• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • First Night Video: ಲೈಕ್ಸ್​​ಗಾಗಿ ಫಸ್ಟ್​ ನೈಟ್​​ ವಿಡಿಯೋ ಇನ್​​ಸ್ಟಾದಲ್ಲಿ ಶೇರ್​ ಮಾಡಿದ ದಂಪತಿ; ಮುಂದೇನಾಯ್ತು?

First Night Video: ಲೈಕ್ಸ್​​ಗಾಗಿ ಫಸ್ಟ್​ ನೈಟ್​​ ವಿಡಿಯೋ ಇನ್​​ಸ್ಟಾದಲ್ಲಿ ಶೇರ್​ ಮಾಡಿದ ದಂಪತಿ; ಮುಂದೇನಾಯ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ ತಮ್ಮ ಮೊದಲ ರಾತ್ರಿ ಹೇಗೆ ನಡೆಯಿತು ಎಂದು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಫಸ್ಟ್​ ನೈಟ್​​ ನಾವು ಹೇಗೆ ಕಳೆದಿದ್ದೆವೆ ಎಂದು ಹಣೆಬರಹ ನೀಡಿ ಇನ್​​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ.

  • Share this:

ಇತ್ತೀಚಿನ ದಿನಗಳಲ್ಲಿ ಸೋಶಿಯಲ್​ ಮೀಡಿಯಾ (Social Media ) ಬಳಕೆ ಮಿತಿಮೀರುತ್ತಿದೆ. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರೂ ಆನ್​​ಲೈನ್​​ (Online) ಪೋರ್ಟಲ್​​ಗಳಲ್ಲಿ ಗಂಟೆಗಳ ಕಾಲ ತಮ್ಮ ಅಮೂಲ್ಯ ಸಮಯ (Valuable Time) ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಪುಣ್ಯ ಎಂಬಂತೆ ಹಲವರು ತಮ್ಮ ಪ್ರತಿಭೆಯನ್ನು (Talent) ಪ್ರಪಂಚದ ಮುಂದಿಟ್ಟು ಫೇಮಸ್ ಆಗುತ್ತಿದ್ದಾರೆ.  ಆದರೆ, ಕೆಲವರು ಮಾತ್ರ ಅಸಭ್ಯವಾಗಿ ವಿಡಿಯೋಗಳನ್ನು (Video) ಶೇರ್​  ಮಾಡುತ್ತಿದ್ದಾರೆ. ಎಕ್ಸ್​ ಪೋಸಿಂಗ್​​ ವಿಡಿಯೋಗಳನ್ನು ಮಾಡುವುದನ್ನೇ ಕೆಲವರು ಟ್ಯಾಲೆಂಟ್​ ಅಂದುಕೊಳ್ಳುತ್ತಿದ್ದಾರೆ. ಯಾವಾಗ ಯಾವ ವಿಡಿಯೋ ವೈರಲ್ (Video Viral)​ ಆಗುತ್ತೋ, ಯಾರು ಏಕಾಏಕಿ ಸೆಲೆಬ್ರೆಟಿಗಳಾಗುತ್ತಾರೋ (Celebrities) ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ.


ಕಟೆಂಟ್​​ ಇಲ್ಲದ ವಿಡಿಯೋಗಳು ಸಖತ್ ವೈರಲ್​


ಸೋಶಿಯಲ್​ ಮೀಡಿಯಾದಲ್ಲಿ ಯಾವುದೇ ಕಂಟೆಂಟ್​ ಇಲ್ಲದ ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ಕೆಲವರಂತು ಲೈಕ್​, ಕಾಮೆಂಟ್​​ಗಳಿಗಾಗಿ ಶೇರ್​ ಮಾಡಬಾರದ ವಿಡಿಯೋಗಳನ್ನು ಶೇರ್​ ಮಾಡುತ್ತಿದ್ದಾರೆ.


ಬೆಡ್​ ರೂಮ್​, ಬಾತ್​ ರೂಮ್​​ ಎನ್ನದೆ ತಮ್ಮ ಖಾಸಗಿ ಬದುಕಿನ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಸದ್ಯ ಈ ಹುಚ್ಚುತನ ಮತ್ತೊಂದು ಹಂತಕ್ಕೆ ಹೋಗಿದ್ದು, ಲೈಕ್​ಗಳಿಗಾಗಿ ದಂಪತಿಗಳ ಮೊದಲ ರಾತ್ರಿಯ ವಿಡಿಯೋವನ್ನು ಶೇರ್​ ಮಾಡುವ ಹಂತಕ್ಕೆ ಬಂದಿದ್ದಾರೆ.




ಇದನ್ನೂ ಓದಿ: Udupi: ಮದುವೆ ಆದ್ಮೇಲೆ ಹನಿಮೂನ್ ಅಲ್ಲ, ಸ್ವಚ್ಛ ಭಾರತ ಮಾಡಿದ ದಂಪತಿ!


ತಮ್ಮ ಮೊದಲ ರಾತ್ರಿ ಹೇಗೆ ನಡೆಯಿತು ಅಂತ ವಿಡಿಯೋ ಶೇರ್​!


ಇನ್​​ಸ್ಟಾಗ್ರಾಮ್​ನಲ್ಲಿ ಸದ್ಯ ಯುವ ಜೋಡಿಯೊಂದು ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ದಂಪತಿ ವಿರುದ್ಧ ಫೈರ್ ಆಗಿದ್ದಾರೆ. ನಿಮ್ಮ ಹುಚ್ಚು ಮಿತಿಮೀರಿದೆ ಎಂದು ಹಲವರು ಕಾಮೆಂಟ್​ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.


ಕ್ಯಾಮೆರಾ ಎದುರು ದಂಪತಿಗಳ ರೊಮ್ಯಾನ್ಸ್ ಶುರು


ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ ತಮ್ಮ ಮೊದಲ ರಾತ್ರಿ ಹೇಗೆ ನಡೆಯಿತು ಎಂದು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಫಸ್ಟ್​ ನೈಟ್ ಸಮಯವನ್ನು ​ನಾವು ಹೇಗೆ ಕಳೆದಿದ್ದೆವೆ ಎಂದು ಹಣೆಬರಹ ನೀಡಿ ಇನ್​​ಸ್ಟಾದಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ದಂಪತಿಗಳು ಪ್ರಸ್ತದ ರೂಮ್​ನಲ್ಲಿ ಇರುವುದು ಕಾಣುತ್ತದೆ. ಪತ್ನಿ ಸಿಂಗಾರ ಮಾಡಿಕೊಂಡಿದ್ದ ಆಭರಣಗಳನ್ನು ಪತಿ ಒಂದೊಂದಾಗಿ ತೆಗೆದಿಟ್ಟು, ಕ್ಯಾಮೆರಾ ಎದುರು ಕಿಸ್ ಮಾಡುತ್ತಾ ಉತ್ಸುಕರಾಗಿ ರೊಮ್ಯಾನ್ಸ್ ಶುರು ಮಾಡಿದ್ದಾರೆ.


ಇದನ್ನೂ ಓದಿ: Nikhil Kumaraswamy: ನಿನ್ನೆ ಸಿದ್ದರಾಮಯ್ಯಗೆ ದೇಣಿಗೆ, ಇಂದು ನಿಖಿಲ್‌ ಕುಮಾರಸ್ವಾಮಿಗೆ ದೇಣಿಗೆ! ಕೋಲಾರದಲ್ಲಿ 5 ಸಾವಿರ ರೂಪಾಯಿ ಕೊಟ್ಟ ಪುಟ್ಟ ಬಾಲಕಿಯರು




ಯುವ ದಂಪತಿಗೆ ನೆಟ್ಟಿಗರ ಕ್ಲಾಸ್​


ನಿದ್ರೆ ಮತ್ತಿನಲ್ಲಿದ್ದ ವೇಳೆ ನನ್ನ ಪತಿ ಈ ರೀತಿ ಸಹಾಯ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿ ನವವಧು ವಿಡಿಯೋ ಶೇರ್​ ಮಾಡಿದ್ದಾಳೆ. ಆದರೆ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ದಂಪತಿಗಳ ವಿರುದ್ಧ ಫೈರ್ ಆಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ರಹಸ್ಯವಾಗಿ ನಡೆಯಬೇಕಿರುವುದನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದೀರಿ.


ಸಾಮಾಜಿಕ ಜಾಲತಾಣದಲ್ಲಿ ಯಾವುದನ್ನು ಶೇರ್ ಮಾಡ್ಬೇಕು, ಯಾವುದನ್ನು ಮಾಡಬಾರದು ಅಂತ ಕನಿಷ್ಠ ಪ್ರಜ್ಞೆ ಇಲ್ಲವೇ? ಇಂತಹ ವಿಡಿಯೋಗಳನ್ನು ಶೇರ್​ ಮಾಡುವುದರಿಂದ ಆಗುವ ಪ್ರಯೋಜನವಾದರು ಏನು ಎಂದು ಹಲವು ಕಾಮೆಂಟ್ ಮಾಡಿ ಪ್ರಶ್ನಿಸಿದ್ದಾರೆ.

Published by:Sumanth SN
First published: