ಉಡುಪಿ: ಅಬ್ಬಬ್ಬಾ! ಅವರ ಉತ್ಸಾಹವೇ! ಉದ್ದನೆಯ ಚಂದದ ದೋಣಿ, ಅದರಲ್ಲಿ ಕುಳಿತು ಲಗುಬಗೆಯಿಂದ ಹುಟ್ಟುಹಾಕ್ತಿರೋ ಹತ್ತಾರು ಜನರು.ಒಂದೇ ಬೋಟಲ್ಲ, ಹತ್ತಾರು ಬೋಟುಗಳು (Boat Championship Udupi) ನಾ ಮುಂದು ತಾ ಮುಂದು ಅಂತ ಒಬ್ಬರಿಗಿಂತ ಒಬ್ಬರು ವೇಗವಾಗಿ ಸ್ಪರ್ಧಿಸೋದೇ ಸಖತ್. ಇದು ಡ್ರ್ಯಾಗನ್ ಬೋಟ್ ರೇಸ್ ಚಾಂಪಿಯನ್ಶಿಪ್ನ (Boat Championship) ಝಲಕ್!
ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೇರೂರು ಸೇತುವೆ ಬಳಿಯ ಮಡಿಸಾಲು ಹೊಳೆಯಲ್ಲಿ ರಾಷ್ಟ್ರೀಯ ಬೋಟ್ ಚಾಂಪಿಯನ್ಶಿಪ್ ನಡೆಯುತ್ತಿದೆ. ಬೋಟ್ ರೇಸ್ ನೋಡೋಕೆ ಕೇರಳಕ್ಕೇ ಹೋಗ್ಬೇಕಂತಿಲ್ಲ, ನಮ್ಮ ಉಡುಪಿಗೆ ಬಂದರೂ ಸಾಕು!
ಇದನ್ನೂ ಓದಿ: Rakshit Shetty In Udupi: ಸಿಂಪಲ್ ಸ್ಟಾರ್ ಗೋ ಪ್ರೇಮ! ರಕ್ಷಿತ್ ಶೆಟ್ಟಿಗೆ ಸಿಕ್ತು ಶಿವನ ಆಶೀರ್ವಾದ!
ಕರ್ನಾಟಕದಲ್ಲಿ ಇದೇ ಮೊದಲು!
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಡ್ರಾಗನ್ ಬೋಟ್ ಚಾಂಪಿಯನ್ ಶಿಪ್ ಇದು ಎಂಬ ಹೆಗ್ಗಳಿಕೆ ಸ್ಪರ್ಧಾಳುಗಳಿಗೆ ಭಾರೀ ಉತ್ಸಾಹ ನೀಡಿತ್ತು.
ಇದನ್ನೂ ಓದಿ: ಉಡುಪಿಯಲ್ಲಿ Plastic Road! 1 ಕ್ವಿಂಟಲ್ ಪ್ಲಾಸ್ಟಿಕ್ ಇದ್ರೆ 1 ಕಿಲೋ ಮೀಟರ್ ರಸ್ತೆ ರೆಡಿ!
600 ಸ್ಪರ್ಧಿಗಳ ರೋಚಕ ಹಣಾಹಣಿ
ಒಟ್ಟು 15 ರಾಜ್ಯಗಳಿಂದ 600 ಸ್ಪರ್ಧಿಗಳು ರೋಚಕವಾಗಿ ಭಾಗವಹಿಸಿದರು. ಪುರುಷರು, ಮಹಿಳೆಯರು ಹಾಗೂ ಮಿಶ್ರ ವಿಭಾಗಗಳಲ್ಲಿ 200 ಮೀಟರ್, 500 ಮೀಟರ್ ಹಾಗೂ 2000 ಮೀಟರ್ ಸ್ಪರ್ಧೆಗಳು ನಡೆಯಲಿದ್ದು ಉಡುಪಿ ಜನರ ಪಾಲಿಗೆ ಖುಷಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ