ಲಿ ಆಸ್ಪತ್ರೆ ಬಳಿಯಿದ್ದ ಓರ್ವ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದರು. ಮಗುವಿನ ಹೆತ್ತವರು ಇಂದ್ರಾಳಿ ಬಳಿ ಇರುವ ಇದೇ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಗಂಧಪ್ರಸಾದ ಪಡೆದು ತೆರಳಿದ್ದರು.


  ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


  ಯಾವಾಗ ಕೊರಗಜ್ಜ ಸನ್ನಿಧಾನಕ್ಕೆ ಪೋಷಕರು ಭೇಟಿ ನೀಡಿದರೋ ಆ ಕ್ಷಣದಿಂದ ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಆರೋಗ್ಯ ದಿಢೀರಾಗಿ ಚೇತರಿಕೆ ಕಾಣಿಸಿಕೊಳ್ಳಲಾರಂಭಿಸಿತು. ಇತ್ತ ವೈದ್ಯರು ಕೂಡ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡ್ತಿದರು.


  19 ದಿನಗಳ ಜೀವನ್ಮರಣ ಹೋರಾಟ ನಂತರ ಪವಾಡ
  ಅಂತೂ ಮಗು 19 ದಿನಗಳ ಜೀವನ್ಮರಣ ಹೋರಾಟದ ನಂತರ ಮತ್ತೆ ಹೆತ್ತಮ್ಮಳ ಕೈ ಸೇರಿತು. ಹೃದಯ ಬಡಿತವೇ ನಿಂತು ಹೋಯಿತು ಎಂದಿದ್ದ ಮಗು ಕೊರಗಜ್ಜನ ಕಾರಣಿಕದಿಂದ ಮತ್ತೆ ಕಿಲಕಿಲ ನಗುತ್ತಿರುವುದನ್ನ ಕಂಡ ಕುಟುಂಬಸ್ಥರ ಸಂತೋಷಪಟ್ಟರು.


  ಇದನ್ನೂ ಓದಿ: Bamboo Cracker: ಬಿದಿರಿನಿಂದ ತಯಾರಾಯ್ತು ಪಟಾಕಿ! ಉತ್ತರ ಕನ್ನಡ ಕೃಷಿಕನ ಸಂಶೋಧನೆ


  ಅಷ್ಟೇ ಅಲ್ದೇ, ಇಂದ್ರಾಳಿ ಬಳಿಯ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಮಗುವನ್ನು ಸ್ವಾಮಿಯ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಿ ಗಂಧಪ್ರಸಾದ ಪಡೆದರು. ಕಾಂತಾರದ ಹವಾದ ನಡುವೆಯೇ ಘಟಿಸಿದ ಈ ಘಟನೆ ತುಳುನಾಡಿನ ದೈವಗಳ ಕಾರಣಿಕಕ್ಕೆ‌ ಸಾಕ್ಷಿ ಅಂತ ಕರಾವಳಿ ಮಂದಿ ಕೈಮುಗಿದರು.


  ವರದಿ: ಇರ್ಷಾದ್ ಕಿನ್ನಿಗೋಳಿ

  Published by:ಗುರುಗಣೇಶ ಡಬ್ಗುಳಿ
  First published: