Pet Dog: ಮನೆಯಲ್ಲಿ ನಾಯಿ ಸಾಕುವ ಮುನ್ನ ಈ ಸಂಗತಿಗಳು ತಿಳಿದಿರಲಿ..!

ನಾಯಿಗಳಲ್ಲೂ ಸಹ ವಿಭಿನ್ನ ತಳಿಗಳಿವೆ. ಅವುಗಳಿಗೆ ಅನುಗುಣವಾಗಿ ನಾವು ಆರೈಕೆಯ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಹಾಗಾಗಿ ನಾವು ಯಾವ ಪ್ರಕಾರದ ನಾಯಿಯನ್ನು ತರುತ್ತಿದ್ದೇವೆ ಎಂಬ ಅರಿವಿರಬೇಕು. ಅದರ ಜೊತೆಗೆ ನಮ್ಮ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತಿರಬೇಕು.

ಸಾಕು ನಾಯಿ

ಸಾಕು ನಾಯಿ

  • Share this:
ಪ್ರಾಮಾಣಿಕತೆಗೆ, ನಿಯತ್ತಿಗೆ ಹೆಸರುವಾಸಿಯಾಗಿರು ಸಾಕು ಪ್ರಾಣಿ ನಾಯಿ. ಯಾರ ಮನೆಯಲ್ಲಾದರೂ ಅಥವಾ ಯಾರ ಬಳಿಯಾದರೂ ನಾಯಿ ಮರಿಯನ್ನು ನೋಡಿದರೆ ಸಾಕು ಅದನ್ನು ಎತ್ತಿ ಮುದ್ದಾಡಬೇಕೆನಿಸುತ್ತದೆ. ಪ್ರಾಣಿಗಳನ್ನು ಇಷ್ಟಪಡುವವರಿಗಂತೂ  ನಾಯಿ ನೋಡಿದರೆ ಸಾಕು ಅದನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟು ಉತ್ಸುಕರಾಗಿ ಬಿಡುತ್ತಾರೆ. ನಾಯಿ ಸಾಕುವುದು ಬಾಯಿಯಲ್ಲಿ ಹೇಳಿದಷ್ಟು ಸುಲಭವಲ್ಲ. ನಾಯಿಯನ್ನು ಸಾಕಲು ಮನೆಗೆ ತರುವ ಮುನ್ನ ಕೆಲವೊಂದು ಪ್ರಮುಖ ಅಂಶಗಳನ್ನು ಅರಿತಿರಬೇಕು. 

ನಾಯಿ...ಮನೆಯವರೊಂದಿಗಿದ್ದು ಮನೆಯವರಂತೆಯೇ ಆಗಿ ಬಿಡುವ ಏಕೈಕ ಸಾಕು ಪ್ರಾಣಿ ಎಂದರೆ ತಪ್ಪಾಗಲಾರದು. ಏಕೆಂದರೆ ಮನೆಯವರೊಂದಿಗೆ ಅಷ್ಟೊಂದು ಲವಲವಿಕೆಯಿಂದ ಕೂಡಿರುತ್ತದೆ. ಮನೆಯೊಡೆಯನಿಲ್ಲದಿದ್ದಾಗ ಮನೆಯೊಡೆಯನಂತೆ, ಮಕ್ಕಳೊಂದಿಗೆ ಮಕ್ಕಳಂತೆ ಇರುವ ನಾಯಿಗಳೂ ಸಹ ನಿಮ್ಮ ಪ್ರೀತಿ ಹಾಗೂ ಸಮಯವನ್ನು ಕೇಳುತ್ತವೆ. ಅವುಗಳನ್ನೂ ಮಕ್ಕಳಂತೆ ಪ್ರೀತಿ ಕಾಳಜಿ ತೋರಿಯೇ ನೋಡಿಕೊಳ್ಳಬೇಕು. ಸದಾ ಸಂತೋಷ ನೀಡುವ ನಾಯಿಯನ್ನು ಸಾಕುವ ನಿರ್ಧಾರ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ನಾಯಿಯನ್ನು ಖರೀದಿಸಲು ಅಥವಾ ದತ್ತು ಪಡೆದುಕೊಳ್ಳುವ ಮಂದಿ ಕೆಲವು ವಿಷಯಗಳನ್ನು ತಿಳಿದುಕೊಳ್ಳಲೇಬೇಕು.

Dog, Pet, Life Style, Relationship, Home,ನಾಯಿ, ಸಾಕುಪ್ರಾಣಿಗಳು, ಜೀವನಶೈಲಿ, ಸಂಬಂಧ, ಮನೆ, You shouls knw these things before you get a pet Dog ae
ನಾಯಿ ಸಾಕುವುದು ಸುಲಭದ ಮಾತಲ್ಲ


ನಾವು ಮೊದಲು ಬದ್ಧರಾಗಿರಬೇಕು
ಸಾಮಾನ್ಯವಾಗಿ ನಾಯಿಗಳು 12 ರಿಂದ 13 ವರ್ಷಗಳು ಬದುಕುತ್ತವೆ. ಅದರಲ್ಲೂ ಕೆಲವೊಂದು 18 ವರ್ಷಗಳೂ ಬದುಕುತ್ತವೆ. ಹಾಗಾಗಿ ನಾವು ನಾಯಿಯನ್ನು ಸಾಕಲು ಎಷ್ಟು ಸಮರ್ಥರು ಎಂದು ತಿಳಿದುಕೊಳ್ಳಬೇಕು. ಇವು ತುಂಬಾ ನಿಷ್ಠಾವಂತ, ತುಂಟತನದಿಂದ ಕೂಡಿರುವುದರಿಂದ ನಮ್ಮ ಅಮೂಲ್ಯ ಸಮಯವನ್ನು ಅವುಗಳಿಗಾಗಿ ವ್ಯಯಿಸಲೇಬೇಕಾಗುತ್ತದೆ. ನಾವು ಸದಾ ಅವುಗಳೊಂದಿಗಿದ್ದು, ಆರೈಕೆ ಮಾಡಬೇಕಾಗುತ್ತದೆ.

ತಳಿಗಳ ಬಗ್ಗೆ ಅರಿವಿರಲಿ
ನಾಯಿಗಳಲ್ಲೂ ಸಹ ವಿಭಿನ್ನ ತಳಿಗಳಿವೆ. ಅವುಗಳಿಗೆ ಅನುಗುಣವಾಗಿ ನಾವು ಆರೈಕೆಯ ಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಹಾಗಾಗಿ ನಾವು ಯಾವ ಪ್ರಕಾರದ ನಾಯಿಯನ್ನು ತರುತ್ತಿದ್ದೇವೆ ಎಂಬ ಅರಿವಿರಬೇಕು. ಅದರ ಜೊತೆಗೆ ನಮ್ಮ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತಿರಬೇಕು. ಜೊತೆ ನಾಯಿಗಳಿಗೆ ನಿತ್ಯ ವಾಕಿಂಗ್​ ಹಾಗೂ ವ್ಯಾಯಾಮ ಮಾಡಿಸಬೇಕು. ಒಂದು ವೇಳೆ ದೊಡ್ಡ ತಳಿಯ ನಾಯಿಗಳನ್ನು ತಂದು ವ್ಯಾಯಾಮ ಮಾಡಿಸದೆ ಹಾಗೇ ಬಿಟ್ಟರೆ ಆರೋಗ್ಯ ಹಾಗೂ ಅವುಗಳ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ.

ತಗಲುವ ಖರ್ಚು
ನಾವು ನಾಯಿಗೆ ಸಮಯ ನೀಡಿ ಅದರ ಆಹಾರಕ್ಕೆ ಒಂದಿಷ್ಟು ಖರ್ಚು ಮಾಡಿದರೆ ಸಾಕು ಎಂದು ತಿಳಿಯಬೇಡಿ. ಇವುಗಳೊಟ್ಟಿಗೆ ಹಾಸಿಗೆ, ಸಮರ್ಪಕ ಆಹಾರ, ಕಾಲರ್ ಇತ್ಯಾದಿಗಳು ಸರಿಯಾಗಿರಬೇಕು. ಮನೆಗೆ ತರುವ ತಳಿಗಳ ಆಧಾರದ ಮೇಲೆ ಆಹಾರ ಕ್ರಮದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ನಾವು ನಮ್ಮ ಮನೆಗೆ ತಿಂಗಳ ವೆಚ್ಚ ಎತ್ತಿಡುವಂತೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಮೀಸಲಿಡಲೇಬೇಕಾಗುತ್ತದೆ.

ಇದನ್ನೂ ಓದಿ: ಬ್ರೈಡಲ್​ ಲುಕ್​ನಲ್ಲಿ ಸ್ನೇಹಾ ಉಲ್ಲಾಳ್​: ಮತ್ತೆ ಐಶ್ವರ್ಯಾ ರೈ ಜತೆ ಹೋಲಿಕೆ ಮಾಡುತ್ತಿರುವ ನೆಟ್ಟಿಗರು

ಹತ್ತಿರದಲ್ಲಿ ಉತ್ತಮ ಆಸ್ಪತ್ರೆ ಇರಲಿ
ಹೌದು, ಹತ್ತಿರದಲ್ಲಿರುವ ಪಶುವೈದ್ಯರು ಮತ್ತು ಪ್ರಾಣಿ ಆಸ್ಪತ್ರೆಗಳ ಬಗ್ಗೆ ಮಾಹಿತಿ ಇರಬೇಕು. ಏಕೆಂದರೆ ನಿಮ್ಮ ನಾಯಿಯ ಆರೋಗ್ಯದಲ್ಲಿ ಯಾವಾಗ ವ್ಯತ್ಯಾಸವಾಗುತ್ತದೆ ಎಂದು ನಿಮಗೆ ತಿಳಿದಿರುವುದಿಲ್ಲ. ಹಾಗಾಗಿ ಹತ್ತಿರದಲ್ಲಿ ಮತ್ತು ಪರಿಣಾಮಕಾರಿಯಾದ ಆರೋಗ್ಯ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಇದನ್ನೆಲ್ಲ ಪರಿಶೀಲಿಸಿಕೊಂಡು ನಾಯಿಯನ್ನು ಮನೆಗೆ ಕರೆತರುವುದು ಒಳಿತು.

ಯೋಗ್ಯವಾದ ಸ್ಥಳ ಹುಡುಕಿ
ನಾಯಿಗಳು ವಾಸಿಸಲು ಯೋಗ್ಯವಾದ ಸ್ಥಳವಿರಬೇಕು. ಇದರ ಬಗ್ಗೆ ಮೊದಲು ಪರಿಶೀಲಿಸಿಕೊಳ್ಳಬೇಕು. ನಾಯಿಗಳ ಮುಂದೆ ತೂಗಾಡುತ್ತಿರುವ ವಸ್ತುಗಳನ್ನು ಇರಿಸದಿದ್ದರೆ ಉತ್ತಮ. ಬಾಲ್ಕನಿಗಳಲ್ಲಿ ಜಾರುವ ರೀತಿ ಅಪಾಯಕಾರಿಯಾದ ಸ್ಥಳ ಇದೆಯಾ ಎಂದು ನೋಡಿಕೊಳ್ಳಿ. ನಾಯಿಯನ್ನು ಉಳಿಸಿಕೊಳ್ಳಲು ಅಥವಾ ಮಲಗಲು ಉತ್ತಮ ಸ್ಥಳ ಇದೆಯಾ ಎಂದು ತಿಳಿದುಕೊಂಡರೆ ಒಳಿತಾಗುತ್ತದೆ.

ತರಬೇತಿ ಅತಿಮುಖ್ಯ
ನಾಯಿಗಳಿಗೆ ತರಬೇತಿ ನೀಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಒಂದು ನಾಯಿಯನ್ನು ಮನೆಗೆ ಮಗುವಂತೆ ಸಿದ್ಧಗೊಳಿಸಬೇಕಾಗುತ್ತದೆ. ಹಾಗಾಗಿ ನಾಯಿಗೆ ತರಬೇತಿಯ ಅಗತ್ಯವಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಸಾಕಷ್ಟು ಟ್ಯುಟೋರಿಯಲ್‍ಗಳ ಮಾಹಿತಿ ದೊರೆಯುತ್ತದೆ. ಇವು ನಮ್ಮ ನಾಯಿಗಳಿಗೆ ತುಂಬಾ ಉತ್ತಮವಾಗಿ ತರಬೇತಿ ನೀಡುತ್ತದೆ. ನಿಮ್ಮ ನಾಯಿಯನ್ನು ಕುಟುಂಬದ ಅಮೂಲ್ಯ, ಉತ್ತಮ ನಡತೆ ಮತ್ತು ಪ್ರೀತಿಯ ಸದಸ್ಯರನ್ನಾಗಿ ಮಾಡಲು ನೀವು ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು.
Published by:Anitha E
First published: