ಉಡುಪಿ: ಕರಾವಳಿ ಭಾಗದಲ್ಲಿ ಕಂಡು ಬರುವ ಅಪರೂಪದಲ್ಲೇ ಅಪರೂಪದ ಆಚರಣೆ ಗೊಂದೊಲು. ಉಡುಪಿ ಭಾಗದಲ್ಲಿ (Udupi News) ಗೊಂದೊಲು ಆಚರಣೆ ಈಗಲೂ ಸೇವಾ ರೂಪದಲ್ಲಿ (What Is Gondolu Seva) ಹಲವೆಡೆ ನಡೆಯುತ್ತದೆ. ಅದರಂತೆ ಇತ್ತೀಚೆಗೆ ಉಡುಪಿಯ ಮಂಚಿಯ ಗಣೇಶ ಅವರ ಮನೆಯಲ್ಲಿ ಅಪರೂಪದ ಗೊಂದಲು ಸೇವೆ (Gondolu Seva) ನಡೆಯಿತು. ಚಪ್ಪೇಗಾರ್ ಸಮುದಾಯದವರು ಈ ಗೊಂದೊಲು ಸೇವೆ ನಡೆಸುತ್ತಾರೆ.
ಗೊಂದೊಲು ಸೇವೆ ನಡೆಸಲು ಇರುವ ಮನೆಗೆ ಚಪ್ಪೇಗಾರ್ ಸಮುದಾಯದವರು, ಅಮ್ಮನವರ ಮೂರ್ತಿ ತಂದು ಅದನ್ನು ಗದ್ದುಗೆಯಲ್ಲಿ ಇಟ್ಟು ಪೂಜಿಸುತ್ತಾರೆ. ಬಳಿಕ ಅಮ್ಮನವರ ಮೂರ್ತಿ ಎದುರುಗಡೆ, ವಿಶೇಷ ಗೊಂದುಳು ನರ್ತನ ಮಾಡುತ್ತಾರೆ.
ದೀವಟಿಗೆ ಹಿಡಿದು ನರ್ತನ
ಆರಂಭದಲ್ಲಿ ಮನೆಯವರು ಸೇರಿದವರು, ಸಣ್ಣ ದೀವಟಿಗೆ ಹಿಡಿದು ಒಂದು ವೃತ್ತದಲ್ಲಿ ನರ್ತನ ಮಾಡುತ್ತಾರೆ. ಬಳಿಕ ಚಪ್ಪೇಗಾರ್ ಸಮುದಾಯದವರು, ಯಕ್ಷಗಾನ ಶೈಲಿಯ ವೇಷ ತೊಟ್ಟು ವಾದ್ಯ ಹಾಗೂ ತಾಸೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿ ನರ್ತನ ಮಾಡುತ್ತಾರೆ.
ಅಪರೂಪವಾಗುತ್ತಿದೆ ಗೊಂದೊಲು ಆಚರಣೆ
ಗೊಂದೊಲು ಸೇವೆಯನ್ನು ಹರಕೆ ಹಾಗೂ ಸೇವಾ ರೂಪದಲ್ಲಿ ನಡೆಸುತ್ತಾರೆ. ಹಿಂದೆ ಗೊಂದೊಲು ಕರಾವಳಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಅಪರೂಪವಾಗ್ತಿರೋ ಗೊಂದೊಲು ಆಚರಣೆ ಇತ್ತೀಚಿಗೆ ನಡೆದದ್ದು ಗಮನ ಸೆಳೆಯಿತು.
ಮಾಹಿತಿ, ವಿಡಿಯೋ: ಪರೀಕ್ಷಿತ್ ಶೇಟ್, ನ್ಯೂಸ್ 18 ಕನ್ನಡ ಉಡುಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ