• ಹೋಂ
  • »
  • ನ್ಯೂಸ್
  • »
  • ಉಡುಪಿ
  • »
  • Mahalingeshwara Temple: ಮಹಾಲಿಂಗೇಶ್ವರ ದೇವರಿಗೆ ಕ್ರೈಸ್ತರ ಸೇವೆ! ಇದು ಪುಟ್ಟ ಊರಿನ ಪುಣ್ಯಕ್ಷೇತ್ರ!

Mahalingeshwara Temple: ಮಹಾಲಿಂಗೇಶ್ವರ ದೇವರಿಗೆ ಕ್ರೈಸ್ತರ ಸೇವೆ! ಇದು ಪುಟ್ಟ ಊರಿನ ಪುಣ್ಯಕ್ಷೇತ್ರ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾವೈಕ್ಯತೆಗೆ ಹೆಸರಾದ ಕ್ಷೇತ್ರಗಳಲ್ಲಿ ನಂದಳಿಕೆಯೂ ಒಂದು. ಇಲ್ಲಿ ನಡೆಯುವ ಸಿರಿ ಜಾತ್ರೆಗೆ ಈ ಕ್ಷೇತ್ರ ಬಲು ಫೇಮಸ್.

  • News18 Kannada
  • 2-MIN READ
  • Last Updated :
  • Udupi, India
  • Share this:

    ಉಡುಪಿ: ವಿಶಾಲವಾದ ಪ್ರಾಂಗಣ, ಪ್ರಶಾಂತವಾದ ವಾತಾವರಣ, ಮನಸ್ಸಿಗೆ ಮುದ ನೀಡುವ ದೇವರ ಸಾನಿಧ್ಯ. ಅಷ್ಟೇ ಅಲ್ಲ, ಕರಾವಳಿಯ (Coastal Karnataka Temples) ಭಾವೈಕ್ಯತೆ ತಾಣಗಳಲ್ಲಿ ಈ ಗ್ರಾಮೀಣ ಭಾಗದ ದೇಗುಲವೂ ಒಂದು. ವಿಶಿಷ್ಟ ರೀತಿಯ ಜಾತ್ರಾ ಮಹೋತ್ಸವ ನೆರವೇರುವ ಪುಣ್ಯತಾಣವೂ (Mahalingeshwara Temple) ಹೌದು. ಹಾಗಿದ್ರೆ ಯಾವುದು ಈ ದೇಗುಲ? ಇಲ್ಲಿನ ವಿಶೇಷತೆ ಏನು? ಹೇಳ್ತೀವಿ ನೋಡಿ.


    ಸಿರಿ ಜಾತ್ರೆಗೆ ಹೆಸರುವಾಸಿ
    ಯೆಸ್, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀಮಹಾಲಿಂಗೇಶ್ವರ ದೇವಸ್ಥಾನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರನ್ನ ಹೊಂದಿದೆ. ನಂದಳಿಕೆ ಪುಟ್ಟ ಗ್ರಾಮವಾದರೂ ಸಾವಿರ ವರ್ಷ ಹಳೆಯ ಈ ದೇಗುಲ ಕರಾವಳಿಯಾದ್ಯಂತ ಭಾರೀ ಫೇಮಸ್.




    ಮಹಾಕವಿ ಮುದ್ದಣನ ಮನೆಯೂ ಇಲ್ಲೇ ಇತ್ತು!
    ಈ ದೇವಾಲಯದಲ್ಲಿ ತುಳುನಾಡಿನಲ್ಲೇ ಅಪರೂಪವಾದ ವಿಶಿಷ್ಟ ಸಿರಿ ಜಾತ್ರೆ ಇಲ್ಲಿ ಸಂಭ್ರಮದಿಂದ ನಡೆಯುತ್ತೆ. ಮಹಿಳೆಯರಂತೂ ಈ ಜಾತ್ರೆಯಲ್ಲಿ ವಿಶೇಷ ಭಕ್ತಿ ಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಇನ್ನೊಂದು ವಿಶೇಷ ಅಂದ್ರೆ, ಮಹಾಕವಿ ಮುದ್ದಣನ ಮನೆಯು ಇದೇ ದೇಗುಲದ ಆವರಣಕ್ಕೆ ತಾಕಿಕೊಂಡಿತ್ತು ಅನ್ನೋದು.




    ಭಾವೈಕ್ಯತೆಯ ಕ್ಷೇತ್ರ
    ಇನ್ನು ಇಲ್ಲಿ ನಡೆಯುವ ಸಿರಿ ಜಾತ್ರೆಗೆ ಯಾವುದೇ ಜಾತಿ, ಮತ ಹಾಗೂ ಪಂಥಬೇಧಗಳಿಲ್ಲದೆ ಜನರು ಭಾಗವಹಿಸುತ್ತಾರೆ. ವಿಶೇಷವಾಗಿ ಕ್ರೈಸ್ತರು ತಮ್ಮನ್ನ ತಾವು ತೊಡಗಿಸಿಕೊಂಡಿದ್ದು, ಪ್ರತಿ ವರ್ಷವೂ ನಲವತ್ತು ಮಂದಿ ಕ್ರೈಸ್ತ ಧರ್ಮೀಯರು ಸಿರಿ ಜಾತ್ರೆಯಲ್ಲಿ ಸ್ವಯಂಸೇವಕರಾಗಿ ಜಾತ್ರೆಗೆ ದುಡಿಯುತ್ತಾರೆ.




    ಇದನ್ನೂ ಓದಿ: Mangaluru Parashuram: ಇವರ ಜೀವನವೇ ಸ್ಪೂರ್ತಿ! ಕಷ್ಟಕ್ಕೆ ಹೆದರದ ಛಲದಂಕಮಲ್ಲ ಸ್ವಿಗ್ಗಿ ಡೆಲಿವರಿ ಬಾಯ್ ಮಂಗಳೂರಿನ ಪರಶುರಾಮ!




    ನಂದಿ ಹಿಡಿಯುವ ಕ್ರೈಸ್ತ ವ್ಯಕ್ತಿ
    ಅಷ್ಟೇ ಅಲ್ದೇ, ಜಾತ್ರೆಯ ಸಂದರ್ಭ ನಂದಳಿಕೆಯ ವಿಕ್ಟರ್ ನೊರೊನ್ಹಾ ಎಂಬವರು ದೇವರ ನಂದಿ ಹಿಡಿದು ಬಲಿಪೂಜೆ ಸಂದರ್ಭದಲ್ಲಿ ಸಾಗಿಬರುತ್ತಾರೆ. ಹೀಗೆ ಕಳೆದ ಹನ್ನೆರಡು ವರ್ಷಗಳಿಂದ ಈ ಸೇವೆಯನ್ನ ಕ್ರೈಸ್ತರೊಬ್ಬರೇ ಮಾಡುತ್ತಾ ಬಂದಿದ್ದಾರೆ.




    ಇದನ್ನೂ ಓದಿ: Transgenders Canteen In Udupi: ಹಸಿದವರಿಗೆ ಅನ್ನ ಹಾಕುತ್ತಿರುವ ಮಂಗಳಮುಖಿಯರು, ಈ ವಿಶೇಷ ಕ್ಯಾಂಟೀನ್‌ಗೆ ಬೇಕು ಜನ ಬೆಂಬಲ


    Sri Mahaalingeshwara Temple - Nandalike
    ಈ ಪವಿತ್ರ ಕ್ಷೇತ್ರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)


    ಒಟ್ಟಿನಲ್ಲಿ ನಂದಳಿಕೆ ಅನ್ನೋ ಪುಟ್ಟ ಗ್ರಾಮದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯವು, ಸದಾ ಧರ್ಮ ಕಲಹಗಳಿಗೆ ಸುದ್ದಿ ಆಗುವ ಕರಾವಳಿ ಭಾಗದಲ್ಲಿ ಭಾವೈಕ್ಯತೆಗೆ ಮಾದರಿಯಾಗಿದೆ.


    ವರದಿ: ನಾಗರಾಜ್ ಭಟ್, ಮಂಗಳೂರು

    Published by:ಗುರುಗಣೇಶ ಡಬ್ಗುಳಿ
    First published: