Work Ethic Debate: ಪರ್ಸ್ ಕಳೆದುಕೊಂಡರೂ ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡಿದ Zomato ಸಿಬ್ಬಂದಿ

ಈ ಟ್ವೀಟ್‍ಗೆ ಬಹಳಷ್ಟು ಮಂದಿ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹೆಚ್ಚಿನವರು, ಸಚಿನ್ ಅಂತಹ ಪರಿಸ್ಥಿತಿಯಲ್ಲೂ ಡೆಲಿವರಿ ಮಾಡಲು ಕಾರಣ ‘ತನ್ನ ಉದ್ಯೋಗವನ್ನು ಕಳೆದುಕೊಳ್ಳುವ ಭಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೊಮ್ಯಾಟೋ ಸಿಬ್ಬಂದಿ

ಜೊಮ್ಯಾಟೋ ಸಿಬ್ಬಂದಿ

  • Share this:
    ಡೆಲಿವರಿ ಆ್ಯಪ್‍ಗಳ ಕಳಪೆ ನಿರ್ವಹಣೆ ಮತ್ತು ಉದಾಸೀನತೆಯ ಕುರಿತ ಆರೋಪಗಳ ಹೆಚುತ್ತಲೇ ಇವೆ. ಅದರಲ್ಲೂ ಮುಖ್ಯವಾಗಿ ಜೊಮ್ಯಾಟೋ(Zomato), ಸ್ವಿಗ್ಗಿ(swiggy), ಅಮೆಜಾನ್ ಮುಂತಾದ ಜನಪ್ರಿಯ ಭಾರತೀಯ ಆ್ಯಪ್‍ಗಳು ತಮ್ಮ ಸಿಬ್ಬಂದಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಕೂಡ ಆಗಾಗ ಆಕ್ಷೇಪಕ್ಕೆ ಒಳಗಾಗುತ್ತಿವೆ. ಇತ್ತೀಚಿನ ಟ್ವಿಟ್ಟರ್ ಪೋಸ್ಟ್ (twitter post)ಸರಣಿ, ಅಂತದ್ದೇ ಸಮಸ್ಯೆ ಒಂದರ ಕುರಿತು ಗಮನ ಸೆಳೆಯುತ್ತಿದೆ. ಸಚಿನ್ ಕಲ್‍ಬಾಗ್ ಎಂಬ ಟ್ವಿಟ್ಟರ್ ಬಕೆದಾರರೊಬ್ಬರು, ತನ್ನ ಪರ್ಸ್ ಕಳೆದುಕೊಂಡಿದ್ದರೂ ಕೂಡ ಆಹಾರ ಡೆಲಿವರಿ ಮಾಡಲು ಬಂದ ಜೊಮ್ಯಾಟೋ ಡೆಲಿವರಿ ಸಿಬ್ಬಂದಿಯ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

    ವೃತ್ತಿಪರೆತೆ ಮೆರೆದ ಸಚಿನ್​ 

    ಅಂತಹ ಕಷ್ಟಕರ ಸಂದರ್ಭದಲ್ಲೂ ಆಹಾರ ಡೆಲಿವರಿ ಮಾಡಲು ಬಂದ ಸಚಿನ್ ಅವರ ವೃತ್ತಿಯ ನೈತಿಕತೆಯನ್ನು ಸಚಿನ್ ತಮ್ಮ ಪೋಸ್ಟ್‍ನಲ್ಲಿ ಹೊಗಳಿದ್ದಾರೆ. ಹಾಗಂತ ಈ ಪೋಸ್ಟ್ ವೀಕ್ಷಿಸಿರುವ ಎಲ್ಲಾ ನೆಟ್ಟಿಗರು ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ, ಬಹಳಷ್ಟು ಮಂದಿ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹೆಚ್ಚಿನವರು, ಸಚಿನ್ ಅಂತಹ ಪರಿಸ್ಥಿತಿಯಲ್ಲೂ ಡೆಲಿವರಿ ಮಾಡಲು ಕಾರಣ ‘ತನ್ನ ಉದ್ಯೋಗವನ್ನು ಕಳೆದುಕೊಳ್ಳುವ ಭಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪರ್ಸ್​ ಕಳೆದುಕೊಂಡಿದ್ದರೂ ಫುಡ್​ ಡಿಲಿವರಿ 

    ತನ್ನ ಪೋಸ್ಟ್‍ಗೆ ನೆಟ್ಟಿಗರು ನೀಡಿದ ಮಿಶ್ರ ಪ್ರತಿಕ್ರಿಯೆಯನ್ನು ಕಂಡು, ಸಚಿತ್ ಇಡೀ ಪ್ರಕರಣವನ್ನು ಆರಂಭದಿಂದ ವಿವರಿಸಿ, ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಸವಾರನ ನಕ್ಷೆಯು , 30 ನಿಮಿಷಗಳಿಂದಲೂ, ಡೆಲಿವರಿಗೆ 10 ನಿಮಿಷ ಇದೆ ಎಂದು ಹೇಳುತ್ತಿತ್ತು. ಹಾಗಾಗಿ ಅವರೇ ಖುದ್ದಾಗಿ ಆ್ಯಪ್ ಮೂಲಕ ಆತನನ್ನು ಸಂಪರ್ಕಿಸಿದರು.ಆತನ ಪರ್ಸ್ ಕಳೆದು ಹೋಗಿರುವುದು ಮತ್ತು ಅದನ್ಯಾರೋ ಕದ್ದಿರುವ ಬಗ್ಗೆ ತಿಳಿದು ಬಂತು, ಆದರೂ ಆತ 5 ನಿಮಿಷಗಳಲ್ಲಿ ಬರುವುದಾಗಿ ಹೇಳಿದ. ಆರ್ಡರ್ ಮಾಡಿದ ವ್ಯಕ್ತಿ ಡೆಲಿವರಿ ಮಾಡದೆ ಮರಳುವಂತೆ ಆತನಿಗೆ ಒತ್ತಾಯ ಮಾಡಿದರೂ, ಆತ ಅನ್ನು ನಿರಾಕರಿಸಿ, ಆಹಾರ ಡೆಲಿವರಿ ಮಾಡಲು ಬಂದಿದ್ದ.





    ಆರ್ಡರ್ ತಲುಪಿಸುವುದು ನಮ್ಮ ಜವಾಬ್ದಾರಿ 

    “ನಾನು ಸುಮಾರು 10.15ಕ್ಕೆ ಆಗಷ್ಟೆ ಕೆಲಸದಿಂದ ಮರಳಿದ್ದೆ , ಮತ್ತು ನನ್ನ ಫೋನ್ ಕೈಯಲ್ಲೇ ಇತ್ತು, ಆತನ ಫೋಟೋ ಕ್ಲಿಕ್ಕಿಸಿ, @ಜeeಠಿigoಥಿಚಿಟ ಕಳುಹಿಸಲೇ ಎಂದು ಕೇಳಿದೆ. ಆತ ಒಪ್ಪಿದ, ಆದರೆ ಇದರಲ್ಲಿ ನಮ್ಮದೇನು ಜವಾಬ್ದಾರಿ ಇಲ್ಲ ಎಂದು ಹೇಳಿ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ. ನಾನು ಒಪ್ಪುತ್ತೇನೆ, ಆದರೆ ಅದು ನಮ್ಮ ಆರ್ಡರ್ ಆಗಿದ್ದರಿಂದ ನಾವು ಕೂಡ ಜವಾಬ್ದಾರರು ಎಂದನಿಸುತ್ತಿದೆ “ಎಂದು ನಾನು ಹೇಳಿದೆ.

    ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ 

    “ಅವನ ಮುಖ್ಯ ಚಿಂತೆ ಚಾಲಕರ ಪರವಾನಗಿ ಮತ್ತು ಹಣದ ಕುರಿತಾಗಿದೆ ಎಂದು ಮನೀಶ್ ಹೇಳಿದ. ತನ್ನ ಮಗುವಿನ ಆನ್‍ಲೈನ್ ಶಿಕ್ಷಣದ ಕಾರಣದಿಂದ ಆತ ಈಗಾಗಲೇ ಸಾಲದಲ್ಲಿದ್ದಾನೆ ಮತ್ತು ಹೊಸ ಚಾಲಕರ ಪರವಾನಗಿ ಪಡೆಯಲು ಆತ ಏಜೆಂಟ್‍ಗಳಿಗೆ ಇನ್ನಷ್ಟು ಹಣ ಕೊಡಬೇಕಾಗುತ್ತದೆ ಎಂದು ಹೇಳಿದ” ಎಂದು ಸಚಿನ್ ಬರೆದುಕೊಂಡಿದ್ದಾರೆ. ಸಚಿನ್ ಅವರ ಪೋಸ್ಟ್‍ನಲ್ಲಿರುವ ಸಂಗತಿಯನ್ನು ಬಹಳಷ್ಟು ಟ್ವಿಟ್ಟರ್ ಬಳಕೆದಾರರು ಒಪ್ಪಿಕೊಂಡಿದ್ದಾರೆ, ಇನ್ನು ಕೆಲವರು ಡೆಲಿವರಿ ವೇದಿಕೆಗಳಲ್ಲಿರುವ ವೃತ್ತಿ ನೈತಿಕತೆಯ ಕೊರತೆಯ ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ಟ್ವೀಟ್ ಕುರಿತು ನೆಟ್ಟಿಗರಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ.

    ಇದನ್ನೂ ಓದಿ: Policewoman: ವೃತ್ತಿಯಲ್ಲಿ ನಿಷ್ಠೆಯ ಪೊಲೀಸ್ ಆದ್ರೂ ಈಕೆಯ ಆಸಕ್ತಿ ಕ್ಷೇತ್ರ ಯಾವುದೆಲ್ಲಾ ಗೊತ್ತಾ?

    ಹಲವಾರು ಸಲ, ಡೆಲಿವರಿ ಸಿಬ್ಬಂದಿಗಳು ತಮ್ಮ ಕಡಿಮೆ ಅನುಕೂಲಕರ ವೃತ್ತಿ ಪರಿಸ್ಥಿತಿಗಳ ಕುರಿತು ಪ್ರತಿಭಟನೆ ನಡೆಸಿದ್ದಾರೆ, ಮತ್ತು ಅದಕ್ಕಾಗಿ ಸಾಮಾಜಿಕ ಮಾಧ್ಯಮದ ವೇದಿಕೆಗಳನ್ನು ಕೂಡ ಬಳಸಿಕೊಂಡಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿದ್ದರೂ, ಕಂಪೆನಿಗಳು ವೃತ್ತಿ ನೈತಿಕತೆಯನ್ನು ಸರಿಯಾಗಿ ನಿರ್ವಹಿಸುವ ಕುರಿತು ಹೆಚ್ಚಿನ ಪ್ರಯತ್ನ ಮಾಡಿಲ್ಲ.
    Published by:Kavya V
    First published: