• Home
  • »
  • News
  • »
  • trend
  • »
  • Bitcoin: ಶಿಕ್ಷಣ ಮುಗಿಸಿ ಕ್ರಿಪ್ಟೋ ಉದ್ಯಮದಲ್ಲಿ ತೊಡಗಿಕೊಂಡ ಸೈನಿ! ಚಹಾದ ಅಂಗಡಿಯಿಂದ ಆರಂಭವಾದ ಉದ್ಯಮವಿದು

Bitcoin: ಶಿಕ್ಷಣ ಮುಗಿಸಿ ಕ್ರಿಪ್ಟೋ ಉದ್ಯಮದಲ್ಲಿ ತೊಡಗಿಕೊಂಡ ಸೈನಿ! ಚಹಾದ ಅಂಗಡಿಯಿಂದ ಆರಂಭವಾದ ಉದ್ಯಮವಿದು

22 ವರ್ಷದ ಶುಭಂ ಸೈನಿ, ಬೆಂಗಳೂರು ಮೂಲದ ಚಹಾ ಅಂಗಡಿಯವನು ಕ್ರಿಪ್ಟೋ ಪಾವತಿಯಾಗಿ ಸ್ವೀಕರಿಸಿದ್ದಾರೆ.

22 ವರ್ಷದ ಶುಭಂ ಸೈನಿ, ಬೆಂಗಳೂರು ಮೂಲದ ಚಹಾ ಅಂಗಡಿಯವನು ಕ್ರಿಪ್ಟೋ ಪಾವತಿಯಾಗಿ ಸ್ವೀಕರಿಸಿದ್ದಾರೆ.

After riches to rags story : ಸಣ್ಣ ಅಪಾಯವನ್ನು ಸವಾಲಾಗಿ ಸ್ವೀಕರಿಸುವವರು ಇಂದು ಉದ್ಯಮದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಹೌದು ವ್ಯಾಪಾರದಲ್ಲಿ (Business) ಏರಿಳಿತಗಳು, ಅಪಾಯಗಳು ಇದ್ದೇ ಇರುತ್ತದೆ, ಆದರೆ ಆ ಅಪಾಯವನ್ನು ಸವಾಲಾಗಿ ಸ್ವೀಕರಿಸುವ ಛಲ ನಮ್ಮಲ್ಲಿರಬೇಕು ಎಂಬುದು ಚಹಾ ಮಾರುವ ಶುಭಂ ಸೈನಿಯ (Shubha Saini) ಮಾತಾಗಿದೆ.

ಮುಂದೆ ಓದಿ ...
  • Share this:

ಜೀವನವೆಂಬೆದು ನಿಜಕ್ಕೂ ಯಾರಿಗೂ ಊಹಿಸಲೂ ಸಾಧ್ಯವಿಲ್ಲ. ಹಲವಾರು ಏರಿಳಿತಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತವೆ. ಕೆಲವೊಮ್ಮೆ ಇವು ನಕರಾತ್ಮಕವಾಗಿರಬಹುದು ಇನ್ನು ಕೆಲವೊಮ್ಮೆ ಸಕರಾತ್ಮಕವಾಗಿರಬಹುದು. ಹಾಗಾಗಿ 'ಏನೇ ಬಂದರು ಕುಗ್ಗದೇ, ಹಿಗ್ಗದೇ ಮುನ್ನಡೆ' ಎಂದು ನಮ್ಮ ಹಿರಿಯರು ಹೇಳಿಕೊಟ್ಟ ಪಾಠಗಳಿವು.  ಹೀಗೆ ಜೀವನದ ತಿರುವನ್ನೇ ಬದಲಾಯಿಸುವ ಸಣ್ಣ ಅಪಾಯವನ್ನು ಸವಾಲಾಗಿ ಸ್ವೀಕರಿಸುವವರು ಇಂದು ಉದ್ಯಮದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಹೌದು ವ್ಯಾಪಾರದಲ್ಲಿ (Business) ಏರಿಳಿತಗಳು, ಅಪಾಯಗಳು ಇದ್ದೇ ಇರುತ್ತದೆ, ಆದರೆ ಆ ಅಪಾಯವನ್ನು ಸವಾಲಾಗಿ ಸ್ವೀಕರಿಸುವ ಛಲ ನಮ್ಮಲ್ಲಿರಬೇಕು ಎಂಬುದು ಚಹಾ ಮಾರುವ ಶುಭಂ ಸೈನಿಯ (Shubha Saini) ಮಾತಾಗಿದೆ.


ಚಹಾ ಉದ್ಯಮದಲ್ಲಿ ಆದಾಯ


ಇವರ ಚಹಾ ಮಾರಾಟದಲ್ಲಿ ವಿಶೇಷತೆ ಏನಿದೆ? ಎಂದು ನೋಡುವುದಾದರೆ ಇವರು ತಮ್ಮ ಚಹಾದಂಗಡಿಯಲ್ಲಿ ಪಾವತಿಯಾಗಿ ಬಿಟ್‌ಕಾಯಿನ್ ಅನ್ನು ಸ್ವೀಕರಿಸುತ್ತಾರೆ ಎಂಬುದಾಗಿದೆ.


ಗ್ರಾಹಕರಿಂದ ಬಿಟ್‌ಕಾಯಿನ್ ಸ್ವೀಕರಿಸುವ ಶುಭಂ


ಗ್ರಾಹಕರಿಂದ ಪಾವತಿಯಾಗಿ ಬಿಟ್‌ಕಾಯಿನ್ ಸ್ವೀಕರಿಸುವ ಬೆಂಗಳೂರಿನ ಟೀ ಸ್ಟಾಲ್ ಇದೀಗ ಸುದ್ದಿಮಾಡುತ್ತಿದೆ. ರೂ 30,000 ಆರಂಭಿಕ ಬಂಡವಾಳದೊಂದಿಗೆ ದಿ ಫ್ರಸ್ಟ್ರೇಟೆಡ್ ಡ್ರಾಪ್ ಔಟ್ ಎಂಬ ಹೆಸರಿನ ಟೀ ಸ್ಟಾಲ್ 22 ರ ಹರೆಯದ ಶುಭಂ ಸೈನಿ ಆರಂಭಿಸಿದರು.


ಕೆಲವು ಗ್ರಾಹಕರು ಕ್ರಿಪ್ಟೋ ಕರೆಯನ್ಸಿಯ ಮೂಲಕ ಪಾವತಿ ಮಾಡಲು ಮುಂದಾದಾಗ ತಾನು ಕೂಡ ನಿಧಾನವಾಗಿ ಬಿಟ್‌ಕಾಯಿನ್ ಅನ್ನು ಪಾವತಿ ವಿಧಾನವಾಗಿ ಸ್ವೀಕರಿಸಲು ಪ್ರಾರಂಭಿಸಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಗೂಗಲ್​ನಿಂದ ಹೊಸ ಫೀಚರ್​, ಸರ್ಚ್ ಪೇಜ್​ನಿಂದಲೇ ಟ್ರೈನ್​ ಟಿಕೆಟ್ ಬುಕ್​ ಮಾಡ್ಬಹುದು!


ಶಿಕ್ಷಣ ಮುಗಿಸಿ ಕ್ರಿಪ್ಟೋ ಉದ್ಯಮದಲ್ಲಿ ತೊಡಗಿಕೊಂಡ ಸೈನಿ


ಉದ್ಯೋಗಾವಕಾಶಗಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಸೈನಿ ಅವರಿಗೆ ಕ್ರಿಪ್ಟೋ ಮಾರುಕಟ್ಟೆ ವ್ಯಾಪಾರದ ಪರಿಚಯವಾಯಿತು. ಶೀಘ್ರದಲ್ಲೇ ವ್ಯಾಪಾರದ ತಂತ್ರಗಳನ್ನು ಅರಿತುಕೊಂಡ ಸೈನಿ ಸಾಮಾನ್ಯ ಜೀವನದಿಂದ ಅದ್ಧೂರಿ ಜೀವನಕ್ಕೆ ಕಾಲಿಟ್ಟಿದ್ದು ಇದೇ ಕ್ರಿಪ್ಟೋ ವ್ಯವಹಾರದಿಂದ ಎಂದು ತಿಳಿಸಿದ್ದಾರೆ.


ಕ್ರಿಪ್ಟೋದಲ್ಲಿ ರೂ 1.5 ಲಕ್ಷ ಹೂಡಿಕೆ ಮಾಡಿರುವ ಸೈನಿ, 1000% ದಷ್ಟು ಏರಿಕೆಯನ್ನು ಕಂಡುಕೊಂಡರು ಹಾಗೂ ಈ ಸಮಯದಲ್ಲಿ ಸೈನಿಯವರ ಕ್ರಿಪ್ಟೋ ವ್ಯಾಲೆಟ್ ರೂ 30 ಲಕ್ಷಕ್ಕೆ ಏರಿತು. ಒಟ್ಟಾರೆ ವೈಭವೋಪೇತ ಜೀವನವನ್ನು ಆರಂಭಿಸಿದರು ಹಾಗೂ ಪೂರ್ತಿಯಾಗಿ ಕ್ರಿಪ್ಟೋ ಉದ್ಯಮದಲ್ಲಿ ತೊಡಗಿಕೊಳ್ಳಲು ಇಂದಿರಾಗಾಂಧಿ ವಿಶ್ವವಿದ್ಯಾನಿಲಯ, ರೇವಾರಿಯ ಹಳೆಯ ವಿದ್ಯಾರ್ಥಿಯಾದ ಶುಭಂ ತನ್ನ BCA ಅಂತಿಮ ಸೆಮಿಸ್ಟರ್‌ ಓದಿಗೆ ತಿಲಾಂಜಲಿ ಇಟ್ಟರು.


ಇದನ್ನೂ ಓದಿ: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


ಕುಸಿತ ಕಂಡ ಕ್ರಿಪ್ಟೋ ಮಾರುಕಟ್ಟೆ


ಆದರೆ ಏಪ್ರಿಲ್ 2021 ರಲ್ಲಿ ಕ್ರಿಪ್ಟೋ ಮಾರುಕಟ್ಟೆಯು ಕುಸಿತಕ್ಕೊಳಗಾದಾಗ ಸೈನಿ ಲೆಕ್ಕಾಚಾರ ತಲೆಕೆಳಗಾಯಿತು. ಸೈನಿಯ ಕ್ರಿಪ್ಟೊ ಪೋರ್ಟ್‌ಫೊಲಿಯೊ ಕೂಡ 90% ಕ್ಕೆ ಕುಸಿದಾಗ ವಿಷಯಗಳು ನಕಾರಾತ್ಮಕ ಪರಿಣಾಮಕ್ಕೊಳಗಾದವು.


ಪೋಷಕರಿಂದ ಅರ್ಥಿಕ ನೆರವನ್ನು ಪಡೆಯಲು ಬಯಸದ ಸೈನಿ ಬೆಂಗಳೂರಿನ ಪಾದಾಚಾರಿ ರಸ್ತೆಯಲ್ಲಿಯೇ ಚಹಾ ಅಂಗಡಿಯನ್ನು ಪ್ರಾರಂಭಿಸಲು ನಿರ್ಧರಿಸಿದನು. ಇವರ ಚಹಾ ಅಂಗಡಿಗೆ ಬರುತ್ತಿದ್ದ ಗ್ರಾಹಕರು ಬಿಟ್‌ಕಾಯಿನ್ ಮೂಲಕ ಪಾವತಿಸಲು ಪ್ರಯತ್ನಿಸಿದಾಗ ಆಶ್ಚರ್ಯಚಕಿತರಾದ ಸೈನಿ ನಿಧಾನಕ್ಕೆ ತಮ್ಮ ಚಹಾದಂಗಡಿಯಲ್ಲಿ ಕೂಡ ಕ್ರಿಪ್ಟೋವನ್ನು ಪರಿಚಯಿಸಿದರು.
ಕ್ರಿಪ್ಟೋ ಉತ್ಸಾಹಿಗಳಿಗೆ ಚಹಾದಂಗಡಿ ಮೆಚ್ಚಿನ ತಾಣ


22 ರ ಹರೆಯದ ಸೈನಿಯ ದೆಸೆಯನ್ನು ಚಹಾ ಅಂಗಡಿ ಬದಲಾಯಿಸಿತು. ಚಹಾದಂತಹ ಸರಳ ಉದ್ಯಮದಲ್ಲಿ ಕೂಡ ಕ್ರಿಪ್ಟೋವನ್ನು ಬಳಸುವಷ್ಟು ಈ ಬಿಟ್‌ಕಾಯಿನ್ ಕ್ರಾಂತಿಯನ್ನುಂಟು ಮಾಡಿದೆ ಎಂಬುದು ಸೈನಿಯ ಅಭಿಪ್ರಾಯವಾಗಿದೆ.


ವಾರದಲ್ಲಿ ಸರಾಸರಿ 20 ಹೊಸ ಗ್ರಾಹಕರು ಕ್ರಿಪ್ಟೋ ಕರೆನ್ಸಿಯನ್ನು ಚಹಾಗೆ ಪಾವತಿಸಲು ಬಳಸುತ್ತಿದ್ದಾರೆ ಎಂಬುದು ಸೈನಿ ಮಾತಾಗಿದೆ. ಸ್ಟಾಲ್ ಈಗ ಕ್ರಿಪ್ಟೋ ಉತ್ಸಾಹಿಗಳಿಗೆ ಜನಪ್ರಿಯ ಆನಂದದಾಯಕ ತಾಣವಾಗಿದೆ ಎಂಬುದು ಸೈನಿ ಅವರ ಮಾತಾಗಿದೆ.


ಕ್ರಿಪ್ಟೋ ಪ್ಲ್ಯಾಟ್‌ಫಾರ್ಮ್ ಪ್ಯಾಕ್ಸ್‌ಫುಲ್


ಕ್ರಿಪ್ಟೋ ಪ್ಲ್ಯಾಟ್‌ಫಾರ್ಮ್ ಪ್ಯಾಕ್ಸ್‌ಫುಲ್ ಮೂಲಕ ಕ್ರಿಪ್ಟೋ ಪಾವತಿಗಳನ್ನು ಮಾಡಲಾಗುತ್ತದೆ. ಟೀ ಸ್ಟಾಲ್‌ನಲ್ಲಿ ಡಾಲರ್ ದರಕ್ಕೆ ನವೀಕರಿಸಿರುವ ರೂಪಾಯಿ ತೋರಿಸುವ ಫಲಕವನ್ನು ಇರಿಸಲಾಗಿದೆ. ಪಾವತಿ ಮಾಡಲು ಬಯಸುವ ಗ್ರಾಹಕನು ಯುಪಿಐ ನ ಹಾಗೆಯೇ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು ಹಾಗೂ ಪಾವತಿಸುವಾಗ ರೂಪಾಯಿಯನ್ನು ಡಾಲರ್‌ಗೆ ಪರಿವರ್ತಿಸಬೇಕು ಹಾಗೂ ಪಾವತಿಯನ್ನು ಕ್ರಿಪ್ಟೋಗಳಲ್ಲಿ ಮಾಡಬೇಕು ಎಂದು ಸೈನಿ ತಿಳಿಸಿದ್ದಾರೆ.

First published: