ಉಡುಪಿ: ಮನೆಯಿಂದ ಮತದಾನ ಮಾಡಿದ್ದ ವ್ಯಕ್ತಿ ಫಲಿತಾಂಶಕ್ಕೂ ಮೊದಲೆ ಮೃತಪಟ್ಟ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ನಿವಾಸಿ ನಿವೃತ್ತ ಶಿಕ್ಷಕ 94 ವರ್ಷದ ಗುರುರಾಜ್ ಭಟ್ ಎಂಬುವವರೇ ಮತದಾನ ಮಾಡಿ ಸಾವನ್ನಪ್ಪಿದವರು. ಕುಂದಾಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುರಾಜ್ ಭಟ್ ಅವರು ಎರಡು ದಿನಗಳ ಹಿಂದೆಯಷ್ಟೆ ವಿಧಾನಸಭಾ ಚುನಾವಣೆಗಾಗಿ ಮನೆಯಲ್ಲಿ ಮತ ಚಲಾಯಿಸಿದ್ದರು.
ಮತ ಚಲಾಯಿಸಿದ ಎರಡು ದಿನಗಳ ನಂತರ ಸಾವು
ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ಗುರುರಾಜ್ ಭಟ್ ಅವರಿಗೆ ಅಸಾಧ್ಯವಾಗಿತ್ತು. ಹೀಗಾಗಿ ಮನೆಯಲ್ಲಿಯೇ ಮತದಾನ ಮಾಡಲು ಜಿಲ್ಲಾ ಚುನಾವಣಾ ಆಯೋಗ ಅವಕಾಶ ಮಾಡಿತ್ತು. ಮತ ಚಲಾಯಿಸಿದ ಎರಡು ದಿನಗಳ ಬಳಿಕ ಗುರುರಾಜ್ ಭಟ್ ಮೃತಟ್ಟಿದ್ದಾರೆ.
ಮತದಾನ ಮಾಡಿ ಪ್ರಾಣಬಿಟ್ಟ ಅಜ್ಜಿ
ರಾಯಚೂರು: ವೃದ್ಧೆಯೊಬ್ಬರು ಮತದಾನ ಮಾಡಿ ಪ್ರಾಣಬಿಟ್ಟ ಘಟನೆಯೊಂದು ರಾಯಚೂರಿನಲ್ಲಿ ನಡೆದಿದೆ. ಮತದಾನ (Karnataka Elections 2023 Voting) ಮಾಡಿದ ಕೇವಲ ಅರ್ಧ ಗಂಟೆಯಲ್ಲೇ ಅಜ್ಜಿ ಸಾವನ್ನಪ್ಪಿದ್ದಾರೆ. ರಾಯಚೂರಿನ (Raichur Viral News) ಸಿಂಧನೂರು ತಾಲೂಕಿನ (Sindhanuru) ಅಲಬನೂರಿನಲ್ಲಿ ಈ ಘಟನೆ ನಡೆದಿದ್ದು 82 ವರ್ಷದ ಮಂಗಮ್ಮ ಮೃತಪಟ್ಟ ವಯೋವೃದ್ದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಆರಂಭಿಸಿದ ಸೌಲಭ್ಯವನ್ನು ಮಂಗಮ್ಮ ಬಳಸಿಕೊಂಡಿದ್ದರು. ಮನೆಯಲ್ಲಿಯೇ ಕುಳಿತು ತಮ್ಮ ಹಕ್ಕನ್ನು ಚಲಾಯಿಸಿ ಮತದಾನ ಮಾಡಿದ್ದರು.
ಧಾರವಾಡ: ಗಂಡ ಮೃತಪಟ್ಟು ಒಂದೇ ದಿನಕ್ಕೆ ಮತದಾನ ಮಾಡಿದ 80ರ ಅಜ್ಜಿ!
ಪ್ರತಿ ಮತವೂ ಅಮೂಲ್ಯ ಅಮೂಲ್ಯವಾಗಿದೆ ಎಂದು ಅರಿತ 80 ವರ್ಷದ ಅಜ್ಜಿಯೊಬ್ಬರು ಗಂಡ ಮೃತರಾದರೂ ಸಹ ಮತದಾನ ಮಾಡುವ ಮೂಲಕ ಮತದಾನದ (Voting) ಮಹತ್ವ ಸಾರಿದ್ದಾರೆ.
ಹೌದು, ಧಾರವಾಡದ ಸಾರಸ್ವತಪುರ ನಗರದ ನಿವಾಸಿ ಜ್ಯೋತಿಬಾ ತಿಬೇಲಿ ಎಂಬ 95 ವರ್ಷದ ವೃದ್ಧೆಯೋರ್ವರು ಮೇ 1 ರಂದು ನಿಧನರಾಗಿದ್ದರು. ಮನೆ ಯಜಮಾನ ಮೃತಪಟ್ಟ ಸುದ್ದಿ ತಿಳಿದ ಕುಟುಂಬಸ್ಥರಿಗೆ ಆಘಾತವಾಗಿತ್ತು. ಅಲ್ಲದೇ ಮೃತ ವೃದ್ಧನ ಪತ್ನಿ ಶಾಂತಾಬಾಯಿ ತಿಬೇಲಿ ಅಜ್ಜಿಗೆ ಸಿಡಿಲು ಬಡಿದಂತಾಗಿತ್ತು.
ಇದನ್ನೂ ಓದಿ: Raichur: ಗಂಡ ಒಂದು ಪಕ್ಷದ ಅಭ್ಯರ್ಥಿ, ಹೆಂಡ್ತಿ ಪಕ್ಷೇತರ ಕ್ಯಾಂಡಿಡೇಟ್! ಸಂಸಾರದಲ್ಲೇ ಶುರುವಾಯ್ತು ಪಾಲಿಟಿಕ್ಸ್!
ಇತ್ತ 80 ವರ್ಷ ದಾಟಿದ ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ತಿಬೇಲಿ ಅವರ ಮನೆಗೆ ಆಗಮಿಸುತ್ತಾರೆ.
ಆದರೆ ಮನೆಯ ಯಜಮಾನ ಹಿರಿಯ ಜೀವಿ ಮೃತಪಟ್ಟ ಸುದ್ದಿ ತಿಳಿದು ಚುನಾವಣಾ ಅಧಿಕಾರಿಗಳು ವಾಪಸ್ ಆಗಲು ಮುಂದಾಗುತ್ತಾರೆ. ಆದರೆ ಮೃತ ವೃದ್ಧನ ಮಕ್ಕಳು ಹಾಗೂ ಮೊಮ್ಮಕ್ಕಳು ಅಜ್ಜಿಯ ಬಳಿ ಮತದಾನ ಮಾಡುವಂತೆ ಕೇಳುತ್ತಾರೆ. ಆಗ ಚುನಾವಣಾ ಅಧಿಕಾರಿಗಳು ದುಃಖದ ಮಡುವಿನಲ್ಲಿದ್ದ ಅಜ್ಜಿಯನ್ನು ಕೇಳಿದಾಗ ಮತದಾನ ಮಾಡಲು ಒಪ್ಪಿ ಈ ವೃದ್ಧೆ ತಮ್ಮ ಅತ್ಯಮೂಲ್ಯ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: Mantralaya Devotee Rishi Sunak: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗುರುವಾರ ಉಪವಾಸ ಮಾಡ್ತಾರೆ!
ಇಂತಹ ಪರಿಸ್ಥಿತಿಯಲ್ಲಿಯೂ ಸಹ ಅಜ್ಜಿ ಮತದಾನದ ಮಾಡಿದ್ದ ಎಲ್ಲರಿಗೂ ಮತದಾನದ ಮಹತ್ವ ತಿಳಿಸಿಕೊಟ್ಟಂತಾಗಿದೆ. ಆದರೆ ಮತದಾನ ಮಹತ್ವ ತಿಳಿಸಿದರೂ ಸಹ ಅದೆಷ್ಟೋ ಜನರು ತಮ್ಮ ಮತದಾನ ಮಾಡದೇ ಇರುತ್ತಾರೆ. ಅಂತಹ ಹಲವರಿಗೆ ಈ ಅಜ್ಜಿಗೆ ಸ್ಪೂರ್ತಿದಾಯಕ ಎಂಬ ಮಾತು ಕೇಳಿಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ