Love on the Animal: ಸಾಕು ಪ್ರಾಣಿಯ ಸ್ನೇಹ ಬಯಸಿ ಪತ್ರ ಬರೆದ ಯುವಕರು, ಶ್ವಾನದಿಂದ ಉತ್ತರವೂ ಬಂತು!

ಆ ಯುವಕರ ಪತ್ರಕ್ಕೆ ಮುದ್ದಾದ ಪ್ರತಿ ಉತ್ತರವೂ ಬಂತು. ಆ ನಾಯಿಯಿಂದ..! ಹೌದು, ಸ್ಟೀವಿ ಟಿಕ್ಸ್ ಎಂಬ ಹೆಣ್ಣು ನಾಯಿ ಸ್ನೇಹಕ್ಕೆ ಒಪ್ಪಿಗೆ ನೀಡಿ, ತನ್ನ ಜೊತೆ ಆಟವಾಡಬಹುದು ಎಂದು ಬರೆದಿದ್ದ ಆ ಪತ್ರದಲ್ಲಿ, ಮಾಲೀಕರ ಫೋನ್ ನಂಬರ್ ಅನ್ನು ಕೂಡ ನೀಡಲಾಗಿತ್ತು!

ಯುವಕರು ಬರೆದ ಪತ್ರ

ಯುವಕರು ಬರೆದ ಪತ್ರ

 • Share this:
  ಸಾಕು ಪ್ರಾಣಿಗಳನ್ನು (Pet Animals) ಪ್ರೀತಿಸುವವರಿಗೆ (Love), ಅವುಗಳ ಜೊತೆಗೆ ಬದುಕಿನ ಹೆಚ್ಚಿನ ಸಮಯಗಳನ್ನು ಕಳೆದವರಿಗೆ, ಪ್ರಾಣಿಗಳ ಸಾಮಿಪ್ಯವಿಲ್ಲದೆ ಬದುಕುವುದು ತುಂಬಾ ಕಷ್ಟವೆನಿಸುತ್ತದೆ. ಅಂತವರ ಪಾಲಿಗೆ ಸಾಕುಪ್ರಾಣಿಗಳ ಜೊತೆ ಇಲ್ಲದಿದ್ದರೆ, ಎಲ್ಲವೂ ಇದ್ದು ಏನು ಇಲ್ಲವೆಂಬ ಖಾಲಿತನ (Loneliness) ಕಾಡುತ್ತದೆ. ಪ್ರಾಣಿಯ ಒಡನಾಟಕ್ಕಾಗಿ ಹಾತೊರೆದು, ಅದಕ್ಕೊಂದು ದಾರಿ ಕಂಡುಕೊಂಡ ನಾಲ್ಕು ಮಂದಿ ಯುವ ಎಂಜಿನಿಯರ್‌ಗಳ (young engineers) ಕಥೆ ಇಲ್ಲಿದೆ. ಆ ನಾಲ್ಕು ಮಂದಿ ಯುವಕರು ಅಪಾರ್ಟ್‍ಮೆಂಟ್ (Apartment) ಒಂದಕ್ಕೆ ಬಾಡಿಗೆಗೆ ಬಂದಾಗ, ಅದರ ಬಾಡಿಗೆ ಕರಾರು ಪತ್ರದಲ್ಲಿನ ನಿಯಮಗಳಲ್ಲಿ ಅಲ್ಲಿ ಸಾಕು ಪ್ರಾಣಿಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂಬುವುದು ಕೂಡ ಒಂದಾಗಿತ್ತು. ಮೊದಲಿನಿಂದಲೂ ಸಾಕು ಪ್ರಾಣಿಗಳ ಸಾಂಗತ್ಯದಲ್ಲಿಯೇ ಬೆಳೆದಿದ್ದ ಅವರುಗಳಿಗೆ, ಅಲ್ಲಿ ಕೆಲವು ತಿಂಗಳುಗಳನ್ನು ಕಳೆಯುತ್ತಲೇ ಒಂಟಿತನ ಕಾಡತೊಡಗಿತು. ಕೊನೆಗೊಂದು ದಿನ ಆ ಒಂಟಿತನವನ್ನು ಹೋಗಲಾಡಿಸುವ ಗಳಿಗೆಯೂ ಕೂಡಿ ಬಂತು.

  ನಾಯಿ ಮೇಲೆ ಯುವಕರಿಗೆ ಮಮತೆ

  ಅಂತದ್ದೇನಾಯಿತು ಅಂತೀರಾ..? ಒಂದು ದಿನ ದೂರದಲ್ಲಿ ನಿಂತಿದ್ದ ನಾಯಿಯೊಂದು ಅವರನ್ನೇ ದಿಟ್ಟಿಸುತ್ತಿರುವುದು ಕಾಣಿಸಿತು. ಅದು ಪಕ್ಕದ ಮನೆಯ ನಾಯಿ. ಆ ನಾಯಿಯ ಸ್ನೇಹಮಯ ಮುಖಕ್ಕೆ ಮನಸೋತ ಆ ನಾಲ್ವರು, ಮಾಡಿದ್ದೇನು ಗೊತ್ತೇ..? ಆ ನಾಯಿಯ ಜೊತೆ ಸ್ನೇಹ ಮಾಡಲು ಅನುಮತಿ ಕೋರಿ, ಅದರ ಮಾಲೀಕರಿಗೆ ಪತ್ರ ಬರೆದರು! ಪ್ರಾಣಿ ಪ್ರಿಯ ಮನಸ್ಸನ್ನು ಪ್ರಾಣಿ ಪ್ರಿಯರೇ ಅರಿಯದೇ ಇರಲು ಸಾಧ್ಯವೇ..?

  ನಾಯಿಯಿಂದ ಬಂತು ಪತ್ರ!

  ಹೌದು, ಆ ಯುವಕರ ಪತ್ರಕ್ಕೆ ಮುದ್ದಾದ ಪ್ರತಿ ಉತ್ತರವೂ ಬಂತು. ಆ ನಾಯಿಯಿಂದ..! ಹೌದು, ಸ್ಟೀವಿ ಟಿಕ್ಸ್ ಎಂಬ ಹೆಣ್ಣು ನಾಯಿ (ನಾಯಿಯ ಪರವಾಗಿ ಮಾಲೀಕರ ಪತ್ರ) ಸ್ನೇಹಕ್ಕೆ ಒಪ್ಪಿಗೆ ನೀಡಿ, ತನ್ನ ಜೊತೆ ಆಟವಾಡಬಹುದು ಎಂದು ಬರೆದಿದ್ದ ಆ ಪತ್ರದಲ್ಲಿ, ಮಾಲೀಕರ ಫೋನ್ ನಂಬರ್ ಅನ್ನು ಕೂಡ ನೀಡಲಾಗಿತ್ತು.

  ಇದನ್ನೂ ಓದಿ: Charlotte Bronte: 9 ಕೋಟಿಗೆ ಮಾರಾಟವಾಯ್ತು ಶಾರ್ಲೆಟ್ ಬ್ರಾಂಟೆಯ ಮಿನಿ ಪುಸ್ತಕ! ಏನಿದರ ವಿಶೇಷತೆ?

   ಹೆಜ್ಜೆ ಗುರುತಿನ ಪತ್ರ

  ನಾಯಿ ಮಾಲೀಕರಿಂದ , ಪತ್ರಕ್ಕೆ ಉತ್ತರ ಸಿಗುವ ನಿರೀಕ್ಷೆ ಯುವಕರಿಗೆ ಇರಲಿಲ್ಲವಂತೆ. ಆದರೆ, ವಿಶೇಷ ಚಿಹ್ನೆಯುಳ್ಳ ಲಕೋಟೆಯಲ್ಲಿ ಉತ್ತರ ತಲುಪಿದಾಗ ಸಿಹಿ ಸುದ್ದಿಯನ್ನು ತಂದಿದೆ ಎಂಬುವುದು ಅವರಿಗೆ ಅರ್ಥವಾಯಿತು. ಆ ವಿಶೇಷ ಚಿಹ್ನೆ ಯಾವುದು ಗೊತ್ತಾ..? ನಾಯಿಯ ಪಾದದ ಚಿಹ್ನೆ ! “ನಾವು ಎನ್ವೆಲಪ್‌ ಮೇಲೆ ಪಾದದ ಚಿಹ್ನೆ ನೋಡಿದ್ದೇ ತಡ, ಅದು ಸಿಹಿಸುದ್ದಿ ಎಂಬುವುದು ಗೊತ್ತಾಯಿತು” ಎಂದು ಪತ್ರ ಬರೆದ ನಾಲ್ವರಲ್ಲಿ ಒಬ್ಬರಾದ ಜ್ಯಾಕ್ ಹೇಳಿದ್ದಾರೆ. ಈ ಕಥೆಯನ್ನು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ಕೂಡ ಅವರೇ.

  ಈ ಪತ್ರ ವ್ಯವಹಾರದ ಬಳಿಕ, ಸ್ವೀವಿ ಆ ಯುವಕರನ್ನು ನಾಲ್ಕು ಬಾರಿ ಭೇಟಿಯಾಗಿದೆಯಂತೆ. ಯುವಕರು ಮತ್ತು ಸ್ವೀವಿ ಚೆನ್ನಾಗಿ ಹೊಂದಿಕೊಂಡರು ಎಂದು ಸ್ಟೀವಿಯ ಮಾಲೀಕರು ಹೇಳಿದ್ದಾರೆ.

  ಅದರ ಮಾಲೀಕರು ಹೇಳಿರುವ ಪ್ರಕಾರ, ಸ್ಟೀವಿಯ ವಯಸ್ಸು 2.5 ವರ್ಷ, ಅದು ಶೆಪ್ರಡಾರ್ (ಲ್ಯಾಬ್ ಮತ್ತು ಜರ್ಮನ್ ಶೆಪರ್ಡ್) ಹೆಣ್ಣು ನಾಯಿ, ಅದು ಮೂಲತಃ ಸೈಪ್ರಸ್‍ಗೆ ಸೇರಿದ್ದು, ಆದರೆ ಕಾರು ಅಪಘಾತಕ್ಕೆ ಒಳಗಾಗಿ, ಯುಕೆಯಲ್ಲಿ ಆಶ್ರಯ ಪಡೆಯಬೇಕಾಯಿತು. ಅಲ್ಲಿ ಅದನ್ನು ಕಾಪಾಡಲಾಯಿತು.  ನಾಯಿಯ ಒಂಟಿತನ ದೂರ

  ಸ್ಟೀವಿಯ ಮಾಲೀಕರು, ತುರ್ತು ಸೇವೆಗಳಲ್ಲಿ ಶಿಫ್ಟ್ ಕೆಲಸವನ್ನು ಮಾಡುತ್ತಾರೆ, ಹಾಗಾಗಿ ಮನೆಯಲ್ಲಿ ಬಹಳಷ್ಟು ಸಮಯವನ್ನು ಸ್ಟೀವಿ ಒಂಟಿಯಾಗಿಯೇ ಕಳೆಯುತ್ತಾಳೆ. ಇದೀಗ ಈ ನಾಲ್ವರು ಯುವಕರ ಸ್ನೇಹ ಸಿಕ್ಕಿದ್ದು, ಆಕೆಯ ಒಂಟಿತನವನ್ನು ದೂರ ಮಾಡಲು ಸಹಾಯವಾಗಿದೆಯಂತೆ.

  ಇದನ್ನೂ ಓದಿ: Hindu-Muslim: ಮುಸ್ಲಿಂ ಮನೆ ಅಂಗಳದಲ್ಲಿ ಹಿಂದೂ ಹುಡುಗಿ ಮದುವೆ! ಭಾವೈಕ್ಯತೆಗೆ ಸಾಕ್ಷಿಯಾದ ಕುಟುಂಬಗಳು

  ಜ್ಯಾಕ್ ಹಾಕಿರುವ, ಸ್ಟೀವಿಯ ಕುರಿತ ಈ ಪೋಸ್ಟ್‌ಗೆ ನೆಟ್ಟಿಗರು ಪ್ರಶಂಸೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಸ್ಟೀವಿ ಟಿಕ್ಸ್, ಸುಂದರವಾದ ಹೆಸರು” ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು “ನೀವು ಅದ್ಭುತವಾದ ನೆರೆಮನೆಯವರನ್ನು ಹೊಂದಿದ್ದೀರಿ..!! ಉತ್ತರ ನೀಡುವ ಎಂತಹ ಅಮೋಘ ಶೈಲಿ” ಎಂದು ಹೊಗಳಿದ್ದಾರೆ.
  Published by:Annappa Achari
  First published: