Accident: ಕಾರು-ಟಿಟಿ ನಡುವೆ ಡಿಕ್ಕಿ, ಇಬ್ಬರು ಬಲಿ! ಸಾವು-ಬದುಕಿನ ನಡುವೆ ಮತ್ತೊಬ್ಬನ ಹೋರಾಟ

ಕಾರು ಹಾಗೂ ಟೆಂಪೋ ಟ್ರಾವೆಲರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ ನಡೆದಿದ್ದರೆ, ಜಾತ್ರೆಯೊಂದರಲ್ಲಿ ಕೊಂಡ ಹಾಯುವಾಗ ಅರ್ಚಕ ಗಾಯಗೊಂಡಿದ್ದಾನೆ. ಈ ಎಲ್ಲ ಸುದ್ದಿಗಳ ವಿವರ ಇಲ್ಲಿದೆ...

ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರು

ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರು

  • Share this:
ತುಮಕೂರು: ಅವರೆಲ್ಲ ಬೆಂಗಳೂರಿನಿಂದ (Bengaluru) ಹಾಸನ (Hassan) ವಾಪಸ್ ಹೋಗುತ್ತಿದ್ದರು. ಎದುರಿಗೆ ಬರುತ್ತಿದ್ದ ಕಾರು (Car) ಧರ್ಮಸ್ಥಳದಿಂದ (Dharmasthala) ವಾಪಸ್ ಬರುತ್ತಿತ್ತು. ಈ ವೇಳೆ ತುಮಕೂರು (Tumkur) ಜಿಲ್ಲೆಯ ಕುಣಿಗಲ್ (Kunigal) ಬಳಿ ಭೀಕರ ಅಪಘಾತ (Accident) ಸಂಭವಿಸಿದೆ. ಕಾರು ಹಾಗೂ ಟೆಂಪೋ ಟ್ರಾವೆಲರ್ (Tempo Traveler)  ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, 6 ಮಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಚನ್ನಪಟ್ಟಣದಲ್ಲಿ (Channapattana) ಕೊಂಡ ಹಾಯುವಾಗ ಬಿದ್ದು ಅರ್ಚಕ ಗಾಯಗೊಂಡಿದ್ದಾನೆ. ಮತ್ತೊಂದೆಡೆ ತುಮಕೂರಿನಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ.

ಕುಣಿಗಲ್‌ ಬಳಿ ಭೀಕರ ಅಪಘಾತಕ್ಕೆ ಮೂವರು ಬಲಿ

ಕಾರು ಹಾಗೂ ಟಿಂಪೋ ಟ್ರಾವೆಲ್ (ಟಿ.ಟಿ) ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಮಂದಿ ಮೃತಪಟ್ಟು, 6 ಮಂದಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೇಗೂರು ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರು ಯಾರು?

ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಬೆಂಗಳೂರು ಸಂಜಯನಗರ ನಿವಾಸಿಗಳಾದ ರಾಘು ಹಾಗೂ ಸಂತೊಷ ಎಂದು ಗುರುತಿಸಲಾಗಿದೆ. ಇನ್ನು ವಿಜಯ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಘಟನೆಯಲ್ಲಿ ಇನ್ನೂ 6 ಮಂದಿ  ಗಾಯಗೊಂಡಿದ್ದಾರೆ.

ಇದನ್ನೂ ಓದಿ: Chitradurga: ಕಾಮದಾಸೆಗಾಗಿ ಗಂಡನಿಗೆ ಚಟ್ಟ ಕಟ್ಟಿದ್ದ ಪತ್ನಿ ಅಂದರ್; ಶವದ ಮುಂದೆ ಗಳಗಳನೇ ಅತ್ತಿದ್ದ ಹೆಂಡ್ತಿ

 ಧರ್ಮಸ್ಥಳದಿಂದ ಬರುತ್ತಿದ್ದ ಟಿಟಿ ಅಪಘಾತ

ಧರ್ಮಸ್ಥಳದಿಂದ ಪ್ರವಾಸ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಟಿ.ಟಿ ಯಲ್ಲಿದ್ದವರು ಹಾಗೂ ಕಾರ್ ಚಾಲಕ ಲೋಕೇಶ್ ಗಾಯಗೊಂಡಿದ್ದಾರೆ.

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ

ಎಲ್ಲರೂ ಬೆಂಗಳೂರಿನಿಂದ ಕಾರ್ ನಲ್ಲಿ ಹಾಸನದ ಕಡೆ ಹೋಗುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರುಗಡೆ ಬರುತ್ತಿದ್ದ ಟಿ.ಟಿ.ಗೆ ಗುದ್ದಿದ ಪರಿಣಾಮ ಕಾರ್ ನಲ್ಲಿದ್ದ ಮೂರು ಮಂದಿ ಮೃತಪಟ್ಟಿದ್ದಾರೆ‌.

ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಮತ್ತೊಂದು ಪ್ರಕರಣದಲ್ಲಿ ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಕರಿಶಟ್ಟಿಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. 40 ವರ್ಷದ ಮೂಡ್ಲಯ್ಯ ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಗುಬ್ಬಿ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಕೊಂಡ ಹಾಯುವಾಗ ಬಿದ್ದು ಅರ್ಚಕನಿಗೆ ಗಾಯ

ಜಾತ್ರೆಯಲ್ಲಿ ಕೊಂಡಹಾಯುವಾಗ ಬಿದ್ದು ಅರ್ಚಕ ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹರೂರು ಗ್ರಾಮದಲ್ಲಿ ನಡೆದಿದೆ. ಹರೂರು ಗ್ರಾಮದ ಕೊಟ್ರು ಬಸಪ್ಪ ಜಾತ್ರಾ ಮಹೋತ್ಸವದ ವೇಳೆ ಅವಘಡ ನಡೆದಿದೆ. 38 ವರ್ಷದ ನಂದೀಶ್ ಎಂಬುವರೇ ಗಾಯಗೊಂಡ ಅರ್ಚಕರಾಗಿದ್ದಾರೆ. ಕೊಂಡ ಹಾಯುವಾಗ 2 ಬಾರಿ ಎಡವಿ ಬಿದ್ದ ಅರ್ಚಕನಿಗೆ ಕೈ, ಕಾಲು, ಭುಜಕ್ಕೆ ಗಾಯವಾಗಿದೆ. ಸದ್ಯ ಅವರನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: Bangalore: ಪೆಟ್ರೋಲ್ ಬಾಂಬ್ ತಯಾರು, ಪೊಲೀಸರನ್ನ ಯಾಮಾರಿಸಲು ಹೋಗಿ ಸಿಕ್ಕಿಬಿದ್ದ ಗ್ಯಾಂಗ್

ರೌಡಿ ಹತ್ಯೆ ಆರೋಪಿಗಳ ಬಂಧನ

ಅತ್ತ ಮಂಗಳೂರು ನಗರದ ಎಮ್ಮೆಕೆರೆಯಲ್ಲಿ‌ ರೌಡಿಶೀಟರ್‌ ರಾಹುಲ್ ತಿಂಗಳಾಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಎಮ್ಮೆಕೆರೆಯ ಮಹೇಂದ್ರ ಶೆಟ್ಟಿ ಮತ್ತು ಸುಶಿತ್, ಬೋಳಾರದ ಅಕ್ಷಯ್ ಕುಮಾರ್, ಮೋರ್ಗನ್‌ಗೇಟ್ ನಿವಾಸಿ ದಿಲ್ಲೇಶ್ ಬಂಗೇರ ಬಂಧಿತ ಆರೋಪಿಗಳು. ಇವರಲ್ಲದೆ ಬೋಳಾರದ ಶುಭಂ ಮತ್ತು ಎಮ್ಮೆಕೆರೆಯ ವಿಷ್ಣು ಎಂಬವರು ಕೊಲೆಗೆ ಸಹಕರಿಸಿದ್ದು, ಅವರನ್ನೂ ಬಂಧಿಸಲಾಗಿದೆ ಏ. 28ರಂದು ಈ ಕೊಲೆ ನಡೆದಿದ್ದು, ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.
Published by:Annappa Achari
First published: