• Home
  • »
  • News
  • »
  • udupi
  • »
  • Udupi: ಹೋರಾಟಕ್ಕೆ ಸಜ್ಜಾಗ್ತಿದ್ದಾರೆ ಸಮುದ್ರದ ಮಕ್ಕಳು! ಉಡುಪಿ ಮೀನುಗಾರರ ಜೀವಕ್ಕೆ ಬೇಕಿದೆ ರಕ್ಷಣೆ

Udupi: ಹೋರಾಟಕ್ಕೆ ಸಜ್ಜಾಗ್ತಿದ್ದಾರೆ ಸಮುದ್ರದ ಮಕ್ಕಳು! ಉಡುಪಿ ಮೀನುಗಾರರ ಜೀವಕ್ಕೆ ಬೇಕಿದೆ ರಕ್ಷಣೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮೀನುಗಾರಿಕೆಗೆ ತೆರಳಿದ್ರೆ ಮೀನುಗಾರರು ಮರಳಿ ಬರೋದು ಹತ್ತು ಹದಿನೈದು ದಿನದ ನಂತರವೇ. ಈ ವೇಳೆ ಬೋಟಿನಲ್ಲಿರುವ ಮೀನುಗಾರರ ಆರೋಗ್ಯ ಏರುಪೇರಾಗುತ್ತದೆ. ಬೋಟು ಮುಳುಗಡೆಯಾಗಿ ಪ್ರಾಣವೇ ಹೋಗುವ ಸ್ಥಿತಿ ಹಲವು ಬಾರಿ ಎದುರಾಗಿದೆ.

  • Share this:

    ಸಮುದ್ರದಲ್ಲಿ ಸಾಹಸ, ಪ್ರತೀ ದಿನ, ಪ್ರತೀ ಕ್ಷಣ ಬದುಕೇ ನೀಲಿ ಸಾಗರದ ಮೇಲೆ! ಹೋರಾಟವೇ ಜೀವನವಾಗಿರೋ ಮೀನುಗಾರರು ಸರ್ಕಾರದಿಂದ ಸವಲತ್ತು ಸೌಲಭ್ಯ ಪಡೆಯಲು ಕೂಡ ಹೋರಾಟಕ್ಕೆ ಇಳಿಯಬೇಕಿದೆ. ಇದೀಗ ಉಡುಪಿಯ ಮೀನುಗಾರರಿಗೆ (Udupi Fishermen) ಇನ್ನೊಂದು ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ. ಅದೇನು ಅನ್ನೋದನ್ನ ಹೇಳ್ತೀವಿ ಕೇಳಿ. ಯೆಸ್, ಉಡುಪಿಯ ಮೀನುಗಾರರು (Udupi News) ತಮ್ಮ ಪ್ರಾಣ ಆರೋಗ್ಯ ಕಾಪಾಡಲು ಒಂದು ಸುಸಜ್ಜಿತ ಸೀ ಆ್ಯಂಬುಲೆನ್ಸ್ (Sea Ambulance) ಬೇಡಿಕೆ ಇಟ್ಟಿದ್ದಾರೆ.


    ಮೀನುಗಾರಿಕೆಗೆ ತೆರಳಿರುವ ವೇಳೆ ಎದುರಾಗುವ ಆರೋಗ್ಯ ಸಮಸ್ಯೆ, ಬೋಟ್ ಅವಘಡದಿಂದ ಪ್ರಾಣ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮುದ್ರದಲ್ಲಿ ಸಂಚರಿಸುವ ಬೋಟ್ ಆ್ಯಂಬುಲೆನ್ಸ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆ ನೆನ್ನೆ ಮೊನ್ನೆಯದಲ್ಲ. ಕಳೆದ ಐದು ವರ್ಷಗಳಿಂದ ಈ ಬೇಡಿಕೆಯನ್ನ ಮೀನುಗಾರರು, ಶಾಸಕರು ಇಡುತ್ತಾ ಬಂದಿದ್ದಾರೆ. ಆದರೆ ಗೃಹ ಇಲಾಖೆ ಮಾತ್ರ ಕಿಮ್ಮತ್ತಿನ ಬೆಲೆ ನೀಡಿಲ್ಲ ಹೀಗಾಗಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ ಮೀನುಗಾರ ಮುಖಂಡರು.


    ಹತ್ತು ಹದಿನೈದು ದಿನ ಸಮುದ್ರದಲ್ಲೇ ವಾಸ!
    ಹೌದು, ಮೀನುಗಾರಿಕೆಗೆ ತೆರಳಿದ್ರೆ ಮೀನುಗಾರರು ಮರಳಿ ಬರೋದು ಹತ್ತು ಹದಿನೈದು ದಿನದ ನಂತರವೇ. ಕೆಲವೊಮ್ಮೆ ಸಮುದ್ರದಲ್ಲಿ ಎದುರಾಗುವ ಅವಘಡ, ಹವಾಮಾನ ವೈಪರೀತ್ಯ, ಕಡಲು ಪ್ರಕ್ಷ್ಯುಬ್ದತೆ ಕಾರಣದಿಂದ ತಿಂಗಳಾದರೂ ಮರಳಿ ಬಾರದ ಸ್ಥಿತಿ ಎದುರಾಗುತ್ತೆ. ಈ ವೇಳೆ ಬೋಟಿನಲ್ಲಿರುವ ಮೀನುಗಾರರ ಆರೋಗ್ಯ ಏರುಪೇರಾಗುತ್ತದೆ. ಅಥವಾ ಬೋಟು ಮುಳುಗಡೆಯಾಗಿ ಪ್ರಾಣವೇ ಹೋಗುವ ಸ್ಥಿತಿ ಹಲವು ಬಾರಿ ಎದುರಾಗಿದೆ.


    ಬೇಕಿದ್ರೆ ಸೀ ಆ್ಯಂಬುಲೆನ್ಸ್
    ಹೀಗಾಗಿ ಸಮುದ್ರದಲ್ಲಿ ಸಂಚರಿಸುವ ಆ್ಯಂಬುಲೆನ್ಸ್ ಇದ್ದಲ್ಲಿ ಮೀನುಗಾರರಿಗೆ ತುರ್ತು ಚಿಕಿತ್ಸೆ, ಪ್ರಾಣ ರಕ್ಷಣೆ ಮಾಡಬಹುದು. ಇಲ್ಲವಾದರೆ ಬೇರೊಂದು ಬೋಟ್ ಸಹಾಯದಿಂದ ದಡಕ್ಕೆ ಕರೆತಂದು ಮತ್ತೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪ್ರಾಣ ಉಳಿಯೋದು ಕಷ್ಟ. ಹೀಗಾಗಿ ಸೀ ಆ್ಯಂಬುಲೆನ್ಸ್ ಅನಿವಾರ್ಯ.


    ಇದನ್ನೂ ಓದಿ: Positive Story: ಜಗತ್ತಿನಲ್ಲಿ ಶಾಂತಿ ನೆಲೆಸೋಕೆ 8ನೇ ಕ್ಲಾಸ್ ಬಾಲಕಿಯ ಯಕ್ಷ ಪ್ರಯತ್ನ!


    ಅಗತ್ಯವಿದೆ ಗೃಹ ಇಲಾಖೆಯ ಮಂಜೂರಾತಿ
    ಈ ಬಗ್ಗೆ ಕಳೆದ ಐದು ವರ್ಷದಿಂದ ಮೀನುಗಾರ ಮುಖಂಡರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಸ್ವತಃ ಶಾಸಕ ರಘುಪತಿ ಭಟ್ ಕೂಡ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಆದ್ರೆ ಗೃಹ ಇಲಾಖೆ ಮಾತ್ರ ಮಂಜೂರಾತಿ ನೀಡಿಲ್ಲ. ಕರಾವಳಿ ಕಾವಲು ಪಡೆ ಮುಖ್ಯ ಕಚೇರಿ ಇರೋದು ಮಲ್ಪೆ ಬಂದರಿನಲ್ಲಿ. ಈ ಇಲಾಖೆಯಲ್ಲೂ ಸುಸಜ್ಜಿತ ಬೋಟ್ ಇಲ್ಲ. ಹೀಗಾಗಿ ಸುಸಜ್ಜಿತ ರಕ್ಷಣಾ ಬೋಟ್ ಜೊತೆಗೆ ಸೀ ಆ್ಯಂಬುಲೆನ್ಸ್ ನೀಡಬೇಕೆನ್ನುವುದು ಮೀನುಗಾರ ಮುಖಂಡರ ಒತ್ತಾಯ.


    ಇದನ್ನೂ ಓದಿ: Uttara Kannada: ಕುಮಟಾದಲ್ಲಿ ನಿಗೂಢ ಗುಹೆ ಪತ್ತೆ! ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಕುತೂಹಲ


    ಇನ್ನಾದ್ರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಮೀನುಗಾರರ ರಕ್ಷಣೆಗೆ ಸೀ ಆ್ಯಂಬುಲೆನ್ಸ್ ಸಹಿತ ಸುಸಜ್ಜಿತ ಬೋಟ್ ಮಂಜೂರು ಮಾಡುವ ಮೂಲಕ ಮೀನುಗಾರರ ರಕ್ಷಣೆ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.


    ವರದಿ: ಪರೀಕ್ಷಿತ್ ಶೇಟ್ ನ್ಯೂಸ್ 18 ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: