ತುಮಕೂರು: ನೀವೆಷ್ಟೇ ತೆಂಗಿನಮರ ನೋಡಿದ್ರೂ ಇಂಥಾ ತೆಂಗಿನಮರವನ್ನು ನೋಡಿರೋಕೆ ಸಾಧ್ಯವಿಲ್ಲ, ಅಷ್ಟೊಂದು ವಿಚಿತ್ರ ತೆಂಗಿನಮರವಿದು! (Coconut Tree) ಒಂದೇ ತೆಂಗಿನ ಮರದಲ್ಲಿ 20ಕ್ಕೂ ಹೆಚ್ಚು ತೆಂಗಿನ ಮರಗಳ ಕವಲೊಡೆದ (Tumkur Viral News) ಅಪರೂಪದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ.
ಈ 20 ತೆಂಗಿನ ಮರದಲ್ಲೂ ಫಲವತ್ತಾದ ತೆಂಗು ಬೆಳೆ ಚಿಗುರಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಾಸಂದ್ರ ಬಳಿಯ ಮಲ್ಲದೇವರಹಳ್ಳಿಯ ತೋಟದಲ್ಲೇ ಈ ಅಚ್ಚರಿ ಹುಟ್ಟಿಸಿದ ತೆಂಗಿನ ಮರವಿದೆ.
ಇದನ್ನೂ ಓದಿ: KT ಚಹಾ ಅಂದ್ರೇನು? ಅದ್ಭುತ ರುಚಿ ಹಿಂದಿನ ಗುಟ್ಟು ಹೀಗಿದೆ ನೋಡಿ
ಈ ತೋಟದ ಮಾಲೀಕರು ಯಾರು?
ಈ ವಿಸ್ಮಯಕಾರಿ ಮರಕ್ಕೆ ತೋಟದ ಮಾಲೀಕರಾದ ಮಲ್ಲಪ್ಪ ಎಂಬುವವರು ಪ್ರತಿದಿನ ಪೂಜೆ ಮಾಡ್ತಿದ್ದಾರೆ.
ಇದನ್ನೂ ಓದಿ: Success Story: ಪುತ್ತೂರಿನಲ್ಲಿ ಹುಟ್ಟಿತು ಸ್ವದೇಶಿ TV ಬ್ರಾಂಡ್! ಟಿವಿ ರಿಪೇರಿ ಮಾಡ್ತಿದ್ದವರು ಕಂಪನಿ ಕಟ್ಟಿದ ಕಥೆ
ಒಟ್ಟಾರೆ ಒಂದೇ ತೆಂಗಿನ ಮರದಲ್ಲಿ 20 ಕ್ಕೂ ಹೆಚ್ಚು ತೆಂಗಿನ ಮರಗಳು ಕವಲೊಡೆದಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.
ಮಾಹಿತಿ, ವಿಡಿಯೋ: ವಿಠಲ, ನ್ಯೂಸ್ 18 ಕನ್ನಡ ತುಮಕೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ