ವರ್ಷದ ಕುರೂಪಿ ನಾಯಿ ಪ್ರಶಸ್ತಿ ಗೆದ್ಧ ಇಂಗ್ಲಿಷ್​​ ಬುಲ್​​ಡಾಗ್​ 'ಝ್ಯಾಸಾ'


Updated:June 25, 2018, 12:05 PM IST
ವರ್ಷದ ಕುರೂಪಿ ನಾಯಿ ಪ್ರಶಸ್ತಿ ಗೆದ್ಧ ಇಂಗ್ಲಿಷ್​​ ಬುಲ್​​ಡಾಗ್​ 'ಝ್ಯಾಸಾ'
AFP/Getty Images

Updated: June 25, 2018, 12:05 PM IST
ನ್ಯೂಸ್​ 18 ಕನ್ನಡ 

ಸ್ಯಾನ್​ಫ್ರಾನ್ಸಿಸ್ಕೊ: ಶ್ವಾನಗಳ ಸ್ಪರ್ಧೆ ಕುರಿತು ನೀವು ಕೇಳಿರುತ್ತೀರಿ. ನಾಯಿಗಳಿಗಾಗಿ ನಡೆಯುವ ಸ್ಪರ್ಧೆಗಳು ಅವುಗಳ ಅಂದ-ಚೆಂದ, ತರಬೇತಿ ಕುರಿತಾಗಿ ಇರುತ್ತವೆ. ಆದರೆ ಇಲ್ಲೊಂದು ಸ್ಪರ್ಧೆ ಇದೆ. ಅದು ನಾಯಿಗಳು ಎಷ್ಟು ಕೆಟ್ಟದಾಗಿ ಕಾಣುತ್ತವೆ ಹಾಗೂ ಅತ್ಯಂತ ಕುರೂಪಿ ನಾಯಿ ಯಾವುದೆಂದು ಆಯ್ಕೆ ಮಾಡಲು ನಡೆಯುತ್ತದೆ.

ಉತ್ತರ ಕ್ಯಾಲಿಫೋರ್ನಿಯಾದ ಪೆಟ್ಲುಮಾದಲ್ಲಿ ನಡೆದಿರುವ 2018ನೇ ವರ್ಷದ ಕುರೂಪಿ ನಾಯಿ ಸ್ಪರ್ಧೆಯಲ್ಲಿ 7 ವರ್ಷದ ಇಂಗ್ಲಿಷ್​ ಬುಲ್​ಡಾಗ್​ ಝ್ಯಾಸಾ ಅತ್ಯಂತ ಕುರೂಪಿ ನಾಯಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ ಮೊದಲನೇ ಬಹುಮಾನವಾಗಿ $1,500 (ಸುಮಾರು 70 ಸಾವಿರ ರೂಪಾಯಿ) ಅನ್ನು ಪಡೆದುಕೊಂಡಿದೆ.

ಏನಿದು ಕುರೂಪಿ ನಾಯಿಗಳ ಸ್ಪರ್ಧೆ?

ಕಳೆದ 30 ವರ್ಷಗಳಿಂದ ಈ ಸ್ಪರ್ಧೆಯನ್ನು ಏರ್ಪಡಿಸಿಕೊಂಡು ಬರಲಾಗಿದೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಾಯಿಗಳಲ್ಲಿ ಹೆಚ್ಚಿನ ನಾಯಿಗಳು ಯಾವುದೋ ಅವಘಡದಲ್ಲಿ ರಕ್ಷಿಸಲ್ಪಟ್ಟಿರುವ ನಾಯಿಗಳೇ ಆಗಿರುತ್ತವೆ. ಕಾಯಿಲೆಯಿಂದ ಬಳಲುತ್ತಿರುವ ನಾಯಿಗಳೂ ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ.

ಕಳೆದ ವರ್ಷ ಮಾರ್ಥಾ ಎಂಬ ಹೆಣ್ಣು ನಾಯಿಗೆ ಈ ಪ್ರಶಸ್ತಿ ಲಭಿಸಿದೆ. ಈ ಶ್ವಾನ ಬರೋಬ್ಬರಿ 125 ಪೌಂಡ್ ತೂಕ ಹೊಂದಿತ್ತು. ಮಾರ್ಥಾಗೆ ಕಣ್ಣು ಕೂಡ ಕಾಣಿಸ್ತಾ ಇರಲಿಲ್ಲ. ಹತ್ತಾರು ಶಸ್ತ್ರಚಿಕಿತ್ಸೆಗಳ ಬಳಿಕ ಕೊಂಚ ದೃಷ್ಟಿ ಮರಳಿದೆ.
First published:June 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ