Savarkar Flex: ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದವರನ್ನು ಕಂಡಲ್ಲಿ ಗುಂಡಿಟ್ಟು ಸಾಯಿಸಿ! ಸೊಗಡು ಶಿವಣ್ಣ ಆಕ್ರೋಶದ ಮಾತು

"ಯಾರು ಸ್ವಾತಂತ್ರ್ಯ ಹೋರಾಟಗಾರ ವೀರ್‌ ಸಾವರ್ಕರ್‌ ಅವರ ಫೋಟೋ ಇರುವ ಫ್ಲೆಕ್ಸ್ ಹರಿದು ಹಾಕಿದ್ದಾರೋ ಅವರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು!"ಹೀಗಂತ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶಗೊಂಡು ಹೇಳಿದ್ದಾರೆ.

ಬಿಜೆಪಿ ಮುಖಂಡ ಸೊಗಡು ಶಿವಣ್ಣ

ಬಿಜೆಪಿ ಮುಖಂಡ ಸೊಗಡು ಶಿವಣ್ಣ

  • Share this:
    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು (Independence Day Amrit Mahotsava) ಅದ್ದೂರಿಯಾಗಿ ದೇಶದಾದ್ಯಂತ (Country) ಆಚರಣೆ ಮಾಡಲಾಗಿದೆ. ಇದಕ್ಕಾಗಿ ನಗರಗಳಲ್ಲಿ (City) ಸ್ವಾತಂತ್ರ್ಯ ಹೋರಾಟಗಾರರ (Freedom Fighters) ಭಾವಚಿತ್ರಗಳ ಫ್ಲೆಕ್ಸ್ ನ್ನು (Flex) ಎಲ್ಲೆಡೆ ಅಳವಡಿಕೆ ಮಾಡಲಾಗಿತ್ತು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ತುಮಕೂರು ನಗರದಲ್ಲಿ 80 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್ ಅನ್ನು ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಹಾಕಿಸಿದ್ದರು. ಮೂರು ದಿನಗಳ ಹಿಂದೆಯೇ ನಗರದಾದ್ಯಂತ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಆದರೆ ಕಳೆದ ರಾತ್ರಿ ಕಿಡಿಗೇಡಿಗಳು, ಸಾವರ್ಕರ್ ಭಾವಚಿತ್ರ ಹೊಂದಿರುವ ಫ್ಲೆಕ್ಸ್ ನ್ನು ಮಾತ್ರ ಹರಿದು ಹಾಕಿದ್ದರು. ಈ ಘಟನೆ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

    ‘ಕೃತ್ಯ ಎಸಗಿರುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯಬೇಕು’

    ಈಗ ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಹೇಳಿಕೆಯೊಂದನ್ನು ನೀಡಿದ್ದು ಸಾಕಷ್ಟು ಸಂಚಲನ ಮೂಡಿಸಿದೆ. “ಮೊದಲಿನಿಂದಲೂ ನಾವು ಶಾಂತಿ ಕಾಪಾಡಿಕೊಂಡು ಬಂದಿದ್ದೇವು. ಈಗ ಕೃತ್ಯ ಎಸಗಿರುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯಬೇಕು ಎಂದು ಎಸ್​ಪಿ ಅವರಿಗೆ ಮನವಿ ಮಾಡುತ್ತೇನೆ.

    ಶಿವಮೊಗ್ಗದ ಹಾಗೇ ತುಮಕೂರಲ್ಲಿ ಆಗಬಾರದು. ಇಲ್ಲಿ ಎಲ್ಲರೂ ಒಂದಾಗಿದ್ದೇವೆ. ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು” ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

    ಯಾರು ಸ್ವಾತಂತ್ರ್ಯ ಹೋರಾಟಗಾರ ವೀರ್‌ ಸಾವರ್ಕರ್‌ ಅವರ ಪೋಟೋ ಇರುವ ಫ್ಲೆಕ್ಸ್ ಹರಿದು ಹಾಕಿದ್ದಾರೋ ಅವರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶಗೊಂಡು ಹೇಳಿದ್ದಾರೆ.

    ಇದನ್ನೂ ಓದಿ: ಹಿಂದೂಗಳು ತಮ್ಮ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ! ಕರೆ ಕೊಟ್ಟಿದ್ದೇಕೆ ಪ್ರಮೋದ್ ಮುತಾಲಿಕ್?

    ವೀರ ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸ್

    ತುಮಕೂರಿನ ಎಂಪ್ರೆಸ್ ಕಾಲೇಜಿನ ಎದುರು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನಲೆ ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಈ ಫ್ಲೆಕ್ಸ್ ನಲ್ಲಿನ ವೀರ ಸಾವರ್ಕರ್ ಭಾವಚಿತ್ರವನ್ನು ದುಷ್ಕರ್ಮಿಗಳು ಹರಿದು ಹಾಕಿದ್ದರು. ಸಾವರ್ಕರ್‌ ಪೋಟೋ ಹರಿದವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು. ನಾವು ಶಾಂತಿ ಸುವ್ಯವಸ್ಥೆಯಿಂದ ಬದುಕುತ್ತಿದ್ದೇವೆ.

    ಫೋಟೋ ಹರಿದವರನ್ನು ಕಂಡಲ್ಲಿ ಗುಂಡು ಹೊಡೆಯಿರಿ. ತುಮಕೂರು, ಶಿವಮೊಗ್ಗ ಕೆಜೆ ಹಳ್ಳಿ, ಡಿಜೆಹಳ್ಳಿ ಆಗುವುದು ಬೇಡ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದುಷ್ಕರ್ಮಿಗಳನ್ನು ಬಂಧಿಸಲಿ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ. ಸಾವರ್ಕರ್‌ ಚಿತ್ರ ಹರಿದು ಹಾಕಿದವರೇ, ಭಯದಿಂದ ಫ್ಲೆಕ್ಸ್ ಹರಿದು ಹಾಕಿದ್ದಾರೆ ಎಂದಿದ್ದಾರೆ.

    ಆಯುಕ್ತರನ್ನು ಸಸ್ಪೆಂಡ್ ಮಾಡಿ ಎಂದು ಆಕ್ರೋಶ

    ನಗರದಲ್ಲಿ ಹಾಕಲಾದ ಎಲ್ಲ ಫ್ಲೆಕ್ಸ್ ಗಳನ್ನು ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದ್ದನ್ನು ಸೊಗಡು ಶಿವಣ್ಣ ಖಂಡಿಸಿದ್ದಾರೆ. ಇದನ್ನು ಪಾಲಿಕೆಯವರು ತೆಗೆದು ಹಾಕಿರುವುದು ತಪ್ಪು, ಯಾಕೆ ತೆಗೆಯಬೇಕು. ಆಯುಕ್ತರನ್ನು ಸಸ್ಪೆಂಡ್ ಮಾಡಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ತುಮಕೂರಿನಲ್ಲಿ ನಾವು ಹಿಂದೂ ಮತ್ತು ಮುಸ್ಲಿಂಮರು ಒಂದಾಗಿ ಬಾಳುತ್ತಿದ್ದೇವೆ. ಮೂವತ್ತು ವರ್ಷಗಳಿಂದ ಚೆನ್ನಾಗಿ ಬದುಕುತ್ತಿದ್ದೇವೆ. ಕಿಡಿಗೇಡಿಗಳನ್ನು ಮೊದಲು ಗಡಿಪಾರು ಮಾಡಿ. ಹೆಚ್ಚು ಕಡಿಮೆ ಆದರೆ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದಿದ್ದಾರೆ ಶಿವಣ್ಣ.

    ಇದನ್ನೂ ಓದಿ: ಅರೆಸ್ಟ್ ಮಾಡಲು ಹೋದ ಖಾಕಿ ಮೇಲೆ ಹಲ್ಲೆಗೆ ಯತ್ನ; ಆರೋಪಿ ಕಾಲಿಗೆ ಗುಂಡು

    ಇನ್ನು ಶಿವಮೊಗ್ಗದಲ್ಲಿ ವೀರ ಸಾರ್ವಕರ್ ಮತ್ತು ಟಿಪ್ಪು ಫೋಟೋ ಗಲಾಟೆ ನಡೆದಿತ್ತು. ಆದ್ರೆ ಗಲಾಟೆಗೆ ಸಂಬಂಧಪಡದ 20 ವರ್ಷದ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಚಾಕು ಇರಿತಕ್ಕೆ ಸಂಬಂಧಿಸಿದಂತೆ ತಡರಾತ್ರಿಯೇ ಇಬ್ಬರನ್ನು ಬಂಧಿಸಲಾಗಿತ್ತು. ಶಿವಮೊಗ್ಗದ ಫಲಕ್ ಪ್ಯಾಲೇಸ್ ಹಿಂದೆ ಅವಿತುಕೊಂಡಿದ್ದ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.
    Published by:renukadariyannavar
    First published: