• Home
  • »
  • News
  • »
  • trend
  • »
  • Singapore: ರೈಲಿನಲ್ಲೇ ಸಿಂಗಾಪುರ್ ಹೋಗಬಹುದು.. ವೀಸಾ-ಪಾಸ್​ಪೋರ್ಟ್​​ ಬೇಕಾಗಿಲ್ಲ!

Singapore: ರೈಲಿನಲ್ಲೇ ಸಿಂಗಾಪುರ್ ಹೋಗಬಹುದು.. ವೀಸಾ-ಪಾಸ್​ಪೋರ್ಟ್​​ ಬೇಕಾಗಿಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಂಗಾಪುರ ಪ್ರವಾಸ ಮಾಡಬೇಕಾದರೆ ಮೊದಲು ನೆನಪಿಗೆ ಬರುವುದೇ ಹಣ, ನಂತರ ವೀಸಾ-ಪಾಸ್‌ಪೋರ್ಟ್ ವಿಷಯ ನೆನಪಿಗೆ ಬರುತ್ತದೆ. ಆದರೆ ವೀಸಾ ಇಲ್ಲದೆ ಸಿಂಗಾಪುರಕ್ಕೆ ಹೋಗಬಹುದಾಗಿದೆ. ಅಷ್ಟೇ ಏಕೆ ವಿಮಾನದಲ್ಲಿ ಬೇಡ, ರೈಲಿನಲ್ಲೇ ಪ್ರಯಾಣ ಮಾಡಬಹುದಾಗಿದೆ.

  • Share this:

    ಸಿಂಗಾಪುರದ (Singapore) ಹೆಸರು ಕೇಳಿರುತ್ತೀರಿ ಅಥವಾ ಟಿವಿಯಲ್ಲಿ ನೋಡಿರುತ್ತೀರಿ. ಸಿಂಗಾಪುರದ ಪ್ರವಾಸಿ ತಾಣಗಳು, ಸುಂದರ ರಸ್ತೆಗಳು ನೋಡಿದ ತಕ್ಷಣ ಒಂದು ಬಾರಿಯಾದರೂ ಅಲ್ಲಿಗೆ ಹೋಗಬೇಕು ಎಂಬ ಆಸೆ ಹುಟ್ಟುತ್ತದೆ. ಸಿಂಗಾಪುರ ಪ್ರವಾಸ (Travel) ಮಾಡಬೇಕಾದರೆ ಮೊದಲು ನೆನಪಿಗೆ ಬರುವುದೇ ಹಣ (Money), ನಂತರ ವೀಸಾ-ಪಾಸ್‌ಪೋರ್ಟ್ (Visa - Passport) ವಿಷಯ ನೆನಪಿಗೆ ಬರುತ್ತದೆ. ಆದರೆ ವೀಸಾ ಇಲ್ಲದೆ ಸಿಂಗಾಪುರಕ್ಕೆ ಹೋಗಬಹುದಾಗಿದೆ. ಅಷ್ಟೇ ಏಕೆ ವಿಮಾನದಲ್ಲಿ (Flight) ಬೇಡ, ರೈಲಿನಲ್ಲೇ (Train) ಪ್ರಯಾಣ ಮಾಡಬಹುದಾಗಿದೆ.


    ಸಿಂಗಾಪುರಕ್ಕೆ ವೀಸಾ- ಪಾಸ್​​ಪೋರ್ಟ್​ ಅವಶ್ಯಕತೆಯಿಲ್ಲದೆ ಪ್ರಯಾಣ ಬೆಳೆಸಬಹುದು ಎಂದಾಗ ಅಚ್ಚರಿಯಾಗಬಹುದು. ಆದರೆ ನಿಜ ಸಂಗತಿ ಏನೆಂದರೆ ಭಾರತದಲ್ಲೂ ಸಿಂಗಾಪುರ ರೋಡ್​ ಎಂಬ ರೈಲ್ವೆ ನಿಲ್ದಾಣವಿದೆ. ಅಲ್ಲಿದೆ ರೈಲಿನ ಮೂಲಕ ತೆರಳಬಹುದಾಗಿದೆ. ಹೀಗಿದ್ದ ಮೇಲೆ ವೀಸಾ- ಪಾಸ್​​ಪೋರ್ಟ್​ ಅವಶ್ಯಕತೆ ಇದೆಯೇ ಎಂದು ಹೇಳಿ?


    ಸಿಂಗಾಪುರ ರೋಡ್​ ಒಡಿಶಾದಲ್ಲಿದೆ. ಭಾರತೀಯ ರೈಲ್ವೇಯ ಸಹಾಯದಿಂದ ಕೂಡ ಈ 'ಸಿಂಗಪುರ'ದ ಹಾದಿಯನ್ನು ನೀವು ನಿರ್ಧರಿಸಬಹುದು. ಮೊದಲೇ ಹೇಳಿದಂತೆ ಇಲ್ಲಿಗೆ ತೆರಳಲು ವೀಸಾ-ಪಾಸ್‌ಪೋರ್ಟ್ ಅಗತ್ಯವಿಲ್ಲ. ಒಡಿಶಾ ರಾಜ್ಯಕ್ಕೆ ನೀವು ರೈಲು ಹಿಡಿದರೆ ಸಾಕು 'ಸಿಂಗಪುರ' ನಿಲ್ದಾಣ ಸಿಗುತ್ತದೆ.


    ಇದನ್ನೂ ಓದಿ- Knowledge: ಶಾರ್ಕ್ ಕಣ್ಣು ಮುಚ್ಚಿ ನಿದ್ರಿಸುತ್ತದೆಯೇ? ವಿಜ್ಞಾನಿಗಳು ಏನು ಹೇಳಿದ್ದಾರೆ ಕೇಳಿ..


    ಒಡಿಶಾ ರಾಜ್ಯದಲ್ಲಿರುವ ಈ ರೈಲು ನಿಲ್ದಾಣದ ಹೆಸರು 'ಸಿಂಗಪುರ ರಸ್ತೆ ನಿಲ್ದಾಣ'. ಭಾರತೀಯ ರೈಲ್ವೇಯಲ್ಲಿನ ಈ ನಿಲ್ದಾಣದ ಕೋಡ್ ಹೆಸರು 'SPRD/Singapur Road'. ಬಿಲಾಸ್‌ಪುರ ತಿರುಪತಿ ಎಕ್ಸ್‌ಪ್ರೆಸ್, ಹಿರಾಖಂಡ್ ಎಕ್ಸ್‌ಪ್ರೆಸ್, ಸಮತಾ ಎಕ್ಸ್‌ಪ್ರೆಸ್ ಸೇರಿದಂತೆ 25ಕ್ಕೂ ಹೆಚ್ಚು ರೈಲುಗಳು ಈ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತವೆ.


    ವಿಚಿತ್ರ ಹೆಸರಿನ ರೈಲು ನಿಲ್ದಾಣದ ಬಗ್ಗೆ ತಿಳಿಯುವುದು


    ಭಾರತದಲ್ಲೂ 'ಸಿಂಗಪುರ ರೋಡ್ ಸ್ಟೇಷನ್' ಎಂಬ ರೈಲ್ವೇ ಸ್ಟೇಷನ್ ಇದೆ ಎಂದಾಗ ಅಚ್ಚರಿ ಆಗೋದರಲ್ಲಿ ಅನುಮಾನವಿಲ್ಲ. ಇವಿಷ್ಟು ಮಾತ್ರವಲ್ಲ, ಭಾರತದಲ್ಲಿ ಇಂತಹ ವಿಚಿತ್ರ ಹೆಸರಿನ ಅನೇಕ ರೈಲು ನಿಲ್ದಾಣಗಳಿವೆ. ಸಂಬಂಧಗಳಲ್ಲಿ ಕೆಲವು ಹೆಸರುಗಳಿವೆ. ಇದರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿರುವ ರೈಲು ನಿಲ್ದಾಣದ ಹೆಸರು 'ಬಾಪ್ ರೈಲು ನಿಲ್ದಾಣ'. ಅದೇ ಸಮಯದಲ್ಲಿ, ಉದಯಪುರದಲ್ಲಿರುವ ರೈಲು ನಿಲ್ದಾಣದ ಹೆಸರು 'ನಾನಾ' ಮತ್ತು ಜೈಪುರದ ಬಳಿಯಿರುವ ರೈಲು ನಿಲ್ದಾಣದ ಹೆಸರು 'ಸಾಲಿ'. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಬಳಿ 'ಸಹೇಲಿ' ಹೆಸರಿನ ರೈಲು ನಿಲ್ದಾಣವೂ ಇದೆ.


    ಇದನ್ನೂ ಓದಿ- Viral Video: ವಧುವಿನ ಎಂಟ್ರಿ ನೋಡಿ ಕಣ್ಣೀರಿಟ್ಟ ವರ; ಸಖತ್ ವೈರಲ್ ಆಗ್ತಿದೆ ವಿಡಿಯೋ


    ಭಾರತದಲ್ಲಿ ವಿಚಿತ್ರ ಹೆಸರಿನಿಂದ ಕೂಡಿದ ನಗರ- ಹಳ್ಳಿಗಳೂ ಸಹ ಇವೆ. ಅಹಮದಾಬಾದ್​ ಹೆಸರಿನಲ್ಲಿ ಸಂಸ್ಕೃತ, ಇಂಗ್ಲೀಷ್​, ಹಿಂದಿ ಭಾಷೆ ಮತ್ತು ಅರ್ಥವನ್ನು ಒಳಗೊಂಡಿದೆ. ಅಹಂ- ಸಂಸ್ಕೃತ ಪದವಾದರೆ, ದ- ಇಂಗ್ಲೀಷ್​ ಪದ, ಬಾದ್​- ಹಿಂದಿ ಪದ. ಭಾಋತದಲ್ಲಿ ಇಂತಹ ವಿಚಿತ್ರ ಕೆಲವು ಊರುಗಳನ್ನು ಸಹ ನೋಡಬಹುದಾಗಿದೆ. ಕೆಲವೊಂದು ಆಯಾ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಅಲ್ಲಿನ ಭಾಷೆಯ ಸೊಗಡಿನಿಂದಾಗಿ ಊರಿಗೆ ಹೆಸರು ಬಂದಿರುತ್ತದೆ. ಇನ್ನು ಕೆಲವು ಊರುಗಳು ಅಲ್ಲಿನ ರಾಜನ ಹೆಸರು, ಆತ ಮಾಡಿರುವ ಸಾಧನೆಯನ್ನು ಉಲ್ಲೇಖಿಸಿರುತ್ತದೆ.

    Published by:Harshith AS
    First published: