ಮೂರು ವರ್ಷದ ಮಕ್ಕಳು (Child) ಧರಿಸಿದ ಬಟ್ಟೆಯಲ್ಲೇ ಮೂತ್ರ ವಿಸರ್ಜಿಸುವುದು ದೊಡ್ಡ ಮಾತೇನೂ ಅಲ್ಲ. ಹೀಗೆ ಅನೇಕ ಮಕ್ಕಳು ತಾವು ಹಾಕಿರುವ ಉಡುಪಿನಲ್ಲೇ (Dress) ಒಮ್ಮೊಮ್ಮೆ ಮೂತ್ರ ವಿಸರ್ಜಿಸುವುದುಂಟು. ಹಾಗೆಂದ ಮಾತ್ರಕ್ಕೆ ಆ ಮಕ್ಕಳಿಗೆ ಘಾತಕ ಶಿಕ್ಷೆ ಕೊಡಲಾಗುತ್ತದೆಯೆ..? ಆದರೆ, ಇಲ್ಲೊಬ್ಬ ಕ್ರೂರ ಶಿಕ್ಷಕಿ (Teacher) ಇಂತಹ ಹೀನಾಯ ಕೃತ್ಯ ಎಸಗಿದ್ದಾರೆಂದರೆ ನಂಬಲೇಬೇಕು. ಹೌದು, ಮೂರು ವರ್ಷದ ಮಗುವೊಂದು ಯಾವಾಗಲೂ ತನ್ನ ತೊಟ್ಟಿದ್ದ ಶಾರ್ಟ್ಸ್ ನಲ್ಲಿ (Shorts) ಮೂತ್ರ ವಿಸರ್ಜಿಸುತ್ತಿದೆ ಎಂದು ಕೋಪಗೊಂಡ ಶಿಕ್ಷಕಿಯೊಬ್ಬಳು ಆ ಗಂಡು ಮಗುವಿನ (Boy baby) ಜನನಾಂಗವನ್ನು ಸುಟ್ಟಿರುವ ದಾರುಣ ಘಟನೆ ತುಮಕೂರಿನ (Tumkur) ಅಂಗನವಾಡಿ ಕೇಂದ್ರವೊಂದರಿಂದ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೃತ್ಯವೆಸಗಿದ ತುಮಕೂರಿನ ಅಂಗನವಾಡಿ ಕೇಂದ್ರವೊಂದರಲ್ಲಿ ಸಹಾಯಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಆ ಮಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲು
ಈ ಘೋರ ಕೃತ್ಯವು ಸೋಮವಾರದಂದು ನಡೆದಿದೆಯಾದರೂ ಶುಕ್ರವಾರದಂದು ಆ ಮಗುವಿನ ಹೆತ್ತವರು ಆ ಶಿಕ್ಷಕಿಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ದೂರಿ ಪೊಲೀಸರ ಬಳಿ ತೆರಳಿದ್ದಾರೆನ್ನಲಾಗಿದೆ. ಪ್ರಸ್ತುತ, ಆ ಶಿಕ್ಷಕಿಯನ್ನು 28 ರ ಪ್ರಾಯದ ರಷ್ಮಿ ಕೆ.ಪಿ ಎಂದು ಗುರುತಿಸಲಾಗಿದ್ದು ಅವಳ ಮೇಲೆ ಇಂಡಿಯನ್ ಪಿನಲ್ ಕೋಡ್ ಪ್ರಕಾರ, ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ಸುರಕ್ಷತೆ) ಕಾಯಿದೆ 2015 ಸೆಕ್ಷನ್ 285 (ಬೆಂಕಿ ಅಥವಾ ದಹಿಸುವ ವಸ್ತುಗಳ ಪ್ರತಿ ನಿರ್ಲಕ್ಷ್ಯ) ಗಳಡಿ ಪ್ರಕರಣಗಳನ್ನು ದಾಖಲಿಸಿರುವುದಾಗಿ ಪೊಲೀಸ್ ಹೇಳಿದೆ.
ಇದನ್ನೂ ಓದಿ: Rape Cases: ದೇಶದಲ್ಲಿ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರವಾಗ್ತಿದೆಯಂತೆ! ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
ಈ ಬಗ್ಗೆ ತುಮಕೂರಿನ ಎಸ್ಪಿ ಆಗಿರುವ ರಾಹುಲ್ ಕುಮಾರ್ ಶಹಾಪುರ್ವಾಡ್ ಅವರು ಮಾತನಾಡಿ, ದೂರಿನಲ್ಲಿ ಮಗುವಿನ ಪೋಷಕರು, ಮಗು ತನ್ನ ಉಡುಪಿನಲ್ಲಿ ಯಾವಾಗಲೂ ಮೂತ್ರ ವಿಸರ್ಜಿಸುತ್ತಿದ್ದರಿಂದ ಗೋಡೆಕೆರೆ ಅಂಗನವಾಡಿ ಕೇಂದ್ರದ ಶಿಕ್ಷಕಿಯು ಮಗುವಿನ ಖಾಸಗಿ ಭಾಗಗಳಿಗೆ ಬೆಂಕಿ ತಗುಲಿಸಿರುವುದಾಗಿ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಮಗುವಿನ ಖಾಸಗಿ ಭಾಗಗಳಿಗೆ ಬೆಂಕಿ ಇಡಲು ಕಾರಣವೇನು ಗೊತ್ತಾ?
"ಮಗು ಸದಾ ತನ್ನ ಉಡುಪಿನಲ್ಲೇ ಮೂತ್ರ ವಿಸರ್ಜಿಸುತ್ತಿತ್ತು, ಇದನ್ನು ನಿಲ್ಲಿಸುವ ಉದ್ದೇಶದಿಂದ ಮಗುವಿನ ಖಾಸಗಿ ಭಾಗಗಳಿಗೆ ಅವರು ಬೆಂಕಿ ತಗುಲಿಸಿದರು" ಎಂದು ರಾಹುಲ್ ಕುಮಾರ್ ಈ ಬಗ್ಗೆ ವಿವರಣೆ ನೀಡಿದರು. ಕೆಲ ಸಮಯದ ಹಿಂದೆ ಮಗು ತನ್ನ ತಯಿಯನ್ನು ಕಳೆದುಕೊಂಡ ನಂತರ ಆ ಮಗುವಿನ ಅಪ್ಪ, ಆ ಮಗು ಹಾಗೂ ಅದರ ಸಹೋದರನೊಂದಿಗೆ ಚಿಕ್ಕಮಗಳೂರಿನಿಂದ ಇಲ್ಲಿಗೆ ಬಂದು ವಾಸಿಸುತ್ತಿದ್ದಾರೆ.
ಈ ಘಟನೆಯಿಂದ ಆತಂಕಗೊಂಡಂತಿದ್ದ ಶಿಕ್ಷಕಿಯು ಮೊದಲಿಗೆ ಈ ಘಟನೆಯನ್ನು ಮುಚ್ಚಿ ಹಾಕಲು ಪ್ರಯತಿಸಿದ್ದರೆನ್ನಲಾಗಿದೆ. ಅದಕ್ಕಾಗಿ ಅವರು ಮಗುವಿನ ಪೋಷಕರ ಬಳಿ ಕ್ಷಮಾಪಣೆ ಕೇಳುವುದಲ್ಲದೆ ಈ ಪ್ರಕರಣವು ಕಾನೂನಾತ್ಮಕವಾಗದಂತೆ ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದರು. ಆದರೆ, ಮಗುವಿನ ತಂದೆ ಇದನ್ನು ಒಪ್ಪದೆ ಆ ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂಬ ದೃಷ್ಟಿಯಿಂದ ದೂರು ನೀಡಿದರು ಎಂದು ತಿಳಿದುಬಂದಿದೆ.
ಮಕ್ಕಳಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಶಿಕ್ಷಕರ ವಿರುದ್ಧ ಪತ್ರ ಬರೆದ ಪೋಷಕರು
ಇನ್ನು, ಗೋಡೆಕೆರೆಯ ನಿವಾಸಿಗಳು ಭಾನುವಾರದಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ, ಅಂಗನವಾಡಿ ಶಿಕ್ಷಕರು ಮಕ್ಕಳಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಪತ್ರ ಬರೆದಿರುವುದಾಗಿ ಪಿಟಿಐ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: Digital Rape: ಡಿಜಿಟಲ್ ರೇಪ್ ಎಂದರೇನು? ಭಾರತದಲ್ಲಾದ ಅತ್ಯಾಚಾರ ಪ್ರಕರಣಗಳ ಬಗ್ಗೆ ತಿಳಿಯಿರಿ
ಈ ದೂರಿನ ಆಧಾರದ ಮೇಲೆ ಸರ್ಕಾರಿ ಅಧಿಕಾರಿ ಜಿ ಹೊನ್ನಪ್ಪ ಅವರು ಈ ಬಗ್ಗೆ ವಿಚಾರಣೆ ನಡೆಸಲು ಗ್ರಾಮಕ್ಕೆ ತೆರಳಿ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಶಿಕ್ಷಕಿ ರಷ್ಮಿ ಅವರನ್ನು ವಿಚಾರಿಸಿದಾಗ ಶಿಕ್ಷಕಿಯು ತಾನು ಕೇವಲ ಬೆಂಕಿ ಕಡ್ಡಿಯಿಂದ ಮಗುವನ್ನು ಹೆದರಿಸಲು ಪ್ರಯತ್ನಿಸುತ್ತಿದ್ದೆ, ಆದರೆ ಆಕಸ್ಮಿಕವಾಗಿ ಅದು ಖಾಸಗಿ ಭಾಗಕ್ಕೆ ತಾಕಿರುವುದಾಗಿ ಅವಲವತ್ತುಕೊಂಡಿದ್ದಾರೆನ್ನಲಾಗಿದೆ. ಈ ಒಟ್ಟಾರೆ ಪ್ರಕರಣದ ಗಂಭೀರತೆಯನ್ನರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇದೀಗ ಆ ಸಹಾಯಕ ಶಿಕ್ಷಕಿಗೆ ನೋಟಿಸ್ ಜಾರಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ