• Home
  • »
  • News
  • »
  • trend
  • »
  • Elon Musk: ಎಲಾನ್ ಮಸ್ಕ್ ಅವರ ‘ಬ್ಲ್ಯೂ ಟಿಕ್’ ಪೋಸ್ಟ್​ ಬಗ್ಗೆ ತಮಾಷೆ ಟ್ವೀಟ್ ಹಂಚಿಕೊಂಡ ಜೊಮ್ಯಾಟೊ!

Elon Musk: ಎಲಾನ್ ಮಸ್ಕ್ ಅವರ ‘ಬ್ಲ್ಯೂ ಟಿಕ್’ ಪೋಸ್ಟ್​ ಬಗ್ಗೆ ತಮಾಷೆ ಟ್ವೀಟ್ ಹಂಚಿಕೊಂಡ ಜೊಮ್ಯಾಟೊ!

ಜೊಮ್ಯಾಟೊ

ಜೊಮ್ಯಾಟೊ

ಎಲೋನ್ ಮಸ್ಕ್ ಅವರ ಟ್ವೀಟ್ ಪ್ರಕಾರ ನಿಮ್ಮ ಪ್ರೊಫೈಲ್​ನಲ್ಲಿ ‘ಬ್ಲ್ಯೂ ಟಿಕ್’ ಬ್ಯಾಡ್ಜ್ ಸ್ವೀಕರಿಸಲು ಪ್ರತಿ ತಿಂಗಳು 8 ಡಾಲರ್ ಹಣವನ್ನು ನೀಡಬೇಕಂತೆ.

  • News18 Kannada
  • Last Updated :
  • New Delhi, India
  • Share this:

ನೀವು ಟ್ವಿಟ್ಟರ್ (Tweeter) ಅನ್ನು ಹೆಚ್ಚಾಗಿ ಬಳಸುವವರಾಗಿದ್ದರೆ, ನಿಮಗೆ ಟ್ವಿಟ್ಟರ್ ಖಾತೆಯ ಪುಟದ ಮೇಲೆ ಇರುವ ಆ ‘ಬ್ಲ್ಯೂ ಟಿಕ್’ (Blue Tick) ಬ್ಯಾಡ್ಜ್ ಅಥವಾ ಗುರುತನ್ನು ನೀವು ತುಂಬಾ ಸಲ ನೋಡಿರುತ್ತೀರಿ. ಟ್ವಿಟ್ಟರ್ ನ ಈ ‘ಬ್ಲ್ಯೂ ಟಿಕ್’ ನೀತಿಯ ಬಗ್ಗೆ ತಮಾಷೆ ಮಾಡಿದೆ ನೋಡಿ ಈ ಫುಡ್ ಅಗ್ರಿಗೆಟರ್ ಜೊಮ್ಯಾಟೊ (Zomato). ಏನಿದು ತಮಾಷೆಯ ಟ್ವೀಟ್ ಅಂತ ನೀವು ತಿಳಿದುಕೊಳ್ಳಬೇಕಾದರೆ ಲೇಖನವನ್ನು ಮುಂದಕ್ಕೆ ಓದಿ. ಜನಪ್ರಿಯ ಮೈಕ್ರೋ ಬ್ಲಾಗಿಂಗ್ (Microblogging) ಪ್ಲಾಟ್ಫಾರ್ಮ್ ಟ್ವಿಟ್ಟರ್​​ನ ಪ್ರಧಾನ ಕಚೇರಿ ಇತ್ತೀಚಿನ ದಿನಗಳಲ್ಲಿ ಅನೇಕ ಬದಲಾವಣೆಗಳಿಗೆ (Changes) ಸಾಕ್ಷಿಯಾಗಿದೆ. ಟೆಸ್ಲಾ ಸಿಇಒ ಮತ್ತು ಬಿಲಿಯನೇರ್ ಎಲೋನ್ ಮಸ್ಕ್ 44 ಬಿಲಿಯನ್ ಡಾಲರ್ ಒಪ್ಪಂದದ ನಂತರ ಕಂಪನಿಯನ್ನು 'ಚೀಫ್ ಟ್ವಿಟ್' ಎಂದು ಹೇಳಲಾಗಿದೆ. 


ಆ ನಂತರ ಎಲ್ಲರಿಗೂ ಆಶ್ಚರ್ಯವಾಗುವಂತೆ ಈಗ ಪರಿಶೀಲಿಸಿದ ಬ್ಯಾಡ್ಜ್ ಅಥವಾ 'ಬ್ಲೂ ಟಿಕ್' ಎಲ್ಲರಿಗೂ ಲಭ್ಯವಿರುತ್ತದೆ. ಆದರೆ ಅದಕ್ಕೆ ಬಳಕೆದಾರರು ಹಣ ನೀಡಬೇಕು ಎಂದು ಅವರು ಘೋಷಿಸಿದರು.


‘ಬ್ಲ್ಯೂ ಟಿಕ್’ ಬ್ಯಾಡ್ಜ್ ಪಡೆಯಲು ತಿಂಗಳಿಗೆ 8 ಡಾಲರ್ ನೀಡಬೇಕಂತೆ!


ಎಲೋನ್ ಮಸ್ಕ್ ಅವರ ಟ್ವೀಟ್ ಪ್ರಕಾರ ನಿಮ್ಮ ಪ್ರೊಫೈಲ್ ನಲ್ಲಿ ಸ್ಪಷ್ಟವಾದ ‘ಬ್ಲ್ಯೂ ಟಿಕ್’ ಬ್ಯಾಡ್ಜ್ ಸ್ವೀಕರಿಸಲು ಪ್ರತಿ ತಿಂಗಳು 8 ಡಾಲರ್ ಹಣವನ್ನು ನೀಡಬೇಕು. ಈ ಸುದ್ದಿಗೆ ಟ್ವಿಟರ್​ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್ ಜೊಮ್ಯಾಟೊ ಎಲೋನ್ ಮಸ್ಕ್ ಅವರಿಗೆ ತಮಾಷೆಯಾಗಿ ಟ್ವೀಟ್ ಮಾಡಿ ಒಂದು ಮನವಿಯನ್ನು ಮಾಡಿಕೊಂಡಿದೆ.


ಇದನ್ನೂ ಓದಿ: ಸ್ಕೂಟರ್​ನಲ್ಲಿ ಪ್ರತ್ಯಕ್ಷವಾದ ನಾಗರಹಾವು, ಈ ವಿಡಿಯೋ ನೋಡಿದ್ರೆ ಗಾಬರಿ ಆಗ್ತಿರಾ!


ವರದಿಗಳ ಪ್ರಕಾರ ಟ್ವಿಟರ್ ಪರಿಶೀಲನಾ ಬ್ಯಾಡ್ಜ್​ಗಳು ತಿಂಗಳಿಗೆ 8 ಡಾಲರ್​​ಗೆ ಮಾರಾಟವಾಗಲಿವೆ. ಎಲೋನ್ ಮಸ್ಕ್ ಅವರ ಉದ್ದೇಶವು ಹೆಚ್ಚಿನ ಆದಾಯವನ್ನು ಗಳಿಸುವುದು ಆಗಿದೆ. ಆದಾಗ್ಯೂ, ಇದನ್ನು ಕೇಳಿದ ನಂತರ ಅನೇಕರು ತಮ್ಮ ಚೌಕಾಶಿ ಮಾಡುವ ಕೌಶಲ್ಯಗಳನ್ನು ತೋರಿಸಿದ್ದಾರೆ ಅಂತ ಹೇಳಬಹುದು.


ಜೊಮ್ಯಾಟೊ ಮಾಡಿದ ಆ ತಮಾಷೆಯ ಟ್ವೀಟ್ ಏನು?


ಜೊಮ್ಯಾಟೊ ಟ್ವಿಟ್ಟರ್ ನಲ್ಲಿ "ಓಕೆ ಎಲೋನ್, 60 ಪ್ರತಿಶತ ರಿಯಾಯಿತಿಯೊಂದಿಗೆ ಎಂದರೆ 8 ಡಾಲರ್ ನಲ್ಲಿ 5 ಡಾಲರ್ ಅನ್ನು ಕಡಿಮೆ ಮಾಡುವುದರ ಬಗ್ಗೆ ಹೇಗೆ" ಎಂದು ಜೊಮ್ಯಾಟೊ ತಮ್ಮ ಟ್ವೀಟ್ ನಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಅಬ್ಬಾ, ವಿಶ್ವದ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ; ಆಕೆಗಾಗಿ 6 ಸೀಟ್‌ಗಳ ಬದಲಾವಣೆ!


ಜೊಮ್ಯಾಟೊದ ತಮಾಷೆಯ ಟ್ವೀಟ್ ಗೆ 9 ಸಾವಿರಕ್ಕೂ ಹೆಚ್ಚು ಲೈಕ್ ಗಳು ಮತ್ತು ನೂರಾರು ಕಾಮೆಂಟ್ ಗಳು ಬಂದಿದ್ದು, ಅನೇಕರು ಈ ಟ್ವೀಟ್ ಅನ್ನು ಮರು ಹಂಚಿಕೊಂಡಿದ್ದಾರೆ. ಜನರು ಜೊಮ್ಯಾಟೊದ ಪೋಸ್ಟ್ ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ ಮತ್ತು ಅವರು ತಮ್ಮ ಪ್ರತಿಕ್ರಿಯೆಗಳನ್ನು ಸಹ ಹಂಚಿಕೊಂಡಿದ್ದಾರೆ.



"ಟ್ರೆಂಡ್ ಜೊತೆಗೆ ಬದಲಾಗುತ್ತಿರುವ ಮಾರ್ಕೆಟಿಂಗ್ ಐಡಿಯಾ" ಎಂದು ಒಬ್ಬ ಬಳಕೆದಾರರು ಬರೆದರೆ, ಇನ್ನೊಬ್ಬರು "ಚೌಕಾಸಿ ಮಾಡುವುದು ಎಲ್ಲಾ ಕಡೆಗಳಲ್ಲಿ ಇದೆ" ಜೊಮ್ಯಾಟೋ ಕೂಡ ತಮ್ಮ ಅಪ್ಲಿಕೇಶನ್ ನಲ್ಲಿ ಇದೇ ರೀತಿಯ ರಿಯಾಯಿತಿ ನೀತಿಗಳನ್ನು ಅನುಸರಿಸಿದೆ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.


ಮಸ್ಕ್ ನೀಡಿದ ಸುದ್ದಿಗೆ ಪ್ರತಿಕ್ರಿಯಿಸಿದ ಅಮೂಲ್


ಎಲೋನ್ ಮಸ್ಕ್ ಅವರ ‘ಬ್ಲೂ ಟಿಕ್’ ಬ್ಯಾಡ್ಜ್ ಬೆಲೆ 8 ಡಾಲರ್ ಆಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಏಕೈಕ ಆಹಾರ ಬ್ರ್ಯಾಂಡ್ ಇದೊಂದೇ ಅಲ್ಲ. ಡೈರಿ ಬ್ರ್ಯಾಂಡ್ ಅಮೂಲ್ ಸಹ ಈ ಆಸಕ್ತಿದಾಯಕ ಸುದ್ದಿಯನ್ನು ತಮ್ಮ ಅಭಿಮಾನಿಗಳ ಸಂತೋಷಕ್ಕೆ ಹೆಚ್ಚು ಹಂಚಿಕೊಂಡಿದೆ. ‘ಬ್ಲ್ಯೂ ಟಿಕ್’ ಬ್ಯಾಡ್ಜ್ ಬಗ್ಗೆ ಅಮೂಲ್ ಅವರು "ಈ ಬ್ಲ್ಯೂ ಚೆನ್ನಾಗಿಲ್ಲ, ಇದರ ಬದಲಿಗೆ ಹಳದಿ ಬಣ್ಣವನ್ನು ಪ್ರಯತ್ನಿಸಿ" ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದು, ಇದಕ್ಕೆ 9 ಸಾವಿರಕ್ಕೂ ಹೆಚ್ಚು ಲೈಕ್ ಗಳು ಲಭಿಸಿವೆ.

First published: