ಇತ್ತೀಚೆಗಷ್ಟೇ ನಾವು ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ಯೋಗ ಮಾಡುವುದರೊಂದಿಗೆ ಆಚರಿಸಿದ್ದೆವು. ಈಗಂತೂ ಅನೇಕರು ಈ ಯೋಗಭ್ಯಾಸದ ಬಗ್ಗೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದು, ಪ್ರತಿದಿನ ಕೆಲವು ಗಂಟೆಗಳನ್ನು ಈ ಯೋಗಾಭ್ಯಾಸ ಮಾಡುವುದಕ್ಕೆ ಮೀಸಲಿಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇನ್ನೂ ಕೆಲವರು ಈ ಯೋಗದ ತರಬೇತಿಯನ್ನು (Yoga training) ನೀಡುವುದರ ಮೂಲಕ ಯೋಗವು ಇಡೀ ವಿಶ್ವದಲ್ಲಿಯೇ ಒಂದು ಅಭ್ಯಾಸವಾಗಿ ಪರಿವರ್ತಿಸಲು ತಮ್ಮ ಕೈಲಾದಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು. ಪ್ರಸ್ತುತ ದುಬೈನವರಾದ (Dubai) ಭಾರತೀಯ (Indian) ಯೋಗ ಸಾಧಕ ಮತ್ತು ಶಿಕ್ಷಕ (Teacher) ಯಶ್ ಮನ್ಸುಖ್ ಭಾಯ್ ಮೊರಾಡಿಯಾ ಅವರು ಹೀಗೆ ಅನೇಕ ಜನರಿಗೆ ಯೋಗ ತರಬೇತಿ ನೀಡುತ್ತಾ ಇದ್ದಾರೆ.
ಗಿನ್ನಿಸ್ ವಿಶ್ವದಾಖಲೆಯನ್ನು ನಿರ್ಮಿಸಿದ ಯೋಗ ತರಬೇತುದಾರ
ಈಗ ಇವರೇ ಒಂದು ವಿಶಿಷ್ಟವಾದ ಸಾಧನೆಯೊಂದನ್ನು ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ವೃಶ್ಚಿಕಾಸನ ಅಥವಾ ಚೇಳು ಭಂಗಿ (ಸ್ಕಾರ್ಪಿಯನ್ ಪೋಸ್) ಯಲ್ಲಿ ಕುಳಿತುಕೊಳ್ಳುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯುಆರ್) 21 ವರ್ಷದ ಯುವಕನ ವೀಡಿಯೋವನ್ನು ಪೋಸ್ಟ್ ಮಾಡಿ, "ಯಶ್ ಮನ್ಸುಖ್ ಭಾಯ್ ಮೊರಾಡಿಯಾ ಅವರು ಚೇಳಿನ ಭಂಗಿಯನ್ನು ಅತೀ ಹೆಚ್ಚಿನ ಸಮಯದವರೆಗೆ ಎಂದರೆ 29 ನಿಮಿಷ 04 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಂಡಿದ್ದಾರೆ" ಎಂದು ಬರೆದಿದ್ದಾರೆ.
View this post on Instagram
ಇವರು ಈ ಹಿಂದೆ ಇದ್ದಂತಹ 4 ನಿಮಿಷ 47 ಸೆಕೆಂಡುಗಳ ದಾಖಲೆಯನ್ನು ಮುರಿದಿದ್ದಾರೆ. "ಈ ಚೇಳಿನ ಭಂಗಿಯನ್ನು ನೀವು ಹೆಚ್ಚು ಕಾಲ ಹಿಡಿದಷ್ಟೂ, ನಿಮ್ಮ ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಸ್ಥಾಪಿಸಲು ನೀವು ಉತ್ತಮವಾಗಿ ಕಲಿಯುತ್ತೀರಿ" ಎಂದು ಯಶ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತಂಡಕ್ಕೆ ತಿಳಿಸಿದರು. "ನನಗೆ ಈ ಭಂಗಿಯಲ್ಲಿ ನಿಂತಾಗ ನನ್ನ ಕಾಲ್ಬೆರಳುಗಳು ಇವೇ ಎನ್ನುವುದೇ ಮರೆತು ಹೋಗಿತ್ತು. ನನ್ನ ಸೊಂಟ ಮತ್ತು ಬೆನ್ನು ನೋವಾಗುವ ಮೊದಲೇ ಮರಗಟ್ಟಿತು" ಎಂದು ಅವರು ಹೇಳಿದರು.
ಏನಿದು ಚೇಳು ಭಂಗಿ?
ಚೇಳು ಭಂಗಿ ಅಥವಾ ವೃಶ್ಚಿಕಾಸನವು ಒಂದು ಸುಧಾರಿತ ಆಸನವಾಗಿದ್ದು, ಇದು ವಿಲೋಮಗಳು, ಬ್ಯಾಕ್ ಬೆಂಡ್ ಗಳು ಮತ್ತು ಮುಂಗೈ ಸಮತೋಲನದ ಸಂಯೋಜನೆಯನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: Viral Photos: ಆಫೀಸ್ನಲ್ಲಿ ಬಿದ್ದ ಬಾಸ್ ರಾತ್ರೋ ರಾತ್ರಿ ಫೇಮಸ್! ಕೆಲಸಗಾರರ ತರಲೆ ವೈರಲ್
ಈ ಯೋಗಾಸನವು ಎಲ್ಲಾ ದೇಹದ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಉತ್ತಮ ಮಾರ್ಗವಾಗಿದೆ. ಇದು ಕೆಳಗಿನ ಕೈಕಾಲುಗಳು ಮತ್ತು ಕಿಬ್ಬೊಟ್ಟೆಯಲ್ಲಿ ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ತೋಳುಗಳನ್ನು ಬಲಪಡಿಸಲು, ನಮ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬೆನ್ನನ್ನು ಹಿಗ್ಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ಸಮತೋಲನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ಭಂಗಿಯನ್ನು ಸುಧಾರಿಸುತ್ತದೆ.
ಇದನ್ನು ಮಾಡುವುದು ಹೇಗೆ?
ನೀವು ಯೋಗಾಭ್ಯಾಸವನ್ನು ತುಂಬಾನೇ ಗಂಭೀರವಾಗಿ ತೆಗೆದುಕೊಂಡಿದ್ದರೆ ಮಾತ್ರ ನೀವು ಈ ಚೇಳಿನ ಭಂಗಿಯನ್ನು ಪ್ರಯತ್ನಿಸಬಹುದು. ಇದನ್ನು ವಿಶೇಷವಾದ ಮೇಲ್ವಿಚಾರಣೆ ಇಲ್ಲದೆ ಬೇರೆ ರೀತಿಯಲ್ಲಿ ಪ್ರಯತ್ನಿಸಬೇಡಿ. ಇದನ್ನು ಹೇಗೆ ಮಾಡುವುದು ಅಂತ ಇಲ್ಲಿ ನೋಡಿಕೊಳ್ಳಿರಿ.
ಹಂತ 1: ಮೊದಲು ನಿಮ್ಮ ಯೋಗ ಚಾಪೆಯ ಮೇಲೆ, ನಿಮ್ಮ ಕಾಲುಗಳನ್ನು ಒಟ್ಟಿಗೆ ಇರಿಸಿ, ನಿಮ್ಮ ಭುಜಗಳ ಸಮಾನಾಂತರವಾಗಿ ನಿಮ್ಮ ಅಂಗೈಗಳನ್ನು ಊರಿ.
ಹಂತ 2: ಆಮೇಲೆ ಕುತ್ತಿಗೆ, ತಲೆಯನ್ನು ಮೇಲೆತ್ತಿ ಕಾಲುಗಳು ಮತ್ತು ಸೊಂಟದ ಭಾಗವನ್ನು ಮೇಲಕ್ಕೆತ್ತಿ ಕೈಗಳ ಸಹಾಯದಿಂದ ಇಡೀ ದೇಹವನ್ನು ಸಮತೋಲನಗೊಳಿಸಿ.
ಹಂತ 3: ನಿಧಾನವಾಗಿ ಮಂಡಿಯನ್ನು ಬಾಗಿಸಿ ಬೆನ್ನೆಲುಬು ಮತ್ತು ಎದೆಯನ್ನು ಹಿಗ್ಗಿಸಿ ಪಾದವನ್ನು ಶಿರಸ್ಸಿಗೆ ಸ್ಪರ್ಶಿಸಲು ಪ್ರಯತ್ನಿಸಿ. ತೋಳುಗಳನ್ನು ಮೊಣಕೈಯಿಂದ ಭುಜದವರೆಗೆ ಉದ್ದವಾಗಿರಿಸಿ.
ಹಂತ 4: ಈ ಭಂಗಿಯನ್ನು ಹಾಗೆಯೇ ಹಿಡಿದಿಟ್ಟುಕೊಳ್ಳಿ.
ಈ ಭಂಗಿ ಟ್ರೈ ಮಾಡುವ ಮುಂಚೆ ಇದನ್ನೆಲ್ಲಾ ಕಲೆಯಿರಿ
ಚೇಳಿನ ಭಂಗಿಯು ಸುಧಾರಿತ ಯೋಗಾಸನವಾಗಿದ್ದರೂ, ನೀವು ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ.
ಇದನ್ನೂ ಓದಿ: Veena-Vani Twins: ಅಪರೂಪದ ಸಾಧನೆ ಮಾಡಿದ ಹೈದ್ರಾಬಾದ್ನ ಸಯಾಮಿ ಅವಳಿ ಸೋದರಿಯರು
ಚೇಳಿನ ಭಂಗಿಯನ್ನು ಕರಗತ ಮಾಡಿಕೊಳ್ಳಲು, ನೀವು ಚೇಳಿನ ಭಂಗಿಯನ್ನು ಪ್ರಯತ್ನಿಸುವ ಮೊದಲು ಹೆಡ್ ಸ್ಟಾಂಡ್ (ಶೀರ್ಷಾಸನ), ಹ್ಯಾಂಡ್ ಸ್ಟಾಂಡ್ ಪೋಸ್ (ವೃಕ್ಷಾಸನ) ಮತ್ತು ಮುಂಗೈ ಸ್ಟ್ಯಾಂಡ್ ಅನ್ನು ಹೇಗೆ ಮಾಡಬೇಕೆಂದು ನೀವು ತಿಳಿದಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ