786 Series Note: ನಿಮ್ಮ ಬಳಿಯಿರುವ ಯಾವುದೇ ನೋಟಿನ ಮೇಲೆ 786 ನಂಬರ್ ಇದ್ದರೆ 3 ಲಕ್ಷ ರೂ. ಗಳಿಸಬಹುದು

get Rs 3 lakh in exchange: 786 ಸಂಖ್ಯೆಯ ನೋಟುಗಳಿಗೆ ಡಿಮ್ಯಾಂಡ್​ ಬರಲು ಧಾರ್ಮಿಕ ನಂಬಿಕೆಯೇ ಕಾರಣ. ಈ ಸಂಖ್ಯೆಯನ್ನು ಮುಸ್ಲಿಮರು ಅದೃಷ್ಟವೆಂದು ಪರಿಗಣಿಸುತ್ತಾರೆ ಹಾಗಾಗಿಯೇ ಈ ಸರಣಿಯ ನೋಟುಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ.

ಅದೃಷ್ಟ ಸಂಖ್ಯೆಯ ನೋಟು

ಅದೃಷ್ಟ ಸಂಖ್ಯೆಯ ನೋಟು

  • Share this:
ಹಳೆಯ, ಅಪರೂಪದ ನೋಟುಗಳು ಮತ್ತು ನಾಣ್ಯಗಳು ಸೇರಿದಂತೆ ಪುರಾತನ ವಸ್ತುಗಳನ್ನು ಸಂಗ್ರಹಿಸಲು ಇಷ್ಟಪಡುವ ಅನೇಕ ಜನರಿದ್ದಾರೆ. ನೀವು ಹಳೆಯ ಮತ್ತು ಅಪರೂಪದ ನಾಣ್ಯಗಳು ಅಥವಾ ನೋಟುಗಳನ್ನು ಹೊಂದಿದ್ದರೆ ಈಗ ಲಕ್ಷ ಲಕ್ಷ ರೂಪಾಯಿಗಳನ್ನು ಗಳಿಸಬಹುದು. 786 ಸರಣಿಯ ಹಳೆಯ ನೋಟು ಇದ್ದರೆ ಮನೆಯಲ್ಲಿ ಕುಳಿತು 3 ಲಕ್ಷ ರೂಪಾಯಿಯನ್ನು ಆರಾಮಾಗಿ ಗಳಿಸಬಹುದು.  ನಿಮ್ಮ ಬಳಿ 5, 10, 20, 50, 100 ನೋಟುಗಳಿದ್ದರೂ ಪರವಾಗಿಲ್ಲ, ಆದರೆ ಅದರ ಮೇಲೆ 786 ಸಂಖ್ಯೆ ಮುದ್ರಿಸಬೇಕು. ನಿಮ್ಮ ಬಳಿ 786 ಸಂಖ್ಯೆಯ ನೋಟುಗಳ ಸರಣಿಯಿದ್ದರೆ ತಡ ಮಾಡಬೇಡಿ. ಕೂಡಲೇ ಇಬೇ ವೆಬ್‌ಸೈಟ್‌ಗೆ ಹೋಗಿ ಮತ್ತು ಅಲ್ಲಿ ನಿಮ್ಮ ನೋಟಿನ ಮೌಲ್ಯ ಕಂಡು ನಿಮಗೇ ಅಚ್ಚರಿ ಆಗುತ್ತೆ.

ಭಾರತದಲ್ಲಿ ಇರುವಷ್ಟು ಧಾರ್ಮಿಕ ನಂಬಿಕೆಗಳು ಬೇರೆ ಯಾವ ದೇಶದಲ್ಲಿಯೂ ಇಲ್ಲ ಅನಿಸುತ್ತೆ. 786 ಸಂಖ್ಯೆಯ ನೋಟುಗಳಿಗೆ ಡಿಮ್ಯಾಂಡ್​ ಬರಲು ಧಾರ್ಮಿಕ ನಂಬಿಕೆಯೇ ಕಾರಣ. ಈ ಸಂಖ್ಯೆಯನ್ನು ಮುಸ್ಲಿಮರು ಅದೃಷ್ಟವೆಂದು ಪರಿಗಣಿಸುತ್ತಾರೆ ಹಾಗಾಗಿಯೇ ಈ ಸರಣಿಯ ನೋಟುಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ.

Ebay.com ನಲ್ಲಿ ಹಳೆಯ ನೋಟುಗಳನ್ನು ಮಾರಾಟ ಮಾಡುವುದು ಹೇಗೆ?

  • ಹಂತ 1: www.ebay.com ಗೆ ಭೇಟಿ ನೀಡಿ

  • ಹಂತ 2: ಮುಖಪುಟದಲ್ಲಿ ನೋಂದಣಿ ಮೇಲೆ ಕ್ಲಿಕ್ ಮಾಡಿ ಮತ್ತು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಿ

  •  ಹಂತ 3: ನಿಮ್ಮ ನೋಟಿ ಸ್ಪಷ್ಟ ಮತ್ತು ಸರಿಯಾದ ಚಿತ್ರವನ್ನು ತೆಗೆದುಕೊಂಡು ಅಪ್‌ಲೋಡ್ ಮಾಡಿ. ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲು ವೇದಿಕೆಯನ್ನು ಬಳಸುವ ಜನರಿಗೆ ಇಬೇ ನಿಮ್ಮ ಜಾಹೀರಾತನ್ನು ತೋರಿಸುತ್ತದೆ.

  •  ಹಂತ 4: ನೋಟು ಖರೀದಿಸಲು ಆಸಕ್ತಿ ಹೊಂದಿರುವ ಜನರು ನಿಮ್ಮ ಜಾಹೀರಾತನ್ನು ನೋಡಿ ನಿಮ್ಮನ್ನು ಸಂಪರ್ಕಿಸುತ್ತಾರೆ. ನೀವು ಅವರನ್ನು ಸಂಪರ್ಕಿಸಿ ನೋಟು ಮಾರಾಟ ಮಾಡಬಹುದು.


ಇದನ್ನೂ ಓದಿ: Damage Note from ATM: ಎಟಿಎಂ ಮಿಷಿನ್​​ನಿಂದ ಹರಿದ ನೋಟು ಬಂದರೆ ಕೂಡಲೇ ಈ ರೀತಿ ಮಾಡಿ..

ಇನ್ನು ನಿಮ್ಮ ಬಳಿ ಬ್ಯಾನ್​​ ಆದ 500 ರೂಪಾಯಿ ಮುಖಬೆಲೆಯ ನೋಟುಗಳಿವೆ. ಮೌಲ್ಯ ಇಲ್ಲದ ಈ ನೋಟುಗಳು ಕಾಗದಕ್ಕೆ ಸಮಾನ ಎಂದು ನೀವು ಭಾವಿಸಿದ್ದರೆ ತಪ್ಪು.  ನಿಷೇಧಿಸಿದ ಹಳೆಯ 500 ರೂ. ನೋಟು ನಿಮ್ಮ ಬಳಿ ಇದ್ದರೆ ನೀವು ಮನೆಯಲ್ಲಿಯೇ ಕುಳಿತು 10,000 ರೂ. ಗಳಿಸಬಹುದು.

ಹಳೆಯ 500 ರೂಪಾಯಿ ನೋಟು ಹೊಂದಿದ್ದರೆ ಅದರ ಸರಣಿ ಸಂಖ್ಯೆಯನ್ನು ಪರೀಕ್ಷಿಸಬೇಕು. 500 ರೂ. ನೋಟಿನಲ್ಲಿ ಸರಣಿ ಸಂಖ್ಯೆಯನ್ನು ಎರಡು ಬಾರಿ ಮುದ್ರಿಸಿದರೆ ಅಥವಾ ಸಂಖ್ಯೆಯೇ ಇಲ್ಲದಿದ್ದರೆ ನೀವು 5,000 ಗಳಿಸಬಹುದು. 500 ರೂ. ನೋಟುಗಳ ಅಂಚು ಸಾಮಾನ್ಯಕ್ಕಿಂತ ದೊಡ್ಡದಾಗಿದ್ದರೆ 10,000 ರೂ. ಪಡೆಯಬಹುದು. Quickr ಅಥವಾ Coinbazzar.com ವೆಬ್​​ ಸೈಟ್​​ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಬಳಿಯಿರುವ ನೋಟಿನ ಫೋಟೋವನ್ನು ಅಪ್​​ಲೋಡ್​​ ಮಾಡಿ.  Qucikr ಮತ್ತು Coinbazzr ಹೊರತಾಗಿ ಇತರ ವೆಬ್‌ಸೈಟ್‌ಗಳಿವೆ. ಅಲ್ಲಿ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲಾಗುತ್ತದೆ.

ಮಾತಾ ವೈಷ್ಣೋದೇವಿ ನಾಣ್ಯದ ಮಹಿಮೆ!

ನೀವು ಮಾತಾ ವೈಷ್ಣೋದೇವಿ ಇರುವ 5 ಮತ್ತು 10 ರೂ. ಮುಖಬೆಲೆಯ ನಾಣ್ಯಗಳನ್ನು ಹೊಂದಿದ್ದರೆ, ಅವುಗಳನ್ನು ಹರಾಜಿಗೆ ಹಾಕುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ಈ ನಾಣ್ಯಗಳನ್ನು ಸರ್ಕಾರ 2002 ರಲ್ಲಿ ಬಿಡುಗಡೆ ಮಾಡಿದ್ದು, ಹೆಚ್ಚಿನ ಬೇಡಿಕೆ ಇದೆ. ಹಿಂದೂಗಳು ಮಾತಾ ವೈಷ್ಣೋದೇವಿಯನ್ನು ಬಹಳವಾಗಿ ಗೌರವಿಸುತ್ತಿರುವುದರಿಂದ ಅಂತಹ ಒಂದು ನಾಣ್ಯವನ್ನು ಹೊಂದಲು ಲಕ್ಷಗಟ್ಟಲೆ ಖರ್ಚು ಮಾಡಲು ಸಿದ್ಧರಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: