Zodiac Jobs: ಪ್ರತೀ ರಾಶಿಗೂ ಸೂಟ್ ಆಗೋ ಉದ್ಯೋಗ ಇರುತ್ತೆ; ಅದಕ್ಕೆ ತಕ್ಕಂತೆ ಆರಿಸಿಕೊಂಡ್ರೆ ಯಶಸ್ಸು ಪಕ್ಕಾ..!

ನಿಮ್ಮ ವೃತ್ತಿರಂಗ ನಿಮಗೆ ಸೂಕ್ತವಾಗಿದೆಯೇ ಎಂಬುದನ್ನು ನೀವು ಕಂಡುಕೊಳ್ಳಬೇಕಾಗುತ್ತದೆ. ನಿಮ್ಮ ರಾಶಿಗೆ ಅನುಗುಣವಾಗಿರುವ ಉದ್ಯೋಗ ಯಾವುದು? ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ನಾವೆಲ್ಲರೂ ನಮ್ಮ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಬಯಸುತ್ತೇವೆ.ಶಿಕ್ಷಣ, ಉದ್ಯೋಗ, ವೈವಾಹಿಕ ಬದುಕು ಹೀಗೆ ಪ್ರತಿಯೊಂದು ಘಟ್ಟದಲ್ಲೂ ನಮಗೆ ಸೂಕ್ತವಾದುದು, ಅತ್ಯುತ್ತಮವಾದುದು ದೊರಕಬೇಕು ಎಂಬುದು ಮನದಾಸೆಯಾಗಿರುತ್ತದೆ. ಇಂದಿನ ದಿನಗಳಲ್ಲಿ ಸಂತಸಮಯ ಬದುಕನ್ನು ಬಾಳಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದಕ್ಕಾಗಿ ನಮ್ಮ ವೃತ್ತಿ ಜೀವನದಲ್ಲಿ ಹಗಲು ರಾತ್ರಿ ದುಡಿಯುತ್ತೇವೆ. ಒತ್ತಡರಹಿತವಾದ ಆನಂದಮಯ ಜೀವನ ನಮ್ಮದಾಗಬೇಕೆಂದು ಶ್ರಮಪಡುತ್ತೇವೆ.


ಇದೆಲ್ಲವನ್ನೂ ನೀವು ಸಾಧಿಸಬೇಕು ಎಂದಾದಲ್ಲಿ ಆ ಸ್ಥೈರ್ಯ, ಶಕ್ತಿ, ಸಾಮರ್ಥ್ಯಗಳು ನಿಮ್ಮಲ್ಲಿದೆಯೇ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ನಿಮ್ಮ ವೃತ್ತಿರಂಗ ನಿಮಗೆ ಸೂಕ್ತವಾಗಿದೆಯೇ ಎಂಬುದನ್ನು ನೀವು ಕಂಡುಕೊಳ್ಳಬೇಕಾಗುತ್ತದೆ. ನಿಮ್ಮ ರಾಶಿಗೆ ಅನುಗುಣವಾಗಿರುವ ಉದ್ಯೋಗ ಯಾವುದು? ಇಲ್ಲಿದ್ದರೆ ಉದ್ಯೋಗದಲ್ಲಿ ಯಶಸ್ಸು ಸಾಧಿಸಬೇಕಾದರೆ ನೀವು ಏನು ಮಾಡಬೇಕು ಮೊದಲಾದ ಸಲಹೆಗಳನ್ನು ಸೂಚನೆಗಳನ್ನು ನೀವು ಪಾಲಿಸಬೇಕಾಗುತ್ತದೆ. ಹಾಗಾದರೆ ನಿಮ್ಮ ರಾಶಿಗೆ ಅನುಗುಣವಾದ ಉದ್ಯೋಗಗಳೇನು ಎಂಬುದನ್ನು ತಿಳಿದುಕೊಳ್ಳೋಣ.


ಮೇಷ ರಾಶಿ:


ಮೇಷ ರಾಶಿಯವರು ಧೈರ್ಯಶಾಲಿಗಳು ಮತ್ತು ಆತ್ಮಸ್ಥೈರ್ಯ ಹೊಂದಿದವರು. ಮುನ್ನಡೆಸುವ ಗುಣ ಇವರಲ್ಲಿ ಸಹಜವಾಗಿ ಕಂಡುಬರುತ್ತದೆ. ಈ ಪರಿಶ್ರಮದಿಂದಾಗಿ ಅವರು ಮ್ಯಾನೇಜರ್‌ ಆಗಿ, ಉದ್ಯೋಗಿಗಳಾಗಿ, ಮಾರ್ಕೆಟಿಂಗ್ ನಿರ್ವಾಹಕರಾಗಿ ಮತ್ತು ಪ್ರವಾಸ ಮಾರ್ಗದರ್ಶಕರಾಗಿ ಕೆಲಸ ಮಾಡಬಹುದಾಗಿದೆ.


ಅನುಕರಣೀಯ ವ್ಯಕ್ತಿ: ಮುಖೇಶ್ ಅಂಬಾನಿ ಬ್ಯುಸಿನೆಸ್‌ಮೆನ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕರು


ವೃಷಭ ರಾಶಿ:


ಎತ್ತು ಭೂಮಿಯ ಚಿಹ್ನೆಯಾಗಿರುವುದರಿಂದ ವೃಷಭ ರಾಶಿಯವರು ನಿರಂತರ, ಆತ್ಮವಿಶ್ವಾಸ ಮತ್ತು ತಮ್ಮ ಸಹಚರರಿಗೆ ನಿಷ್ಠರಾಗಿರುತ್ತಾರೆ. ಹಾಗಾಗಿ ಇವರುಗಳು ಸೌಂದರ್ಯ, ಫ್ಯಾಶನ್, ಬ್ಯಾಂಕಿಂಗ್, ಹಣಕಾಸು, ಜೀವಶಾಸ್ತ್ರ ಮತ್ತು ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು


ಅನುಕರಣೀಯ ವ್ಯಕ್ತಿ: ಡೋಂಟೆಲ್ಲಾ ವರ್ಸೇಕ್, ಫ್ಯಾಶನ್ ಡಿಸೈನರ್ (ವಸ್ತ್ರ ವಿನ್ಯಾಸಕಿ)


ಮಿಥುನ ರಾಶಿ:


ಮಿಥುನ ರಾಶಿಯವರು ಹೊಂದಿಕೊಳ್ಳುವ ಮತ್ತು ಸರಳ ವ್ಯಕ್ತಿತ್ವದವರು. ರಾಶಿಗಳಲ್ಲಿ ಇವರದು ಸೆಳೆಯುವ ಆಕರ್ಷಣೆಯನ್ನು ಹೊಂದಿರುವವರು ಹಾಗಾಗಿ ಪಾರ್ಟಿಗಳಲ್ಲಿ, ಮಾರ್ಗದರ್ಶಕರಾಗಿ ಮತ್ತು ಪ್ರಯಾಣದಲ್ಲಿ ಅನುಭವಸ್ಥರು. ಶಿಕ್ಷಕರು, ಬರಹಗಾರರು, ಪ್ರವಾಸ ಮಾರ್ಗದರ್ಶಕರ ವೃತ್ತಿಯನ್ನು ಈ ರಾಶಿಯವರು ಆರಿಸಿಕೊಳ್ಳಬಹುದು.


ಅನುಕರಣೀಯ ವ್ಯಕ್ತಿ: ಸಲ್ಮಾನ್ ರಶೀದ್, ಬರಹಗಾರರು


ಇದನ್ನೂ ಓದಿ:Anushka Sharma-Virat Kohli: ಮಗಳಿಗೆ 6 ತಿಂಗಳು ತುಂಬಿದ ಖುಷಿಯಲ್ಲಿ ಅನುಷ್ಕಾ - ವಿರಾಟ್; ಸೆಲಬ್ರೇಶನ್ ಹೇಗಿತ್ತು ನೋಡಿ..!

ಕರ್ಕಾಟಕ ರಾಶಿ:


ಜಲಚಿಹ್ನೆಯ ಕರ್ಕಾಟಕ ರಾಶಿಯವರದು ಸಹಾನುಭೂತಿ, ಶಕ್ತಿಯುತ ಸ್ವಭಾವವಾಗಿದೆ. ಇವರು ಆಕರ್ಷಕ ವ್ಯಕ್ತಿತ್ವದವರು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಗ್ರಹಿಸುವಲ್ಲಿ ಇವರು ಸಿದ್ಧಹಸ್ತು. ಇವರು ಅಸಾಧಾರಣ ಸಾಮರ್ಥ್ಯವನ್ನು ಹೊಂದಿರುವವರು. ಸ್ಥಿರಾಸ್ಥಿ ಏಜೆಂಟ್, ಖಾಸಗಿ ಬಾಣಸಿಗ, ಒಳಾಂಗಣ ವಿನ್ಯಾಸಕರು, ಸಮಾಜ ಸೇವಕರ ಕ್ಷೇತ್ರದಲ್ಲಿ ಇವರು ತಮ್ಮ ವೃತ್ತಿಯನ್ನು ಆರಂಭಿಸಬಹುದು


ಅನುಕರಣೀಯ ವ್ಯಕ್ತಿ: ವೋಲ್ಫಾಂಗ್ ಪಕ್, ಆಸ್ಟ್ರೇಲಿಯದ ಬಾಣಸಿಗ


ಸಿಂಹ ರಾಶಿ:


ಸಿಂಹ ರಾಶಿಯವರು ಸ್ವಭಾವತಃ ಬೆಂಕಿಯ ಹಾಗೆ ಪ್ರಜ್ವಲಿಸುವ ಧೀಮಂತ ವ್ಯಕ್ತಿತ್ವದವರು. ಭಾವೋದ್ರಿಕ್ತರು ಮತ್ತು ಕ್ರಿಯಾತ್ಮಕ ವ್ಯಕ್ತಿಗಳು. ಶಕ್ತಿ ಮತ್ತು ಆಶಾವಾದಕ್ಕೆ ಇನ್ನೊಂದು ಹೆಸರು. ಯೋಜನೆಯ ಕುರಿತು ಹೆಚ್ಚಿನ ಆಸಕ್ತಿ ಇರುವವರು ಮತ್ತು ಪ್ರಾಮಾಣಿಕ ವ್ಯಕ್ತಿಗಳು. ಪರಿಶ್ರಮದಿಂದ ಕೆಲಸ ಮಾಡುವುದರಿಂದ ಯಶಸ್ಸು ಇವರಿಗೆ ಸದಾ ಲಭ್ಯವಿರುತ್ತದೆ. ನಟ, ಈವೆಂಟ್ ಆರ್ಗನೈಸರ್, ಇನ್‌ಸ್ಟಕ್ಟರ್ ಮತ್ತು ವಿನ್ಯಾಸಕರು ಹೀಗೆ ಇವರ ರಾಶಿಗೆ ಅನುಗುಣವಾಗಿರುವ ವೃತ್ತಿಗಳಾಗಿವೆ.


ಅನುಕರಣೀಯ ವ್ಯಕ್ತಿ: ಕ್ರಿಸ್ ಹೇಮ್ಸ್‌ವರ್ತ್, ನಟ


ಕನ್ಯಾರಾಶಿ:


ಕನ್ಯಾರಾಶಿಯವರು ಇತರರಿಗೆ ಲಾಭವನ್ನುಂಟು ಮಾಡುವವರಾಗಿರುತ್ತಾರೆ. ಅವರು ಆಯ್ಕೆಮಾಡುವ ವೃತ್ತಿಯಲ್ಲಿ ಪರಿಪೂರ್ಣಣೆಯನ್ನು ಬಯಸುವವರು. ವಿಶ್ಲೇಷಣಾತ್ಮಕ ಗುಣ ಇವರಿಗೆ ಇರುವುದರಿಂದ ಇವರು ಅಕೌಂಟೆಂಟ್ಸ್, ಎಡಿಟರ್ಸ್, ವೈಜ್ಞಾನಿಕ ಸಂಶೋಧಕರು ಮತ್ತು ಶಿಕ್ಷಕ ವೃತ್ತಿಯನ್ನು ಆಯ್ದುಕೊಳ್ಳಬಹುದಾಗಿದೆ.


ಅನುಕರಣೀಯ ವ್ಯಕ್ತಿ: ಮೈಕೆಲ್ ಫೆರಾಡಿ, ವಿಜ್ಞಾನಿ


ತುಲಾ ರಾಶಿ:


ತುಲಾ ರಾಶಿಯವರು ಧನಾತ್ಮಕ ವ್ಯಕ್ತಿತ್ವವುಳ್ಳವರು. ಇತರರಿಗೆ ಮಾರ್ಗದರ್ಶಕರಾಗಿ ಸಬಂಧವನ್ನು ಸುಧಾರಿಸುವ ಗುಣದವರು ಮತ್ತು ನ್ಯಾಯಾಕ್ಕಾಗಿ ಹೋರಾಡುವವರು. ಇವರು ಆಯ್ದುಕೊಳ್ಳಬಹುದಾದ ವೃತ್ತಿಯೆಂದರೆ ಮಾನವ ಸಂಪನ್ಮೂಲ ನಿರ್ವಾಹಕರು, ಪತ್ತೇದಾರರು, ವಕೀಲರು ಅಥವಾ ಕೌನ್ಸಿಲರ್‌ಗಳು.


ಅನುಕರಣೀಯ ವ್ಯಕ್ತಿ: ಮಹಾತ್ಮಾ ಗಾಂಧಿ, ವಕೀಲರು ಮತ್ತು ರಾಷ್ಟಪಿತ


ವೃಶ್ಚಿಕ ರಾಶಿ:


ವೃಶ್ಚಿಕ ರಾಶಿಯವರು ಹೊಸ ಸವಾಲುಗಳನ್ನು ಗೆಲ್ಲುವ ವ್ಯಕ್ತಿತ್ವದವರು ಮತ್ತು ಕೌಶಲ್ಯದಲ್ಲೂ ಚಾಣಾಕ್ಷತೆಯನ್ನು ಹೊಂದಿರುವವರು. ಇವರು ಆಯ್ದುಕೊಳ್ಳಬಹುದಾದ ರಂಗವೆಂದರೆ ಸಂಶೋಧರು, ಇಂಜಿನಿಯರ್, ಆರ್ಥಿಕ ಸಲಹೆಗಾರರು ಮಾಥವಾ ಮಾರುಕಟ್ಟೆ ವಿಶ್ಲೇಷಕರು.


ಅನುಕರಣೀಯ ವ್ಯಕ್ತಿ: ಟಿಮ್ ಕುಕ್, ಇಂಜಿನಿಯರ್ ಹಾಗೂ ಆ್ಯಪಲ್ ಸಿಇಒ


ಧನು ರಾಶಿ:


ಇವರದು ಚಂಚಲ ವ್ಯಕ್ತಿತ್ವ ಮತ್ತು ಅಸಮಾಧಾನಿಗಳು, ಅಂದರೆ ಇವರು ಕೈಗೆತ್ತಿಕೊಂಡ ಕೆಲಸವನ್ನು ಮುಗಿಸದೇ ಬಿಡುವವರಲ್ಲ. ಆಸಕ್ತಿದಾಯಕ, ರೋಮಾಂಚಕಾರಿ ಮತ್ತು ವಿಭಿನ್ನ ಕೆಲಸಕ್ಕೆ ಸೂಕ್ತರು. ವಾಸ್ತುಶಿಲ್ಪಿ, ಶಿಕ್ಷಕ, ಟ್ರಾವೆಲ್ ಏಜೆಂಟ್ ಮತ್ತು ಆತಿಥ್ಯ ಮೊದಲಾದ ವೃತ್ತಿ ರಂಗವನ್ನು ಇವರು ಆರಿಸಿಕೊಳ್ಳಬಹುದು.


ಅನುಕರಣೀಯ ವ್ಯಕ್ತಿ: ಬಿಲ್ ನೇಯ್, ವಿಜ್ಞಾನ ಸಂವಹನಕಾರ


ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಮಕರ ರಾಶಿ:


ಮಕರ ರಾಶಿಯವರು ಹಣ ಮತ್ತು ಸಮಯ ನಿರ್ವಹಣೆಯ ಬಗ್ಗೆ ಚತುರತೆಯುಳ್ಳವರು. ಈ ವ್ಯಕ್ತಿಗಳ ತೀವ್ರ ವಿಶ್ಲೇಷಣಾತ್ಮಕ ಬುದ್ಧಿವಂತಿಕೆ ಮತ್ತು ವ್ಯವಸ್ಥಾಪಕ ಮತ್ತು ಆಡಳಿತಾತ್ಮಕ ಕೌಶಲ್ಯಗಳಿಂದಾಗಿ ಈ ರಾಶಿಯವರು ಹಣಕಾಸು, ನಿರ್ವಹಣೆ, ಬ್ಯಾಂಕಿಂಗ್, ಲೆಕ್ಕಪತ್ರ ನಿರ್ವಹಣೆ, ಕಾನೂನು ಮತ್ತು ಆಡಳಿತ ಕ್ಷೇತ್ರದಲ್ಲಿ ತಮ್ಮ ವೃತ್ತಿರಂಗವನ್ನು ಆರಂಭಿಸಬಹುದು.


ಅನುಕರಣೀಯ ವ್ಯಕ್ತಿ: ರಾಮ್ ಜೇಠ್ಮಲಾನಿ, ವಕೀಲರು


ಕುಂಭ ರಾಶಿ:


ಕುಂಭರಾಶಿಯವರು ಹೆಚ್ಚು ಕುತೂಹಲ ಪ್ರವೃತ್ತಿಯವರು ಮತ್ತು ಮಾನವೀಯತೆಯ ಗುಣವುಳ್ಳವರು. ಮುಂದೆ ಏನು ಮಾಡಬೇಕೆಂಬ ತೀರ್ಮಾನವುಳ್ಳವರಾಗಿರುವುದಿಲ್ಲ ಹಾಗಾಗಿ ಸ್ಥಿರತೆ ಮತ್ತು ಸುರಕ್ಷತೆಯ ಕೊರತೆ ಇರುವ ಜೀವನ ನಿರ್ವಹಿಸಬೇಕೆಂದು ಬಯಸುವವರಾಗಿರುತ್ತಾರೆ. ವಿನ್ಯಾಸಕಾರರು, ಏರೋನಾಟಿಕಲ್, ಖಗೋಳ ವಿಜ್ಞಾನಿ ಮತ್ತು ಸಾಮಾಜಿಕ ಕಾರ್ಯಕರ್ತರು ಮೊದಲಾದ ಕ್ಷೇತ್ರಗಳಲ್ಲಿ ಇವರು ಅದೃಷ್ಟ ಪರೀಕ್ಷಿಸಿಕೊಳ್ಳಬಹುದು.


ಅನುಕರಣೀಯ ವ್ಯಕ್ತಿ: ವಿನೋಬ ಭಾವೆ, ಸಾಮಾಜಿಕ ಕಾರ್ಯಕರ್ತರು
ಮೀನ ರಾಶಿ:


ಈ ರಾಶಿಯವರು ನಂಬಿಕೆಯ ಸಾಮರ್ಥ್ಯವನ್ನು ಕಳೆದುಕೊಳ್ಳದವರು. ಇವರು ಕಲಾವಿರು, ಶಿಕ್ಷಣ ತಜ್ಞರು, ಸಲಹೆಗಾರರು, ಜ್ಯೋತಿಷ್ಯ ರಂಗದಲ್ಲಿ ಉದ್ಯೋಗಅರಸಬಹುದಾಗಿದೆ.


ಅನುಕರಣೀಯ ವ್ಯಕ್ತಿ: ಮೈಕಲ್‌ ಏಂಜೆಲೋ, ಕಲಾವಿದ


Published by:Latha CG
First published: