Heart attack: ಕಡಲೆಕಾಯಿಯ ಸಿಹಿ ತಿಂದಿದ್ದಕ್ಕೆ ಹೃದಯಘಾತವಾಗಿ ಸಾವನ್ನಪ್ಪಿದ 3 ಮಕ್ಕಳ ತಾಯಿ!

ಕೆಲವರಲ್ಲಿ ಅಲರ್ಜಿಯ ಪ್ರತಿಕ್ರಿಯೆ ಜಾಸ್ತಿ ಇರದೇ ಇರಬಹುದು. ಆದರೆ ಅದೆಷ್ಟೋ ಸಂದರ್ಭಗಳಲ್ಲಿ ಇದರ ಸೇವನೆಯಿಂದ ಸಾವು ಕೂಡ ಸಂಭವಿಸಬಹುದು. ಅಲರ್ಜಿಯನ್ನು ತಾತ್ಸಾರ ಮಾಡದೆ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು.

ಮೃತಪಟ್ಟ ಮಹಿಳೆ

ಮೃತಪಟ್ಟ ಮಹಿಳೆ

  • Share this:
ಇತ್ತೀಚೆಗೆ ನ್ಯೂ ಕಾಸಲ್‌ನ (Newcastle)31 ವರ್ಷದ ಮಹಿಳೆ ಹನ್ನಾ ಸಿಗಾಲಾ (Hannah Sigala) ಅವರ ನಿಧನದ ವಾರ್ತೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು. ಸಾರ್ವಜನಿಕ ವಲಯದಲ್ಲಿನ ಮಾಹಿತಿಯ ಪ್ರಕಾರ, ಈ ಘಟನೆಯು ಜನವರಿ 4 ರಂದು ಸಂಭವಿಸಿದ್ದು, ರಾತ್ರಿ ಸುಮಾರು 9:30ರ ಸುಮಾರಿಗೆ ಊಟ ಮುಗಿಸಿ ಕಡಲೆಕಾಯಿ ಡೆಸರ್ಟ್(Peanut Dessert) ತಿಂದ ನಂತರ ಇದ್ದಕ್ಕಿದ್ದಂತೆ, ಆಕೆಯ ಆರೋಗ್ಯವು ಹದಗೆಡಲು (Deteriorate) ಪ್ರಾರಂಭಿಸಿತು.

ಹೃದಯಾಘಾತ
ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣವೇ ಆಂಬ್ಯುಲೆನ್ಸ್ ಕರೆಸಲಾಯಿತು. ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಕೆ ಸಾವನ್ನಪ್ಪಿದಳು. ಹನ್ನಾ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಹೃದಯಾಘಾತಕ್ಕೊಳಗಾಗಿ ಅವರು ವಿಧಿವಶರಾದರು ಎಂದು ಅವರ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ, ಆಕೆಯ ಮೆದುಳು ಚಟುವಟಿಕೆಯ ಯಾವುದೇ ಲಕ್ಷಣಗಳನ್ನು ತೋರ್ಪಡಿಸಲಿಲ್ಲ. ಹಾಗಾಗಿ, ಹನ್ನಾಳ ಕುಟುಂಬವು ಅವಳ ಜೀವನ ಬೆಂಬಲ ವ್ಯವಸ್ಥೆಯನ್ನು ತೆಗೆಯುವ ಮೂಲಕ ಅವಳಿಗೆ ಅಂತಿಮ ವಿದಾಯ ಹೇಳಲು ನಿರ್ಧರಿಸಿತು ಎಂದು ತಿಳಿದುಬಂದಿದೆ.

ಹನ್ನಾಳ ಸಹೋದರಿ ಸ್ಟೆಫಾನಿ ಸುದ್ದಿ ಪೋರ್ಟಲ್‌ನಲ್ಲಿ ಮಾತನಾಡುತ್ತ, ಹನ್ನಾಗೆ ನಟ್ ಅಲರ್ಜಿ ಇತ್ತು ಮತ್ತು ತಮ್ಮ ಪೋಷಕರು ಪ್ರತಿ ಖಾದ್ಯದಲ್ಲಿನ ಪದಾರ್ಥಗಳನ್ನು ಸೂಕ್ಷ್ಮವಾಗಿ ಗಮನಿಸಿ ಆಕೆಗೆ ತಿನ್ನಲು ನೀಡುತ್ತಿದ್ದರು. ಆಕೆ ಕಡಲೆಕಾಯಿಯ ಡೆಸರ್ಟ್ ಅನ್ನು ಯಾಕೆ ಮಾಡಿದಳು..? ಮಾಡಿದರೂ ಯಾಕೆ ತಿಂದಳು..? ಅನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಈ ಪ್ರಶ್ನೆ ಕಡಿಮೆ ರಹಸ್ಯದಿಂದ ಕೂಡಿಲ್ಲ. ತನ್ನ ಸಹೋದರಿ ತಮ್ಮೊಂದಿಗಿಲ್ಲ ಎಂಬುವುದನ್ನು ನಂಬಲು ಕಷ್ಟವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು .

ಇದನ್ನೂ ಓದಿ: Heart attack: ಚಲಿಸುತ್ತಿದ್ದ ಬಸ್‌ನಲ್ಲಿಯೇ CPR ಚಿಕಿತ್ಸೆ ನೀಡಿ ಯುವಕನ ಜೀವ ಉಳಿಸಿದ ನರ್ಸ್..!

ಅಲರ್ಜಿಯ ತಾತ್ಸಾರ
ಹನ್ನಾ ಅವರ ಮಕ್ಕಳು ಈಗ ತಮ್ಮ ಅಜ್ಜಿಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೂ, ಅವರು ತಮ್ಮ ತಾಯಿಯನ್ನು ತುಂಬಾ ನೆನಪಿಸಿಕೊಳ್ಳುತ್ತಾರೆ. ಅಲರ್ಜಿಗಳು ಎಷ್ಟು ಅಪಾಯಕಾರಿ ಎಂದು ಅನೇಕ ಜನರಿಗೆ ತಿಳಿದಿರುವುದಿಲ್ಲ. ಕೆಲವರಲ್ಲಿ ಅಲರ್ಜಿಯ ಪ್ರತಿಕ್ರಿಯೆ ಜಾಸ್ತಿ ಇರದೇ ಇರಬಹುದು. ಆದರೆ ಅದೆಷ್ಟೋ ಸಂದರ್ಭಗಳಲ್ಲಿ ಇದರ ಸೇವನೆಯಿಂದ ಸಾವು ಕೂಡ ಸಂಭವಿಸಬಹುದು. ಅಲರ್ಜಿಯನ್ನು ತಾತ್ಸಾರ ಮಾಡದೆ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಅಸಹಾಯಕನಾದ ಅವಳ ಹಿರಿಯ ಮಗ ತನ್ನ ತಾಯಿಯ ಪೋಷಕರಿಗೆ ತ್ವರಿತವಾಗಿ ಸಂದೇಶ ಕಳುಹಿಸಿದನು, ಮತ್ತವರು ತುರ್ತು ಸೇವೆಗೆ ಕರೆ ಮಾಡಿ ಆತುರಾತುರವಾಗಿ ಮನೆಗೆ ಧಾವಿಸಿದರು. ಆ್ಯಂಬ್ಯುಲೆನ್ಸ್‌ನಲ್ಲಿ ಹೃದಯಾಘಾತಕ್ಕೆ ಒಳಗಾದ ಹನ್ನಾಳನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.

ವಿಶಿಷ್ಟ ವ್ಯಕ್ತಿ
ಹನ್ನಾಳ ನಿಸ್ವಾರ್ಥತೆಯ ಗೌರವಾರ್ಥವಾಗಿ, ಆಕೆಯ ತಾಯಿ ಹನ್ನಾಳ ಅಂಗಾಂಗಗಳನ್ನು ಇತರರ ಜೀವಗಳನ್ನು ಉಳಿಸುವ ಮಾಧ್ಯಮವಾಗಿ ದಾನ ಮಾಡಲು ನಿರ್ಧರಿಸಿದರು. ಸ್ಟೆಫನಿ ತನ್ನ ಸಹೋದರಿಯ ಮರಣವು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದು ತಿಳಿದುಕೊಳ್ಳಲು ಸಂತೋಷವಾಗುತ್ತದೆ ಎಂದು ಹೇಳಿದರು. ಜನರಿಗೆ ಸಹಾಯ ಮಾಡಲು ಆಕೆ ಯಾವಾಗಲೂ ಉತ್ಸುಕಳಾಗಿದ್ದಳು. ಹನ್ನಾ ಅಂತಹುದೊಂದು ವಿಶಿಷ್ಟ ವ್ಯಕ್ತಿ. ಹನ್ನಾಳನ್ನು ತಿಳಿದವರ ಪಾಲಿಗೆ ಆಕೆ , ಅವರು ಭೇಟಿಯಾದ ಅತ್ಯಂತ ಸ್ವತಂತ್ರ ಮನೋಭಾವದ ವ್ಯಕ್ತಿಗಳಲ್ಲಿ ಒಬ್ಬಳಾಗಿದ್ದು ಅವಳು ತನ್ನದೇ ಆದ ಸಣ್ಣ ಕ್ಲೀನಿಂಗ್ ಬ್ಯುಸಿನೆಸ್ ನಡೆಸುತ್ತಿದ್ದಳು.

ಇದನ್ನೂ ಓದಿ: Health Tips: ಪ್ರತಿನಿತ್ಯ ಮೊಸರು ಸೇವಿಸಿದ್ರೆ, ಹೃದಯಾಘಾತದಿಂದ ದೂರವಿರಬಹುದಂತೆ..!

ಉತ್ಸಾಹಭರಿತ ತಾಯಿ
ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಆಕೆಯನ್ನು ಗಂಭೀರವಾಗಿ ಪರಿಗಣಿಸುವುದು ಪ್ರೀತಿಪಾತ್ರರಿಗೆ ಕಷ್ಟಕರವಾಗಿತ್ತು. ಅವಳು ಉತ್ಸಾಹಭರಿತ ತಾಯಿ ಮತ್ತು ಶ್ರದ್ಧಾಭರಿತ ಕೆಲಸಗಾರ್ತಿಯಾಗಿದ್ದಳು. ಮತ್ತವಳ ಮಕ್ಕಳು ಆಕೆಯ ಜಗತ್ತು ಆಗಿದ್ದರು. ಬಿಲ್ಲುಗಾರಿಕೆಯಿಂದ ಹಿಡಿದು ಕಲಾ ತರಗತಿಗಳವರೆಗೆ ಹೊಸ ಅನುಭವಗಳನ್ನು ಅವರಿಗೆ ಪರಿಚಯಿಸಲು ಆಕೆ ಉತ್ಸಾಹ ತೋರಿಸುತ್ತಿದ್ದಳು. ಅವರು ತಮ್ಮ ಸ್ವಂತ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಕಂಡುಕೊಳ್ಳಬೇಕೆಂದು ಆಕೆ ಬಯಸಿದ್ದಳು ಎಂದು ಸ್ಟೆಫನಿ ಹೇಳಿದರು.
Published by:vanithasanjevani vanithasanjevani
First published: