• Home
  • »
  • News
  • »
  • trend
  • »
  • Viral Video: ಇನ್ಮುಂದೆ ನಾಯಿ ಮಾತ್ರ ಅಲ್ಲ, ನಿಮ್ಮ ಮೀನು ಜೊತೆಗೂ ವಾಕಿಂಗ್​ ಮಾಡ್ಬಹುದು!

Viral Video: ಇನ್ಮುಂದೆ ನಾಯಿ ಮಾತ್ರ ಅಲ್ಲ, ನಿಮ್ಮ ಮೀನು ಜೊತೆಗೂ ವಾಕಿಂಗ್​ ಮಾಡ್ಬಹುದು!

ಮೊಬೈಲ್ ಫಿಶ್​ ಟ್ಯಾಂಕ್​

ಮೊಬೈಲ್ ಫಿಶ್​ ಟ್ಯಾಂಕ್​

ಇದ್ಯಾವ ಫಿಶ್ ಟ್ಯಾಂಕ್ ತಳ್ಳುಗಾಡಿಯಪ್ಪ ಎನ್ನುತ್ತೀರಾ..? ಈ ಚಲಿಸಬಹುದಾದ ಫಿಶ್ ಟ್ಯಾಂಕ್ ಕಥೆ ಶುರು ಆಗಿದ್ದು, ಓಪನ್ ಸೊಸೈಟಿ ಗುಂಪಿನ ಫೇಸ್‍ಬುಕ್ ಖಾತೆಯಲ್ಲಿನ ಸರಣಿ ಪೋಸ್ಟ್‌ಗಳ ಮೂಲಕ.

  • Share this:

ನಾಯಿ (Dog) ಮತ್ತು ಬೆಕ್ಕು (Cat) ಮುಂತಾದ ಸಾಕು ಪ್ರಾಣಿಗಳ (Pet Animals) ಜೊತೆ ವಾಕಿಂಗ್ (Walking) ಹೋಗುವುದು ಪ್ರಾಣಿ ಪ್ರಿಯರಿಗೆ ಖುಷಿಯ ಸಂಗತಿ. ಬೇಕಿದ್ದರೆ, ಅವುಗಳನ್ನು ನಾವು ಹೋದಲ್ಲಿಗೆ ಕರೆದುಕೊಂಡು ಹೋಗಬಹುದು, ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗಬೇಕಲ್ಲ ಎಂಬ ಚಿಂತೆ ಇರುವುದಿಲ್ಲ. ಆದರೆ, ಸಾಕು ಮೀನು (Fish) ಗಳ ಬಗ್ಗೆ ಹೀಗೆ ಹೇಳುವಂತಿಲ್ಲ ಅಲ್ಲವೇ..? ಪಾಪ, ಮನೆಯಲ್ಲಿಟ್ಟ ಟ್ಯಾಂಕ್‍ (Tank) ನಲ್ಲಿ ಇದ್ದಲ್ಲಿಯೇ ಇರಬೇಕು ಅವು. ಆದರೆ, ನಿಮ್ಮ ಬಳಿ ಇಂತದ್ದೊಂದು ಫಿಶ್ ಟ್ಯಾಂಕ್ (Fish Tank) ತಳ್ಳುಗಾಡಿ ಇದ್ದರೆ, ಆ ಚಿಂತೆ ಇಲ್ಲ ಬಿಡಿ. ಮೀನುಗಳ ಜೊತೆ ಆರಾಮಾಗಿ ವಾಕಿಂಗ್‍ಗೆ ಹೋಗಬಹುದು..!


ಚಲಿಸಬಹುದಾದ ಫಿಶ್​ ಟ್ಯಾಂಕ್​!


ಇದ್ಯಾವ ಫಿಶ್ ಟ್ಯಾಂಕ್ ತಳ್ಳುಗಾಡಿಯಪ್ಪ ಎನ್ನುತ್ತೀರಾ..? ಈ ಚಲಿಸಬಹುದಾದ ಫಿಶ್ ಟ್ಯಾಂಕ್ ಕಥೆ ಶುರು ಆಗಿದ್ದು, ಓಪನ್ ಸೊಸೈಟಿ ಗುಂಪಿನ ಫೇಸ್‍ಬುಕ್ ಖಾತೆಯಲ್ಲಿನ ಸರಣಿ ಪೋಸ್ಟ್‌ಗಳ ಮೂಲಕ. ಆ ಗುಂಪಿನ ಸದಸ್ಯರೊಬ್ಬರು, ತಾನು ತೈಪೆ ನಗರದ ಸುತ್ತಮುತ್ತ, ತಾನು ಸಾಕಿರುವ ಮೀನುಗಳನ್ನು ಅವುಗಳ ಟ್ಯಾಂಕ್ ಸಮೇತ, ಎರಡು ಚಕ್ರಗಳುಳ್ಳ ಕಾಂಟ್ರ್ಯಾಪ್ಶನ್‍ನಲ್ಲಿ ಇಟ್ಟುಕೊಂಡು, ಓಡಾಡುತ್ತಿರುವುದನ್ನು ನೋಡಿರುವುದಾಗಿ ಹೇಳಿಕೊಂಡಿದ್ದರು.


ಫಿಶ್​ ಟ್ಯಾಂಕ್ ಜೊತೆನೇ ಹೋಗ್ಬಹುದು ವಾಕಿಂಗ್​!


ಅದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಕೂಡ ವೈರಲ್ ಆದವು. ಮೀನಿನ ಟ್ಯಾಂಕ್ ಇಟ್ಟುಕೊಂಡು ಓಡಾಡುವ ಆ ವ್ಯಕ್ತಿಯ ಬಗ್ಗೆ ಜನರು ಪ್ರತಿಕ್ರಿಯೆ ನೀಡಲು ಕೂಡ ಆರಂಭಿಸಿದರು. ಆತ ಬೇರೆ ಯಾರು ಅಲ್ಲ, ತೈವಾನಿನ ಜನಪ್ರಿಯ ಡಿಐವೈ ಯೂಟ್ಯೂಬರ್ , ಹ್ವಾಂಗ್ ಕ್ಷಿಯೋಜಿ, ಅಲಿಯಾಸ್ ‘ಜೆರ್ರಿ’.


ಇದನ್ನೂ ಓದಿ:  ಇವನ್ಯಾರಪ್ಪ, ಎರಡೆರಡು ಹೆಬ್ಬಾವುಗಳನ್ನ ಹೆಗಲ ಮೇಲೆ ಹೊತ್ತು ಕುಣಿತಾನಲ್ಲ! ವೈರಲ್ ವಿಡಿಯೋ ನೀವೂ ನೋಡಿ


ಅಷ್ಟೇ ಅಲ್ಲ, ಸ್ವತಃ ಜೆರ್ರಿ ಕೂಡ ಏಪ್ರಿಲ್ 23 ರಂದು ತನ್ನ ಹೊಸ ಆವಿಷ್ಕಾರವನ್ನು ತೋರಿಸುವ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದರು. ಫಿಶ್ ಟ್ಯಾಂಕ್ ಅನ್ನು ತಳ್ಳಿಕೊಂಡು ಹೋದಲೆಲ್ಲಾ ಕೊಂಡೊಯ್ಯಬಹುದಾದ ಸಾಧನವನ್ನು ಆವಿಷ್ಕರಿಸಿದ್ದು, ತಾನು ಇದುವರೆಗೆ ಎದುರಿಸಿದ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದು ಎಂದು ಜೆರ್ರಿ ಹೇಳಿಕೊಂಡಿದ್ದಾರೆ.


ಚಲಿಸುವ ಫಿಶ್ ಟ್ಯಾಂಕ್​ ವಿಡಿಯೋ ವೈರಲ್!


ಈ ಪ್ರಾಜೆಕ್ಟ್‌ನಲ್ಲಿ ಯಾವ ರೀತಿಯ ಕೆಲಸವನ್ನು ಮಾಡಲಾಗಿದೆ, ಅಂದರೆ ಈ ಗಾಲಿಗಳುಳ್ಳ ಮೀನಿನ ಟ್ಯಾಂಕ್ ತಳ್ಳುಗಾಡಿಯನ್ನು ಹೇಗೆ ರಚಿಸಲಾಗಿದೆ ಎಂಬುವ ವಿಡಿಯೋವನ್ನು ಹ್ವಾಂಗ್ ಪೋಸ್ಟ್ ಮಾಡಿದ್ದಾರೆ ನಿಜ, ಆದರೆ ಅದಕ್ಕೆ ಇಂಗ್ಲೀಷ್ ಸಬ್‍ಟೈಟಲ್‍ಗಳನ್ನು ನೀಡಿಲ್ಲ. ಅದೇನೇ ಇದ್ದರೂ ಹ್ವಾಂಗ್ ಯಾವ ರೀತಿ ಈ ತಳ್ಳುಗಾಡಿಯನ್ನು ತಯಾರಿಸಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಆತ, ಸೀಲ್ ಮಾಡಿದ ಆಕ್ರಿಲಿಕ್ ಟ್ಯೂಬ್‍ಗೆ ಆಧಾರವಾಗಿರುವಂತೆ, ಲೋಹದ ಚೌಕಟ್ಟನ್ನು ವೆಲ್ಡ್ ಮಾಡಿದ್ದಾರೆ. ಅದಕ್ಕೆ ಚಕ್ರಗಳನ್ನು ಸೇರಿಸಿ, ತಳ್ಳಿಕೊಂಡು ಹೋಗಲು ಒಂದು ಹ್ಯಾಂಡಲ್ ಅನ್ನು ಸೇರಿಸಿದ್ದಾರೆ.


ವಾಸ್ತವದಲ್ಲಿ, ಇಲ್ಲಿ ಅಕ್ರಿಲಿಕ್ ಟ್ಯೂಬ್ ಒಂದು ಫಿಶ್ ಟ್ಯಾಂಕ್. ಅದು ಬ್ಯಾಟರಿ ಚಾಲಿತ ಫಿಲ್ಟರೇಶನ್ ಸಿಸ್ಟಮ್, ಆಮ್ಲಜನಕ್ಕೆ ಅಗತ್ಯವಿರುವ ಏರ್ ಪಂಪ್ ಹೊಂದಿದೆ. ಅದೇ ರೀತಿ ನೀವು ರಾತ್ರಿಯ ವೇಳೆಯಲ್ಲಿ ನಿಮ್ಮ ಅಕ್ವೇರಿಯಂ, ಅಂದರೆ ಫಿಶ್ ಟ್ಯಾಂಕ್‍ನ ಮೀನುಗಳನ್ನು ಪ್ರದರ್ಶಿಸ ಬಯಸುವುದಾದರೆ, ಆ ಅಕ್ರಿಲಿಕ್ ಟ್ಯೂಬ್‍ನಲ್ಲಿ ಬೆಳಕಿನ ವ್ಯವಸ್ಥೆಯು ಕೂಡ ಇದೆ.


ಇದನ್ನೂ ಓದಿ: ಚಲಿಸುತ್ತಿರುವ ಬೈಕ್‌ ಮೇಲೆ ಅಜ್ಜನ ಡೇಂಜರಸ್ ಸ್ಟಂಟ್! "ಇದೇನು ಶೋಕಿ ಬಂತು ನಿಂಗೂ" ಎಂದ್ರು ವಿಡಿಯೋ ನೋಡಿದ ಜನ


ಹ್ವಾಂಗ್ ಕ್ಷಿಯೋಜಿ, ತಾನು ಆವಿಷ್ಕರಿಸಿದ ಫಿಶ್ ಟ್ಯಾಂಕ್ ತಳ್ಳುಗಾಡಿಯಲ್ಲಿ ಮೊದಲಿಗೆ ಮೂರು ಗೋಲ್ಡ್ ಫೀಶ್‍ಗಳನ್ನು ಒಂದು ದೀರ್ಘ ವಾಕ್‍ಗೆ ಕರೆದುಕೊಂಡು ಹೋದರು. ವಾಕ್‍ನಿಂದ ಮರಳಿದಾಗ ಆ ಮೂರು ಮೀನುಗಳು ಸುರಕ್ಷಿತವಾಗಿರುವುದನ್ನು ಗಮನಿಸಿದ ಬಳಿಕ , ಅವರು ತನ್ನ ಈ ಪ್ರಾಜೆಕ್ಟ್ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ. ಅವರ ಅಭಿಮಾನಿಗಳು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ಕೆಲಸವನ್ನು ಪ್ರಶಂಸಿಸಿದ್ದಾರೆ. ಇಂತಹ ಫಿಶ್ ಟ್ಯಾಂಕ್ ತಳ್ಳು ಗಾಡಿ ಒಂದು ದಿನ ನಿಜಕ್ಕೂ ಮಾರುಕಟ್ಟೆಗೆ ಬರಲಿ ಎಂದು ಪ್ರಾರ್ಥಿಸಿರುವ ಅವರು, ಹಾಗಾದಲ್ಲಿ, ತಾವು ತಮ್ಮ ಮೀನುಗಳನ್ನು ಕರೆದುಕೊಂಡು ವಾಕ್ ಹೋಗಬಹುದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Published by:ವಾಸುದೇವ್ ಎಂ
First published: