Viral Video: ‘ಟರ್ಕಿಶ್ ಐಸ್ ಕ್ರೀಮ್’ ಹೋಲುವ ಜೊಮ್ಯಾಟೋ ಈ ವಿಡಿಯೋ ವೈರಲ್! ಹೀಗೆ ಸತಾಯಿಸಬಾರದು!

ಟರ್ಕಿಶ್ ಐಸ್‍ಕ್ರೀಂ ಮಾರುವ ವಿಧಾನವನ್ನು ಹೋಲುವ ಮತ್ತು ವಿನೋದದಿಂದ ಕೂಡಿರುವ ಈ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ನೀವು ಕೂಡ ಅದನ್ನು ನೋಡಿದರೆ ನಕ್ಕು ನಕ್ಕು ಸುಸ್ತಾಗುವುದರಲ್ಲಿ ಸಂಶಯವಿಲ್ಲ. ಈ ವಿಡಿಯೋಗೆ “ ಇದನ್ನು ನಿಮ್ಮ ಸ್ವಂತ ರಿಸ್ಕ್ ನಲ್ಲಿ ಪ್ರಯತ್ನಿಸಿ” ಎಂಬ ಅಡಿಬರಹವನ್ನು ಕೂಡ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಟರ್ಕಿಶ್ (Turkish) ವಿಧಾನದಲ್ಲಿ ಐಸ್‍ಕ್ರೀಂ ಸರ್ವ್ (Serve the ice cream) ಮಾಡುವುದು ಹೇಗಿರುತ್ತದೆ ಎಂದು ನೀವು ನೋಡಿರುತ್ತೀರಿ ಅಲ್ಲವೇ? ಏಕೆಂದರೆ, ಸಾಮಾಜಿಕ ಮಾಧ್ಯಮದಲ್ಲಿ (Social Media) ಟರ್ಕಿಶ್ ಐಸ್‍ಕ್ರೀಂ ಕುರಿತ ಅನೇಕ ವಿಡಿಯೋಗಳಿವೆ (Video). ಅದರಲ್ಲೂ ನಟಿ ಕರೀನಾ ಕಪೂರ್ (Kareena Kapoor) ಮಗ ತೈಮೂರ್ ಅಲಿ ಖಾನ್ (Taimur Ali Khan), ಟರ್ಕಿಶ್ ಐಸ್‍ಕ್ರೀಂ ಮಾರುವವನ ಕೈಯಿಂದ ಅದನ್ನು ತೆಗೆದುಕೊಳ್ಳಲಾಗದೆ ಬೆಸ್ತು ಬೀಳುವ ವಿಡೀಯೋ ರೀಲ್ (Reel) ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ನೀವು ಸದಾ ಇಂಟರ್‍ನೆಟ್‍ನಲ್ಲೇ (Internet) ಮುಳುಗಿರುವವರ ಪೈಕಿ ಅಲ್ಲವಾಗಿದ್ದು, ಟರ್ಕಿಶ್ ಐಸ್‍ಕ್ರೀಂ ಬಗ್ಗೆ ನಿಮಗೆ ಗೊತ್ತಿಲ್ಲವಾದರೆ ನಾವೇ ಹೇಳುತ್ತೇವೆ ಬಿಡಿ.

ಏನಿದು ಟರ್ಕಿಶ್ ಐಸ್‍ಕ್ರೀಂ ಕೊಡುವ ವಿಧಾನ
ಟರ್ಕಿಶ್ ಐಸ್‍ಕ್ರೀಂ ಅನ್ನು ಬಡಿಸುವ ವಿಧಾನವು ಕೊಂಚ ವಿನೋದಮಯವಾಗಿದೆ, ಅಂದರೆ ಐಸ್‍ಕ್ರೀಂ ಮಾರುವವನು ತನ್ನ ಕೈಚಳಕದ ಮೂಲಕ ಗ್ರಾಹಕನ ಮೇಲೆ ಮೋಜಿನ ಟ್ರಿಕ್ ಒಂದನ್ನು ಪ್ರಯೋಗಿಸುತ್ತಾನೆ. ಅಂದರೆ ಈ ವಿಧಾನದಲ್ಲಿ ಮಾರಾಟಗಾರ, ಐಸ್‍ಕ್ರೀಂ ನೀಡಲು ಉದ್ದನೆಯ ಕೋಲೊಂದನ್ನು ಬಳಸುತ್ತಾನೆ. ಆ ಕೋಲಿನ ತುದಿಯಲ್ಲಿ ಐಸ್‍ಕ್ರೀಂ ತುಂಬಿದ ಕೋನ್ ಇರುತ್ತದೆ. ಮಾರಾಟಗಾರ ಅದನ್ನು ಗ್ರಾಹಕನ ಕಡೆಗೆ ಹಿಡಿಯುತ್ತಾನೆ. ಗ್ರಾಹಕ ಕೋಲಿನ ತುದಿಯಲ್ಲಿರುವ ಐಸ್‍ಕ್ರೀಂ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ, ಮಾರಾಟಗಾರ ತಟ್ಟನೆ ಕೋಲನ್ನು ಹಿಂದಕ್ಕೆ ತೆಗೆದುಕೊಂಡು ಗ್ರಾಹಕನಿಗೆ ಐಸ್‍ಕ್ರೀಂ ಸಿಗದಂತೆ ಮಾಡುತ್ತಾನೆ.

ಗ್ರಾಹಕರು ಆ ಐಸ್‍ಕ್ರೀಂ ಅನ್ನು ಕೋಲಿನ ತುದಿಯಿಂದ ತೆಗೆಕೊಳ್ಳುವವರೆಗೆ ಅಥವಾ ಅವರು ಸುಸ್ತಾಗಿ ಸೋಲೊಪ್ಪಿಕೊಳ್ಳುವವರೆಗೆ ಈ ವಿನೋದದ ಆಟ ನಡೆಯುತ್ತಲೇ ಇರುತ್ತದೆ. ಅಪರೂಪಕ್ಕೆ ಮಾರಾಟಗಾರನ ತಂತ್ರಕ್ಕೆ ಸಿಕ್ಕಿಕೊಳ್ಳದೆ , ಕೋಲಿನಿಂದ ಗಬಕ್ಕೆಂದು ಐಸ್‍ಕ್ರೀಂ ಕಿತ್ತುಕೊಳ್ಳುವ ಜಾಣ ಗ್ರಾಹಕರು ಕೂಡ ಇರುತ್ತಾರೆ.

ಇದನ್ನೂ ಓದಿ:  England Women Cricket : ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಲಿಂಗಿ ಮದುವೆ ಸಂಭ್ರಮ

ಅದೇ ಟರ್ಕಿಶ್ ಐಸ್‍ಕ್ರೀಂ ಅನ್ನು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದರೆ ಹೇಗಿರುತ್ತದೆ? ಅದನ್ನು ಜೊಮ್ಯಾಟೋದವರು ತೋರಿಸಿದ್ದಾರೆ. ಹೇಗಂತೀರಾ?ಇಲ್ಲಿದೆ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಜೊಮ್ಯಾಟೋದವರ ವಿಡಿಯೋ
ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವೈರಲ್ ಆಗಿರುವ ಮತ್ತು ಐಸ್‍ಕ್ರೀಂ ಮಾರುವ ಈ ಆಸಕ್ತಿದಾಯಕ ವಿಧಾನವನ್ನು ಮನಸ್ಸಲ್ಲಿ ಇಟ್ಟುಕೊಂಡು ಚಿತ್ರೀಕರಿಸಲಾದ ತನ್ನ ರೀಲ್ಸ್ ವಿಡಿಯೋವನ್ನು ಜೊಮ್ಯಾಟೋ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ಟರ್ಕಿಶ್ ಐಸ್‍ಕ್ರೀಂ ಮಾರುವ ವಿಧಾನವನ್ನು ಹೋಲುವ ಮತ್ತು ವಿನೋದದಿಂದ ಕೂಡಿರುವ ಈ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ನೀವು ಕೂಡ ಅದನ್ನು ನೋಡಿದರೆ ನಕ್ಕು ನಕ್ಕು ಸುಸ್ತಾಗುವುದರಲ್ಲಿ ಸಂಶಯವಿಲ್ಲ. ಈ ವಿಡಿಯೋಗೆ “ ಇದನ್ನು ನಿಮ್ಮ ಸ್ವಂತ ರಿಸ್ಕ್ ನಲ್ಲಿ ಪ್ರಯತ್ನಿಸಿ” ಎಂಬ ಅಡಿಬರಹವನ್ನು ಕೂಡ ನೀಡಲಾಗಿದೆ.

ವಿಡಿಯೋದದಲ್ಲಿ ಏನಿದೆ
ಜೊಮ್ಯಾಟೋ ಡೆಲಿವರಿ ಹುಡುಗ , ಟರ್ಕಿಶ್ ಐಸ್‍ಕ್ರೀಂ ಆರ್ಡರ್ ಮಾಡಿದ ಗ್ರಾಹಕನ ಮುಂದೆ ನಿಂತಿರುತ್ತಾನೆ. ಟರ್ಕಿಯ ಐಸ್‍ಕ್ರೀಂ ಮಾರಾಟಗಾರರು ಅನುಸರಿಸುವ ಜನಪ್ರಿಯ ವಿಧಾನದಂತೆ, ಆ ಜೊಮ್ಯಾಟೋ ಡೆಲಿವರಿ ಹುಡುಗ ಕೂಡ ಗ್ರಾಹಕನ ಮುಂದೆ ಬಾಕ್ಸ್ ಒಂದನ್ನು ಹಿಡಿದು ಟ್ರಿಕ್ ಮಾಡುತ್ತಾನೆ. ಈ ವಿನೋದದ ಆಟದಲ್ಲಿ ಗ್ರಾಹಕ ಆರ್ಡರ್ ಬಾಕ್ಸ್ ಅನ್ನು ಪಡೆಯಲು ಯಶಸ್ವಿಯಾದರೂ, ಬಾಕ್ಸ್ ತೆರೆದಾಗ ಅದು ಖಾಲಿ ಇರುತ್ತದೆ. ಬಳಿಕ ಡೆಲಿವರಿ ಹುಡುಗ ಐಸ್‍ಕ್ರೀಂ ಇದ್ದ ಬಾಕ್ಸ್ ಅನ್ನು ಗ್ರಾಹಕನಿಗೆ ಕೊಡುತ್ತಾನೆ.










View this post on Instagram






A post shared by Zomato (@zomato)




ಈ ವಿನೂತನ ಮತ್ತು ಹಾಸ್ಯಮಯ ವಿಡಿಯೋವನ್ನು ಎರಡು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು, ಅನೇಕ ಮಂದಿ ನೆಟ್ಟಿಗರಿಂದ ಅತ್ಯುತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕೆಲವರು ನಗುವಿನ ಇಮೋಜಿಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಇದುವರೆಗೆ 8.4 ಮಿಲಿಯನ್‍ಗೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ:   Dance Video: ‘ಲತ್ ಲಗ್ ಗಯೀ’ ಹಿಟ್ ಹಾಡಿಗೆ ಗಗನಸಖಿ ಡ್ಯಾನ್ಸ್! ಸಿಕ್ಕಾಪಟ್ಟೆ ವೈರಲ್

“ನಾನು ಹಣ ಕೊಡುವಾಗ ಅದೇ ರೀತಿ ಮಾಡುವುದನ್ನು ಕಲ್ಪಿಸಿಕೊಳ್ಳಿ” ಎಂದು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಬರೆದುಕೊಂಡಿದ್ದರೆ, “ನೀವುಗಳು ಸೂಪರ್ ಕ್ರಿಯೇಟಿವ್ ಆಗಿದ್ದೀರಿ” ಎಂದು ಇನ್ನೊಬ್ಬರು ಹೊಗಳಿದ್ದಾರೆ. “ ಒಂದು ವೇಳೆ ಉದ್ಯೋಗಿಗಳು ಈ ರೀತಿ ಮಾಡಿದರೆ, ಅವರನ್ನು ಕೆಲಸದಿಂದ ತೆಗೆದು ಹಾಕುತ್ತೀರಿ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
Published by:Ashwini Prabhu
First published: