Tragedy Love Story: ಪ್ರೀತಿಸಿದ ಹುಡುಗ ಅಪಘಾತಕ್ಕೆ ಬಲಿಯಾದ, ನೊಂದ ಹುಡುಗಿ ಸೂಸೈಡ್ ಮಾಡಿಕೊಂಡಳು! ಒಂದು ಪ್ರೇಮಕಥೆ ಎರಡು ಸಾವಿನಲ್ಲಿ ಅಂತ್ಯ
ಹಲವು ಕರಾಳ ಘಟನೆಗಳಿಗೆ ಇಂದು ಕರುನಾಡು ಸಾಕ್ಷಿಯಾಗಿದೆ. ಒಂದೆಡೆ ಪ್ರಿಯಕರ ಸತ್ತ ಅಂತ ಪ್ರಿಯತಮೆ ಸೂಸೈಡ್ ಮಾಡಿಕೊಂಡಿದ್ದಾಳೆ. ಮತ್ತೊಂದೆಡೆ ಮದುವೆ ನಿಶ್ಚಯವಾಗಿದ್ದ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡಿದ್ದಾಳೆ. ಮತ್ತೊಂದು ಕೇಸ್ನಲ್ಲಿ ಪ್ರಿಯಕರ ಗೃಹಿಣಿಯನ್ನು ಕೊಂದಿದ್ದರೆ, ಮತ್ತೊಂದೆಡೆ ಮಗುವಿನ ಜೊತೆ ಮಹಿಳೆ ಬಾವಿಗೆ ಹಾರಿದ್ದಾಳೆ. ಈ ಎಲ್ಲಾ ಸುದ್ದಿಗಳ ವಿವರ ಇಲ್ಲಿದೆ...
ತುಮಕೂರು: ಆಕೆ ಆತನನ್ನು ಪ್ರೀತಿಸುತ್ತಾ (Love) ಇದ್ದಳು. ಆತನೂ ಅಷ್ಟೇ ಪ್ರಾಣಕ್ಕಿಂತ ಹೆಚ್ಚಾಗಿ ಆಕೆಯನ್ನು ಪ್ರೀತಿಸ್ತಿದ್ದ. ಇದಕ್ಕೆ ಮನೆಯವರ ವಿರೋಧವಿತ್ತು. ಆದ್ರೆ ಆ ಪ್ರೇಮಿಗಳಿಗೆ (Lovers) ತಮ್ಮ ಪ್ರೀತಿ ಮೇಲೆ ನಂಬಿಕೆ ಇತ್ತು. ಆಗಿದ್ದಾಗಲಿ ಅಂತ ಮನೆಯವರ ಜೊತೆ ಮಾತನಾಡಿದ್ರು. ಅವರ ವಿರೋಧಿಸಿದ್ರೂ ತಮ್ಮ ಪ್ರೀತಿ ಎಷ್ಟು ಸ್ಟ್ರಾಂಗ್ (Strong) ಅಂತ ಮನವರಿಕೆ ಮಾಡಿಕೊಟ್ಟರು. ಕೊನೆಗೆ ಮದುವೆಗೆ (Marriage) ಎರಡೂ ಮನೆಯವರ ಒಪ್ಪಿಗೆಯನ್ನೂ ಪಡೆದರು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಅಪಘಾತದಲ್ಲಿ (Accident) ಆತ ಸಾವನ್ನಪ್ಪಿದರೆ, ಆಕೆ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಳು. ಮತ್ತೊಂದೆಡೆ ಮದುವೆ ನಿಶ್ಚಯವಾಗಿದ್ದ (Engagement) ವಿದ್ಯಾರ್ಥಿನಿ ಬೆಂಕಿ (Fire) ಹಚ್ಚಿಕೊಂಡರೆ, ದೊಡ್ಡಬಳ್ಳಾಪುರದಲ್ಲಿ ಪ್ರಿಯಕರನಿಂದ ಗೃಹಿಣಿ ಕೊಲೆಯಾಗಿದ್ದಾಳೆ. ದೂರದ ಕಲಬುರಗಿಯಲ್ಲಿ ಗೃಹಿಣಿಯೊಬ್ಬಳು ಮಗುವಿನ ಜೊತೆ ಬಾವಿಗೆ ಹಾರಿ ಸೂಸೈಡ್ (Suicide) ಮಾಡಿಕೊಂಡಿದ್ದಾಳೆ.
ಆತ ಅಪಘಾತಕ್ಕೆ ಬಲಿಯಾದ, ಈಕೆ ಸೂಸೈಡ್ ಮಾಡಿಕೊಂಡಳು
ಹೌದು, ತುಮಕೂರಿನಲ್ಲಿ ಇಂಥದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರಿಯತಮ ಅಪಘಾತದಲ್ಲಿ ಸಾವನ್ನಪ್ಪಿದರೆ, ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ 23 ವರ್ಷದ ಧನುಷ್ ಹಾಗೂ ಅರೆಹಳ್ಳಿ ಗ್ರಾಮದ 22 ವರ್ಷದ ಸುಷ್ಮಾ ಮೃತ ಪ್ರೇಮಿಗಳು.
2 ವರ್ಷಗಳಿಂದ ಪ್ರೀತಿಸುತ್ತಾ ಇದ್ದ ಜೋಡಿ
ಧನುಷ್ ಹಾಗೂ ಸುಷ್ಮಾ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಾ ಇದ್ದರು. ಇದಕ್ಕೆ ಮನೆಯವರ ವಿರೋದ ಎದುರಾಗಿತ್ತು. ಆದರೆ ತಾವೇ ಮಾತನಾಡಿ, ಮನೆಯವರ ಒಪ್ಪಿಗೆಯನ್ನೂ ಪಡೆದಿದ್ದರು. ಇಬ್ಬರಿಗೂ ಮದುವೆಯೂ ನಿಶ್ಚಯವಾಗಿತ್ತು.
ಮೇ 11ರಂದು ಧನುಷ್ ಸಾವು, ನಿನ್ನೆ ಸುಷ್ಮಾ ಸೂಸೈಡ್
ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟಿದ್ದ ಧನುಷ್, ಮೇ 11ರಂದು ಊರಿನ ಜಾತ್ರೆಗೆ ಬರುವ ವೇಳೆ ನೆಲಮಂಗಳ ಕುಲಾನಹಳ್ಳಿ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದ. ಆತನ ಅಂತ್ಯ ಸಂಸ್ಕಾರಕ್ಕೂ ಹೋಗಿದ್ದ ಸುಷ್ಮಾ, ಖಿನ್ನತೆಗೆ ಒಳಗಾಗಿದ್ದಳು. ಇದೇ ಚಿಂತೆಯಲ್ಲಿ ನಿನ್ನೆ ರಾತ್ರಿ ಸುಷ್ಮಾ ವಿಷ ಸೇವಿಸಿದ್ದಾಳೆ. ಈ ವಿಚಾರ ಮನೆಯವರಿಗೆ ಗೊತ್ತಾಗಿ ನಾಲ್ಕೈದು ಆಸ್ಪತ್ರೆಗಳಲ್ಲಿ ಸುತ್ತಿದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 19 ವರ್ಷದ ತೇಜಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಪಾವಗಡದಲ್ಲಿ ಮೊದಲನೇ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ತೇಜಾಗೆ ಮೇ 24 ಹಾಗೂ 25ರಂದು ಮದುವೆ ನಿಶ್ಚಯವಾಗಿತ್ತು. ಪೋಷಕರು ಮದುವೆ ಆಮಂತ್ರಣ ಪತ್ರಿಕೆಯನ್ನ ಎಲ್ಲಾ ಕಡೆ ಕೊಟ್ಟಿದ್ದರು. ಆದರೆ ಇಂದು ಬೆಳಗ್ಗಿನ ಜಾವ 4.30ರ ಸುಮಾರಿಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಿಯಕರನಿಂದ ಗೃಹಿಣಿಯ ಬರ್ಬರ ಹತ್ಯೆ
ಅನೈತಿಕ ಸಂಬಂಧ ಹಿನ್ನಲೆ ಪ್ರಿಯಕರನೇ ಗೃಹಿಣಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಭಾಗ್ಯಶ್ರೀ ಕೊಲೆಯಾದ ದುರ್ದೈವಿ. ಈಕೆಯ ಪ್ರಿಯಕರ, 27 ವರ್ಷದ ರಿಯಾಜ್ ಎಂಬಾತನ ವಿರುದ್ಧ ಆರೋಪ ಕೇಳಿ ಬಂದಿದೆ.
ನಿರ್ಲಕ್ಷ್ಯ ಮಾಡಿದ್ದಕ್ಕೆ ಕೊಂದನಾ ಪ್ರಿಯಕರ?
ಕೊಲೆಯಾದ ಭಾಗ್ಯಶ್ರೀ ಪ್ರಿಯಕರ ರಿಯಾಜ್ ಜತೆ ನಿರಂತರ ಸಂಬಂಧ ಇಟ್ಡುಕೊಂಡಿದ್ಲು. ಆದರೆ ಕೆಲ ದಿನಗಳಿಂದ ಪ್ರಿಯಕರನನ್ನು ಭಾಗ್ಯಶ್ರೀ ಕೇರ್ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ರಿಯಾಜ್ ಭಾಗ್ಯಶ್ರೀ ಕತ್ತು ಕೊಯ್ದು ಕೊಲೆ ಮಾಡುರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಂದಾಪುರ ತಾಂಡಾದಲ್ಲಿ ಬಾವಿಗೆ ಹಾರಿ ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 22 ವರ್ಷದ ಕವಿತಾ ಎಂಬಾಕೆ ತನ್ನ ಒಂದೂವರೆ ವರ್ಷದ ಮಗ ಪವನ್ನನ್ನು ಎತ್ತಿಕೊಂಡು ಬಾವಿಗೆ ಹಾರಿದ್ದಾಳೆ.