Kollur Mookambika Temple: 400 ವರ್ಷಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಿಗೆ ಹೊಸ ರಥ!

ಕೊಲ್ಲೂರಿನ ಹೊಸ ರಥ

ಕೊಲ್ಲೂರಿನ ಹೊಸ ರಥ

ಕೆಳದಿ ಅರಸರು ಕೊಟ್ಟ ರಥ ಈಗಾಗಲೇ 400 ವರ್ಷ ಹಳೆಯದ್ದಾದರಿಂದ ಹಳೆ ರಥದ ರೂಪದಲ್ಲೇ ಹೊಸ ರಥವನ್ನ ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಹಳೆ ರಥದ ಪಡಿಯಚ್ಚು ತೆಗೆದು ಹೊಸ ರಥ ನಿರ್ಮಿಸಲಾಗಿದೆ.

  • News18 Kannada
  • 4-MIN READ
  • Last Updated :
  • Udupi, India
  • Share this:

    ಉಡುಪಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಇನ್ನುಮುಂದೆ ನೂತನ ರಥವೇರಿ ಬರಲಿದ್ದಾಳೆ ಮೂಕಾಂಬಿಕೆ ದೇವಿ. ತ್ರಿಡಿ ತಂತ್ರಜ್ಞಾನದ ಮೂಲಕ ನಿರ್ಮಾಣಗೊಂಡ ನೂತನ ರಥವನ್ನ (Kollur Mookambika Devi) ಅದ್ದೂರಿಯಾಗಿ ಮೆರವಣಿಗೆ ಮೂಲಕ ಕೊಲ್ಲೂರು ಕ್ಷೇತ್ರಕ್ಕೆ ತಂದು ಸಮರ್ಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ (Udupi News) ಇದೇ ಮೊದಲು ತ್ರಿಡಿ ತಂತ್ರಜ್ಞಾನ ಬಳಸಿ ಹಳೆ ರಥದ ಅಚ್ಚನ್ನ ಹೊಸ ರಥಕ್ಕೆ (Kollur Temple Chariot) ಬಳಸಿ ನಿರ್ಮಿಸಲಾಗಿದೆ.‌ ಇಂದು (ಫೆಬ್ರವರಿ 16) ಹೊಸ ರಥಕ್ಕೆ ಹಳೆ ರಥದ ದೈವಿಕ ಶಕ್ತಿಯ ವರ್ಗಾವಣೆ ಧಾರ್ಮಿಕ ಪ್ರಕ್ರಿಯೆ ನಡೆಯಲಿದೆ.


    ತ್ರಿಡಿ ಸ್ಕ್ಯಾನಿಂಗ್ ಮೂಲಕ ಹಳೆ ರಥದ ಪಡಿಯಚ್ಚು
    ಕೆಳದಿ ಅರಸರು ಕೊಟ್ಟ ರಥ ಈಗಾಗಲೇ 400 ವರ್ಷ ಹಳೆಯದ್ದಾದರಿಂದ ಹಳೆ ರಥದ ರೂಪದಲ್ಲೇ ಹೊಸ ರಥವನ್ನ ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಹಳೆ ರಥದ ಪಡಿಯಚ್ಚು ತೆಗೆದು ಹೊಸ ರಥ ನಿರ್ಮಿಸಲಾಗಿದೆ.




    ಒಂದು ಕೋಟಿ ವೆಚ್ಚ! ಕಲಾವಿದರು ಇವರೇ
    ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ. ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಶೆಟ್ಟಿ ಒಂದು ಕೋಟಿ ವೆಚ್ಚದಲ್ಲಿ ಕೋಟೇಶ್ವರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ಮೂಲಕ ರಥ ನಿರ್ಮಾಣ ಮಾಡಿಸಿ ದೇಗುಲಕ್ಕೆ ಸಮರ್ಪಿಸಲಾಗಿದೆ.


    ಇದನ್ನೂ ಓದಿ: Transgenders Canteen In Udupi: ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು, ಈ ವಿಶೇಷ ಕ್ಯಾಂಟೀನ್‌ಗೆ ಬೇಕು ಜನ ಬೆಂಬಲ




    ಒಂಬತ್ತು ತಿಂಗಳ ಕಾಲ ಕುಂಭಾಷಿಯಲ್ಲಿ ನಿರ್ಮಾಣಗೊಂಡ ರಥವನ್ನ ಮೆರವಣಿಗೆ ಮೂಲಕ ಕೊಲ್ಲೂರು ಕ್ಷೇತ್ರಕ್ಕೆ ಸಮರ್ಪಿಸಲಾಗುತ್ತಿದೆ. ಈ ರಥವನ್ನು ಧಾರ್ಮಿಕ ಪೂಜಾ ವಿಧಿವಿಧಾನದ ಮೂಲಕ ಹಳೆ ರಥದ ದೈವಿಕ ಶಕ್ತಿ ಇರುವ ಕಳೆ ಹೊಸ ರಥಕ್ಕೆ ವರ್ಗಾಯಿಸಲಾಗಿದೆ. ನಂತರ ಮಾರ್ಚ್ ತಿಂಗಳಲ್ಲಿ ಅದ್ದೂರಿ ರಥೋತ್ಸವ ನಡೆಯಲಿದೆ. ಈ ರಥೋತ್ಸವದಲ್ಲಿ ಹೊಸ ರಥವೇರಿ ಬರುವ ಮೂಕಾಂಬಿಕೆ ದೇವಿಯನ್ನ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ‌ಆಗಮಿಸಲಿದ್ದಾರೆ.


    ಇದನ್ನೂ ಓದಿ: ಉಡುಪಿಯಲ್ಲಿ Plastic Road! 1 ಕ್ವಿಂಟಲ್ ಪ್ಲಾಸ್ಟಿಕ್ ಇದ್ರೆ 1 ಕಿಲೋ ಮೀಟರ್ ರಸ್ತೆ ರೆಡಿ!




    ಒಟ್ಟಾರೆ ಅರಸರ ಕಾಲದ ರಥದಂತೆ ಹೊಸ ರಥ ಹೊಸ ರೂಪದಲ್ಲಿ ಕಂಗೊಳಿಸಲಿದೆ. ಈ ರಥ ನೋಡಲು ಇನ್ನು ಮುಂದೆ ಸಾಲು ಸಾಲು ಭಕ್ತರ ದಂಡೇ ಹರಿದುಬರಲಿದೆ.


    ವರದಿ: ಪರೀಕ್ಷಿತ್ ಶೇಟ್, ನ್ಯೂಸ್ 18 ಉಡುಪಿ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು