Love Letter: 10 ರೂಪಾಯಿ ನೋಟಿನ ಮೇಲೆ ಪ್ರೇಮ ಪತ್ರ ಬರೆದ ಹುಡುಗಿ! ಆ ಹುಡುಗನಿಗೆ ತಲುಪಿತಾ ಸಂದೇಶ?

ಈ ಹುಡುಗಿ 'ವಿಶಾಲ್' (Vishal) ಎಂಬುವರಿಗೆ 10 ರೂಪಾಯಿ ನೋಟಿನಲ್ಲಿ (10 Rupees Note) ಪ್ರೇಮ ಪತ್ರ (Love Letter) ಬರೆದಿದ್ದಾಳೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಿಮ್ಮ ಫ್ರೆಂಡ್ ಹೆಸರು ವಿಶಾಲ್ ಆಗಿದ್ರೆ ಅವರನ್ನೂ ಟ್ಯಾಗ್ (Tag) ಮಾಡಬಹುದು!

10 ರೂಪಾಯಿ ನೋಟ್‌ನ ಮೇಲೆ ಬರೆದ ಪ್ರೇಮ ಪತ್ರ

10 ರೂಪಾಯಿ ನೋಟ್‌ನ ಮೇಲೆ ಬರೆದ ಪ್ರೇಮ ಪತ್ರ

 • Share this:
  ನಮ್ಮಲ್ಲಿ ಪ್ರೀತಿ (Love) ಮಾಡುವ ಹುಡುಗ (Boys) ಹುಡುಗಿಯರಿಗೆ (Girls) ಮುಖ ನೋಡಿಕೊಂಡು ಮತ್ತು ಪ್ರೇಮ ಪತ್ರದಲ್ಲಿ (Love Letter) ನಾಲ್ಕು ಅಕ್ಷರ ಬರೆದು ತಮ್ಮ ಪ್ರೇಮವನ್ನು ಹೇಳಿಕೊಳ್ಳುವುದಕ್ಕೆ ತುಂಬಾನೇ ಭಯ ಪಡುತ್ತಾರೆ. ಎಲ್ಲಿ ಅವರು ತಮ್ಮ ಪ್ರೇಮವನ್ನು ನಿರಾಕರಿಸುತ್ತಾರೆ ಅಂತ. ಆದರೆ ಈ ಬೆಟ್ಟ ಗುಡ್ಡಗಳಲ್ಲಿರುವ ದೊಡ್ಡ ದೊಡ್ಡ ಬಂಡೆಗಳ ಮೇಲೆ, ಸಮುದ್ರ ತೀರದಲ್ಲಿರುವ ಮರಳಿನ ಮೇಲೆ ಮತ್ತು ಈ ನೋಟುಗಳ (Note) ಮೇಲೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಎಂದರೆ ತುಂಬಾ ಇಷ್ಟ ಅಂತ ಕಾಣುತ್ತೆ ನೋಡಿ. ಹಣದ (Money) ನೋಟುಗಳ ಮೇಲೆ ಬರೆಯುವುದು ಕಾನೂನುಬಾಹಿರವಾಗಿದೆ. ಆದರೂ ನಮ್ಮ ಜನರು ತಮ್ಮ ಆಲೋಚನೆಗಳನ್ನು ಈ ನೋಟುಗಳ ಮೇಲೆ ಬರೆಯುವುದನ್ನು ಇನ್ನೂ ನಿಲ್ಲಿಸಿಲ್ಲ ಎಂದು ಹೇಳಬಹುದು.

  10 ರೂಪಾಯಿ ನೋಟಿನ ಮೇಲೆ ಪ್ರೇಮ ಸಂದೇಶ!

  ಇಲ್ಲಿಯೂ ಸಹ ಇಂತಹದೇ ಒಂದು ಪ್ರೇಮ ಸಂದೇಶವನ್ನು ನೋಟಿನ ಮೇಲೆ ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಬರೆದು ಕಳುಹಿಸಿದ್ದಾಳೆ. ಹೌದು.. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ 10 ರೂಪಾಯಿ ನೋಟಿನ ಮೇಲೆ ಒಂದು ಮುಖ್ಯವಾದ ಸಂದೇಶವನ್ನು ಬರೆದು ಕಳುಹಿಸಿದ್ದಾಳೆ ನೋಡಿ.

  ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

  ತನ್ನ ಮದುವೆ ನಿಶ್ಚಯವಾಗುತ್ತಿದ್ದಂತೆ ತನ್ನೊಂದಿಗೆ ಓಡಿ ಹೋಗುವಂತೆ ಪ್ರಿಯತಮೆ ತನ್ನ ಪ್ರಿಯಕರನನ್ನು ಕೇಳಿಕೊಂಡಿದ್ದಳು. ಸಂದೇಶ ಬರೆದಿರುವ ಆ ನೋಟಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ಮತ್ತು ಆನ್‌ಲೈನ್‌ನಲ್ಲಿ ಅನೇಕ ಜೋಕ್‌ಗಳನ್ನು ಸಹ ಇದು ಹುಟ್ಟುಹಾಕಿದೆ ಎಂದು ಹೇಳಬಹುದು.

  ಇದನ್ನೂ ಓದಿ: Weird Professions: ಕಾಲುಗಳ ಫೋಟೋ ಮಾರಾಟ ಮಾಡಿ ಹಣ ಸಂಪಾದಿಸುವ ಮಹಿಳೆ: ಹೀಗೂ ಒಂದು ಕೆಲಸ ಉಂಟು!

  ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪ್ರೇಮ ವಿವಾಹಗಳು ಸಾಮಾನ್ಯವೆಂದು ತೋರಬಹುದಾದರೂ, ಇದು ಪ್ರತಿಯೊಬ್ಬರೂ ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಬಹುದಾದ ಆಯ್ಕೆಯಲ್ಲ ಬಿಡಿ. ಆದ್ದರಿಂದ, ಕುಸುಮ್ ಎಂಬ ಮಹಿಳೆ ಇದೇ ರೀತಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದಾಗ, ಅವಳು ತನ್ನ ಪ್ರಿಯಕರ ವಿಶಾಲ್‌ಗೆ ತನ್ನ ರಕ್ಷಣೆಗೆ ಬರುವಂತೆ ವಿನಂತಿಯನ್ನು ಕಳುಹಿಸಿದಳು.  ಒಮ್ಮೆ ಬಾರೋ ಅಂತ ಮನವಿ ಮಾಡಿದ ಹುಡುಗಿ

  "ವಿಶಾಲ್, ನನ್ನ ಮದುವೆ ಏಪ್ರಿಲ್ 26ಕ್ಕೆ ಫಿಕ್ಸ್ ಆಗಿದೆ. ನನ್ನನ್ನು ಇಲ್ಲಿಂದ ಬೇಗನೆ ಬಂದು ಕರೆದುಕೊಂಡು ಹೋಗಿ. ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ. ನಿಮ್ಮ ಕುಸುಮ್" ಎಂದು 10 ರೂಪಾಯಿ ನೋಟಿನ ಮೇಲೆ ಬರೆಯಲಾಗಿದೆ. ಈ ನೋಟನ್ನು ಪಡೆದುಕೊಂಡ ಟ್ವಿಟ್ಟರ್‌ ಬಳಕೆದಾರರೊಬ್ಬರು ಅದನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡರು, ವಿಶಾಲ್‌ಗೆ ಈ ಸಂದೇಶ ಸಿಗುತ್ತದೆ ಎಂದು ಆಶಿಸಿದರು.

  ವಿಶಾಲ್‌ಗೆ ಟ್ಯಾಗ್ ಮಾಡುವಂತೆ ಮನವಿ!

  "ಟ್ವಿಟ್ಟರ್‌ ನಿಮ್ಮ ಶಕ್ತಿಯನ್ನು ತೋರಿಸಿ.. ಏಪ್ರಿಲ್ 26 ರೊಳಗೆ ಕುಸುಮ್‌ನ ಈ ಸಂದೇಶವನ್ನು ವಿಶಾಲ್‌ಗೆ ತಲುಪಿಸಬೇಕು. ಪ್ರೀತಿಯಲ್ಲಿರುವ ಈ ಇಬ್ಬರು ಒಂದಾಗಬೇಕು" ಎಂದು ಬಳಕೆದಾರರು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. "ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಎಂಬ ಹೆಸರಿನವರಿಗೆ ಇದನ್ನು ಟ್ಯಾಗ್ ಮಾಡಿ" ಎಂದು ಅವರು ಹೇಳಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ವಿಶಾಲ್ ಹುಡುಕಾಟ!

  ತನ್ನ ಗೆಳೆಯನನ್ನು ಹೇಗಾದರೂ ಮಾಡಿ ತಲುಪಬೇಕೆಂಬ ಆ ವಧುವಿನ ಪ್ರಯತ್ನವು ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆಯಿತು, ಅನೇಕರು ಟ್ವಿಟ್ಟರ್‌ ಬಳಕೆದಾರರನ್ನು ಅವರು ಸೆನ್ಸಾರ್ ಮಾಡಿದ ವ್ಯಕ್ತಿಯ ಉಪನಾಮವನ್ನು ಬಹಿರಂಗಪಡಿಸುವಂತೆ ವಿನಂತಿಸಿದರು. ಈಗ, ಜನರು ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ವಿಶಾಲ್ ಎಂಬ ಹೆಸರಿನ ವ್ಯಕ್ತಿಗಳನ್ನು ಟ್ಯಾಗ್ ಮಾಡುವ ಕೆಲಸವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Dream House : ಗುಜರಿ ಸೇರಿದ್ದ ಬಸ್ ನ್ನು ಕನಸಿನ ಸ್ಥಳವಾಗಿ ಬದಲಿಸಿದ; ಗೆಳತಿ ಜೊತೆ ರಜಾದಿನ ಕಳೆಯಲು ಬರ್ತಾನೆ ಯುವಕ!

  ಕೆಲವರು ತಮಾಷೆಯ ಮೀಮ್‌ಗಳೊಂದಿಗೆ ಪ್ರತಿಕ್ರಿಯಿಸಿದರೆ, ಇತರರು ಈ ರೀತಿಯ ಸಂದೇಶಗಳನ್ನು ಈ ನೋಟಿನ ಮೇಲೆ ಬರೆಯಲಾದ ಎಷ್ಟೋ ಪ್ರೇಮ ಸಂದೇಶಗಳಲ್ಲಿ ಇದು ತುಂಬಾನೇ ಕಡಿಮೆ ಪ್ರೀತಿ ಇರುವ ಸಂದೇಶವಾಗಿದೆ ಎಂದು ವ್ಯಂಗ್ಯವಾಡಿದರು. ಈ ವರ್ಷದ ಪ್ರೇಮಿಗಳ ದಿನದಂದು, ಹೆಚ್ಚಿನವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರೆ, 20 ರೂಪಾಯಿ ನೋಟಿನ ಮೇಲೆ ಯಾರೋ ಬರೆದ "ರಾಶಿ ವಿಶ್ವಾಸದ್ರೋಹಿ" ಎಂಬ ಸಂದೇಶ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
  Published by:Annappa Achari
  First published: