ಉಡುಪಿ: ಕರಾವಳಿಯ ಪ್ರಸಿದ್ಧ ಆನೆಗುಡ್ಡೆ ಶ್ರೀವಿನಾಯಕ ದೇಗುಲದಲ್ಲಿ 21 ಸಾವಿರ ತೆಂಗಿನ ಕಾಯಿ ಸೇವೆ ನಡೆಸಲಾಯ್ತು. ಕುಂದಾಪುರ ತಾಲೂಕುನಲ್ಲಿರುವ (Temple's In Kundapur) ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ (Anegudde Sri Vinayaka Temple) ರಾಜ್ಯದಲ್ಲೆ ಹೆಸರುವಾಸಿ. ಇಲ್ಲಿ ಹೇಳಿಕೊಂಡ ಹರಕೆಗಳು ಈಡೇರದೇ ಇರುವುದಿಲ್ಲ ಅಂತಾರೆ ಭಕ್ತರು. ಹೀಗಾಗಿ ವಿವಿಧ ಊರುಗಳಿಂದಲೂ ಆನೆಗುಡ್ಡೆ ಗಣಪತಿ ದೇಗುಲವನ್ನು (Ganapthi Temple) ಹುಡುಕಿಕೊಂಡು ಭಕ್ತರು ಆಗಮಿಸ್ತಾರೆ.
ಇದನ್ನೂ ಓದಿ: Jodukare Kambala: ರಣ ರೋಚಕ ಜೋಡುಕರೆ ಕಂಬಳ, ಕುದುರೆಗಳೂ ನಾಚುವಂತೆ ಓಡಿದ ಕೋಣಗಳು!
ಗಮನಸೆಳೆದ ತೆಂಗಿನಕಾಯಿ ಮೂಡುಗಣಪತಿ ಸೇವೆ
ಹೀಗೆ ಹರಕೆ ಕಟ್ಟಿಕೊಂಡ ಭಕ್ತರೋರ್ವರು ನಡೆಸಿದ ತೆಂಗಿನಕಾಯಿ ಮೂಡುಗಣಪತಿ ಸೇವೆ ಭಕ್ತರ ಗಮನ ಸೆಳೆಯಿತು. ಭಕ್ತರೋರ್ವರು ಮಾಡಿಕೊಂಡಿದ್ದ ಹರಕೆಯನ್ನು ತೀರಿಸಲು ಗಣಪನಿಗೆ 21 ಸಾವಿರ ತೆಂಗಿನಕಾಯಿಗಳ ನೈವೇದ್ಯ ಸಮರ್ಪಿಸಿದರು.
ಇದನ್ನೂ ಓದಿ: Dakshina Kannada: ಅಷ್ಟಮಂಗಲದ ಪ್ರಕಾರವೇ ಪತ್ತೆಯಾಯ್ತು ಶಿವಲಿಂಗ!
ಧಾರ್ಮಿಕ ಸಂಭ್ರಮ ನೋಡಲು ಆಗಮಿಸಿದ ಭಕ್ತರು
ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ನೈವೇದ್ಯದ ತೆಂಗಿನಕಾಯಿ ವಿತರಣೆ ಮಾಡಲಾಯ್ತು. ಈ ವಿಶೇಷ ಧಾರ್ಮಿಕ ಸಂಭ್ರಮ ನೋಡಲು ನೂರಾರು ಭಕ್ತರು ವಿವಿಧ ಊರುಗಳಿಂದ ಆಗಮಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ