Viral News: 80 ಕಿಮೀ ಆಳದ ನದಿಯಲ್ಲಿ ಮುಳುಗಿದ್ದ ಗೂಳಿ ಬದುಕಿ ಬಂದಿದ್ದೇ ರೋಚಕ!

Young Bull: ಹೌದು, ಇದಕ್ಕೆ ಪವಾಡ ಅನ್ನದೇ ಇನ್ನೇನು ಹೇಳಲು ಸಾಧ್ಯ. ಆಯಸ್ಸು ಗಟ್ಟಿಯಾಗಿದ್ದರೆ ಎಂಥ ಕಠಿಣ ಸವಾಲನ್ನಾದರೂ ಎದುರಿಸಿ ಬರುತ್ತೇವೆ ಅನ್ನೋದಕ್ಕೆ ಈ ಚಿಕ್ಕ ವಯಸ್ಸಿನ ಗೂಳಿಯೇ ಸಾಕ್ಷಿ. ಪ್ರವಾಹದಲ್ಲಿ ಸಿಲುಕಿದ ಹಿಯರ್‌ಫೋರ್ಡ್‌ ಬುಲ್ ಹೆಸರಿನ ಗೂಳಿಯು ನದಿಯಲ್ಲಿ ಹಲವಾರು ಗಂಟೆಗಳ ಕಾಲ 80 ಕಿಲೋಮೀಟರ್ ಆಳದಲ್ಲಿ ಮುಳುಗಿದ್ದರೂ ಸಹ ಮತ್ತೆ ಬದುಕಿ ಮೇಲೆ ಬಂದಿದೆ.

ಪ್ರವಾಹದಿಂದ ಬದುಕುಳಿದ ಯಂಗ್ ಬುಲ್

ಪ್ರವಾಹದಿಂದ ಬದುಕುಳಿದ ಯಂಗ್ ಬುಲ್

  • Share this:
ಪ್ರವಾಹ (Floods) ಸಂದರ್ಭದಲ್ಲಿ ನದಿಯಲ್ಲಿ ಮುಳುಗಿದ ಪುಟ್ಟ ಪ್ರಾಣಿಯೊಂದು (Animal)  ಪವಾಡ ಸದೃಶ್ಯ ಬದುಕಿ ಬಂದಿದೆ. ಮನುಷ್ಯರಾಗಲಿ, ಪ್ರಾಣಿಗಳಾಗಲಿ ಯಾರೇ ಆದರೂ ನದಿಯ (River) ಆಳಕ್ಕೆ ಮುಳುಗಿ ಅಲ್ಲಿಯೇ ಗಂಟೆಗಳ ಕಾಲ ಇದ್ದು ಬದುಕಿ ಬರುವುದು ಅಸಾಧ್ಯದ ಮಾತೇ ಬಿಡಿ. ಅದರಲ್ಲೂ ಪ್ರವಾಹದ ಸುಳಿಯ ನದಿಯಲ್ಲಿ ಮುಳುಗಿದರೆ ಬದುಕುವ ಪ್ರಶ್ನೆಯೇ ಇಲ್ಲ. ಹಾಗೊಮ್ಮೆ ಬದುಕಿ ಬರಬೇಕಾದರೆ ಪವಾಡವೇ (Magic) ನಡೆಯಬೇಕು. ಆದರೆ ಇಲ್ಲೊಂದು ಪುಟ್ಟ ಜೀವದ ವಿಚಾರದಲ್ಲಿ ಆ ಪವಾಡ ನಡೆದೇ ಹೋಗಿದೆ. ಸತತ ಹಲವಾರು ಗಂಟೆಗಳ ಕಾಲ ನೀರಿನ ಆಳದಲ್ಲಿ ಮುಳುಗಿ ಜೀವನ್ಮರಣದ ಜೊತೆ ಹೋರಾಡಿ ಕೊನೆಗೆ ಬದುಕುಳಿದು ಈ ಪ್ರಾಣಿ ಮೇಲಕ್ಕೆ ಬಂದಿದೆ.

ಹೌದು, ಇದಕ್ಕೆ ಪವಾಡ ಅನ್ನದೇ ಇನ್ನೇನು ಹೇಳಲು ಸಾಧ್ಯ. ಆಯಸ್ಸು ಗಟ್ಟಿಯಾಗಿದ್ದರೆ ಎಂಥ ಕಠಿಣ ಸವಾಲನ್ನಾದರೂ ಎದುರಿಸಿ ಬರುತ್ತೇವೆ ಅನ್ನೋದಕ್ಕೆ ಈ ಚಿಕ್ಕ ವಯಸ್ಸಿನ ಗೂಳಿಯೇ ಸಾಕ್ಷಿ. ಪ್ರವಾಹದಲ್ಲಿ ಸಿಲುಕಿದ ಹಿಯರ್‌ಫೋರ್ಡ್‌ ಬುಲ್ (Hereford bull) ಹೆಸರಿನ ಗೂಳಿಯು ನದಿಯಲ್ಲಿ ಹಲವಾರು ಗಂಟೆಗಳ ಕಾಲ 80 ಕಿಲೋಮೀಟರ್ ಆಳದಲ್ಲಿ ಮುಳುಗಿದ್ದರೂ ಸಹ ಮತ್ತೆ ಬದುಕಿ ಮೇಲೆ ಬಂದಿದೆ. ಪ್ರವಾಹದ ಹೊಡೆತದಿಂದ ಗೋವು ಬದುಕುಳಿದಿದ್ದು, ಇದೀಗ ಅಲ್ಲಿ ದಂತಕಥೆಯಾಗಿ ಬಿಂಬಿತವಾಗಿದೆ.

ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಬುಲ್ಲರ್ ಪ್ರವಾಹದ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಗೂಳಿಯೊಂದು 80 ಕಿ.ಮೀ. ನದಿಯ ಕೆಳಗೆ ಮುಳುಗಿ ಹೋಗಿತ್ತು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಈ ಪ್ರಾಣಿಯು ಮಾರುಯಾ ಜಲಪಾತದ ಮೇಲಿರುವ ಗದ್ದೆಯಿಂದ ಕೊಚ್ಚಿಕೊಂಡು ಬಂದು ಮತ್ತು ಭಾರಿ ಪ್ರವಾಹದ ರಭಸಕ್ಕೆ 80 ಕಿ.ಮೀ ನದಿಯ ಆಳಕ್ಕೆ ಹೋಗಿತ್ತು ಎನ್ನಲಾಗಿದೆ.

ಗೂಳಿಯು ಮಾರುಯಾ ಜಲಪಾತದಿಂದ ಕೊಚ್ಚಿ ಬಂದು ಸಮುದ್ರಕ್ಕೆ ಸೇರುವ ಮುನ್ನ ಪ್ರಾಣಾಪಯದಿಂದ ಬಚಾವ್ ಆಗಿದೆ. ಪ್ರವಾಹದಲ್ಲಿ ಸಿಲುಕಿದ ಸುದೀರ್ಘ ಸಮಯದ ನಂತರ ಜಮೀನಿನ ಅಂಚಿನಲ್ಲಿ ಜೀವಂತವಾಗಿ ಮತ್ತು ಆರೋಗ್ಯವಾಗಿ ಈ ಪುಟ್ಟ ಗೂಳಿ ಕಂಡುಬಂದಿದೆ.

“ಯುಂಗ್ ಬುಲ್ ಜೀವಂತವಾಗಿದೆ ಎಂದು ನನಗೆ ಕರೆ ಬಂದಾಗ ನನಗೆ ತುಂಬಾ ಸಂತೋಷವಾಯಿತು, ಅದು ಈಗ ದಂತಕಥೆ ಸ್ಥಾನಮಾನವನ್ನು ಪಡೆಯುತ್ತಿದೆ ಮತ್ತು ಕೆಲಸದಿಂದ ಅದಕ್ಕೆ ಬಿಡುವು ನೀಡಲು ಕೆಲವು ಹಸುಗಳೊಂದಿಗೆ ಗದ್ದೆಗೆ ಬಿಡಲಾಗುವುದು” ಎಂದು ರೈತ ಟೋನಿ ಪೀಕಾಕ್ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಈ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಕಾರಣ ಒಂದು ಜೇಡ ಅಂತೆ- ಹೇಗೆ ಅಂತೀರಾ? ಈ ಸ್ಟೋರಿ ಓದಿ

ಹೆರೆಫೋರ್ಡ್ ಬುಲ್, ಫೆಬ್ರವರಿಯಲ್ಲಿ ಸಂಭವಿಸಿದ ಪ್ರಳಯದಿಂದ ಬದುಕುಳಿದಿದ್ದರೂ, ಇತರ ಪ್ರಾಣಿಗಳು ಸಾವನ್ನಪ್ಪಿದ್ದವು. ರೈತ ಟೋನಿ ಪೀಕಾಕ್ ಹೇಳುವ ಪ್ರಕಾರ ನೆರೆಹೊರೆಯವರು ಸುಮಾರು 74 ಹಸುಗಳನ್ನು ಪ್ರವಾಹದಲ್ಲಿ ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ನವೆಂಬರ್ 2020ರಲ್ಲಿ, ಯುಎಸ್‌ನ ಟೆಕ್ಸಾಸ್‌ನಲ್ಲಿ ಬಂಡೆಯೊಂದರಿಂದ 70 ಅಡಿ ಬಿದ್ದ ನಾಯಿಯೊಂದು ಅದ್ಭುತವಾಗಿ ಪವಾಡದ ರೀತಿ ಬದುಕುಳಿದು ಬಂದಿತ್ತು.

ಸ್ಟೌಟ್ ಎಂಬ ಹೆಸರಿನ ನಾಯಿಯು ಆಸ್ಟಿನ್‌ನ ಪೆನ್ನಿಬ್ಯಾಕರ್ ಸೇತುವೆಯ ಮೇಲಿನ ಬಂಡೆಯಿಂದ ಕೆಳಗೆ ಬಿದ್ದಿತ್ತು. ಅವಘಡದಲ್ಲಿ ನಾಯಿಯ ಪ್ರಾಣಕ್ಕೆ ಹಾನಿಯಾಗಿರಲಿಲ್ಲ. ಸ್ಟೌಟ್ ನಾಯಿಯನ್ನು ಅಲ್ಲೇ ಸಮೀಪದಲ್ಲಿಯೇ ಊಟ ಮಾಡುತ್ತಿದ್ದ ವಿಶೇಷ ಕಾರ್ಯಾಚರಣೆಗಳ ತರಬೇತಿಯ ಕ್ಯಾಪ್ಟನ್ ಆರ್. ಲುಡ್ಡಿ ಈ ನಾಯಿಯನ್ನು ರಕ್ಷಿಸಿದ್ದರು.

ಅದಕ್ಕೂ ಕೆಲವು ತಿಂಗಳುಗಳ ಹಿಂದೆ, ಮಿಲಿ ಎಂಬ ನಾಯಿ ಮರಿಯು ಗುಂಡೇಟಿಗೆ ಗುರಿಯಾಗಿದ್ದರೂ ಸಹ ಬದುಕುಳಿದಿತ್ತು. ಈ ಸುದ್ದಿ ಅಲ್ಲಿನ ಐಟಿವಿಯ 'ದಿಸ್ ಮಾರ್ನಿಂಗ್' ನಲ್ಲಿ ಪ್ರಕಟವಾದ ನಂತರ 'ಮಿರಾಕಲ್' ನಾಯಿ ಎಲ್ಲರ ಮೆಚ್ಚಿನ ನಾಯಿ ಮರಿಯಾಯಿತು.

ಇದನ್ನೂ ಓದಿ: ಇಡ್ಲಿ ಮಾರುವವರಿಗೆ ಈ ಮಹಿಳೆ ಕೊಟ್ಟ ಗಿಫ್ಟ್​ ನೋಡಿದ್ರೆ ಆಶ್ಚರ್ಯವಾಗುತ್ತೆ

2019 ರಲ್ಲಿ, ಬೆಕ್ಕು ಸೌತಾಂಪ್ಟನ್‌ನ ಕಟ್ಟಡದ 18 ನೇ ಮಹಡಿಯ ಕಿಟಕಿಯಿಂದ ಬೀಳುವ ಮೂಲಕ ಬುದುಕುಳಿದು ಇಂತದ್ದೇ ಒಂದು ಪವಾಡ ಸದೃಶ್ಯಕ್ಕೆ ಸಾಕ್ಷಿಯಾಗಿತ್ತು.
Published by:Sandhya M
First published: