HOME » NEWS » Trend » ZENDAYA MAREE STOERMER COLEMAN STAR SHINES BRIGHT AT THE ESSENCE BLACK WOMEN IN HOLLYWOOD AWARDS STG HG

44 ಕೋಟಿ ಮೌಲ್ಯದ ವಜ್ರದ ಆಭರಣಗಳಿಂದ ಹುಬ್ಬೇರಿಸುವಂತೆ ಮಾಡಿದ ಹಾಲಿವುಡ್ ನಟಿ: ಆಸ್ಕರ್ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಜೆಂಡಾಯ

93 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಏಪ್ರಿಲ್ 26 ರಂದು ಲಾಸ್ ಏಂಜಲೀಸ್‌ನ ಯೂನಿಯನ್ ಸ್ಟೇಷನ್ ಮತ್ತು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಿತು. ಈ ವರ್ಷ ಆಸ್ಕರ್ ಪ್ರಶಸ್ತಿಯು ಕೆಂಪು, ಬಿಳಿ ವರ್ಣದ ರಂಗಿನಲ್ಲಿ ಮೈದಳೆದಿತ್ತು.

news18-kannada
Updated:April 26, 2021, 8:09 PM IST
44 ಕೋಟಿ ಮೌಲ್ಯದ ವಜ್ರದ ಆಭರಣಗಳಿಂದ ಹುಬ್ಬೇರಿಸುವಂತೆ ಮಾಡಿದ ಹಾಲಿವುಡ್ ನಟಿ: ಆಸ್ಕರ್ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಜೆಂಡಾಯ
ಜೆಂಡಾಯ ಮೇರಿ ಸ್ಟೋಮರ್ ಕೋಲ್ಮನ್
  • Share this:
ಆಸ್ಕರ್ 2021ರ ರೆಡ್ ಕಾರ್ಪೆಟ್ ಈ ಭಾರೀ ಎಲ್ಲರನ್ನು ತನ್ನೆಡೆ ಆಕರ್ಷಿಸಿದೆ. ನಟಿಯರ ವಿವಿಧ ವಿನ್ಯಾಸದ ವಸ್ತ್ರಗಳು ಜಗತ್ತಿನ ಹೆಣ್ಣು ಮಕ್ಕಳ ಹುಬ್ಬೇರಿಸಿವೆ. ಅಲ್ಲದೇ ಈ ಕುರಿತು ಗೂಗಲ್ ನಲ್ಲಿ ಅನೇಕ ಬಾರಿ ಹುಡುಕಾಟ ಕೂಡ ನಡೆಸಲಾಗಿದೆ. ಅದರಂತೆ ಈ ಬಾರಿ ಆಸ್ಕರ್ ರೆಡ್ ಕಾರ್ಪೆಟ್‌ನಲ್ಲಿ ಎಲ್ಲರ ಚಿತ್ತ ತನ್ನತ್ತ ಸೆಳೆದವರು ಅಮೆರಿಕ ನಟಿ ಜೆಂಡಾಯ ಮೇರಿ ಸ್ಟೋಮರ್ ಕೋಲ್ಮನ್. ರೆಡ್ ಕಾರ್ಪೆಟ್ ಮೇಲೆ ತಮ್ಮ ಕಸ್ಟಮೈಸ್ಡ್( ಗ್ರಾಹಕರು ತಮಗೆ ಬೇಕಾದ ಹಾಗೇ ಉತ್ಪನ್ನವನ್ನು ಹೇಳಿ ವಿನ್ಯಾಸಮಾಡಿಸಿಕೊಳ್ಳುವುದು) ವ್ಯಾಲೆಂಟಿನೋ ಕೌಚರ್ ಸೀಳು ಗೌನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇದರೊಟ್ಟಿಗೆ 6 ಮಿಲಿಯನ್ ಯುಎಸ್ ಡಾಲರ್ (44.85 ಕೋಟಿ ರೂ.) ಮೌಲ್ಯದ ಹಳದಿ ವರ್ಣದ ವಜ್ರದ ನೆಕ್ಲೇಸ್ ಮತ್ತು ಜಿಮ್ಮಿ ಚೂ ಹೀಲ್ಸ್ ಧರಿಸಿ ಈ ಬಾರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

93 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಏಪ್ರಿಲ್ 26 ರಂದು ಲಾಸ್ ಏಂಜಲೀಸ್‌ನ ಯೂನಿಯನ್ ಸ್ಟೇಷನ್ ಮತ್ತು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಿತು. ಈ ವರ್ಷ ಆಸ್ಕರ್ ಪ್ರಶಸ್ತಿಯು ಕೆಂಪು, ಬಿಳಿ ವರ್ಣದ ರಂಗಿನಲ್ಲಿ ಮೈದಳೆದಿತ್ತು.

ಮಾಲ್ಕಮ್ ಮತ್ತು ಮೇರಿಯಲ್ಲಿನ ಅಭಿನಯಕ್ಕಾಗಿ ಜೆಂಡಾಯ ಅವರು ನಾಮ ನಿರ್ದೇಶನಗೊಂಡಿಲ್ಲ. ಆದರೂ ಅವರು ಉಡುಗೆಯ ಮೂಲಕ ಎಲ್ಲರ ಮೆಚ್ಚುಗೆಯ ಪ್ರಶಸ್ತಿ ಗಳಿಸಿ ಗೆದ್ದಿದ್ದಾರೆ. 24 ವರ್ಷದ ಜೆಂಡಾಯ ಅವರು ಆಸ್ಕರ್ ಪ್ರಶಸ್ತಿ ನೀಡುವ ಸ್ಥಾನದಲ್ಲಿದ್ದರು. ಜೆಂಡಾಯ ಅಷ್ಟೇ ಅಲ್ಲದೇ ಇನ್ನಿತರ ಸೂಪರ್ ಸ್ಟಾರ್‌ಗಳಾದ ರೀಸ್ ವಿದರ್ಸ್ಪೂನ್, ಬ್ರಾಡ್ ಪಿಟ್, ಜೊವಾಕ್ವಿನ್ ಫೀನಿಕ್ಸ್ ಮತ್ತು ಹ್ಯಾರಿಸನ್ ಫೋರ್ಡ್ ಈ ಸಮಯದಲ್ಲಿ ಎಲ್ಲರ ಗಮನ ಸೆಳೆದರು.





ಜೆಂಡಾಯ ತಮ್ಮ ಹಳದಿ ವರ್ಣದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಂದಾಗ, ಸುತ್ತಲೂ ಬೀಸುತ್ತಿದ್ದ ತಂಗಾಳಿಗೆ ಹಾರಾಡುತ್ತಿದ್ದ ಗೌನ್ ಫ್ರಿಲ್‌ಗಳು, ಇಳಿ ಬಿಟ್ಟ ಉದ್ದನೆಯ ಕೂದಲು ಎಲ್ಲರ ಚಿತ್ತವನ್ನು ತನ್ನೆಡೆ ಸೆಳೆಯುವಂತೆ ಮಾಡಿತ್ತು. ಥೇಟ್ ಮತ್ಸಕನ್ಯೆಯಂತೆಯೇ ಮನಮೋಹಕವಾಗಿದ್ದರು.ಕೆಂಪು, ಬಿಳಿ ಮತ್ತು ಸ್ವರ್ಣದ ಉಡುಗೆಗಳ ನಡುವೆ ಜೆಂಡಾಯ ಅವರ ಹಳದಿ ವರ್ಣ ವಿಭಿನ್ನವಾಗಿ ಕಾಣುತ್ತಿತ್ತು. ಇದೆಲ್ಲದರ ಜೊತೆಗೆ 183 ಕ್ಯಾರೆಟ್ ಬಲ್ಗರಿ ವಜ್ರದ ಆಭರಣಗಳಾದ ಕಿವಿಯೋಲೆ, ಕಂಠಾಭರಣ ಮತ್ತು ಕೈ ಬೆರಳಿನ ಉಂಗುರ ಬೆರಗುಗೊಳಿಸಿತ್ತು. ಲಕ್ಷಾಂತರ ಪೌಂಡ್ ಮೌಲ್ಯದ ಕಲ್ಲುಗಳಲ್ಲಿ ಬ್ರೂಚ್ ಮತ್ತು ಟಸೆಲ್ ಕುತ್ತಿಗೆ ಹಾರ, 30 ಕ್ಯಾರೆಟ್ ಹಳದಿ ವಜ್ರದ ಉಂಗುರ, ದೊಡ್ಡದಾದ ಪಚ್ಚೆ ವಜ್ರದ ಉಂಗುರ, ಮುತ್ತಿನ ವಿಶೇಷ ಕಟ್ಟಿಂಗ್ ಹಳದಿ ವಜ್ರದ ಇಳಿಬಿಟ್ಟ ಕಿವಿಯೋಲೆ ಆಭರಣಗಳು ಬಲ್ಗರಿ ವಜ್ರದ ಅಭಿವ್ಯಕ್ತಿಯಾಗಿದ್ದು, ಟ್ರೆಂಡ್ ಕ್ರಿಯೆಟ್ ಮಾಡುವಂತಿದೆ.

ಜೆಂಡಾಯ ಸರಳವಾಗಿ ಮೇಕಪ್ ಮಾಡಿಕೊಂಡಿದ್ದು, ಅವರ ಜೊತೆಗೆ ಹಿಂದಿನಿಂದಲೂ ಇರುವ ಕೇಶವಿನ್ಯಾಸಗಾರರಾದ ಲಾ ರೋಚ್, ಜೆಂಡಾಯ ಅವರಿಗೆ ಮತ್ಸಕನ್ಯೆ ರೂಪ ನೀಡಿದ್ದಾರೆ.

ಜೆಂಡಾಯ ಅವರನ್ನು ಬಿಟ್ಟು ಉಳಿದಂತೆ, ಸೆಲೆಸ್ಟ್ ವೇಯ್ಟ್ ಅವರ ಕೆಂಪು ವರ್ಣದ ಉಡುಗೆ ಮತ್ತು ಹೃದಯದ ಆಕಾರದ ಕ್ಲಚ್ ಎಲ್ಲ ಹೆಣ್ಣು ಮಕ್ಕಳ ಗಮನ ಸೆಳೆದಿದೆ.
Youtube Video

ಬ್ರಿಟಿಷ್ ನಟಿ ಕ್ಯಾರಿ ಮುಲಿಗನ್ ತನ್ನ ಸ್ವರ್ಣ ವರ್ಣದ ಹೊಳೆಯುವ ವ್ಯಾಲೆಂಟಿನೋ ಕೌಚರ್ ಗೌನ್‌ನೊಂದಿಗೆ ಬ್ಯಾಂಡ್ ಟಾಪ್( ಮೇಲುಡುಗೆ) ನಲ್ಲಿ ಕಾಣಿಸಿಕೊಂಡರು. ಜೊತೆಗೆ ಸ್ಕರ್ಟ್ ಮತ್ತು ಸೋಫಿಯಾ ವೆಬ್‌ಸ್ಟರ್ ಹೀಲ್ಸ್‌ನಲ್ಲಿ ಆಕರ್ಷಕವಾಗಿ ಕಂಡರು.
First published: April 26, 2021, 6:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories