ಇನ್ನೂ ಆಧಾರ್​ಗೆ ಪ್ಯಾನ್​ ಕಾರ್ಡ್​ ಲಿಂಕ್ ಮಾಡಲಿಲ್ಲವೇ?; ಹಾಗಿದ್ರೆ ನಿಮ್ಮ ಪ್ಯಾನ್​ ಕಾರ್ಡ್ ಶೀಘ್ರದಲ್ಲೇ ​ನಿಷ್ಕ್ರಿಯ?

ಮಾರ್ಚ್ 31ರೊಳಗೆ ಪ್ಯಾನ್​ಗೆ ಆಧಾರ್ ಲಿಂಕ್ ಮಾಡದೇ ಇದ್ದರೆ ಅಂತವರ ಪ್ಯಾನ್​ ಕಾರ್ಡ್​​ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಜೊತೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ ದಂಡ ವಿಧಿಸಬಹುದು ಎಂದು ಎಚ್ಚರಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಪ್ಯಾನ್​ ಕಾರ್ಡ್​ ಹೊಂದಿದವರಿಗೆ ಆಧಾರ್ ಕಾರ್ಡ್​​​​ ಲಿಂಕ್ ಮಾಡುವಂತೆ ಆದಾಯ ತೆರಿಗೆ ಇಲಾಖೆ ಈ ಹಿಂದೆ ಹಲವು ಬಾರಿ ಗಡುವು ನೀಡಿತ್ತು. ಇದೀಗ ಆದಾಯ ತೆರಿಗೆ ಇಲಾಖೆ ಪ್ಯಾನ್​​ ಕಾರ್ಡ್​​ನ್ನು​​​ ಆಧಾರ್​ನೊಂದಿಗೆ ಜೋಡಣೆಗೆ 2021 ಮಾರ್ಚ್ 31ರ ವರೆಗೆ ಗಡುವು ಎಂದು ನಿಗದಿಪಡಿಸಿದೆ. ಈ ಬಾರಿ ಪ್ಯಾನ್​ ಕಾರ್ಡ್​ ನ್ನು ಆಧಾರ್ ಗೆ​​ ಲಿಂಕ್ ಮಾಡಲು ವಿಫಲವಾದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯ ಆಗಬಹುದು. ಈ ಬಾರಿ ಪ್ಯಾನ್ ಆಧಾರ್ ಲಿಂಕ್​ನಲ್ಲಿ ಮತ್ತೊಮ್ಮೆ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

  ಮಾರ್ಚ್ 31ರೊಳಗೆ ಪ್ಯಾನ್​ಗೆ ಆಧಾರ್ ಲಿಂಕ್ ಮಾಡದೇ ಇದ್ದರೆ ಅಂತವರ ಪ್ಯಾನ್​ ಕಾರ್ಡ್​​ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಜೊತೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ ದಂಡ ವಿಧಿಸಬಹುದು ಎಂದು ಎಚ್ಚರಿಸಿದೆ.

  ನನ್ನಿಂದ ಯಡಿಯೂರಪ್ಪನವರಿಗೆ ಅವಮಾನವಾಯಿತು; ಪರಾಜಿತ ಮೇಯರ್​ ಅಭ್ಯರ್ಥಿ ಸುನಂದ ಪಾಲನೇತ್ರ​ ಬೇಸರ

  ನಿಷ್ಕ್ರಿಯ ಪ್ಯಾನ್​ ಕಾರ್ಡ್​​ ನೀಡಿದರೆ 10 ಸಾವಿರ ರೂ. ದಂಡ!

  ಸದ್ಯದ ದಿನಗಳಲ್ಲಿ ಬ್ಯಾಂಕ್ ಖಾತೆ ತೆರೆಯುವುದು, ಮ್ಯೂಚುವಲ್ ಫಂಡ್ ಅಥವಾ ಷೇರುಗಳನ್ನು ಖರೀದಿಸುವುದು. 50,000 ರೂ.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸಲು ಪ್ಯಾನ್​ಕಾರ್ಡ್​​​ ಕಡ್ಡಾಯವಾಗಿದೆ. ಇನ್ನು, ಬ್ಯಾಂಕಿನಲ್ಲಿ ಖಾತೆ ತೆರೆಯಲು ಅಥವಾ 50,000 ರೂ.ಗಿಂತ ಹೆಚ್ಚಿನ ವ್ಯವಹಾರಕ್ಕಾಗಿ ಪ್ಯಾನ್ಕಾರ್ಡ್ ಕಡ್ಡಾಯ. ಈ ವೇಳೆ ತಪ್ಪು ಪ್ಯಾನ್ ಸಂಖ್ಯೆ, ನಿಷ್ಕ್ರಿಯ ಆಗಿರುವ ಪ್ಯಾನ್ ಸಂಖ್ಯೆಯನ್ನು ನೀಡಿದರೆ ಅಂತಹವರಿಗೆ 10,000 ರೂ. ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

  ಎಸ್ಎಂಎಸ್ ಮೂಲಕ ಪ್ಯಾನ್​ಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

  ಆಧಾರ್​ಗೆ ಜೋಡಣೆ ಆಗದಿರುವ ಪ್ಯಾನ್ ಸಂಖ್ಯೆಯನ್ನು ಕೇವಲ ಒಂದು ಸಂದೇಶದ (SMS) ಮೂಲಕ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ ಪ್ಯಾನ್ ಕಾರ್ಡ್ ಅನ್ನು ಆಧಾರ್ಗೆ ಲಿಂಕ್ ಮಾಡುವುದು ಹೇಗೆ ಎಂಬುದು ಇಲ್ಲಿ ವಿವರಿಸಲಾಗಿದೆ.

  ಆಧಾರ್ ಪ್ಯಾನ್ ಲಿಂಕ್ ಮಾಡಲು 567678 ಅಥವಾ 56161 ಸಂಖ್ಯೆಗೆ SMS ಕಳುಹಿಸಬೇಕು. ಇನ್ನು, ನೀವು ಕಳುಹಿಸುವ ಎಸ್ಎಂಎಸ್ ಹೇಗೆ ಇರಬೇಕೆಂದು ಉದಾಹರಣೆ ರೂಪದಲ್ಲಿ ನೀಡಲಾಗಿದೆ. UIDAIPAN (12 ಡಿಜಿಟ್ ಆಧಾರ್ ನಂಬರ್) ಸ್ಪೇಸ್ (10 ಡಿಜಿಟ್ ಪ್ಯಾನ್ ಸಂಖ್ಯೆ). ಒಂದು ವೇಳೆ ಒಬ್ಬ ವ್ಯಕ್ತಿಯ ಆಧಾರ್ ನಂಬರ್ ABCDXXXXXXXXXX ಮತ್ತು ಪ್ಯಾನ್ ಕಾರ್ಡ್ ನಂಬರ್ ABCXXXXXXX ಆಗಿದ್ದರೆ ಎಸ್ಎಂಎಸ್ನಲ್ಲಿ ನೀವು UIDAIPANABCDXXXXXXXXXX ABCXXXXXXX ಎಂದು ಬರೆದು 567678 ಅಥವಾ 56161 ಸಂಖ್ಯೆಗೆ SMS ಕಳುಹಿಸಬೇಕು.
  Published by:Latha CG
  First published: