ಉಡುಪಿ: ಕಾಂತಾರ ಸಿನಿಮಾ (Kantara Movie) ನಂತರ ಕರಾವಳಿಯ ದೈವಾರಾಧನೆ (Daivaradhane) ವಿಶ್ವದಾದ್ಯಂತ ಪಸರಿಸಿದೆ. ದೈವ ಸಾನಿಧ್ಯದ ಬಗ್ಗೆ ಭಕ್ತರ ನಂಬಿಕೆ ಹೆಚ್ಚಾಗುತ್ತಿದೆ. ಇದೀಗ ದೈವ ಸಾನಿಧ್ಯವನ್ನು ಸಾರುವಂತಹ ಇನ್ನೊಂದು ಘಟನೆ ಸಂಚಲನವನ್ನೇ ಮೂಡಿಸ್ತಿದೆ. ಇದೀಗ ಉಡುಪಿಯಲ್ಲಿ (Udupi News) ನಡೆದಿರೋ ಘಟನೆಯೊಂದು ಭಾರೀ ಸಂಚಲನ ಸೃಷ್ಟಿಸ್ತಿದೆ.
ಉಡುಪಿ ಕಸ್ತೂರ್ಬಾ ನಗರ ಚಿಪ್ಪಾಡಿಯ ದೈವಸ್ಥಾನದಲ್ಲಿ ನೀರಿನ ಸಮಸ್ಯೆಯಾಗಿತ್ತು. ನಿರಿನ ಸಮಸ್ಯೆಗೆ ಪರಿಹಾರ ಒದಗಿಸಲೆಂದು ಶ್ರೀ ದೈವರಾಜ ಬಬ್ಬುಸ್ವಾಮಿ ಕಮಿಟಿ ದರ್ಶನ ಸೇವೆ ನಡೆಸಿತ್ತು. ದರ್ಶನದಲ್ಲಿ ಬಬ್ಬುಸ್ವಾಮಿ ನೀರಿನ ಸೆಲೆಯಿರುವ ಜಾಗ ತೋರಿಸಿದ್ರು. ದೈವ ತೋರಿಸಿದ ಆ ಜಾಗದಲ್ಲಿ ಬೋರ್ವೆಲ್ ಕೊರೆದಾಗ ಆಗಸದ ಎತ್ತರಕ್ಕೆ ನೀರು ಚಿಮ್ಮಿದೆ.
ಇದನ್ನೂ ಓದಿ: Emotional Story: 360 ಕಿಮೀ, 36 ದಿನ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರನಾಡು ಯುವಕನ 'ಭೀಷ್ಮ'ಪಯಣ
ಬಬ್ಬುಸ್ವಾಮಿಯ ಆಣತಿಯಂತೆ ನೀರು ಆಗಸಕ್ಕೆ ಚಿಮ್ಮಿತು!
ಇದನ್ನ ಕಂಡು ನೆರೆದವರೆಲ್ಲರೂ ದೈವ ಪವಾಡವೆಂದು ಕೈಮುಗಿದಿದ್ದಾರೆ. ಬಬ್ಬುಸ್ವಾಮಿಯ ಆಣತಿಯಂತೆ ನೀರು ಆಗಸಕ್ಕೆ ಚಿಮ್ಮಿತು ಎಂದು ಹರ್ಷಚಿತ್ತರಾಗಿದ್ದಾರೆ.
ಇದನ್ನೂ ಓದಿ: Koragajja Miracle: ಸಾಗರದ 4 ತಿಂಗಳ ಬಾಲೆಯನ್ನು ಕಾಪಾಡಿದ ಉಡುಪಿಯ ಕೊರಗಜ್ಜ!
ಕಾಕತಾಳೀಯವೋ ಪವಾಡವೋ?
ಒಟ್ಟಿನಲ್ಲಿ ಕಾಕತಾಳೀಯವೋ ಪವಾಡವೋ, ಉಡುಪಿ ಕಸ್ತೂರ್ಬಾ ನಗರ ಚಿಪ್ಪಾಡಿಯ ದೈವಸ್ಥಾನದಲ್ಲಿ ಉಂಟಾಗಿದ್ದ ದೈವಸ್ಥಾನದ ನೀರಿನ ಸಮಸ್ಯೆಗೆ ಮುಕ್ತಿಯಂತೂ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ