Viral Video: ಕಂಠಪೂರ್ತಿ ಕುಡಿದ್ರು, ಚಲಿಸುವ ಕಾರಿನ ಮೇಲೆ ಕುಣಿದ್ರು! ಕುಡುಕ ಯುವಕರ ಹುಚ್ಚಾಟದ ವಿಡಿಯೋ ವೈರಲ್

ಯುವಕರು ಕಂಠಪೂರ್ತಿ ಕುಡಿದು ಕಾರ್ ಓಡಿಸಿದ್ದಲ್ಲದೇ, ಕಾರ್ ಚಲಿಸುತ್ತಿದ್ದಾಗಲೇ ಟಾಪ್‌ ಮೇಲೆ ಹತ್ತಿ, ಡ್ಯಾನ್ಸ್ ಮಾಡಿದ್ರು. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ.

ಕುಡಿದು, ಕಾರಿನ ಮೇಲೆ ಯುವಕರ ಹುಚ್ಚಾಟ

ಕುಡಿದು, ಕಾರಿನ ಮೇಲೆ ಯುವಕರ ಹುಚ್ಚಾಟ

  • Share this:
ಉತ್ತರ ಪ್ರದೇಶ: ಅವರೆಲ್ಲ ಇನ್ನೂ ಯುವಕರು (Youths), ಭವಿಷ್ಯದ (Future) ಬಗ್ಗೆ ಯೋಚಿಸಬೇಕಾಗಿದ್ದವರು. ಆದರೆ ವೀಕೆಂಡ್ (Week End) ನೆಪದಲ್ಲಿ ಮೈಮರೆತರು. ದೇಶದ ಮುಂದಿನ ಭವಿಷ್ಯ ರೂಪಿಸಬೇಕಾಗಿದ್ದವರು ಬೀದಿಯಲ್ಲಿ ಕುಡಿದು (Drinking) ಅಸಭ್ಯವಾಗಿ ವರ್ತಿಸಿದರು. ಕಂಠಪೂರ್ತಿ ಕುಡಿದು ಕಾರ್ ಓಡಿಸಿದ್ದಲ್ಲದೇ (Car Driving), ಕಾರ್ ಚಲಿಸುತ್ತಿದ್ದಾಗಲೇ ಟಾಪ್‌ (Top) ಮೇಲೆ ಹತ್ತಿ, ಡ್ಯಾನ್ಸ್ (Dance) ಮಾಡಿದ್ರು. ಇದೀಗ ಆ ವಿಡಿಯೋ ವೈರಲ್ (Video Viral) ಆಗಿದ್ದು, ಪೊಲೀಸರು (Police) ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅಷ್ಟಕ್ಕೂ ಯುವಕರ ಹುಚ್ಚಾಟದ ಇಂಥದ್ದೊಂದು ಘಟನೆ ನಡೆದಿರುವುದು ಉತ್ತರ ಪ್ರದೇಶ (Uttara Pradesh) ರಾಜ್ಯದ ಗಾಜಿಯಾಬಾದ್‌ (Ghaziabad) ಏರಿಯಾದಲ್ಲಿ.

ಚಲಿಸುತ್ತಿದ್ದಾಗಲೇ ಕಾರಿನ ಮೇಲೆ ಡ್ಯಾನ್ಸ್

ದಿಲ್ಲಿ- ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಟಾಪ್‌ನಲ್ಲಿ, ಮತ್ತಿನಲ್ಲಿದ್ದ ಯುವಕರು ಡ್ಯಾನ್ಸ್ ಮಾಡುತ್ತಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ಯುವಕರು ಹುಚ್ಚಾಟ ಆಡಿದ್ದಾರೆ.



ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ವಾಹನಗಳಿಂದ ತುಂಬಿಕೊಂಡಿದ್ದ ದಟ್ಟಣೆಯ ರಸ್ತೆಯಲ್ಲಿ ಈ ಕಾರು ನಿಧಾನವಾಗಿ ಚಲಿಸುವುದನ್ನು 33 ಸೆಕೆಂಡುಗಳ ವಿಡಿಯೋ ತೋರಿಸಿದೆ. ಹಾಗೆಯೇ ಎರ್ಟಿಗಾ ಕಾರಿನ ಒಳಗೆ ಇದ್ದ ಇನ್ನೂ ಇಬ್ಬರು ವ್ಯಕ್ತಿಗಳು ಕೆಳಕ್ಕಿಳಿದು, ನರ್ತಿಸುತ್ತಿದ್ದ ತಮ್ಮ ಗೆಳೆಯರ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಬಳಿಕ ಅವರಿಬ್ಬರೂ ಕೆಳಕ್ಕಿಳಿದು ಬಂದಿದ್ದಾರೆ. ಒಬ್ಬ ಚಾಲಕನ ಬದಿಗೆ ಕುಳಿತರೆ, ಮತ್ತೊಬ್ಬ ಆತನ ಪಕ್ಕದ ಸೀಟಿನಲ್ಲಿ ಕುಳಿತಿದ್ದಾನೆ. ಈ ವಿಡಿಯೋದಲ್ಲಿ ಕಾರಿನಲ್ಲಿದ್ದ ವ್ಯಕ್ತಿಗಳು ಮತ್ತು ಕಾರಿನ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣಿಸಿದೆ.

ಇದನ್ನೂ ಓದಿ: Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ! ತಪ್ಪಿಸೋಕೆ ಬಂದ ಈ ಮಹಾನುಭಾವ ಏನು ಮಾಡಿದ ನೋಡಿ...

 ಪೊಲೀಸರಿಗೆ ಟ್ವಿಟ್ಟರ್‌ನಲ್ಲಿ ವಿಡಿಯೋ ಟ್ಯಾಗ್

ಪ್ರಶಾಂತ್ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದರು. ಎರ್ಟಿಗಾ ಕಾರ್‌ ಟಾಪ್‌ನಲ್ಲಿ ಇಬ್ಬರು ಯುವಕರು ನರ್ತಿಸುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದ ಅವರು, ಗಾಜಿಯಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ್ದರು.  "ಗಾಜಿಯಾಬಾದ್‌ನಲ್ಲಿ ಕುಡಿದಂತೆ ಕಾಣುವ ಹುಡುಗರ ಗುಂಪೊಂದು, ದಿಲ್ಲಿ- ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ತಮ್ಮ ಕಾರಿನ ಟಾಪ್‌ನಲ್ಲಿ ನೃತ್ಯ ಮಾಡುತ್ತಿದ್ದರು. ಗಾಜಿಯಾಬಾದ್ ಪೊಲೀಸರು ಶೀಘ್ರದಲ್ಲಿಯೇ ಆ ಹುಡುಗರನ್ನು ಲಾಕ್‌ಅಪ್‌ನಲ್ಲಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುತ್ತಾರೆ ಎಂದು ಆಶಿಸುತ್ತೇನೆ" ಎಂದು ಅವರು ಬರೆದು ಕೊಂಡಿದ್ದಾರೆ.

ಕಾರಿನ ಮಾಲೀಕರಿಗೆ 20 ಸಾವಿರ ರೂಪಾಯಿ ದಂಡ

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಈ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ. ಅವರಲ್ಲಿ ಒಬ್ಬರಿಗೆ ಪ್ರತಿಕ್ರಿಯೆ ನೀಡಿರುವ ಗಾಜಿಯಾಬಾದ್ ಪೊಲೀಸರು, "ಟ್ವಿಟ್ಟರ್‌ನಲ್ಲಿ ಬಂದ ದೂರನ್ನು ಪರಿಗಣಿಸಿದ್ದು, ಸಂಚಾರ ನಿಯಮ ಉಲ್ಲಂಘನೆ ಕೇಸ್‌ನ ಅಡಿಯಲ್ಲಿ ಕಾರಿನ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ" ಎಂದು ತಿಳಿಸಿದ್ದಾರೆ.



ಕುಡಿದು ಹುಚ್ಚಾಟ ಮಾಡಿದ್ದ ಯುವಕರ ಬಂಧನ

ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಹುಚ್ಚಾಟ ನಡೆಸಿದ ಯುವಕರನ್ನು ಬಂಧಿಸಿದ್ದಾರೆ. ಆರೋಪಿಗಳು ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ಎದುರು ಕ್ಷಮೆಯಾಚಿಸುವ ವೀಡಿಯೊವನ್ನು ಗಾಜಿಯಾಬಾದ್ ಪೊಲೀಸರು ಅಪ್‌ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಮದುವೆಯಲ್ಲಿ ವೇದಿಕೆ ಮೇಲೆಯೇ ವರ-ವಧುವಿಗೆ ಮದ್ಯ ಕುಡಿಸಿದ ಗೆಳೆಯರು: ಹೇಗೆ ಗೊತ್ತಾ?

ರಸ್ತೆ ಸುರಕ್ಷತೆ ಉಲ್ಲಂಘನೆಯನ್ನು ಖಾತ್ರಿಪಡಿಸಿಕೊಂಡು, ವಾಹನ ಸಂಖ್ಯೆ ಯುಪಿ 14 ಸಿಎಸ್ 3223 ನಲ್ಲಿ ಪ್ರಯಾಣಿಸುತ್ತಿದ್ದ ಸಂಬಂಧಪಟ್ಟ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸುಮಾರು 20,000 ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಗಾಜಿಯಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
Published by:Annappa Achari
First published: