• Home
 • »
 • News
 • »
 • trend
 • »
 • Food Delivery: ಲಾಂಗೆಸ್ಟ್‌ ಫುಡ್‌ ಡೆಲಿವರಿ ಮಾಡಿದ ಮಹಿಳೆಯ ಸಾಹಸ ಕೇಳಿದ್ರೆ ಶಾಕ್​ ಆಗ್ತಿರಾ!

Food Delivery: ಲಾಂಗೆಸ್ಟ್‌ ಫುಡ್‌ ಡೆಲಿವರಿ ಮಾಡಿದ ಮಹಿಳೆಯ ಸಾಹಸ ಕೇಳಿದ್ರೆ ಶಾಕ್​ ಆಗ್ತಿರಾ!

ಫುಡ್​ ಡೆಲಿವರಿ ಮಾಡಲು ಹೊರಟ ಮಾನಸಾ ಗೋಪಾಲ್

ಫುಡ್​ ಡೆಲಿವರಿ ಮಾಡಲು ಹೊರಟ ಮಾನಸಾ ಗೋಪಾಲ್

ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ಯುಗವನ್ನು ಫಾಸ್ಟ್​ಫುಡ್​ ಯುಗ ಅಂತ ಕರೆದ್ರೂ ತಪ್ಪಿಲ್ಲ ಬಿಡಿ. ಯಾಕಂದ್ರೆ ಒರ್ವ ಮಹಿಳೆ ಲಾಂಗೆಸ್ಟ್‌ ಫುಡ್‌ ಡೆಲಿವರಿ ಮಾಡಿದ ಕಥೆ ಇಲ್ಲಿದೆ ನೋಡಿ.

 • Share this:

  ಆನ್‌ಲೈನ್‌ನಲ್ಲಿ (Online) ಆಹಾರವನ್ನು (Food) ಆರ್ಡರ್ (Order) ಮಾಡುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ. ಈ ಯುಗವನ್ನು ಫಾಸ್ಟ್​ಫುಡ್ (Fast Food)​ ಯುಗ ಅಂತ ಕರೆದ್ರೂ ತಪ್ಪಿಲ್ಲ ಬಿಡಿ. ಮೊದಲೆಲ್ಲಾ ಹೋಟೆಲ್​ಗೆ ಹೋಗಿ ಊಟ ಮಾಡೋದು ಅಂದ್ರೆ ಏನೋ ಒಂಥರಾ ಸಂತೋಷ. ಯಾಕೆಂದರೆ ಮನೆಯಲ್ಲಿ ತಿಂಗಳಿಗೊಮ್ಮೆ ಹೋಟೆಲ್​ಗೆ (Hotel) ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಕೂತಲ್ಲೇ ಫುಡ್​ ಆರ್ಡರ್ (Food Order) ಮಾಡಿ ತಿನ್ನೊ ಕಾಲ ಬಂದು ಎಷ್ಟೊ ದಿನಗಳು ಆಗಿದೆ. ಆ್ಯಂಬುಲೆನ್ಸ್ ಬರುವ ವೇಗಕ್ಕಿಂತ ಫುಡ್ ಆರ್ಡರ್​​​ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತೆ. ಇದೇ ನಮ್ಮ ವ್ಯವಸ್ಥೆ ಅಲ್ವಾ? ಆರ್ಡರ್​ ಮಾಡಿದ 20 ನಿಮಿಷದೊಳಗೆ ಬಿಸಿ ಬಿಸಿ ಫುಡ್​ ನಿಮ್ಮ ಮನೆ ಬಾಗಿಲಿಗೆ ಬರುತ್ತೆ.


  ಗುಲಾಬ್ ಜಾಮೂನ್‌ನಿಂದ ಹಿಡಿದು ಫುಲ್ ಮೀಲ್ಸ್‌ವರೆಗೆ, ಯಾವುದೇ ಆಹಾರವನ್ನು ತರಿಸಿಕೊಂಡು ಮನೆಯಲ್ಲಿಯೇ ಸವಿಯಬಹುದು. ಈಗ, ಫುಡ್‌ ಡೆಲಿವರಿ ಆ್ಯಪ್‌ಗಳು ನಗರದಲ್ಲಿ ಮತ್ತು ನಗರದ ಅಕ್ಕಪಕ್ಕದ ಪ್ರದೇಶಗಳಿಗೆ ಫುಡ್‌ ಅನ್ನು ಡೆಲಿವರಿ ಮಾಡುತ್ತವೆ. ಅದೇ ಈ ಫುಡ್ ಡೆಲಿವರಿ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಲಾಂಗೆಸ್ಟ್‌ ಫುಡ್‌ ಡೆಲಿವರಿ ಮಾಡುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.


  ಮಹಿಳೆಯೊಬ್ಬರು ಸಿಂಗಾಪುರದಿಂದ ಅಂಟಾರ್ಕ್ಟಿಕಾದವರೆಗೆ ನಾಲ್ಕು ಖಂಡಗಳನ್ನು ಮತ್ತು 30,000 ಕಿ.ಮೀ.ಗಳನ್ನು ಕ್ರಮಿಸುವ ಮೂಲಕ ಫುಡ್‌ ಡೆಲಿವರಿ ಮಾಡುತ್ತಿರುವ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದೆ.


  ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋ ಕ್ಲಿಪ್‌ನಲ್ಲಿ, ಮಾನಸಾ ಗೋಪಾಲ್ ಅನ್ನುವ ಮಹಿಳೆ ವಿಮಾನ ನಿಲ್ದಾಣದಲ್ಲಿ "ಸ್ಪೆಷಲ್‌ ಫುಡ್‌ ಡೆಲಿವರಿ” ಅಂತ ಟೈಟಲ್‌ ನೀಡಿ ತಮ್ಮ ಫುಡ್‌ ಡೆಲಿವರಿ ಪ್ರಯಾಣವನ್ನು ಪ್ರಾರಂಭಿಸುವ ಮೂಲಕ ವಿಡಿಯೋ ತೆರೆದುಕೊಳ್ಳುತ್ತದೆ.


  ಅವಳು ಸಿಂಗಾಪುರದಿಂದ ವಿಮಾನವನ್ನು ಹತ್ತಿ ಜರ್ಮನಿಯ ಹ್ಯಾಂಬರ್ಗ್ ತಲುಪುತ್ತಾಳೆ. ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಿಂದ ಕೊನೆಗೆ ಅಂಟಾರ್ಕ್ಟಿಕಾಕ್ಕೆ ಹೋಗುತ್ತಾಳೆ. ಈ ಫುಡ್‌ ಡೆಲಿವರಿ ಸಾಹಸದ ಕಥೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


  ವಿಡಿಯೋ ಕ್ಲಿಪ್‌ನ ಕೊನೆಯಲ್ಲಿ, ಮಾನಸ ಅವರು ದೋಣಿಯ ಮೂಲಕ ಹೋಗಿ ಅಂತಿಮವಾಗಿ ಡೆಲಿವರಿ ಪಾಯಿಂಟ್‌ ಅನ್ನು ತಲುಪುತ್ತಾಳೆ. ಫುಡ್‌ ಡೆಲಿವರಿ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾಳೆ.


  ಫುಡ್​ ಡೆಲಿವರಿ ಮಾಡಲು ಹೊರಟ ಮಾನಸಾ ಗೋಪಾಲ್


  ಮಾನಸ ಅವರ ಮಾತಲ್ಲಿ ಫುಡ್‌ ಡೆಲಿವರಿ


  "ಇಂದು, ನಾನು ಸಿಂಗಾಪುರದಿಂದ ಅಂಟಾರ್ಕ್ಟಿಕಾಕ್ಕೆ ಸ್ಪೆಷಲ್‌ ಫುಡ್‌ ಡೆಲಿವರಿ ಅನ್ನು ಮಾಡಿದ್ದೇನೆ!” ಎನ್ನುವ ಟೈಟಲ್‌ ನೀಡಿದ್ದೇನೆ. 30,000 ಕ್ಕೂ ಹೆಚ್ಚು ಕಿಮೀ ಮತ್ತು 4 ಖಂಡಗಳಲ್ಲಿ ಸಿಂಗಾಪುರದ ರುಚಿಗಳನ್ನು ಜಗತ್ತಿನ ಅತ್ಯಂತ ದೂರದ ಸ್ಥಳಗಳಲ್ಲಿ ದಿನವೂ ತಲುಪಿಸಲು ಒಬ್ಬರಿಗೆ ಸಾಕಾಗುವುದಿಲ್ಲ” ಎಂದು ಈ ಮಾನಸ ಅವರು ವಿಡಿಯೋದ ಟೆಕ್ಸ್ಟ್‌ನಲ್ಲಿ ಬರೆದಿದ್ದರು.


  ಇದನ್ನೂ ಓದಿ: Transgender: ತಮ್ಮ ನೆಚ್ಚಿನ ಅತ್ತೆ ಮಂಗಳಮುಖಿ ಅಂತ ಗೊತ್ತಾಗಿ ಭಾವುಕರಾದ ಪುಟ್ಟ ಮಕ್ಕಳು


  ಈ ʼಸ್ಪೆಷಲ್‌ ಫುಡ್‌ ಡೆಲಿವರಿʼ ವಿಡಿಯೋ ಪಡೆದಿರೋ ವೀಕ್ಷಣೆಗಳೆಷ್ಟು?


  ಈ ವಿಡಿಯೋ ಕ್ಲಿಪ್ Instagram ನಲ್ಲಿ 35 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆದಿದೆ. ಕೆಲವರಿಗೆ ಆಹಾರದ ಪೊಟ್ಟಣದಲ್ಲಿ ಏನಿದೆ ಎಂದು ತಿಳಿಯುವ ಕುತೂಹಲವಿತ್ತು. "ಯಾವ ಫುಡ್‌ ಅನ್ನು ಡೆಲಿವರಿ ಮಾಡಲಾಯಿತು?” ಅಂತ ಬಳಕೆದಾರರೊಬ್ಬರು ಕೇಳಿದರು. ಈ ಸ್ಪೆಷಲ್‌ ಫುಡ್‌ ಡೆಲಿವರಿ ಅನ್ನು ನೋಡಿ ಅನೇಕರು ಆಶ್ಚರ್ಯಚಕಿತರಾದರು ಮತ್ತು ಅದನ್ನು "ಹುಚ್ಚುತನ" ಮತ್ತು "ಅದ್ಭುತ" ಎಂದು ಕರೆದರು.
  ಇದು ಹುಚ್ಚುತನ ಅಂದ್ರೆ ಇನ್ನೊದು ವಿಡಿಯೋದಲ್ಲಿ ಜೆಟ್‌ಪ್ಯಾಕ್ ಬಳಸಿ ಆಹಾರವನ್ನು ತಲುಪಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಬಳಕೆದಾರರೊಬ್ಬರು ಪ್ರಶ್ನೆ ಎಸೆದಿದ್ದಾರೆ. ಇದಕ್ಕೂ ಮುನ್ನ ಸೌದಿ ಅರೇಬಿಯಾದಲ್ಲಿ ವ್ಯಕ್ತಿಯೊಬ್ಬ ಬಹುಮಹಡಿ ಕಟ್ಟಡದ ಮೇಲಿಂದ ಹಾರಿ ಪ್ಯಾಕ್ ಮಾಡಿದ ಆಹಾರವನ್ನು ತಲುಪಿಸುತ್ತಿರುವ ವಿಡಿಯೋವೊಂದು ಸಖತ್‌ ವೈರಲ್‌ ಆಗಿತ್ತು. ಆ ವೀಡಿಯೊದಲ್ಲಿ, ವ್ಯಕ್ತಿ ತನ್ನ ಫುಡ್‌ ಪಾಯಿಂಟ್‌ ತಲುಪಲು ಒಂದು ಗೋಪುರದಿಂದ ಇನ್ನೊಂದು ಗೋಪುರಕ್ಕೆ ಹಾರುತ್ತಿರುವ ವಿಡಿಯೋ ಸೆರೆ ಆಗಿತ್ತು. ಈ ರೀತಿಯ ಕಸರತ್ತುಗಳನ್ನು ಮಾಡಿಕೊಂಡು ಪುಡ್​ ಡೆಲಿವರಿ ಮಾಡುವ ಸಾಹಸ ನಿಜಕ್ಕೂ ಮೆಚ್ಚಬೇಕಾದ ವಿಷಯವಾಗಿದೆ.

  Published by:Gowtham K
  First published: