Photo Viral: ವೋಗೋ ಸ್ಕೂಟರ್‌ನಲ್ಲಿ ಬೌನ್ಸ್‌ ಹೆಲ್ಮೆಟ್‌ ಧರಿಸಿ ಸ್ವಿಗ್ಗಿ ಮತ್ತು ಜೊಮ್ಯಾಟೋ ಡೆಲಿವರಿ ಬಾಯ್ಸ್ ಸವಾರಿ ನೋಡಿ..

Viral Photo: ಹೆಚ್ಚಾಗಿ ಈ ಕಂಪನಿಗಳ ಡೆಲಿವರಿ ನೀಡುವ ಹುಡುಗರನ್ನು ನಾವು ಈ ಬೈಕ್‌ಗಳ ಮೇಲೆ ಕುಳಿತುಕೊಂಡು ಅವರ ಬೆನ್ನಿಗೆ ಒಂದು ದೊಡ್ಡ ಕಂಪನಿ ಹೆಸರು ಇರುವ ಬ್ಯಾಗ್ ಅನ್ನು ಹಾಕಿಕೊಂಡು ಅವರ ಕಂಪನಿಯ ಟೀ-ಶರ್ಟ್ ಸಹ ಧರಿಸಿಕೊಂಡು ಬರುವುದನ್ನು ನಾವು ನೋಡುತ್ತೇವೆ.

ವೈರಲ್​ ಫೋಟೋ

ವೈರಲ್​ ಫೋಟೋ

 • Share this:
  ಕೆಲವೊಮ್ಮೆ ನಾವು ಹೊರಗಡೆ ಹೋಟೆಲ್‌ನಿಂದ (Hotel) ಊಟವನ್ನು ಆರ್ಡರ್ (Order) ಮಾಡಿದಾಗ, ಆ ಊಟವನ್ನು ತೆಗೆದುಕೊಂಡು ಬಂದು ಡೆಲಿವರಿ (Delivery) ನೀಡುವ ಹುಡುಗರು ನಮ್ಮ ಮನೆಯ ಬಾಗಿಲಿಗೆ ಅದನ್ನು ತಲುಪಿಸಿ ಹೋಗುವುದನ್ನು ನಾವು ನೋಡಿರುತ್ತೇವೆ. ಈಗಂತೂ ಅನೇಕ ರೀತಿಯ ಬೇರೆ ಬೇರೆ ಆಹಾರ ಡೆಲಿವರಿ (Food Delivery) ನೀಡುವ ಕಂಪನಿಗಳು ಹುಟ್ಟಿಕೊಂಡಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಮ್ಮೆಲ್ಲರಿಗೂ ತುಂಬಾನೇ ಚಿರಪರಿಚಿತವಾದ ಕಂಪನಿಗಳು ಎಂದರೆ ಸ್ವಿಗ್ಗಿ (Swiggy) ಮತ್ತು ಜೊಮ್ಯಾಟೋ (zomato). ಹೆಚ್ಚಾಗಿ ಈ ಕಂಪನಿಗಳ ಡೆಲಿವರಿ ನೀಡುವ ಹುಡುಗರನ್ನು ನಾವು ಈ ಬೈಕ್‌ಗಳ ಮೇಲೆ ಕುಳಿತುಕೊಂಡು ಅವರ ಬೆನ್ನಿಗೆ ಒಂದು ದೊಡ್ಡ ಕಂಪನಿ ಹೆಸರು ಇರುವ ಬ್ಯಾಗ್ (Bag) ಅನ್ನು ಹಾಕಿಕೊಂಡು ಅವರ ಕಂಪನಿಯ ಟೀ-ಶರ್ಟ್ (T-Shirt) ಸಹ ಧರಿಸಿಕೊಂಡು ಬರುವುದನ್ನು ನಾವು ನೋಡುತ್ತೇವೆ.

  ಆದರೆ ಇಲ್ಲೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಏನಿದೆ ಅದರಲ್ಲಿ ಅಂತೀರಾ..? ಇದರಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೋ ಡೇಲಿವರಿ ಬಾಯ್ಸ್ ಇಬ್ಬರು ಒಂದೇ ವೋಗೋ ಆಟೋಮೋಟಿವ್ ಪ್ರೈವೇಟ್ ಲಿಮಿಟೆಡ್‌ನ ಸ್ಕೂಟರ್‌ನಲ್ಲಿ ಬೌನ್ಸ್ ಕಂಪನಿಯ ಹೆಲ್ಮೆಟ್ ಧರಿಸಿ ಹೋಗುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.

  ಈ ನಾಲ್ಕು ಕಂಪನಿಗಳ ಅಸಾಧಾರಣವಾದ ಸಹಯೋಗವನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ ಮತ್ತು ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋವನ್ನು ಆರಂಭದಲ್ಲಿ ಲಿಂಕ್ಡ್ಇನ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ತೋರುತ್ತದೆ. ಅಲ್ಲಿ ಒಬ್ಬ ಬಳಕೆದಾರರು ಇದನ್ನು "ಸ್ಟ್ರಾಟೆಜಿಕ್ ಅಲೈಯನ್ಸ್ ಕಾ ಬಾಪ್" ಎಂದರೆ ಲೆಕ್ಕಾಚಾರದ ಸಹಯೋಗದ ಅಪ್ಪ ಎಂದು ಹೇಳಿದ್ದಾರೆ. ನಂತರ ಅದನ್ನು ಟ್ವಿಟ್ಟರ್‌ ಮತ್ತು ರೆಡ್ಡಿಟ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಮತ್ತೆ ಹಂಚಿಕೊಂಡಿದ್ದಾರೆ.

  ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳ ಕೆಲಸಗಾರರು ಹೇಗೆ ಒಂದೇ ಗಾಡಿಯಲ್ಲಿ ಹೋಗುತ್ತಿದ್ದಾರೆ ಮತ್ತು ಇವರ ಸ್ನೇಹಪರತೆಯ ಈ ಸುಂದರ ಸಂಯೋಜನೆಯು ರೆಡ್ಡಿಟ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ ಎಂದು ಹೇಳಬಹುದು.

  ಇದನ್ನೂ ಓದಿ: WhatsApp: ಕಣ್ಮರೆಯಾದ ಮೆಸೇಜ್‌ಗಳಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ಎಲ್ಲಿಯೂ ಸೇವ್ ಮಾಡುವುದಿಲ್ಲವಂತೆ ವಾಟ್ಸ್ಆ್ಯಪ್‌..!

  "ವೋಗೋ ಆಟೋಮೋಟಿವ್ ಸ್ಕೂಟರ್‌ನಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗನನ್ನು ಜೊಮ್ಯಾಟೋ ಡೆಲಿವರಿ ಹುಡುಗನೊಬ್ಬ ಹಿಂದೆ ಕೂರಿಸಿಕೊಂಡು ಬೌನ್ಸ್ ಹೆಲ್ಮೆಟ್ ಅನ್ನು ಧರಿಸಿದ್ದಾರೆ. ಇದಕ್ಕಿಂತ ಹೆಚ್ಚಿದ್ದನ್ನು ಬೆಂಗಳೂರಿನಲ್ಲಿ ಕಾಣಲು ಸಾಧ್ಯವಿಲ್ಲ ಬಿಡಿ" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

  ನೆಟ್ಟಿಗರು ಈ ಅಸಾಮಾನ್ಯ ದೃಶ್ಯವನ್ನು ತಮ್ಮದೇ ಆದ ರೀತಿಯಲ್ಲಿ ಉಲ್ಲಾಸ ಭರಿತವಾಗಿ ತೆಗೆದುಕೊಂಡರು. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರಂತೂ ಈ ಫೋಟೋವನ್ನು ನೋಡಿ "ದುಬಾರಿಯಾಗಿರುವ ಬೆಂಗಳೂರಿನಲ್ಲಿ ತಮ್ಮ ಖರ್ಚುಗಳನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವ ಯುವಕರು" ಎಂದು ವರ್ಣಿಸಿದ್ದಾರೆ.

  "ಇದು ಕ್ರಿಕೆಟ್ ಜೆರ್ಸಿ ಅಂತೆ ಇದ್ದು, ಎಷ್ಟು ಕಂಪನಿಗಳು ತಮ್ಮ ಪ್ರಚಾರಕ್ಕಾಗಿ ಜೆರ್ಸಿಯಲ್ಲಿ ತುಂಬಿಸಲು ಸಾಧ್ಯವೋ, ಹಾಗೆ ಇದೆ ಈ ಫೋಟೋ" ಎಂದು ಮತ್ತೊಬ್ಬರು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

  ಇದನ್ನೂ ಓದಿ: Mi Fan Festival: 20 ಸಾವಿರ ರಿಯಾಯಿತಿ ಬೆಲೆಗೆ ಸಿಗುತ್ತಿದೆ 15 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುವ ಈ ಸ್ಮಾರ್ಟ್​ಫೋನ್!

  "ಜೊಮ್ಯಾಟೊ ಡೆಲಿವರಿ ಹುಡುಗನು ರ‍್ಯಾಪಿಡೋ ರೈಡರ್ ಆಗಿದ್ದು, ಸ್ವಿಗ್ಗಿ ಡೆಲಿವರಿ ಹುಡುಗನನ್ನು ತನ್ನ ಡೆಲಿವರಿ ನೀಡುವ ಸ್ಥಳಕ್ಕೆ ಡ್ರಾಪ್ ಮಾಡುತ್ತಿದ್ದಾರೆ" ಎಂದು ಇನ್ನೊಬ್ಬರು ಬರೆದಿದ್ದಾರೆ. ಭಾರತ ಸರ್ಕಾರವು 2021 ರಲ್ಲಿ, ದೇಶದಲ್ಲಿ 14,000 ಕ್ಕೂ ಹೆಚ್ಚು ಹೊಸ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ. ಅವುಗಳಲ್ಲಿ 4,514 ಬೆಂಗಳೂರು ನಗರದಲ್ಲಿಯೇ ಇವೆ ಎಂದು 2022 ರ ಆರ್ಥಿಕ ಸಮೀಕ್ಷೆ ತಿಳಿಸಿದೆ.

  ಭಾರತವು ಯುಕೆ ಅನ್ನು ಹಿಂದಿಕ್ಕಿ ಆ ವರ್ಷದಲ್ಲಿ ಮೂರನೇ ಅತಿ ಹೆಚ್ಚು ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳನ್ನು ಸೇರಿಸಿದ ದೇಶವಾಗಿ ಹೊರ ಹೊಮ್ಮಿತು. ಒಂದು ವರ್ಷದಲ್ಲಿ 44 ಯೂನಿಕಾರ್ನ್‌ಗಳನ್ನು ಹೊಂದಿರುವ ಭಾರತವು ಕ್ರಮವಾಗಿ 301 ಮತ್ತು 487 ಸೇರ್ಪಡೆಗಳನ್ನು ಹೊಂದಿರುವ ಚೀನಾ ಮತ್ತು ಯುಎಸ್ ದೇಶಗಳ ನಂತರದ ಎಂದರೆ ಮೂರನೆಯ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ.
  Published by:Harshith AS
  First published: