• Home
  • »
  • News
  • »
  • trend
  • »
  • Stray Dog Attack: ಬೀದಿ ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಸುಲಭ ಟಿಪ್ಸ್

Stray Dog Attack: ಬೀದಿ ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಸುಲಭ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಂತೂ ಬಹುತೇಕ ಸಿಟಿಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚು. ಬೀದಿ ನಾಯಿಗಳು ತುಂಬಾನೇ ಡೇಂಜರಸ್.‌ ನಾಯಿಯು ನಿಮ್ಮನ್ನು ಕಚ್ಚಲು ಪ್ರಯತ್ನಿಸಿದರೆ ನೀವು ತಪ್ಪಿಸಿಕೊಳ್ಳುವುದು ಅಗತ್ಯ. ತಪ್ಪಿಸಿಕೊಳ್ಳವುವುದು ಹೇಗೆ?

  • Share this:

ಈಗಂತೂ ಬಹುತೇಕ ಸಿಟಿಗಳಲ್ಲಿ (Street) ಬೀದಿ ನಾಯಿ (Dog) ಹಾವಳಿ ಹೆಚ್ಚು. ಗೊತ್ತಿಲ್ಲದೇ ಹೋದವರಿಗೆ ಅಪಾಯ (Danger) ತಂದಿಡುವ ಈ ಬೀದಿ ನಾಯಿಗಳು ತುಂಬಾನೇ ಡೇಂಜರಸ್.‌ ಆಕ್ರಮಣಕಾರಿ ನಾಯಿಯು (Dog Attack) ನಿಮ್ಮನ್ನು ಕಚ್ಚಲು ಪ್ರಯತ್ನಿಸಿದರೆ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಬಳಸಬಹುದಾದ ಸ್ವಯಂ ರಕ್ಷಣಾ (Save) ತಜ್ಞರ ಸಲಹೆಗಳು ಇಲ್ಲಿವೆ. ಹೆಚ್ಚಿನ ನಾಯಿಗಳು ಪ್ರಚೋದಿಸದ ಹೊರತು ಮನುಷ್ಯನನ್ನು ತೊಂದರೆಗೊಳಿಸುವುದಿಲ್ಲ ಎನ್ನುವುದು ಕೂಡಾ ಗಮನಿಸಬೇಕಾದ ವಿಚಾರ.


ಇನ್ನು, ಹೆಚ್ಚಿನ ಗೇಟೆಡ್ ರೆಸಿಡೆನ್ಶಿಯಲ್ ಸೊಸೈಟಿಗಳಲ್ಲಿ, ಬೀದಿ ನಾಯಿಗಳ ಗುಂಪು ಕಾಂಪೌಂಡ್‌ನಲ್ಲಿ ವಾಸಿಸುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅವು ತೊಂದರೆ ಮಾಡುವುದಿಲ್ಲ. ಆದರೆ ನಿಮ್ಮ ಮೇಲೆ ಆಕ್ರಮಣ ಮಾಡುವ ಆಕ್ರಮಣಕಾರಿ ನಾಯಿಗಳಿದ್ದಲ್ಲಿ ಅಂತ ಸಂದರ್ಭಗಳಲ್ಲಿ ನೀವು ಹೇಗೆ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳುವುದು ತೀರಾ ಅಗತ್ಯ.


ಇದಕ್ಕಾಗಿ ಮೌಯಿ ಥಾಯ್‌ (ಒಂದು ವಿಧದ ಬಾಕ್ಸಿಂಗ್‌ ) ತರಬೇತುದಾರರಾದ ಹಸನ್‌ ಅವರು ಕೆಲವೊಂದಿಷ್ಟು ಆತ್ಮರಕ್ಷಣಾ ವಿಧಾನಗಳನ್ನು ತಿಳಿಸಿಕೊಟ್ಟಿದ್ದಾರೆ.


ಬೀದಿ ನಾಯಿ ಬಳಿಗೆ ಬಂದರೆ ಏನು ಮಾಡಬೇಕು?


ನೀವು ನಾಯಿಗಳಿಗೆ ಹೆದರುತ್ತಿದ್ದರೆ ಮತ್ತು ದಾರಿತಪ್ಪಿ ಅವು ನಿಮ್ಮ ಬಳಿಗೆ ಬರುವುದನ್ನು ನೋಡಿದರೆ, ಕಣ್ಣಿನ ಸಂಪರ್ಕವನ್ನು ತಪ್ಪಿಯೂ ಮಾಡಬೇಡಿ. ಯಾವುದೇ ರೀತಿಯಲ್ಲಿ ಓಡಲು ಅಥವಾ ಭಯಭೀತರಾಗಲು ಹೋಗಬೇಡಿ. ನಿಮ್ಮ ಪಾಡಿಗೆ ನೀವು ಸುಮ್ಮನೆ ನಡೆಯುತ್ತಿರಿ ಎಂದು ಅವರು ಸಲಹೆ ನೀಡುತ್ತಾರೆ.


You must use these tips to protect yourself from street dog attacks
ಸಾಂ ದರ್ಭಿಕ ಚಿತ್ರ


ನಾಯಿ ಕಡಿತದಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು?


ನಾಯಿ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ತಂತ್ರವೆಂದರೆ ನಾಯಿಯ ಕಣ್ಣುಗಳನ್ನು ಮುಚ್ಚುವುದು ಮತ್ತು ತಪ್ಪಿಸಿಕೊಳ್ಳುವುದು. ನೀವು ಜಾಕೆಟ್ ಅಥವಾ ಸ್ಕಾರ್ಫ್ ಅನ್ನು ಧರಿಸುತ್ತಿದ್ದರೆ, ಅದನ್ನು ಆಕ್ರಮಣಕಾರಿ ನಾಯಿಯ ಮೇಲೆ ಎಸೆಯಿರಿ. ಇದರಿಂದ ಕಣ್ಕಟ್ಟಿದಂತಾಗಿ ಅದು ಸುಮ್ಮನಾಗುತ್ತದೆ. ಆಗ ನೀವು ಆಕ್ರಮಣದಿಂದ ಪಾರಾಗಬಹುದು.


ನಾಯಿ ದಾಳಿಯಿಂದ ವ್ಯಕ್ತಿಯನ್ನು ಹೇಗೆ ರಕ್ಷಿಸುವುದು?


ನಾಯಿ ದಾಳಿಯಿಂದ ಯಾರನ್ನಾದರೂ ರಕ್ಷಿಸಲು ಪ್ರಯತ್ನಿಸುವಾಗ ಖಾಲಿ ಕೈಯಲ್ಲಿ ಹೋಗಬೇಡಿ ಎಂದು ಹಸನ್ ಹೇಳುತ್ತಾರೆ. ಬಟ್ಟೆ, ನೀರು ಅಥವಾ ಕೈಗೆ ಸಿಗುವ ಯಾವುದನ್ನಾದರೂ ತೆಗೆದುಕೊಳ್ಳಿ ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬಾಲಕಿ! ಈಕೆಯ ಶ್ರಮದ ಕಥೆ ಏನು ಗೊತ್ತಾ?


ಮೊದಲು ನಾಯಿಯ ಮೂಗು ಅಥವಾ ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಲು ಪ್ರಯತ್ನಿಸಿ ಏಕೆಂದರೆ ಅವುಗಳು ಅದರ ದುರ್ಬಲ ಅಂಶಗಳಾಗಿವೆ. ಅದರ ಮೇಲೆ ನೀರನ್ನು ಎಸೆಯುವ ಮೂಲಕ ನೀವು ಅದನ್ನು ವಿಚಲಿತಗೊಳಿಸಬಹುದು.


ಆಕ್ರಮಣಕಾರಿ ಬೀದಿನಾಯಿ ನೋಡಿದರೆ ಓಡಬೇಡಿ!


ಆಕ್ರಮಣಕಾರಿ ನಾಯಿಯನ್ನು ನೋಡಿದೊಡನೆ ನೀವು ಎಂದಿಗೂ ಪ್ಯಾನಿಕ್‌ ಆಗಬೇಡಿ. ಭಯಪಡಬೇಡಿ. ನಾಯಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ, ಓಡಬೇಡಿ.


ಹಲವಾರು ಕಾರಣಗಳಿಗಾಗಿ ನಾಯಿಗಳು ಆಕ್ರಮಣಕಾರಿಯಾಗಬಹುದು. ದೆಹಲಿಯ ಶ್ವಾನ ಪ್ರೇಮಿ ಮತ್ತು ವಕೀಲ ಜಾಸ್ಮಿನ್ ದಮ್ಕೆವಾಲಾ ಅವರು ಚೆನ್ನಾಗಿ ತಿನ್ನುವ ಮತ್ತು ಚೆನ್ನಾಗಿ ನೋಡಿಕೊಳ್ಳುವ ನಾಯಿಗಳು ಎಂದಿಗೂ ಕಚ್ಚುವುದಿಲ್ಲ ಎಂದು ಹೇಳುತ್ತಾರೆ.


ಇದನ್ನೂ ಓದಿ:  Viral Video: ತನ್ನ ಸುತ್ತಲೂ ಬಲೂನ್ ಸೃಷ್ಟಿಸಿಕೊಂಡ ಆಕ್ಟೋಪಸ್, ಮತ್ತೆ ವೈರಲ್ ಆಯ್ತು ಹಳೆ ವಿಡಿಯೋ


ಇನ್ನು, ಅನೇಕ ಮಹಿಳೆಯರು ತಡವಾಗಿ ಮನೆಗೆ ಬರುವಾಗ ಬೀದಿ ನಾಯಿಗಳು ತಮ್ಮನ್ನು ರಕ್ಷಿಸುತ್ತವೆ. ಅವರ ಮನೆ ಬಾಗಿಲಿಗೆ ತಂದು ಬಿಡುತ್ತವೆ ಎಂದು ಕಂಡುಕೊಂಡಿದ್ದಾರೆ. ಚೆನ್ನಾಗಿ ತಿನ್ನುವ ಮತ್ತು ನೆರೆಹೊರೆಯವರು ಚೆನ್ನಾಗಿ ನೋಡಿಕೊಳ್ಳುವ ನಾಯಿ ಎಂದಿಗೂ ಕಚ್ಚುವುದಿಲ್ಲ.


ಸಿಂಹಗಳು ಅಥವಾ ಹುಲಿಗಳಂತಹ ಕಾಡು ಪ್ರಾಣಿಗಳು ಹಸಿವಿನಿಂದ ಬಳಲುತ್ತಿದ್ದರೆ ಅವು ಭಕ್ಷಕವಾಗುತ್ತವೆ. ಪ್ರತಿ ಜೀವಿಯು ಸ್ವಯಂ ಸಂರಕ್ಷಣೆಯ ಪ್ರವೃತ್ತಿಯನ್ನು ಹೊಂದಿದೆ. ಬೆದರಿಕೆ ಅಥವಾ ಕೆಟ್ಟದಾಗಿ ನಡೆಸಿಕೊಂಡರೆ ಹಗೆತನದಿಂದ ಪ್ರತಿಕ್ರಿಯಿಸುತ್ತದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

Published by:Harshith AS
First published: