ಕೊಲ್ಲೂರು : ಕರ್ನಾಟಕದ (Karnataka) ದಕ್ಷಿಣ ಭಾರತದ (South India) ಕೊಲ್ಲೂರು ಮೂಕಾಂಬಿಕಾ (Kolluru Mookambika) ದೇವಸ್ಥಾನವು (Temple) ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಪರಶುರಾಮನು ಸೃಷ್ಟಿ ಮಾಡಿದ ಮೋಕ್ಷದ ಏಳು ವಾಸಸ್ಥಾನಗಳಲ್ಲಿ ಕೊಲ್ಲೂರು ಕೂಡ ಒಂದು ಎಂದು ಹೇಳಲಾಗುತ್ತದೆ. ಸುಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ಉಡುಪಿ (Udupi) ಜಿಲ್ಲೆಯ ಕೊಲ್ಲೂರಿನಲ್ಲಿದೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವು ಕಲೆ ಮತ್ತು ಜ್ಞಾನಕ್ಕೆ ಅತ್ಯಂತ ಪ್ರಸಿದ್ಧಿ ಪಡೆದಿದೆ. ಮೂಕಾಂಬಿಕಾ ದೇವಿಯನ್ನು ವಾಗ್ದೇವಿ ಮತ್ತು ಅಕ್ಷರಗಳ ದೇವತೆ ಎಂದು ಬಣ್ಣಿಸಲಾಗುತ್ತದೆ. ದೇವಿಯ ವಿಗ್ರಹವನ್ನು ಪಂಚಲೋಹಗಳನ್ನು ಬಳಸಿ ಮಾಡಿ ತಯಾರು ಮಾಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ಸೀಸ ಸೇರಿ ಪಂಚಲೋಹಗಳಿಂದ ದೇವಿ ಮೂಕಾಂಬಿಕೆಯ ವಿಗ್ರಹವನ್ನು ತಯಾರು ಮಾಡಲಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹುಂಡಿ ಹಣದ ಲೆಕ್ಕಾಚಾರ
ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಾಲಯ ಸದಾ ಭಕ್ತರಿಂದ ತುಂಬಿ ತುಳುಕುತ್ತದೆ. ಇಲ್ಲಿಗೆ ಬರುವ ಭಕ್ತರು ನಾನಾ ರೀತಿಯಲ್ಲಿ ತಮ್ಮ ಬೇಡಿಕೆ ಈಡೇರಿಸುವಂತೆ ಹರಕೆ ಹೊರುತ್ತಾರೆ. ಹರಕೆ ಈಡೇರಿಸಲು ಬರುವ ಭಕ್ತರು ಕೆಲವರು ತಾವು ಬೇಡಿಕೊಂಡದ್ದನ್ನು ನೆರವೇರಿಸಿ ಹೋಗುತ್ತಾರೆ. ಈಗ ಕೊಲ್ಲೂರು ಮೂಕಾಂಬಿಕಾ ದೇಗುಲದ ಹುಂಡಿ ಹಣದ ಲೆಕ್ಕಾಚಾರ ಹಾಕಲಾಗಿದೆ.
ಭಕ್ತರಿಂದ ಸಂಗ್ರಹವಾದ ಹುಂಡಿಯ ಹಣದ ಕುರಿತು ತಿಂಗಳ ಲೆಕ್ಕಾಚಾರ ಮಾಡಲಾಗಿದೆ. ಕೊರೊನಾ ನಿರ್ಬಂಧನೆಯ ನಂತರ ಇತ್ತೀಚೆಗೆ ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲವನ್ನು ಭಕ್ತರ ದರ್ಶನಕ್ಕೆ ತೆರವು ಮಾಡಲಾಗಿತ್ತು. ಈಗ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.
ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಪರೀಕ್ಷೆಯ ಮೇಲೆ ಹದ್ದಿನ ಕಣ್ಣು! ಗೃಹ ಇಲಾಖೆಯ ಜೊತೆ ಸಭೆ
ಇದೇ ಮೊದಲ ಬಾರಿಗೆ ದೇವಸ್ಥಾನದ ಹುಂಡಿಯಲ್ಲಿ 1.53 ಕೋಟಿ ರೂ. ಕಾಣಿಕೆ ಸಂಗ್ರಹ
ಮೇ 10ರಂದು ಕಾಣಿಕೆ ಹುಂಡಿಯ ಎಣಿಕೆ ನಡೆದಿದೆ. ದಾಖಲೆಯ 1,53,41,923 ರೂ. ಸಂಗ್ರಹವಾಗಿದೆ. 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಕೂಡ ಸಂಗ್ರಹ ಮಾಡಲಾಗಿದೆ. ಕಳೆದ ಜನವರಿಯಿಂದ ಪ್ರತೀದಿನ ಕನಿಷ್ಠ 10 ಸಾವಿರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೇಗುಲದಲ್ಲಿ ಅತೀ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದಲ್ಲಿ ಇದೇ ಮೊದಲ ಬಾರಿಗೆ ಹಣ ಸಂಗ್ರಹವಾಗಿದೆ.
ಸಾಮಾನ್ಯವಾಗಿ ಪ್ರತೀ ತಿಂಗಳು ಎಣಿಕೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಹುಂಡಿ ಹಣದ ಲೆಕ್ಕಾಚಾರ ನಡೆಯುತ್ತದೆ. ತಿಂಗಳಿಗೆ ಸರಾಸರಿ 65 ಲಕ್ಷ ರೂ.ಸಂಗ್ರಹ ಆಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆ ಮಾಡಿದಾಗ 1.39 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಹುಂಡಿ ಲೆಕ್ಕಾಚಾರ ನಡೆದಾಗ ಹುಂಡಿಯಲ್ಲಿ 1,53,41,923 ರೂ ನಗದು, 2,500 ಕೆಜಿ ಬಂಗಾರ ಮತ್ತು 4,200 ಕೆಜಿ ಬೆಳ್ಳಿ ಸಂಗ್ರಹ ಆಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ದೇವಳದ ಕಾರ್ಯ ನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ: Dr. P Ravindranath ರಾಜೀನಾಮೆ ಅಂಗೀಕರಿಸದಂತೆ ಸಿಎಸ್ಗೆ ಎಂ.ಪಿ. ಕುಮಾರಸ್ವಾಮಿ ನಿಯೋಗ ಮನವಿ
ಹೋದ ವರ್ಷ ಲಾಕ್ ಡೌನ್ ಎಫೆಕ್ಟ್ ನಿಂದಾಗಿ 14ಕೋಟಿ ನಷ್ಟ
ದಕ್ಷಿಣ ಭಾರತದ ಪ್ರಸಿದ್ದ ದೇವಾಲಯವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವರ ದರ್ಶನಕ್ಕೆ ಕೋವಿಡ್ ನಿರ್ಭಂದಗಳ ಸಡಿಲಿಕೆ ನಂತರ ಜನಸಾಗರ ಹರಿದು ಬರುತ್ತಿದೆ. ಕಳೆದ ವರ್ಷ 2019ರ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಲ್ಲೂರು ದೇವಾಲಯದ ಆದಾಯ 13 ಕೋಟಿ ರೂ. ಆಗಿತ್ತು. ಹೋದ ವರ್ಷ ಲಾಕ್ ಡೌನ್ ಎಫೆಕ್ಟ್ ನಿಂದಾಗಿ 14ಕೋಟಿ ನಷ್ಟ ಉಂಟಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ