Boyfriend; ಗೆಳೆಯನ ಕೆಟ್ಟ ಚಾಳಿಯಿಂದ ಬೇಸತ್ತ ಯುವತಿ: ಯುವಕನ ಆ ವರ್ತನೆ ಕಂಡು ನೀವು ಶಾಕ್ ಆಗ್ತೀರಿ!
ಯುವಕನ ಈ ವರ್ತನೆ ಕಂಡು ನೀವು ಜನರು ಹೀಗೂ ಇರ್ತಾರಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೂತ್ತೀರಿ. ಸದ್ಯ ಯುವಕನ ನಡವಳಿಕೆಯಿಂದ ಬೇಸತ್ತ ಯುವತಿ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ನೆಟ್ಟಿಗರ ಸಲಹೆ ಕೇಳಿದ್ದಾಳೆ.
ಇಬ್ಬರು ಪ್ರೀತಿಯ ಸುಳಿಯಲ್ಲಿ ಸಿಲುಕಿದಾಗ, ಜೊತೆಯಾಗಿ ಬದುಕುವ ಕನಸು ಕಾಣುತ್ತಾರೆ. ಭಾರತದಲ್ಲಿ ಮದುವೆ(Marriage)ಯಾಗುವ ಮೂಲಕ ಜೋಡಿ(Couple)ಗಳು ಒಂದಾಗಿ ಬಾಳಲು ಆರಂಭಿಸುತ್ತಾರೆ. ಆದ್ರೆ ವಿದೇಶಗಳಲ್ಲಿ ಲಿವಿಂಗ್ ಟುಗೆದರ್ (Living Together) ಅಂತ ಮದುವೆ ಮುಂಚೆಯೇ ಒಂದೇ ಮನೆಯಲ್ಲಿ ಇರುತ್ತಾರೆ. ಈ ಲಿವಿಂಗ್ ಟುಗೆದರ್ ಪದ್ಧತಿ ಭಾರತದಲ್ಲಿ ಕಾಲಿಟ್ಟಿದ್ದು, ಮಹಾನಗರಗಳಲ್ಲಿ ಯುವ ಜನತೆ ಲಿವಿಂಗ್ ಟುಗೆದರ್ ನಲ್ಲಿರುವ ಬಗ್ಗೆ ಕೇಳಿರುತ್ತೇವೆ. ಲಿವಿಂಗ್ ಟುಗೆದರ್ ನಲ್ಲಿರುವ ಯುವತಿಯೊಬ್ಬಳು ತನ್ನ ಗೆಳೆಯನ ಕೆಟ್ಟ ಚಾಳಿಯ ಬಗ್ಗೆ ಬೇಸತ್ತು, ತನ್ನ ನೋವನ್ನು ಸೋಶಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾಳೆ. ಯುವಕನ ಈ ವರ್ತನೆ ಕಂಡು ನೀವು ಜನರು ಹೀಗೂ ಇರ್ತಾರಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೂತ್ತೀರಿ. ಸದ್ಯ ಯುವಕನ ನಡವಳಿಕೆಯಿಂದ ಬೇಸತ್ತ ಯುವತಿ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ನೆಟ್ಟಿಗರ ಸಲಹೆ ಕೇಳಿದ್ದಾಳೆ.
ಏನದು ಯುವಕನ ಚಾಳಿ?
ಯುವತಿ ರೆಡಿಟ್ಟ (Reditt) ಪ್ಲಾಟ್ ಫಾರಂನಲ್ಲಿ ತನ್ನ ಸಂಗಾತಿ (ಜೆರ್ರಿ) ಬಗ್ಗೆ ಬರೆದುಕೊಂಡಿದ್ದಾಳೆ.ಆದ್ರೆ ಯುವತಿ ತನ್ನ ಹೆಸರನ್ನು ಹೇಳಿಕೊಂಡಿಲ್ಲ ಮತ್ತು ಗೆಳೆಯ ಎಲ್ಲಿಯವನು ಎಂಬ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಗೆಳೆಯ ಜೆರ್ರಿಯ ವರ್ತನೆಯಿಂದ ನೊಂದಿರುವ ಯುವತಿ, ನಾನು ಮನೆಯಲ್ಲಿಯೇ ಅಡುಗೆ ಮಡೋದನ್ನು ನಿಲ್ಲಿಸಿದ್ದೇನೆ. ಹೋಟೆಲ್ (Hotel) ನಿಂದ ಊಟ (Meal) ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. ಜೆರ್ರಿ ಓರ್ವ ಶೆಫ್ (ಬಾಣಸಿಗ) ಮತ್ತು ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಗೆಳತಿ ಯಾವುದೇ ಆಹಾರ ಸಿದ್ಧಪಡಿಸಿದ್ರೂ ಅದನ್ನು ವಿಶ್ಲೇಷಿಸಿ, ಅಂಕಗಳನ್ನು ನೀಡುತ್ತಾನೆ. ಈ ರೀತಿಯ ವರ್ತನೆಯಿಂದ ನನಗೆ ನೋವು ಆಗುತ್ತೆ. ಪ್ರೀತಿಯಿಂದ ಮಾಡಿದ ಅಡುಗೆ ಕಡಿಮೆ ಅಂಕಗಳನ್ನು ನೀಡಿ ಅದರ ಗುಣಮಟ್ಟ ಮತ್ತು ರುಚಿಯನ್ನು ಅಳೆಯುತ್ತಾನೆ. ಹಾಗಾಗಿ ಮನೆಯಲ್ಲಿ ಅಡುಗೆ ಮಾಡೋದನ್ನು ಬಂದ್ ಮಾಡಲಾಗಿದೆ.
ಮನೆಗಳ ಬಂದ ಅತಿಥಿಗಳ ಮುಂದೆಯೂ ಅಡುಗೆಗೆ ಹೆಸರಿಟ್ಟು, ಸ್ಕೋರ್ ನೀಡುವ ಮೂಲಕ ನನ್ನನ್ನು ಮುಜುಗರಕ್ಕೀಡು ಮಾಡುತ್ತಾನೆ. ಒಂದು ದಿನ ಮನೆಗೆ ನನ್ನ ಅಪ್ಪ-ಅಮ್ಮ ಬಂದಿದ್ದರು. ಮೊದಲಿಗೆ ಅವರ ಜೊತೆ ಚೆನ್ನಾಗಿ ಮಾತನಾಡುತ್ತಾ ಜೆರ್ರಿ ಕುಳಿತಿದ್ದನು. ಅಪ್ಪ ಮತ್ತು ಅಮ್ಮ ಬಂದಿದ್ದರಿಂದ ಅವರಿಗೆ ಇಷ್ಟವಾದ ಅಡುಗೆ ಸಿದ್ಧಪಡಿಸಿದ್ದೆ. ಊಟ ಮಾಡುವ ವೇಳೆಯೂ ಪ್ರತಿ ಖಾದ್ಯಕ್ಕೂ ಜೆರ್ರಿ ಟಿಪ್ಪಣಿ ನೀಡುತ್ತಿದ್ದನು. ಊಟ ಮುಗಿದ ಬಳಿಕ ಸುಮ್ಮನಾಗದ ಜೆರ್ರಿ ನಾನು ಪ್ರೀತಿಯಿಂದ ಮಾಡಿದ ಅಡುಗೆಗೆ 7/10 ಅಂಕ ನೀಡಿದನು. ಇಷ್ಟಕ್ಕೆ ಸುಮ್ಮನಾಗದ ಜೆರ್ರಿ ಪ್ರತಿ ಖಾದ್ಯಕ್ಕೂ ಪ್ರತ್ಯೇಕ ಸ್ಕೋರ್ ನೀಡುವ ಮೂಲಕ ಪೋಷಕರ ಮುಂದೆ ನನ್ನನ್ನು ಅವಮಾನಿಸಿದನು. ಅಂದು ನಾನು ತೀವ್ರ ಮುಜುಗರಕ್ಕೊಳಗಾದೆ ಎಂದು ಯುವತಿ ಬರೆದುಕೊಂಡಿದ್ದಾಳೆ.
ಯುವತಿಯ ಪೋಸ್ಟ್ ನೀಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ನಿಮ್ಮ ಸಂಗಾತಿ ಓರ್ವ ಬಾಣಸಿಗನಾಗಿದ್ದರಿಂದ ಮನೆಯಲ್ಲಿಯೂ ಆತನಿಂದಲೇ ಅಡುಗೆ ಮಾಡಿಸಿ. ನೀವು ಅದಕ್ಕೆ ಸ್ಕೋರ್ ನೀಡಿ ಎಂದು ಹೇಳಿದ್ದಾರೆ. ಸ್ನೇಹಿತರು ಅಥವಾ ಕುಟುಂಬಸ್ಥರ ಜೊತೆ ಚರ್ಚಿಸಿ ವಾಸ್ತವ ಸ್ಥಿತಿಯನ್ನು ಆತನಿಗೆ ಅರಿವು ಮಾಡಿಸಿ ಎಂದು ಹೇಳಿದ್ದಾರೆ. ಮನೆಯ ಅಡುಗೆಗೆ ಸ್ಕೋರ್ ನೀಡುವುದು ತಪ್ಪು ಎಂದು ಕೆಲ ಮಹಿಳೆಯರು ಕಮೆಂಟ್ ಮಾಡಿದ್ದಾರೆ. ಸದ್ಯ ಯುವತಿಯ ಪೋಸ್ಟ್ ಗೆ ಬಗೆ ಬಗೆ ಕಮೆಂಟ್ ಗಳು ಬರುತ್ತಿವೆ. ರೆಡಿಫ್ ವೇದಿಕೆ ಮೂಲಕ ಹಲವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡು ಕೊಳ್ಳುತ್ತಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ