Tumkur: ಒಂದೇ ರಾತ್ರಿಯಲ್ಲಿ ಬಿದ್ದಿತ್ತು ಎರಡು ಹೆಣ! ಬಟ್ಟೆ ಬಿಚ್ಚಿಸಿ, ಥಳಿಸಿ ಸ್ನೇಹಿತರನ್ನು ಕೊಂದವರು ಯಾರು?

ಸ್ನೇಹಿತರಿಬ್ಬರನ್ನೂ ಸುತ್ತವರಿದಿರೋ ರಾಕ್ಷಸರು ಬಟ್ಟೆ ಬಿಚ್ಚಿಸಿ ರಾತ್ರಿ ಪೂರ್ತಿ ಹಿಗ್ಗಾಮುಗ್ಗಾ ಥಳಿಸಿ, ಕೊನೆಗೆ ಬೆಂಕಿ ಇಟ್ಟು ಕೊಲೆ ಮಾಡಿದ್ದಾರೆ. ಬಳಿಕ ಇಬ್ಬರ ಶವವನ್ನೂ ಕೆರೆ ಬಳಿ ಎಸೆದು, ಎಸ್ಕೇಪ್ ಆಗಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತುಮಕೂರು: ಆತ ವೃತ್ತಿಯಲ್ಲಿ ಆಟೋ ಡ್ರೈವರ್ (Auto Driver). ರಾತ್ರಿ ತನ್ನ ಸ್ನೇಹಿತನ (Friend) ಜೊತೆ ಹೋದವ ಬೆಳಗ್ಗೆ ಅದೇ ಸ್ನೇಹಿತನ ಜೊತೆಯಲ್ಲಿ ಹೆಣವಾಗಿ (Dead Body) ಸಿಕ್ಕಿದ್ದಾನೆ.. ಇದರ ಬೆನ್ನಲ್ಲೇ‌ ಮೃತನ ಮೇಲೆಯೇ ಕಳ್ಳತನದ ವಾಸನೆ ಬಡಿದಿದೆ.. ಹೌದು ಗುಬ್ಬಿ (Gubbi) ತಾಲೂಕಿನ ಪೆದ್ದನಹಳ್ಳಿಯಲ್ಲಿ ಮೊನ್ನೆ ರಾತ್ರಿ ಡಬಲ್ ಮರ್ಡರ್ (Double Murder) ಆಗಿದೆ.. ಆಟೋ ಚಾಲಕ ಗಿರೀಶ್ ಹಾಗೂ ಆತನ ಸ್ನೇಹಿತ ಗಿರೀಶ್ ಎಂಬ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ನಿವಾಸಿ ಗಿರೀಶ್. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ.. ಹೆಣವಾಗಿ ಮಲಗಿರುವ ಮತ್ತೊಬ್ಬನ ಹೆಸರೂ ಕೂಡ ಗಿರೀಶ್.

ಬೈಕ್ ಕದ್ದು ಜೈಲಿಗೆ ಹೋಗಿ ಬಂದಿದ್ದ ಗಿರೀಶ್

ಈ ಮೃತ ಗಿರೀಶ್ ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಯಾರದ್ದೋ ಬೈಕ್ ಕದ್ದು ಮೂರು ತಿಂಗಳು ಜೈಲು ವಾಸ ಅನುಭವಿಸಿ ಹೊರಬಂದಿದ್ದ.. ಹೀಗಿದ್ದವ ಊರಲ್ಲಿ ಆಟೋ ಮತ್ತು ಟ್ರಾಕ್ಟರ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಮತ್ತೋರ್ವ ಮೃತ ಗಿರೀಶ್ ಕೂಡ ಈತನ ಸ್ನೇಹಿತನಾಗಿದ್ದ.

ರಾತ್ರಿ ಗಿರೀಶ್‌ ಹಾಗೂ ಸ್ನೇಹಿತನನ್ನು ಕರೆದೊಯ್ದಿದ್ದ ನಂದೀಶ್

ಹೀಗಿರುವಾಗ್ಲೇ ಮೊನ್ನೆ ರಾತ್ರಿ ನಂದಿಶ್ ಎಂಬಾತ ಈ ಇಬ್ಬರನ್ನೂ ಹೊರಗೆ ಕರೆದೊಯ್ದಿದ್ದ. ಎಲ್ಲೋ ಹೋಗಿದ್ದಾನೆ ಬಿಡು ಬರ್ತಾನೆ ಅಂತ ಸುಮ್ಮನಾಗಿದ್ದ ತಾಯಿಗೆ ಬೆಳಗಾಗುವಷ್ಟರಲ್ಲಿ ಶಾಕ್ ಕಾದಿತ್ತು ಹೌದು.. ಬೆಳಗ್ಗೆ ಯಾರೋ ಮೃತ ಗಿರೀಶ್ ತಾಯಿ ಗೌರಮ್ಮಗೆ ನಿನ್ನ ಮಗ ನೀರಲ್ಲಿ ಹೆಣವಾಗಿ ಬಿದ್ದಿದ್ದಾನೆ ಅಂತ ಸುದ್ದಿ ಮುಟ್ಟಿಸಿದ್ರು.

ಇದನ್ನೂ ಓದಿ: Viral Video: ಚಲಿಸುತ್ತಿರುವ ಬೈಕ್‌ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು

 ಅಕ್ಕ ಪಕ್ಕದಲ್ಲೇ ಬಿದ್ದಿತ್ತು ಸ್ನೇಹಿತರ ಶವ

ಅಲ್ಲದೇ ರಾತ್ರಿ ಜೊತೆಯಲ್ಲಿದ್ದ ಗುಬ್ಬಿ ತಾಲೂಕಿನ ಮಂಚಲದೊರೆ ಗ್ರಾಮದ ಗಿರೀಶ್ ಎಂಬಾತನ ಶವವೂ ಕೂಡ ಅಲ್ಲೆ ಕಟ್ಟೆ ಪಕ್ಕದಲ್ಲೇ ಬಿದ್ದಿತ್ತು.. ವಿಚಾರ ತಿಳಿಯುತ್ತಿದ್ದಂತೆ ಪೆದ್ದನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು..

ಬಟ್ಟೆ ಬಿಚ್ಚಿಸಿ, ಹಿಗ್ಗಾಮುಗ್ಗ ಥಳಿಸಿ ಹತ್ಯೆ?

ಈ ಇಬ್ಬರನ್ನೂ ಸುತ್ತವರಿದಿರೋ ರಾಕ್ಷಸರು ಬಟ್ಟೆ ಬಿಚ್ಚಿಸಿ ರಾತ್ರಿ ಪೂರ್ತಿ ಹಿಗ್ಗಾಮುಗ್ಗಾ ಥಳಿಸಿ ಬೆಂಕಿ ಇಟ್ಟು ಕೊಲೆ ಮಾಡಿದ್ದಾರೆ.. ಬಳಿಕ ಇಬ್ಬರ ಶವವನ್ನೂ ಸುಮಾರು 1 ವರೆ ಕಿಲೋಮೀಟರ್ ದೂರದಷ್ಟು ಹೊತ್ತೊಯ್ದು ಊರಿನ ಸಮೀಪವಿರುವ ನೀರಿನ ಕಟ್ಟೆ ಬಳಿ ಒಬ್ಬನ ಶವ ಎಸೆದಿದ್ದಾರೆ.. ಮತ್ತೊರ್ವನ ಶವವನ್ನ ನೀರಿನ ಕಟ್ಟೆಯ ರಸ್ತೆ ಪಕ್ಕ ಬಿಸಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ..

ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಗ್ರಾಮಸ್ಥರು

ಇನ್ನು ಬೆಳಂಬೆಳಗ್ಗೆ ಊರಿನ ಗ್ರಾಮಸ್ಥರು ಎರಡು ಶವಗಳನ್ನ ನೋಡಿ ಬೆಚ್ಚಿಬಿದ್ದು ಗುಬ್ಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.. ಸ್ಥಳಕ್ಕೆ ಆಗಮಿಸಿದ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಘಟನೆ ನಡೆದ ಜಾಗವನ್ನ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ..

ಇದನ್ನೂ ಓದಿ: Devil: ಶ್, ಬಾಗಿಲು ತೆರೆದರೆ ಬರುತ್ತಂತೆ ದೆವ್ವ! ಮಾಟಗಾತಿ ಮಾತು ಕೇಳಿ 2 ದಿನ ಮನೆಯೊಳಗೆ ಬಂಧಿಯಾದ ಗ್ರಾಮಸ್ಥರು!

ಇನ್ನು ಇವರ ಮರ್ಡರ್ ನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು.. ಈ ಇಬ್ಬರೂ ಮೃತರ ಮೇಲೆ ಕಳ್ಳತನದ ಆರೋಪವೂ ಇದೆ.. 2015ರಲ್ಲಿ ಮೃತ ಪೆದ್ದನಹಳ್ಳಿ ಮೂಲದ ಗಿರೀಶ್ ಎಂಬಾತ ಬೈಕ್ ಕಳ್ಳತನದ ಆರೋಪದ ಮೇಲೆ ಮೂರು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ್ದ ಎನ್ನಲಾಗಿದೆ ಅಲ್ಲದೇ ಮೃತ ಗಿರೀಶ್ ಈಗಲೂ ಕಳ್ಳತನದ ಚಾಳಿಯನ್ನ ಮುಂದುವರಿಸಿದ್ದನಾ ಎಂಬ ಅನುಮಾನ ಬಂದಿದೆ.. ಇನ್ನು ಈ ಕೃತ್ಯದಲ್ಲಿ ಭಾಗಿಯಾಗಿರೋದು ಗ್ರಾಮಸ್ಥರೆ ಎಂದು ಹೇಳಲಾಗುತ್ತಿದ್ದು ಪೊಲೀಸರೇ ಉತ್ತರ ನೀಡಬೇಕಿದೆ..
Published by:Annappa Achari
First published: