ಈಗಾಗಲೇ 2023 ರ ಹೊಸ ವರ್ಷವು (New Year) ಸಡಗರ ಮತ್ತು ಸಂಭ್ರಮದೊಂದಿಗೆ ಪ್ರಾರಂಭವಾಗಿದ್ದು ಇದೀಗ ಯಾವ ಯಾವ ಸೆಲೆಬ್ರಿಟಿಗಳು ಹೇಗೆಲ್ಲಾ ತಮ್ಮ ಹೊಸ ವರ್ಷದ ಪಾರ್ಟಿಯನ್ನು ಮಾಡಿದರು ಅಂತೆಲ್ಲಾ ಸುದ್ದಿಗಳು, ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಕೆಲ ಸಲೆಬ್ರಿಟಿಗಳು (Celebrity) ತಮ್ಮ ಮನೆಯವರ ಜೊತೆಯಲ್ಲಿಯೇ ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಬೇರೆ ದೇಶಕ್ಕೆ ಹೋಗಿ ಅಲ್ಲಿ ಹೊಸ ವರ್ಷದ ಆಚರಣೆ ಮಾಡಿ ಬಂದಿದ್ದಾರೆ. ಸ್ವಲ್ಪ ಜನರು ಬಡ ಜನರಿಗೆ ಗಿಫ್ಟ್ (Gift) ಗಳನ್ನು ಕೊಡುವುದರ ಮೂಲಕ ತಮ್ಮ ಹೊಸ ವರ್ಷದ ದಿನವನ್ನು ಆಚರಿಸಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಈ 2023 ರ ವರ್ಷವನ್ನು ಜನರು ತುಂಬಾನೇ ಉತ್ಸಾಹದಿಂದ ಬರಮಾಡಿಕೊಂಡಿದ್ದಾರೆ ಅಂತಾನೆ ಹೇಳಬಹುದು.
ಕೆಲವೊಬ್ಬರಿಗೆ ಇನ್ನೊಬ್ಬರ ಮೇಲೆ ದಯೆ ಮತ್ತು ಕರುಣೆ ತೋರಿಸುವುದು ಅಂತ ಹೇಳಿದರೆ ತುಂಬಾನೇ ಇಷ್ಟವಾದ ಕೆಲಸ. ಅದರಲ್ಲೂ ಹಾಗೆ ಬಡ ಜನರ ಸೇವೆಯನ್ನು ದೇವರ ಸೇವೆ ಅಂದುಕೊಂಡು ನಗು ನಗುತಾ ಸೇವೆಯನ್ನು ಮಾಡುವ ಜನರು ಸಹ ನಮ್ಮ ಸಮಾಜದಲ್ಲಿ ನೋಡಲು ಸಿಗುತ್ತಾರೆ.
ಇಂತಹದೇ ಒಂದು ದಯಾಪರ ಗುಣವನ್ನು ಇಲ್ಲಿ ಒಬ್ಬ ಜೊಮ್ಯಾಟೋ ಗ್ರಾಹಕ ಮೆರೆದಿದ್ದು, ಆ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಜೋರಾಗಿ ಹರಿದಾಡುತ್ತಿದೆ. ಈ ವೀಡಿಯೋ ಅನೇಕ ನೋಡುಗರ ಹೃದಯವನ್ನು ಗೆದ್ದಿದೆ ಅಂತ ಹೇಳಿದರೆ ಸುಳ್ಳಲ್ಲ.
ಜೊಮ್ಯಾಟೋ ಗ್ರಾಹಕ ಎಂತಹ ಕೆಲಸ ಮಾಡಿದ್ದಾರೆ ನೋಡಿ
2023 ರ ಹೊಸ ವರ್ಷದ ಹಿಂದಿನ ದಿನ ಎಂದರೆ ಡಿಸೆಂಬರ್ 31ನೇ ತಾರೀಖಿನಂದು ರಾತ್ರಿ 11 ಗಂಟೆಗೆ ಜೊಮ್ಯಾಟೋ ಗ್ರಾಹಕರೊಬ್ಬರು ಒಂದು ಕೇಕ್ ಅನ್ನು ಮನೆಯಲ್ಲಿ ಕತ್ತರಿಸಿ ಹೊಸ ವರ್ಷದ ಆಚರಣೆ ಮಾಡಲು ಜೊಮ್ಯಾಟೋದಲ್ಲಿ ಆರ್ಡರ್ ಮಾಡುತ್ತಾರೆ.
ಆ ಆರ್ಡರ್ ಮಾಡಿದ ಕೇಕ್ ಅನ್ನು ಜೊಮ್ಯಾಟೋ ಡೆಲಿವರಿ ಬಾಯ್ ಯೊಬ್ಬನು ಒಂದು ಗಂಟೆಯ ಸಮಯಕ್ಕೆ ಎಂದರೆ ಬರೋಬ್ಬರಿ ಹೊಸ ವರ್ಷದ ದಿನದಂದು ಬೆಳಿಗ್ಗೆ 12 ಗಂಟೆಗೆ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಾನೆ.
ಇದನ್ನೂ ಓದಿ: ಒಂದು ಮಾತ್ರೆ ನಿಲ್ಲಿಸಿದ್ಲು ಅಷ್ಟೇ! ಈಗ ಆಕೆಗೆ ಹುಡುಗರಿಗಿಂತ ಹುಡುಗಿಯರೇ ಇಷ್ಟವಂತೆ!
ಆಗ ಗ್ರಾಹಕ ಆ ಜೊಮ್ಯಾಟೋ ಬಾಯ್ ಅನ್ನು ಕರೆದು ತಮ್ಮ ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ಕೇಳಿದರು ಮತ್ತು ಇದರ ವೀಡಿಯೋವನ್ನು ಆನ್ಲೈನ್ ನಲ್ಲಿಯೂ ಹಂಚಿಕೊಂಡರು.
ಈ ಟ್ವೀಟ್ ಸಿಕ್ಕಾಪಟ್ಟೆ ವೀಕ್ಷಣೆಗಳನ್ನು ಗಳಿಸುತ್ತಿದೆ..
ಈ ಟ್ವೀಟ್ ಅನ್ನು ಟ್ವಿಟ್ಟರ್ ಬಳಕೆದಾರರಾದ ಶ್ರೀವತ್ಸ ಕಿಶನ್ ಅವರು ಹಂಚಿಕೊಂಡಿದ್ದಾರೆ, ಅಲ್ಲಿ ಇದು 33 ಸಾವಿರಕ್ಕೂ ಹೆಚ್ಚು ಟ್ವೀಟ್ ವೀಕ್ಷಣೆಗಳು ಮತ್ತು 16 ಸಾವಿರಕ್ಕೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪಡೆದಿದೆ.
"ನಾವು ರಾತ್ರಿ 11 ಗಂಟೆಯ ಸುಮಾರಿಗೆ ಜೊಮ್ಯಾಟೋದಲ್ಲಿ ಆಹಾರವನ್ನು ಆರ್ಡರ್ ಮಾಡಿದೆವು ಮತ್ತು ಅದು ನಿಖರವಾಗಿ 12 ರ ಸುಮಾರಿಗೆ ನಮಗೆ ಬಂದು ತಲುಪಿತು.
ಆದ್ದರಿಂದ ನಾವು ಜೊಮ್ಯಾಟೊ ಬಾಯ್ ಯೊಂದಿಗೆ ನಮ್ಮ ಹೊಸ ವರ್ಷವನ್ನು ಆಚರಿಸಿದೆವು. ಅನಿರೀಕ್ಷಿತ ಜನರಿಂದ ಅನಿರೀಕ್ಷಿತ ಸಂತೋಷ" ಎಂದು ಗ್ರಾಹಕರ ಟ್ವೀಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
@zomato @zomatocare @ZomatoProHelp
We ordered food at last minute around 11:00 PM something in zomato and it reached around exact 12:00 AM so we celebrated new year with the zomato delivery partner.
Unexpected happiness from Unexpected people #zomato #HappyNewYear #deliveryguy pic.twitter.com/J1Hv9JwCUy
— Kishan Srivatsa (@SrivatsaKishan) December 31, 2022
ವೀಡಿಯೋ ನೋಡಿ ಭಾವಪರವಶರಾದ ನೆಟ್ಟಿಗರು..
ಜೊಮ್ಯಾಟೋ ಬಾಯ್ ನ ಈ ಹೃದಯಸ್ಪರ್ಶಿ ವೀಡಿಯೋವನ್ನು ನೋಡಿ ಇಂಟರ್ನೆಟ್ ಬಳಕೆದಾರರು ಭಾವಪರವಶರಾದರು. ಅನೇಕರು ಗ್ರಾಹಕರ ದಯೆಯನ್ನು ತುಂಬಾನೇ ಇಷ್ಟಪಟ್ಟರು.
ವಿಶೇಷವಾಗಿ ಆಹಾರವನ್ನು ತಲುಪಿಸುವುದು ಹೆಚ್ಚಾಗಿ ಕೃತಜ್ಞತೆಯಿಲ್ಲದ ಕೆಲಸ ಎಂದು ಹೇಳಲಾಗುತ್ತದೆ. "ಈ ಹುಡುಗರು ಒಳ್ಳೆಯವರು" ಎಂದು ಒಬ್ಬ ಬಳಕೆದಾರರು ಹೇಳಿದರೆ, ಇನ್ನೊಬ್ಬರು "ಒಳ್ಳೆಯ ಕೆಲಸ" ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ