ಕಂಪನಿಯ ಅವಧಿ (Time) ಮುಗಿದರೂ ಕೆಲಸ ಮಾಡುವ ಉದ್ಯೋಗಿಗಳಿಗೆ ಶುಭ ಸಮಾಚಾರ ನೀಡುವಂತ ಸುದ್ದಿ ಒಂದು ಸದ್ದು (Sound) ಮಾಡುತ್ತಿದೆ. ಇದರ ಪ್ರಕಾರ ಯಾರು ಕಂಪನಿಯ ಅವಧಿಗಿಂತಲೂ ಹೆಚ್ಚಿನ ಸಮಯ ಕೆಲಸ ಮಾಡುತ್ತಾರೋ ಅವರಿಗೆ ಒಂದು ಕುತೂಹಲಕಾರಿಯಾದ ಮೆಸೇಜ್ ಒಂದನ್ನು ಕಂಪನಿಯೇ ನೀಡಿದೆ. ಇದರಿಂದ ಹಲವಾರು ಉದ್ಯೋಗಿಗಳು (Employee) ಸಂತೋಷಪಟ್ಟಿದ್ದಾರೆ. ಹಾಗಾದ್ರೆ ಆ ಸಂದೇಶ (Messege) ಏನು? ಸಂದೇಶ ಕಳಿಸಿದ್ದು ಯಾರು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.
"ನಿಮ್ಮ ಶಿಫ್ಟ್ ಸಮಯ ಮುಗಿದಿದೆ, ದಯವಿಟ್ಟು ಮನೆಗೆ ಹೋಗಿ" ಇದು ಕಂಪನಿಯೊಂದು ಉದ್ಯೋಗಿಗಳಿಗೆ ಕಳಿಸಿದ ಸಂದೇಶ. ಕಂಪ್ಯೂಟರ್ ಉದ್ಯೋಗಿಗಳಿಗೆ ಶಿಫ್ಟ್ ಸಮಯವನ್ನು ಮೀರಿ ಕೆಲಸ ಮಾಡದಂತೆ ನೆನಪಿಸುತ್ತದೆ ಅಂದರೆ ಯಾರಿಗೆ ತಾನೇ ಸಂತೋಷವಾಗೋದಿಲ್ಲ ಹೇಳಿ. ಪ್ರತಿಯೊಬ್ಬ ಉದ್ಯೋಗಿಗೂ ತಮ್ಮ ಸ್ವಂತ ಲೈಫ್ ಅನ್ನು ಅನುಭವಿಸುವ ಸಮಯ ಬೇಕು. ಹೆಚ್ಚಿನ ಅವಧಿಯನ್ನು ಕಂಪನಿಯಲ್ಲೇ ಕಳೆದು ಬಿಟ್ರೆ ಆ ಸಮಯವನ್ನು ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲ.
ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅವರ ಶಿಫ್ಟ್ ಸಮಯ ಮುಗಿದ ನಂತರ ಮನೆಗೆ ಹೋಗಲು ನೆನಪಿಸುವ ದಿನವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹಾಗೇನಾದರು ಆಗಿ ಬಿಟ್ಟರೆ ಅದೊಂದು ಆಶಿರ್ವಾದ ಎಂದೇ ಬಯಸುತ್ತೇವೆ ಎಂದು ಹಲವಾರು ಜನರ ಈ ವಿಷಯದ ಕುರಿತು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ICSI CS ಪರೀಕ್ಷಾ ಫಲಿತಾಂಶ ದಿನಾಂಕ ಪ್ರಕಟ, ಇಲ್ಲೇ ಚೆಕ್ ಮಾಡಿ
ಉದ್ಯೋಗಿ ತನ್ವಿ ಖಂಡೇಲ್ವಾಲ್ ಎನ್ನುವವರು ಹಂಚಿಕೊಂಡ ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಕಂಪನಿಯು ತಮ್ಮ ಡೆಸ್ಕ್‌ಟಾಪ್‌ಗಳ ಮೂಲಕ ಉದ್ಯೋಗಿಗಳಿಗೆ ಅವರ “ಶಿಫ್ಟ್ ಮುಗಿದಿದೆ ದಯವಿಟ್ಟು ಮನೆಗೆ ಹೋಗಿ ಎಂಬ ಸಂದೇಶವನ್ನು ಪಡೆದುಕೊಂಡಿದ್ದಾರೆ. ಇದನ್ನು ಅವರು ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಂದೇಶ ಈಗ ಭಾರಿ ವೈರಲ್ ಆಗ್ತಿದೆ.
ನಾವೆಲ್ಲರೂ ನಮ್ಮ ಕೆಲಸದ ಜೀವನವನ್ನು ಹಾಗೂ ಫರ್ಸನಲ್ ಜೀವನವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುತ್ತೇವೆ. ಆದರೆ ಕಂಪನಿಯೇ ಉದ್ಯೋಗಿಗಳಿಗೆ ಈ ರೀತಿ ಒಂದು ಸಂದೇಶವನ್ನು ಕಳಿಸಿದರೆ ಎಷ್ಟು ಸಂತೋಷ ಆಗುತ್ತೆ ಅಲ್ವಾ? ಅಂತ ಕೆಲವರು ಕಮೆಂಟ್ ಮಾಡಿದ್ದಾರೆ.
ಇದು ಪ್ರಚಾರದ ಅಥವಾ ಕಾಲ್ಪನಿಕ ಪೋಸ್ಟ್ ಅಲ್ಲ ಎಂಬುದು ಸ್ಪಷ್ಟವಾಗಿದೆ ಏಕೆಂದರೆ ಆ ಕಂಪನಿಯ HR ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರಿಂದ ಯಾವುದೇ ಪ್ರಚಾರವನ್ನೂ ನಾವು ಬುಸುವುದಿಲ್ಲ ಇದು ಕೇವಲ ನಮ್ಮ ಕಂಪನಿಯ ಉದ್ಯೋಗಿಗಳ ಹಿತಾಸಕ್ತಿಗಾಗಿ ಎಂದು ಹೇಳಲಾಗಿದೆ. ಫೋಸ್ಟ ಹಂಚಿಕೊಂಡ ಮಹಿಳಾ ಉದ್ಯೋಗಿ ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ಈ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿಕೊಂಡಿದ್ಧಾರೆ.
ತನ್ನ ಮುಂದೆ ಡೆಸ್ಕಟಾಪ್ ಸ್ಕ್ರೀನ್ ಇರುವ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅದರ ಮೇಲೆ ಬರೆಯಲಾದ ಸಾಲುಗಳಲ್ಲಿ ಈ ವಾಕ್ಯ ಇದೆ. ಇನ್ನು ಹತ್ತು ನಿಮಿಷಗಳಲ್ಲಿ ಕಂಪನಿ ಅವಧಿ ಮುಯುತ್ತದೆ ಇದು ಎಚ್ಚರಿಕೆ ಗಂಟೆ ಎಂದು ಬರೆದುಕೊಂಡಿದೆ.
ಇದು ನಮ್ಮ ಕಛೇರಿಯ ವಾಸ್ತವ!! ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್ ಅಂತ ಬರೆದಿದೆ.
#WorkLifeBalance ಎಂಬ ಹ್ಯಾಷ್ ಟ್ಯಾಗ್ ಹಾಕುವುದರ ಮೂಲಕ ಇದನ್ನು ಹಂಚಿಕೊಂಡಿದ್ದಾರೆ. ಇದರಿಂದಲೇ ಹೆಚ್ಚಿನ ಮಾಹಿತಿಯನ್ನೂ ಜನರೂ ಸಹ ಪಡೆದುಕೊಂಡಿದ್ದಾರೆ. ನಿಮ್ಮ ಮನಸ್ಥಿತಿ ಸುಧಾರಿಸಲು ಕಂಪನಿ ನೀಡುವ ಈ ಒಂದು ಸಂದೇಶ ಮಾತ್ರ ಸಾಕು, ಇನ್ನೇನು ಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ