ಆನ್ಲೈನ್ನಲ್ಲಿ ನಿಮ್ಮ ಕಣ್ಣು, ಮೆದುಳು ಪರೀಕ್ಷಿಸಲು ಸಾಕಷ್ಟು ದೃಷ್ಟಿ ಭ್ರಮೆಯ ಫೋಟೋಗಳು ಸಿಗುತ್ತವೆ. ಅವುಗಳನ್ನು ನೋಡಿದರೆ ನಿಮ್ಮ ಕಣ್ಣನ್ನು ನೀವೇ ನಂಬಲು ಸಾಧ್ಯವಾಗುವುದಿಲ್ಲ. ಆ ವ್ಯತ್ಯಾಸಗಳನ್ನು ಕಂಡು ಹಿಡಿಯಲು ಬಹುತೇಕರಿಗೆ ಸಾಧ್ಯವಾಗುವುದೇ ಇಲ್ಲ. ಇತ್ತೀಚೆಗೆ ಹಿಮದಲ್ಲಿ ನಡೆಯುತ್ತಿರುವ ನಾಯಿಯನ್ನು ಮನುಷ್ಯ ಎಂಬಂತೆ ಕಾಣುವ ವೈರಲ್ ಫೋಟೋವನ್ನು ನೋಡಿರುತ್ತೀರಾ.. ಈಗ ನಾವು ಕಾಡಿನಲ್ಲಿ ನಾಲ್ವರು ಮದ್ಯದ ಬಾಟಲ್ಗಳನ್ನು ಹಿಡಿದುಕೊಂಡು ನಿಂತಿರುವ ಫೋಟೋ ವೈರಲ್ ಆಗುತ್ತಿದೆ. ಯಾವ ಕಾರಣಕ್ಕೆ ಅಂತೀರಾ.. ಮುಂದೆ ಓದಿ..
ಈ ವಿಡಿಯೋದಲ್ಲಿ ನಾಲ್ಕು ಪುಟ್ಟ ಮದ್ಯದ ಬಾಟಲಿಗಳು ಕಾಣಿಸುತ್ತವೆ. ಆದರೆ, ಮೂರು ಕೈಗಳು ಮಾತ್ರ ಮೊದಲ ನೋಟದಲ್ಲಿ ಕಾಣಿಸುತ್ತದೆ. ಹತ್ತರಲ್ಲಿ ಒಂಬತ್ತು ಬಾರಿ, ನಿಮ್ಮ ಮೆದುಳಿಗೆ ನಾಲ್ಕನೇ ವ್ಯಕ್ತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್.
ಮೇಲಿನ ಈ ಚಿತ್ರವು ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ಇದು ಕೇವಲ ದೃಷ್ಟಿ ಭ್ರಮೆಯ ಕಾರಣದಿಂದಾಗಿ. ನೀವು ಪುರಾವೆಗಳನ್ನು ಪರಿಶೀಲಿಸಿದರೆ, ಈ ಫೋಟೋ ಏಕೆ ದೃಷ್ಟಿ ಭ್ರಮೆ ಎಂದು ಸ್ಪಷ್ಟವಾಗುತ್ತದೆ.
ಫ್ರೇಮ್ನ ಮಧ್ಯಭಾಗದಲ್ಲಿ ನಾಲ್ಕು ಬಾಟಲಿಗಳ ಲಾರ್ಸೆನಿ ಬೌರ್ಬನ್ ವಿಸ್ಕಿ ಬಾಟಲಿಗಳು ಬಹುತೇಕ ಅಂಟಿಕೊಂಡಿವೆ. ಆದರೆ ಕೇವಲ ಮೂರು ಕೈಗಳು ಮಾತ್ರ ಒಟ್ಟಿಗೆ ಇರುವಂತೆ ತೋರುತ್ತಿದೆ. ಮೂರು ಕೈಗಳು, ನಾಲ್ಕು ವಿಸ್ಕಿ ಬಾಟಲಿಗಳು. ಹಾಗಾದರೆ ನಾಲ್ಕನೇ ವ್ಯಕ್ತಿ ಎಲ್ಲಿದ್ದಾನೆ?
ನಾಲ್ಕು ಬಾಟಲಿಗಳನ್ನು ಕೇವಲ ಮೂರು ಕೈಗಳಿಂದ ಹಿಡಿದಿಟ್ಟುಕೊಳ್ಳುವಂತೆಯೇ ನಿಮಗೂ ಕಾಣಿಸುತ್ತಿದೆಯಾ..? ಟ್ವಿಟ್ಟರ್ನಲ್ಲಿ ಹೆಚ್ಚಿನ ಜನರು ಇದನ್ನು ಹೀಗೇ ನೋಡುತ್ತಿದ್ದಾರೆ - ಇದಕ್ಕೆ ಕಾರಣ ದೃಷ್ಟಿ ಭ್ರಮೆ.
ಇದನ್ನೂ ಓದಿ : ಪಂಜಾಬ್ ಸ್ಥಳೀಯ ಚುನಾವಣೆ; NOTA ಗಿಂತಲೂ ಕಡಿಮೆ ಮತ ಪಡೆದು ಮುಜುಗರಕ್ಕೀಡಾದ ಬಿಜೆಪಿ
ಮೇಲಿನ ಎಂಬೆಡೆಡ್ ಟ್ವೀಟ್ಗೆ ನೀವು ಕಾಮೆಂಟ್ಗಳನ್ನು ಪರಿಶೀಲಿಸಿದರೆ, ಬಹಳಷ್ಟು ಜನರು ಚಿತ್ರದಿಂದ ಗೊಂದಲಕ್ಕೀಡಾಗುವುದನ್ನು ನೀವು ನೋಡುತ್ತೀರಿ, ಜನರು ತಾವು ದೃಷ್ಟಿ ಭ್ರಮೆಯನ್ನು ಕ್ಯಾಚ್ ಮಾಡಲಿಲ್ಲ ಎಂದೇ ಹೇಳಿದ್ದಾರೆ. ಆದರೆ, ಒಬ್ಬ ವ್ಯಕ್ತಿ ಇದನ್ನು ದೃಷ್ಟಿ ಭ್ರಮೆ ಎಂದಿದ್ದು, ನಮ್ಮ ಕಣ್ಣುಗಳು ಹಾಗೂ ಮೆದುಳುಗಳಿಗೆ ತಕ್ಷಣ ಅರಿವಿಗೆ ಬರುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಇದು ದೃಷ್ಟಿ ಭ್ರಮೆ: ಬೌರ್ಬನ್ ವಿಸ್ಕಿಯ ನಾಲ್ಕನೇ ಬಾಟಲ್ ಅನ್ನು ಹಿಡಿದುಕೊಂಡಿರುವ ನಾಲ್ಕನೇ ವ್ಯಕ್ತಿಯನ್ನು ವಾಸ್ತವವಾಗಿ ಈ ಫೋಟೋದಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. ಅವನ ಕೈ ಎಡ ಅಂಚಿನಿಂದ ಚಿತ್ರದ ಫ್ರೇಮ್ ಪ್ರವೇಶಿಸುವುದನ್ನು ನೀವು ನೋಡಬಹುದು. ಇದಕ್ಕಿಂತ ಹೆಚ್ಚಾಗಿ, ನಾಲ್ಕನೇ ವ್ಯಕ್ತಿಯ ಕೈಗವಸು ಔಟ್ ಲೈನ್ ಸಹ ಮಧ್ಯಮ ವ್ಯಕ್ತಿಯ ಉಡುಪಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ