Zomato: ಈ ವರ್ಷವನ್ನು ಯಾವ ತಿಂಡಿಗೆ ಹೋಲಿಸುತ್ತೀರಿ? ಜೊಮ್ಯಾಟೊ ಕೇಳಿದ ಪ್ರಶ್ನೆಗೆ ಉತ್ತರ ಹೇಗಿತ್ತು ನೋಡಿ

2022 ರ ಮೊದಲಾರ್ಧವು ಒಂದು ಭಕ್ಷ್ಯವಾಗಿದ್ದರೆ, ಅದು ಏನಾಗಿರಬಹುದು" ಅಂತ ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಸಕ್ತದಲ್ಲಿ ವರ್ಷವು ಜೂನ್ 30 ರ ಗುರುವಾರ ಅರ್ಧ ಮಾರ್ಗವನ್ನು ತಲುಪುತ್ತಿದ್ದಂತೆ ಜೊಮ್ಯಾಟೊ ಟ್ವಿಟ್ಟರ್ ಅನ್ನು ಕೇಳಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜೂನ್ 30, ಎಂದರೆ ಈ ವರ್ಷದ ಮೊದಲರ್ಧ ಭಾಗ ಮುಕ್ತಾಯವಾಯಿತು ಅಂತ ಅರ್ಥ. ಹೌದು ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್-19 (Covide-19) ಸಾಂಕ್ರಾಮಿಕ ರೋಗದ ಹಾವಳಿಂದಾಗಿ ಜನರು (People) ಬೇಸತ್ತು ಹೋಗಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. 2022 ಜನವರಿಯಿಂದ ಬಹುತೇಕವಾಗಿ ನಿಧಾನವಾಗಿ ಎಲ್ಲವೂ ಶುರುವಾಗುವುದಕ್ಕೆ ಪ್ರಾರಂಭವಾಗಿದ್ದವು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಆರು ತಿಂಗಳಲ್ಲಿ ಜನರ ಜೀವನ (People's lives) ಮತ್ತೆ ಹಳೆಯ ಮಾದರಿಯಲ್ಲಿ ನಡೆಯಲು ಶುರುವಾಗಿದೆ ಎಂದು ಹೇಳಬಹುದು. ನೀವು ಸಾಮಾನ್ಯವಾಗಿ ಯಾರಾದರೂ ಭೇಟಿಯಾದರೆ ನೀವು ಅವರಿಗೆ ಹಾಗೆ ಸುಮ್ಮನೆ ‘ಹೇಗಿತ್ತು ಈ ವರ್ಷದ ಮೊದಲು ಆರು ತಿಂಗಳು’ ಅಂತ ಕೇಳುತ್ತೀರಿ. ಆಗ ಅವರು ಅದನ್ನು ಅವರ ಬುದ್ದಿಶಕ್ತಿಗೆ (intelligence) ಅನುಗುಣವಾಗಿ ವಿವರಿಸುವುದನ್ನು ನಾವು ನೋಡುತ್ತೇವೆ.

ಕೆಲವೊಬ್ಬರಂತೂ ಎಲ್ಲವನ್ನು ಒಂದಲ್ಲ ಒಂದು ಆಹಾರ ಪದಾರ್ಥಕ್ಕೆ ಹೋಲಿಸಿ ಹೇಳುತ್ತಾರೆ. ಉದಾಹರಣೆಗೆ: ‘ಈ ಆರು ತಿಂಗಳು ನನಗೆ ಗುಲಾಬ್ ಜಾಮೂನು ತಿಂದಷ್ಟೇ ಸಿಹಿಯಾಗಿತ್ತು ನೋಡು’ ಅಂತ ಹೇಳುತ್ತಾರೆ. ಇದೆಲ್ಲಾ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು ಅಲ್ಲವೇ? ಇದನ್ನು ಪೂರ್ತಿಯಾಗಿ ಓದಿ ನಿಮಗೆ ಅರ್ಥವಾಗುತ್ತದೆ.

ಜೊಮ್ಯಾಟೊ ಟ್ವಿಟ್ಟರ್ ನಲ್ಲಿ ಕೇಳಿದ ಪ್ರಶ್ನೆ ಏನು?
"2022 ರ ಮೊದಲಾರ್ಧವು ಒಂದು ಭಕ್ಷ್ಯವಾಗಿದ್ದರೆ, ಅದು ಏನಾಗಿರಬಹುದು" ಅಂತ ಗ್ರೆಗೋರಿಯನ್ ಕ್ಯಾಲೆಂಡರ್ ನ ಪ್ರಸಕ್ತ ವರ್ಷವು ಜೂನ್ 30 ರ ಗುರುವಾರ ಅರ್ಧ ಮಾರ್ಗವನ್ನು ತಲುಪುತ್ತಿದ್ದಂತೆ ಜೊಮ್ಯಾಟೊ ಟ್ವಿಟ್ಟರ್ ಅನ್ನು ಕೇಳಿದೆ.2022 ವರ್ಷದ ಅರ್ಧದಷ್ಟು ಭಾಗ ಈಗಾಗಲೇ ನಾವು ಕಳೆದಿದ್ದೇವೆ ಮತ್ತು ಇದು ಈಗಾಗಲೇ ದಾಖಲಾದ 7ನೇ ಅತ್ಯಂತ ಬೆಚ್ಚಗಿನ ವರ್ಷವಾಗಿತ್ತು ಎನ್ನುವುದು ಬಹುತೇಕರಿಗೆ ಗೊತ್ತೇ ಇದೆ. ನಾವು ಒಲ್ಲದ ಮನಸ್ಸಿನಿಂದ ಮಾರಣಾಂತಿಕ ಯುದ್ಧವನ್ನು ನೋಡಿದ್ದೇವೆ, ಇದು ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಯುದ್ಧ ಅಂತ ಹೇಳಬಹುದು.

ಇದನ್ನೂ ಓದಿ: Old House: 7 ಕುಟುಂಬಗಳು ಒಟ್ಟಿಗೆ ವಾಸಿಸುತ್ತಿದ್ದ ಈ ಮನೆಗೆ 987 ವರ್ಷ! ಈಗಲೂ ಎಷ್ಟು ಗಟ್ಟಿಯಾಗಿದೆ ನೋಡಿ

ರಾಷ್ಟ್ರೀಯ ಮತ್ತು ದೇಶೀಯ ರಾಜಕೀಯ ಬಿಕ್ಕಟ್ಟುಗಳು ಮತ್ತು ಕೆಲವು ಅತ್ಯಂತ ಪ್ರೀತಿಯ ಗಾಯಕರು ಸಹ ನಮ್ಮನ್ನು ಅಗಲಿದ ಸಮಯ ಇದಾಗಿತ್ತು ಅಂತ ಹೇಳಬಹುದು. ಇನ್ನೂ ವೈಯುಕ್ತಿಕವಾಗಿ ಮಾತನಾಡುವುದಾದರೆ ಕಳೆದ ಆರು ತಿಂಗಳುಗಳು ಅನೇಕ ಜನರಿಗೆ ಖುಷಿಯನ್ನು ಉಂಟು ಮಾಡಿದರೆ, ಇನ್ನೂ ಕೆಲವು ಜನರಿಗೆ ನೋವು ತಂದಿರುತ್ತದೆ.

ಜೊಮ್ಯಾಟೊ ಕೇಳಿದ ಪ್ರಶ್ನೆಗೆ ಕಾಮೆಂಟ್ ಗಳು ಹೀಗಿತ್ತು
ಆದರೆ ಈ ಆರು ತಿಂಗಳು ನಿಮಗೆ ಹೇಗೆ ಅನ್ನಿಸಿದೆ ಅಂತ ಒಂದು ಆಹಾರ ಪದಾರ್ಥದ ಜೊತೆಗೆ ಹೋಲಿಕೆ ಮಾಡಿ ಹೇಳಿ ಅಂತ ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊ ತನ್ನದೇ ಆದ ವಿಭಿನ್ನವಾದ ರೀತಿಯಲ್ಲಿ ಜನರನ್ನು ಕೇಳಿದೆ ನೋಡಿ. ಈ ಪ್ರಶ್ನೆಗೆ ಅನೇಕರು ಅನೇಕ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ ಆರು ತಿಂಗಳು "ಅತಿಯಾಗಿ ಎಣ್ಣೆ ಹಾಕಿ ಮಾಡಿದ ಬಿರಿಯಾನಿಯಂತೆ ಇತ್ತು" ಎಂದು ಅಷ್ಟೊಂದು ಚೆನ್ನಾಗಿರಲಿಲ್ಲ ಈ ಅರ್ಧ ವರ್ಷ ಅಂತ ಹೇಳಿದ್ದಾರೆ.

ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ವರ್ಷದ ಆರು ತಿಂಗಳು "ಇಡ್ಲಿ ಸಾಂಬಾರ್ ಐಸ್ ಕ್ರೀಮ್" ನಂತೆ ವಿಲಕ್ಷಣವಾದ ಘಟನೆಗಳ ಮಿಶ್ರಣವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಸಿಹಿ ಮತ್ತು ನಿರುಪದ್ರವಿ ಗುಲಾಬ್ ಜಾಮೂನ್ ನಂತೆ ಇತ್ತು ಅಂತ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಆರು ತಿಂಗಳು ಹೃದಯ ಆಕಾರದ ಬ್ರೆಡ್ ಸ್ಯಾಂಡ್ವಿಚ್ ನಲ್ಲಿ ಜಾಮ್, ಚೀಸ್, ಚಾಕೋಲೇಟ್ ಹಾಕಿದಂತಿತ್ತು’ ಅಂತ ಮೊನ್ನೆ ವೈರಲ್ ಆದ ವೀಡಿಯೋದ ಫೋಟೋ ಹಂಚಿಕೊಂಡು ಕಾಮೆಂಟ್ ಮಾಡಿದ್ದಾರೆ. ತಮ್ಮ 2022 ರ ವರ್ಷವು ಇಲ್ಲಿಯವರೆಗೆ "ದೋಸಾ ಐಸ್ಕ್ರೀಮ್ ರೀತಿಯ ಅನಿರೀಕ್ಷಿತ ನಿರಾಶೆ" ಎಂದು ಹೇಳಿದರೆ, ಇನ್ನೊಬ್ಬರು "ಫ್ಯಾಂಟಾ ಮ್ಯಾಗಿ" ತರಹ ಇತ್ತು ಎಂದು ಸರಳವಾಗಿ ಬರೆದಿದ್ದಾರೆ.

ಇದನ್ನೂ ಓದಿ: Viral Video: ಸ್ನೇಹಿತರ ಮುಂದೆ ಮ್ಯಾಜಿಕ್ ಮಾಡಿ ತೋರಿಸಿದ ಶಾಲಾ ಬಾಲಕ! ಫುಲ್ ವೈರಲ್ ಆಯ್ತು ವಿಡಿಯೋ

ಕಾಮೆಂಟ್ ಗಳು ಓದಲು ನೆಟ್ಟಿಗರಿಗೆ ಖುಷಿ ನೀಡಿದ್ದಂತು ನಿಜ, ಹಾಗಾದರೆ ನೀವು ಹೇಳಿ ವರ್ಷದ ಮೊದಲ 6 ತಿಂಗಳು ಹೇಗಿತ್ತು? ಯಾವ ತಿಂಡಿಗೆ ನಿಮ್ಮ ವರ್ಷವನ್ನು ಹೋಲಿಸುತ್ತೀರಿ ಅಂತಾ?
Published by:Ashwini Prabhu
First published: