ಆಧುನಿಕತೆಯ (Modern Age) ಅಬ್ಬರದಲ್ಲಿ ಮೊಬೈಲ್ ಗೀಳು (Mobile Madness), ಫೋಟೋ ಹಾವಳಿ (Photos Craze) ಹೆಚ್ಚಾಗುತ್ತಿದೆ. ಅದರಲ್ಲೂ ಸೆಲ್ಫಿ (Selfie) ಹಾವಳಿಯಂತೂ ಮಿತಿ ಮೀರುತ್ತಿದೆ. ದೇವಸ್ಥಾನಗಳಲ್ಲಿ, ಹೋಟೆಲ್, ರೆಸ್ಟೋರೆಂಟ್ (Restaurant), ಪ್ರವಾಸಿ ತಾಣ ಎಲ್ಲೇ ಹೋದರೂ ಸೆಲ್ಫಿ, ಸೆಲ್ಫಿ. ದಿನಕ್ಕೆ ಎರಡುಮೂರಾದರೂ ನಮ್ಮದೇ ಸೆಲ್ಫಿ ತೆಗೆದುಕೊಳ್ಳುವ ಜನರಿದ್ದಾರೆ. ಫೋಟೋ ತೆಗೆದುಕೊಳ್ಳುವುದೇ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ (Upload) ಮಾಡುವುದಕ್ಕೆ ಎನ್ನುವಂತೆ ಕಾಮೆಂಟ್ ಲೈಕ್ಗಾಗಿ ಫೋಟೋ ತೆಗೆದುಕೊಳ್ಳುತ್ತಾರೆ.
ಫೋಟೋ ಬಾಂಬಿಂಗ್
ಇನ್ನೂ ಸೆಲ್ಫಿ ತೆಗೆದುಕೊಳ್ಳುವ ಹಿಂದೆ ಮುಂದೆ ಫೋಟೋದಲ್ಲಿ ಜನರು ಕಾಣುವುದು ಸಹಜ. ನಾವೇನಾದರೂ ಹೊರಗಡೆ ಹೋದಾಗ ಸೆಲ್ಫಿ ತೆಗೆದುಕೊಳ್ಳುವ ನಮ್ಮ ಜೊತೆ ಇನ್ನೂ ಕೆಲವರು ಕವರ್ ಆಗೋದಂತೂ ಪಕ್ಕಾ.
ಕೆಲವರು ಇದನ್ನು ಫೋಟೋ ಬಾಂಬಿಂಗ್ ಎನ್ನುತ್ತಾರೆ. ಸುಂದರವಾದ ಫೋಟೋದಲ್ಲಿ ಯಾರಾದರೂ ಕವರ್ ಆದರೆ ಹೇಗೋ ಅದನ್ನು ನಮ್ಮ ಕಲೆಯಲ್ಲಾ ಉಪಯೋಗಿಸಿ ಎಡಿಟ್ ಮಾಡುತ್ತೇವೆ.
ಇಲ್ಲೂ ಕೂಡ ಒಬ್ಬ ಯುವತಿ ಸೆಲ್ಫಿ ಕ್ಲಿಕ್ಕಿಸಿ ಕೊಂಡಿದ್ದಾರೆ. ಸೆಲ್ಫಿಯಲ್ಲಿ ಇನ್ನೊಬ್ಬ ವ್ಯಕ್ತಿ ಕವರ್ ಆಗಿದನ್ನು ಕಂಡು ಬೇಜಾರಾಗಿ ಅದನ್ನು ಎಡಿಟ್ ಮಾಡಲು ನೆಟ್ಟಿಗರನ್ನು ಕೇಳಿದ್ದಾಳೆ. ನೆಟ್ಟಿಗರು ನೀಡಿದ ಉತ್ತರ ಮಾತ್ರ ಮಜಾನೋ ಮಜಾ ಇದೆ ನೋಡಿ.
can someone pls remove that guy in the background and let me enjoy my sub??? 😭 pic.twitter.com/KGJ6EsxNAg
— Harshita :)) (@harshitasaratka) December 20, 2022
ಹರ್ಷಿತಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ಹೋಟೆಲ್ನಲ್ಲಿ ಸ್ಯಾಂಡ್ವಿಚ್ ಸೇವಿಸುವಾಗ ನಗುತ್ತಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಆ ಫೋಟೋ ತೆಗೆದುಕೊಳ್ಳುವಾಗ ಹಿಂದೆ ಬಿಲ್ ಕೌಂಟರ್ನಲ್ಲಿದ್ದ ಒಬ್ಬ ವ್ಯಕ್ತಿ ಕೂಡ ಸೆರೆಯಾಗಿದ್ದಾನೆ. ಹೆಲ್ಮೆಟ್ ಹಾಕಿಕೊಂಡು ನಿಂತ ವ್ಯಕ್ತಿ ಹರ್ಷಿತಾ ಫೋಟೋ ತೆಗೆದುಕೊಳ್ಳುವಾಗ ಸೆರೆಯಾಗಿದ್ದಾರೆ.
ಈ ಫೋಟೋವನ್ನು ಪೋಸ್ಟ್ ಮಾಡಿದ ಹರ್ಷಿತಾ "ಯಾರಾದರೂ ದಯವಿಟ್ಟು ಹಿನ್ನಲೆಯಲ್ಲಿದ್ದ ಆ ವ್ಯಕ್ತಿಯನ್ನು ತೆಗೆದುಹಾಕಿ ಮತ್ತು ನನ್ನ ಆಹಾರವನ್ನು ಆನಂದಿಸಲು ನನಗೆ ಅವಕಾಶ ನೀಡಬಹುದೇ ???" ಎಂದು ಬರೆದುಕೊಂಡಿದ್ದಾರೆ.
ಭರ್ಜರಿ ಲೈಕ್ಸ್ ಪಡೆದುಕೊಂಡ ಪೋಸ್ಟ್
ಡಿಸೆಂಬರ್ 20 ರಂದು ಹಂಚಿಕೊಂಡ ಈ ಪೋಸ್ಟ್ 304ಕ್ಕೂ ಹೆಚ್ಚು ರಿಟ್ವೀಟ್ಗಳು ಮತ್ತು 4,664 ಲೈಕ್ಸ್ ಮತ್ತು ನೂರಾರು ಕಾಮೆಂಟ್ಗಳನ್ನು ಪಡೆದುಕೊಂಡಿದೆ.
ಹಾಸ್ಯಮಯ ರಿಪ್ಲೈ
ಇಂಟರ್ನೆಟ್ನಲ್ಲಿ ಈ ಶೀರ್ಷಿಕೆ ನೀಡಿ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಹಾಸ್ಯಮಯವಾಗಿ ಎಡಿಟ್ ಮಾಡಿ ಅವರಿಗೆ ರಿಪ್ಲೈ ಮಾಡಿದ್ದಾರೆ. ಬಳಕೆದಾರರು ಬಿಲ್ಲಿಂಗ್ ಕೌಂಟರ್ನಲ್ಲಿ ಇದ್ದ ವ್ಯಕ್ತಿಯನ್ನು ಬೇರೆ ಬೇರೆಯವರ ಜೊತೆ ಮರು ಹೊಂದಿಸಿದ್ದಾರೆ.
ನೆಟ್ಟಿಗರು ಹರ್ಷಿತಾ ಅವರ ಪೋಸ್ಟ್ ಅನ್ನು ಹೇಗೆಲ್ಲಾ ಎಡಿಟ್ ಮಾಡಿದ್ದಾರೆ ನೋಡಿ?
ಒಬ್ಬ ಬಳಕೆದಾರರು ಕೇವಲ ಟವೆಲ್ ಸುತ್ತಿಕೊಂಡ ವ್ಯಕ್ತಿಯೊಬ್ಬರನ್ನು ಆ ವ್ಯಕ್ತಿ ಇದ್ದ ಜಾಗದಲ್ಲಿ ಕೂರಿಸಿ ಇದು ಚೆನ್ನಾಗಿದೆ ನೋಡಿ ಎಂದು ರಿಪ್ಲೈ ಮಾಡಿದ್ದಾರೆ.
Dekh raha hai Binod kaise photo se edit karke hataya jaa raha hai pic.twitter.com/oeNqlEY2xe
— Professor ngl राजा बाबू 🥳🌈 (@GaurangBhardwa1) December 20, 2022
ಇನ್ನೊಬ್ಬ ಬಳಕೆದಾರನಂತೂ ತಾಜ್ಮಹಲ್ ಮುಂದೆ ಇಬ್ಬರೂ ಸ್ಯಾಂಡ್ವಿಚ್ ಫೋಟೋವನ್ನು ತಿನ್ನುತ್ತಿರುವಂತೆ ಎಡಿಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಹರ್ಷಿತಾ ಅವರು ಟ್ರೈನ್ನಲ್ಲಿ ಕೂತು ತಮ್ಮ ಆಹಾರವನ್ನು ಸವಿಯುತ್ತಿರುವಂತೆ ಎಡಿಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ನಾನು ನಿಮ್ಮ ಸೇವಕಿ ಅಲ್ಲ, ಇಲ್ಲಿಯ ಉದ್ಯೋಗಿ; ಪ್ರಯಾಣಿಕ-ಗಗನಸಖಿ ಮಧ್ಯೆ ಜಗಳ
ಕಾರ್ಟೂನ್ ಡೋರಾ ಜೊತೆ ಫೋಟೋ ಎಡಿಟ್
ಇನ್ನೊಬ್ಬ ವ್ಯಕ್ತಿ ಹರ್ಷಿತಾ ಅವರ ಸ್ಯಾಂಡ್ವಿಚ್ ತಿನ್ನುವ ಫೋಟೋವನ್ನು ಮತ್ತು ಆತ ಜ್ಯೂಸ್ ಕುಡಿಯುತ್ತಿರುವ ಎರಡೂ ಫೋಟೋವನ್ನು ಜೋಡಿಸಿ ಪೋಸ್ಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು ಬಿಲ್ಲಿಂಗ್ ಕೌಂಟರ್ ಬಳಿ ಹೆಲ್ಮಟ್ ಹಾಕಿಕೊಂಡು ನಿಂತಿರುವ ವ್ಯಕ್ತಿಯ ಜಾಗದಲ್ಲಿ ಕಾರ್ಟೂನ್ನ ಡೋರಾ ಚಿತ್ರಣವನ್ನು ಹೊಂದಿಸಿದ್ದಾರೆ.
ಇನ್ನು ಹತ್ತುಹಲವು ಎಡಿಟ್ಗಳು ನಡೆದಿದ್ದು ಎಲ್ಲವೂ ಸಹ ಇಂಟರ್ನೆಟ್ನಲ್ಲಿ ಹಲ್ಚಲ್ ಎಬ್ಬಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ