ತುಮಕೂರು: ಎಲ್ಲೆಲ್ಲೂ ಝಗಮಗಿಸೋ ಲೈಟುಗಳು! ವೇದಿಕೆ ಮೇಲೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು. ನೋಡಿದಲ್ಲೆಲ್ಲ ಜನಸಾಗರ! ಸಂಭ್ರಮ ನೋಡೋಕೆ ಎರಡು ಕಣ್ಣು ಸಾಲಲ್ಲ. ಇದು ತುಮಕೂರಿನ ಸಿದ್ದಗಂಗಾ ಮಠದಲ್ಲಿ (Siddaganga Mutt) ನಡೆದ ಜಾತ್ರಾ ಮಹೋತ್ಸವದ ವೈಭವ!
ಹೌದು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: Tumkur: ಒಂದೇ ತೆಂಗಿನ ಮರದಲ್ಲಿ 20 ಕವಲು, ಮಾಲೀಕರಿಂದ ಪ್ರತಿದಿನ ಪೂಜೆ!
ಸಿದ್ದಲಿಂಗ ಸ್ವಾಮೀಜಿಯವರಿಂದ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ
ಸಿದ್ದಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರಿಂದ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಿತು.
ಇದನ್ನೂ ಓದಿ: Tumkur: ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ಹುಲಿಯ ಮೃತದೇಹ ಪತ್ತೆ!
ಮೆರುಗು ಹೆಚ್ಚಿಸಿದ ಜಾನಪದ ಕಲಾ ತಂಡಗಳು
ಬೆಳ್ಳಿ ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಸಂಭ್ರಮಪಟ್ಟರು. ಜಾನಪದ ಕಲಾ ತಂಡಗಳ ಪ್ರದರ್ಶನದಿಂದ ಬೆಳ್ಳಿ ಪಲ್ಲಕ್ಕಿ ಉತ್ಸವವು ಹೆಚ್ಚು ಮೆರಗು ಪಡೆದುಕೊಂಡಿತ್ತು. ಒಟ್ಟಾರೆ ಸಿದ್ದಗಂಗಾ ಮಠದ ಜಾತ್ರೆಯಲ್ಲಿ ನಡೆದ ಪಲ್ಲಕ್ಕಿ ಉತ್ಸವವು ಭಕ್ತರ ಮನಸೂರೆಗೊಂಡಿದ್ದಂತೂ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ