• Home
  • »
  • News
  • »
  • udupi
  • »
  • Junior Rishab Shetty: ಇವ್ರೇ ನೋಡಿ ಕಾಂತಾರದ ಜ್ಯೂನಿಯರ್ ರಿಷಬ್ ಶೆಟ್ಟಿ! ಲುಕ್ಕು, ಗೆಟಪ್ಪು ಎಲ್ಲಾ ಸೇಮ್

Junior Rishab Shetty: ಇವ್ರೇ ನೋಡಿ ಕಾಂತಾರದ ಜ್ಯೂನಿಯರ್ ರಿಷಬ್ ಶೆಟ್ಟಿ! ಲುಕ್ಕು, ಗೆಟಪ್ಪು ಎಲ್ಲಾ ಸೇಮ್

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಥಟ್ಟನೆ ನೋಡಿದ್ರೆ ರಿಷಬ್ ಶೆಟ್ಟಿ ಝೆರಾಕ್ಸ್​ನಂತಿರೋ ಪ್ರದೀಪ್ ಆಚಾರ್ಯ ಅವರಿಗೆ ಅದೇ ಲುಕ್​ನಲ್ಲಿ ಜಾಹಿರಾತು ಮಾಡಿಕೊಡುವಂತೆ ಸ್ಥಳೀಯ ಹೊಟೇಲ್ ಒಂದು ಸಂಪರ್ಕಿಸಿದ್ದಾರಂತೆ!

  • Share this:

    ಉಡುಪಿ: ರಿಷಬ್ ಶೆಟ್ರ (Rishab Shetty) ಗೆಟಪ್ಪು, ಕಾಂತಾರದ ಅದೇ ಆರ್​ಎಕ್ಸ್ 100 ಬೈಕು, ಅರೇ! ಕಾಂತಾರದ ಸಂಭ್ರಮೋತ್ಸವಕ್ಕೆ ಮುಂಬೈ, ದುಬೈ ಅಂತ ಓಡಾಡ್ತಿರೋ ರಿಷಬ್ ಶೆಟ್ರು ಇಲ್ಲೆಲ್ಲಿ ಬಂದ್ರು ಅಂತ ಉಡುಪಿಯ (Udupi) ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ. ಇವ್ರು ರಿಯಲ್ ರಿಷಬ್ ಅಲ್ಲ, ಜ್ಯೂನಿಯರ್ ರಿಷಬ್. ಕಾಂತಾರದ ಶಿವನ ಗೆಟಪ್ ಈಗ ಈ ಜ್ಯೂನಿಯರ್ ರಿಷಬ್​ ಶೆಟ್ರಿಗೂ (Junior Rishab Shetty) ಡಿಮ್ಯಾಂಡ್ ಬರುವಂತೆ ಮಾಡಿದೆ.


    ಹೌದು, ಇವರು ರಿಷಬ್ ಶೆಟ್ರ ತವರು ಜಿಲ್ಲೆಯ ಉಡುಪಿಯ ಶಿರ್ವದ ಪ್ರದೀಪ್ ಆಚಾರ್ಯ. ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದು ಸಿಂಪಲ್ ಲೈಫ್ ಲೀಡ್ ಮಾಡ್ತಿರೋ ಇವ್ರು ಗಡ್ಡ. ಫೇಸ್ ಕಟ್ ನೋಡಿ ಶಾಪ್ಗೆ ಬಂದವರೆಲ್ಲ ‘‘ಓಯ್.. ನೀವ್ ರಿಷಬ್ ಶೆಟ್ರ ಥರ ಕಾಣ್ತೀರಿ ಮಾರ್ರೆ! ಅಂದಿದ್ರಂತೆ.


    ಜ್ಯೂನಿಯರ್ ರಿಷಬ್ ಆಗಿ ಬದಲಾಗಿದ್ದು ಹೀಗೆ!
    ಹೀಗೇ ಒಬ್ರು ಇಬ್ರಲ್ಲ, ಹತ್ತಾರು ಜನ ಹೇಳಿದ್ ಮೇಲೆ ಪ್ರದೀಪ್ ಆಚಾರ್ಯ ಕೂಡಾ ಅದಕ್ಕೆ ತಕ್ಕಂತೆ ಬದಲಾದ್ರು. ಜ್ಯೂನಿಯರ್ ರಿಷಬ್ ಕಂ ಕಾಂತಾರದ ಶಿವನಾಗಿ ಬದಲಾದ್ರು. ಆಮೇಲಂತೂ ಕೇಳೋದೆ ಬೇಡ, ಜನರೆಲ್ಲ ಇವ್ರು ಜೊತೆನೆ ಸೆಲ್ಫಿ ತಕೊಳ್ಳೋಕೆ ಶುರುಮಾಡಿಬಿಟ್ರು.


    ಇದನ್ನೂ ಓದಿ: Koragajja: ಕೊರಗಜ್ಜನ ಭಕ್ತರಾದ ಉಕ್ರೇನ್ ದಂಪತಿ! ದೈವದ ಪವಾಡಕ್ಕೆ ಕೈಮುಗಿದ ವಿದೇಶಿಗರು


    ಸೇಮ್ ಟು ಸೇಮ್ ಆ ರಿಷಬ್!
    ಅರ್ಧ ಕೈ ತೋಳಿನ ಶರ್ಟು, ಯಮಹಾ ಆರ್​ಎಕ್ಸ್ 100 ಬೈಕು, ಹೇರ್ ಸ್ಟೈಲು, ಕನ್ನಡಕ ಹೀಗೆ ಎಲ್ಲವೂ ರಿಷಬ್ರನ್ನೇ ಹೋಲುತ್ತೆ ಅನ್ನೋದೆ ಪ್ರದೀಪ್ ಆಚಾರ್ಯ ಅವರಿಗೆ ಡಿಮ್ಯಾಂಡ್ ಬರೋಕೆ ಕಾರಣವಾಗಿದೆ.


    ಹುಡುಕಿ ಬಂತು ಜಾಹೀರಾತು ಆಫರ್!
    ಥಟ್ಟನೆ ನೋಡಿದ್ರೆ ರಿಷಬ್ ಶೆಟ್ಟಿಯವರ ಝೆರಾಕ್ಸ್​ನಂತಿರೋ ಪ್ರದೀಪ್ ಆಚಾರ್ಯ ಅವರಿಗೆ ಅದೇ ಲುಕ್​ನಲ್ಲಿ ಜಾಹಿರಾತು ಮಾಡಿಕೊಡುವಂತೆ ಸ್ಥಳೀಯ ಹೊಟೇಲ್ ಒಂದು ಸಂಪರ್ಕಿಸಿದ್ದಾರಂತೆ. ಹೀಗೆ ಕಾಂತಾರ ಸಿನೆಮಾದಲ್ಲಿ ಕಾಣಿಸಿಕೊಳ್ಳದೆಯೂ ಕಾಂತಾರದ ರಿಷಬ್ ಶೆಟ್ರ ಕ್ರೇಝ್​ನಿಂದ ಕರಾವಳಿಯ ಯುವಕನಿಗೆ ಶುಕ್ರದೆಸೆ ಕುದುರಿರೋದು ಸಖತ್ ಸುದ್ದಿಮಾಡ್ತಿದೆ.


    ವರದಿ: ಇರ್ಷಾದ್ ಕಿನ್ನಿಗೋಳಿ

    Published by:ಗುರುಗಣೇಶ ಡಬ್ಗುಳಿ
    First published: