Commonwealth Games: ಪದಕ ಗೆದ್ದು ಬಂದ ಗುರುರಾಜ್ ಪೂಜಾರಿ, ಸರ್ಕಾರದ ವಿರುದ್ಧ ಬೇಸರ

ಕಾಮನ್​ವೆಲ್ತ್​​​ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಏಕೈಕ ಕನ್ನಡಿಗ ಗುರುರಾಜ್ ಪೂಜಾರಿ ಉಡುಪಿಗೆ ಆಗಮಿಸಿದಾಗ ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಇದೇ ವೇಳೆ ಗುರುರಾಜ್ ಪೂಜಾರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರು.

ಗುರುರಾಜ್ ಪೂಜಾರಿಗೆ ಸನ್ಮಾನ

ಗುರುರಾಜ್ ಪೂಜಾರಿಗೆ ಸನ್ಮಾನ

 • Share this:
  ಉಡುಪಿ: ಕಾಮನ್​ವೆಲ್ತ್ ಗೇಮ್ಸ್-2022 (Commonwealth Games) ಕ್ರೀಡಾಕೂಟದಲ್ಲಿ ವೈಟ್ ಲಿಫ್ಟಿಂಗ್ (Weight Lifting) ಸ್ಪರ್ಧೆಯಲ್ಲಿ ಭಾರತವನ್ನು (India) ಪ್ರತಿನಿಧಿಸಿ ಕಂಚಿನ ಪದಕ (Bronze Medal) ಗೆದ್ದ ಕನ್ನಡಿಗ ಗುರುರಾಜ್ ಪೂಜಾರಿ (Gururaj Poojari) ಇಂದು ತವರಿಗೆ ಆಗಮಿಸಿದರು. ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಏಕೈಕ ಕನ್ನಡಿಗ ಗುರುರಾಜ್ ಪೂಜಾರಿಯವರಾಗಿದ್ದಾರೆ. ಕುಂದಾಪುರದ ಗುರುರಾಜ್ ಪೂಜಾರಿ ಉಡುಪಿಗೆ (Udupi) ಆಗಮಿಸಿದಾಗ ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ (Welcome) ಕೋರಿ ಅಭಿನಂದಿಸಲಾಯಿತು. ಇದೇ ವೇಳೆ ಗುರುರಾಜ್ ಪೂಜಾರಿ ಸರ್ಕಾರದ (State Government) ವಿರುದ್ಧ ಅಸಮಾಧಾನ ಹೊರಹಾಕಿದ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದವರಿಗೆ ನಮ್ಮ ರಾಜ್ಯದಲ್ಲಿ ಬೆಲೆ‌ ಇಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದವರನ್ನ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಪ್ರೋತ್ಸಾಹಧನ ನೀಡಲು ವಿಳಂಬ ಮಾಡಲಾಗುತ್ತಿದೆ ಅಂದ್ರು.

  ಇಂಗ್ಲೆಂಡ್​​ನ ಬರ್ಮಿಂಗ್​​​ಹ್ಯಾಮ್​​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ವೈಟ್ ಲಿಫ್ಟಿಂಗ್​ನಲ್ಲಿ ಪದಕ ಗೆದ್ದ ಏಕೈಕ ಕನ್ನಡಿಗ ಅಂದ್ರೆ ಅದು ಗುರುರಾಜ್ ಪೂಜಾರಿ. 61 ಕೆಜಿ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಗುರುರಾಜ್ ಪೂಜಾರಿ ಕಂಚಿನ ಪದಕ ಪಡೆದಿದ್ದಾರೆ.

  ಗುರುರಾಜ್ ಪೂಜಾರಿಗೆ ಸನ್ಮಾನ

  ಇಂದು ಇಂಗ್ಲೆಂಡ್​ನಿಂದ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದಾಗ ಸ್ವಾಗತ ಕೋರಲಾಯ್ತು. ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಜಿಲ್ಲಾಡಳಿತದ ಪರವಾಗಿ ಅಭಿನಂಧಿಸಿದರು.

  Gururaj Pujari won medal in the Commonwealth Games is upset with the government
  ಉಡುಪಿಯಲ್ಲಿ ಗುರುರಾಜ್ ಪೂಜಾರಿ


  ಹೆಗ್ಗಡೆ, ನಳಿನ್​ ಕಟೀಲ್​ರಿಂದ ಸ್ವಾಗತ

  ಗುರುರಾಜ್ ಪೂಜಾರಿಯವರನ್ನು ವಿಮಾನ ನಿಲ್ದಾಣದಲ್ಲಿ ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಬರಮಾಡಿಕೊಂಡರು. ಅವರಿಗೆ ಗುರುರಾಜ್ ಪೂಜಾರಿ ಧನ್ಯವಾದ ಸಲ್ಲಿಸಿದರು.

  ಇದನ್ನೂ ಓದಿ: ಏಷ್ಯಾಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ಸ್ಟಾರ್​ ಬೌಲರ್ ಔಟ್

  ಸರ್ಕಾರದ ವಿರುದ್ಧ ಅಸಮಾಧಾನ

  ಕಾಮನ್​ವೆಲ್ತ್ ಗೇಮ್​ನಲ್ಲಿ ಪದಕ ಪಡೆದು ತವರಿಗೆ ಆಗಮಿಸಿ ಗುರುರಾಜ್ ಪೂಜಾರಿ ಬೇಸರ ಹೊರಹಾಕಿದ್ದಾರೆ. ಒಂದು ವರ್ಷಕ್ಕೆ ಬರುವ ಪ್ರೋತ್ಸಾಹಧನ ಎರಡು ಮೂರು ವರ್ಷ ವಿಳಂಬ ಮಾಡಲಾಗುತ್ತಿದೆ. ಪ್ರೋತ್ಸಾಹಧನವನ್ನು ಕೂಡ ಸರ್ಕಾರ ಕಡಿಮೆ ಮಾಡಿದೆ. ಪದಕ ತಂದ ಕೂಡಲೇ ಪ್ರೋತ್ಸಾಹಧನ ನೀಡಿದ್ರೆ ಮುಂದಿನ ಕ್ರೀಡಾ ಸಾಧನೆಗೆ ದಾರಿಯಾಗುತ್ತೆ ಅಂತಾ ಹೇಳಿದ್ರು.

  Gururaj Pujari won medal in the Commonwealth Games is upset with the government
  ಕಾಮನ್​​ವೆಲ್ತ್​ ಗೇಮ್​ನಲ್ಲಿ ಪದಕ ಗೆದ್ದ ಗುರುರಾಜ್


  ಬೇರೆ ರಾಜ್ಯಗಳೇ ಉತ್ತಮ

  ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಸರ್ಕಾರ ಕಡಿಮೆ ಪ್ರೋತ್ಸಾಹಧನ ನೀಡಿದೆ. ಇತರೆ ರಾಜ್ಯದಲ್ಲಿ ಕಂಚಿನ ಪದಕ ಗೆದ್ದವರಿಗೆ 30-40 ಲಕ್ಷ ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಕೇವಲ 8 ಲಕ್ಷ ಘೋಷಣೆ ಮಾಡಿದೆ ಅಂದರು.

  ಇದನ್ನೂ ಓದಿ: ನಟ ಸುದೀಪ್​ ಮನೆಗೆ ತೆರಳಿ ತ್ರಿವರ್ಣ ಧ್ವಜ ನೀಡಿದ ನಳೀನ್ ಕುಮಾರ್ ಕಟೀಲ್

  ತಿಂಗಳಿಗೆ 30-40 ಸಾವಿರ ಖರ್ಚು

  ವೈಟ್ ಲಿಫ್ಟ್ ಬಹಳಷ್ಟು ದುಬಾರಿ. ತಿಂಗಳಿಗೆ ಮೂವತ್ತರಿಂದ ನಲವತ್ತು ಸಾವಿರ ಖರ್ಚು ಬೀಳುತ್ತೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿದ್ರೆ ಹೆಚ್ಚಿನ ಪದಕ ಬರಬಹುದು. ಸರ್ಕಾರಿ ಉದ್ಯೋಗವೂ ಸಿಕ್ಕಿದರೆ ಕುಟುಂಬಕ್ಕೂ ಸಹಕಾರ ಸಿಕ್ಕಂತಾಗುತ್ತೆ ಅಂತಾ ಹೇಳಿದರು.

  ಪದಕ ನನ್ನ ಪತ್ನಿಗೆ ಅರ್ಪಣೆ

  ಯಾವುದೇ ಕ್ರೀಡೆಯಾದರೂ ಪರಿಶ್ರಮ ಮುಖ್ಯ. ಯಾವ ಕ್ರೀಡೆಯಲ್ಲಿ ಯಾರಿಗೆ ಇಷ್ಟ ಇದ್ದರೂ ಅದರಲ್ಲಿ ಕಠಿಣ ಅಭ್ಯಾಸ ಮಾಡಿದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ಈ ಬಾರಿಯ ಕಾಮನ್ ವೆಲ್ತ್​ನಲ್ಲಿ ಭಾರತದ ಕ್ರೀಡಾಳುಗಳು ಉತ್ತಮ ಸಾಧನೆ ಮಾಡಿದ್ದು ತೃಪ್ತಿ ತಂದಿದೆ. ನನ್ನ ಪದಕವನ್ನು ನನ್ನ ಪತ್ನಿಗೆ ಸಮರ್ಪಿಸಿದ್ದೇನೆ ಎಂದರು.

  ಗುರುರಾಜ್​ಗೆ 2ನೇ ಬಾರಿಗೆ ಪದಕ

  ಗುರುರಾಜ್ ಸತತ ಎರಡನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್​​ನಲ್ಲಿ ಪಾಲ್ಗೊಂಡಿದ್ದು, ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿಯ ಪದಕ ಗೆದ್ದಿದ್ದರು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿ ಕಂಚಿನ ಪದಕ ಒಲಿಸಿಕೊಳ್ಳುವ ಮೂಲಕ ಎರಡನೇ ಬಾರಿ ದೇಶಕ್ಕಾಗಿ ಪದಕ ತಂದಿದ್ದಾರೆ.
  Published by:Thara Kemmara
  First published: