Sardar Harihar Singh: ರೋಗಗಳ ವಿರುದ್ಧ ಹೋರಾಡಿ ಗೆದ್ದ ನಿವೃತ್ತ ಪೊಲೀಸ್ ಅಧಿಕಾರಿ! ಇವರ ಫಿಟ್ನೆಸ್ ಮಂತ್ರ ಎಲ್ಲರಿಗೂ ಪ್ರೇರಣೆ

ನಿವೃತ್ತ ಪೊಲೀಸ್ ಅಧಿಕಾರಿ ಒಬ್ಬರು ತಮಗಿರುವ ಕ್ಯಾನ್ಸರ್ ಮತ್ತು ಮೆದುಳಿನ ಪಾರ್ಶ್ವವಾಯುವಿನಂತಹ ಮಹಾಮಾರಿ ರೋಗಗಳ ವಿರುದ್ಧ ಹೇಗೆ ಹೋರಾಡಿದ್ದಾರೆ ಮತ್ತು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ ನೋಡಿ. ಇವರ ಹೋರಾಟವೇ ನಿಮ್ಮೆಲ್ಲರಿಗೂ ಸ್ಫೂರ್ತಿ ನೀಡಬಹುದು...

ಸರ್ದಾರ್ ಹರಿಹರ್ ಸಿಂಗ್

ಸರ್ದಾರ್ ಹರಿಹರ್ ಸಿಂಗ್

  • Share this:
ನಮ್ಮಲ್ಲಿ ಅನೇಕರಿಗೆ ಕ್ಯಾನ್ಸರ್ (Cancer) ರೋಗ ಮೊದಲನೇ ಹಂತದಲ್ಲಿದೆ ಎಂದು ತಿಳಿದರೆ ಸಾಕು ಭಯ ಶುರುವಾಗುತ್ತದೆ. ಆದರೆ ಕೆಲವರು ಮಾತ್ರ ಮಹಾಮಾರಿ ರೋಗ ನಮ್ಮನ್ನು ಅವರಿಸಿಕೊಂಡಿದೆ ಅಂತ ತಿಳಿದಾದ ಮೇಲೂ ಸಹ ಅವರು ಅದರ ವಿರುದ್ಧ ಎದೆಗುಂದದೆ ಹೋರಾಡುತ್ತಾರೆ. ಆದರೆ ಇಲ್ಲೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ (Retired police officer) ಒಬ್ಬರು ತಮಗಿರುವ ಕ್ಯಾನ್ಸರ್ ಮತ್ತು ಮೆದುಳಿನ ಪಾರ್ಶ್ವವಾಯುವಿನಂತಹ ಮಹಾಮಾರಿ ರೋಗಗಳ ವಿರುದ್ಧ ಹೇಗೆ ಹೋರಾಡಿದ್ದಾರೆ ಮತ್ತು ತಮ್ಮ ಆರೋಗ್ಯವನ್ನು (Health) ಕಾಪಾಡಿಕೊಂಡಿದ್ದಾರೆ ನೋಡಿ. 73 ವರ್ಷದ ಸರ್ದಾರ್ ಹರಿಹರ್ ಸಿಂಗ್ (Sardar Harihar Singh) ಎಲ್ಲರಿಗೂ ಪ್ರೇರಣೆ ಆಗುವಂತಹ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನಿವೃತ್ತ ಪೊಲೀಸ್ ಅಧಿಕಾರಿಯ ಫಿಟ್ನೆಸ್ ಮಂತ್ರ
ಈ ವಯಸ್ಸಿನಲ್ಲಿಯೂ ಅವರು ಪ್ರತಿದಿನ ತಪ್ಪದೆ 7.5 ಕಿಲೋ ಮೀಟರ್ ಓಡುತ್ತಾರೆ ಮತ್ತು ಯೋಗ ವ್ಯಾಯಾಮಗಳನ್ನು ಮಾಡುತ್ತಾರೆ, ಇದು ಅವರಿಗಿದ್ದ ವಿವಿಧ ಕಾಯಿಲೆಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಬಹುದು.

ಪಂಜಾಬ್ ಸಿಂಧ್ ಬ್ಯಾಂಕಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸಿಂಗ್ ನಂತರ 1974 ರಲ್ಲಿ ಸಬ್-ಇನ್ಸ್ಪೆಕ್ಟರ್ ಆಗಿ ಪೊಲೀಸ್ ಪಡೆಗೆ ಸೇರಿದರು. ಮೇಡಕ್ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ನಂತರ, ಅವರನ್ನು ಹೈದರಾಬಾದ್ ಗೆ ವರ್ಗಾಯಿಸಲಾಯಿತು, ಅಲ್ಲಿ ಅವರು 2007 ರಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಬಡ್ತಿ ಪಡೆದು ನಿವೃತ್ತಿಯಾಗುವವರೆಗೂ ಕೆಲಸ ಮಾಡಿದರು.

ಆರೋಗ್ಯದ ಬಗ್ಗೆ ಇವರು ಹೇಳಿದ್ದೇನು
2000ನೇ ಇಸವಿಯಲ್ಲಿ, ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿ ಆರು ತಿಂಗಳುಗಳ ಕಾಲ ಹಾಸಿಗೆ ಹಿಡಿದಾಗ ಅವರ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. "ನನ್ನ ಆರೋಗ್ಯವನ್ನು ಮರಳಿ ಪಡೆಯಲು ನಾನು ಬೆಳಿಗ್ಗೆ ಎದ್ದು ಓಡಲು ಮತ್ತು ಯೋಗವನ್ನು ಮಾಡಲು ಶುರು ಮಾಡಿದೆ, ಈ ದೃಢವಾದ ಸಂಕಲ್ಪವೇ ನನ್ನನ್ನು ಇಂದು ಜೀವಂತವಾಗಿರಿಸಿದೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ಹೇಳುತ್ತಾರೆ.

ಇದನ್ನೂ ಓದಿ:  Agnipath Scheme: 30 ರಜೆ, ಸಾವಿನ ಸಂದರ್ಭ 1 ಕೋಟಿ ರೂ! ಅಗ್ನಿಪತ್​ನ ಕೆಲವು ಪ್ರಮುಖ ಪ್ರಯೋಜನಗಳಿವು

ಮೆದುಳಿನ ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡ ನಂತರ, ಅವರು ಲಘು ವ್ಯಾಯಾಮಗಳ ಮೂಲಕ ಶಕ್ತಿಯನ್ನು ಮರಳಿ ಪಡೆಯಲು ಪ್ರಾರಂಭಿಸಿದರು. "ನಾನು ಈ ಕಟ್ಟಡ ನಿರ್ಮಾಣದ ಸ್ಥಳಗಳಿಗೆ ಹೋಗುತ್ತಿದ್ದೆ ಮತ್ತು ಅಲ್ಲಿರುವ ಮರಳಿನ ರಾಶಿಗಳ ಮೇಲೆ ನನ್ನ ದೇಹವನ್ನು ಸಮತೋಲನಗೊಳಿಸುವ ಕೆಲಸ ಮಾಡುತ್ತಿದ್ದೆ. ಅಲ್ಲಿ, ನಾನು ಉಸಿರಾಟದ ವ್ಯಾಯಾಮವನ್ನು ಸಹ ಪ್ರಾರಂಭಿಸಿದೆ" ಎಂದು ಅವರು ಹೇಳುತ್ತಾರೆ. ಪ್ರತಿದಿನ ಓಡುವ ಮೂಲಕ ಮತ್ತು ಯೋಗಾಭ್ಯಾಸ ಮಾಡುವ ಮೂಲಕ, ಅವರು ಬಲವಾದ ರೋಗನಿರೋಧಕ ಶಕ್ತಿಯನ್ನು ಗಳಿಸುವುದು ಮಾತ್ರವಲ್ಲದೆ, 1980 ರಿಂದ ಅವರನ್ನು ಕಾಡುತ್ತಿದ್ದ ಅವರ ದೃಷ್ಟಿ ಸಮಸ್ಯೆಗೂ ಸಹ ಪರಿಹಾರ ಒದಗಿಸಿಕೊಂಡರು.

ಕ್ಯಾನ್ಸರ್ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ
ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಹಂತದಲ್ಲಿದ್ದಾಗ, ಅವರ ಹೊಟ್ಟೆಯಲ್ಲಿ ಗೆಡ್ಡೆ ಪತ್ತೆ ಹಚ್ಚಲಾಯಿತು. 2003 ರಲ್ಲಿ, ಇದು ಕ್ಯಾನ್ಸರ್ ಎಂದು ವೈದ್ಯರು ಹೇಳಿದರು. ಈ ಕ್ಯಾನ್ಸರ್ ಗೆಡ್ಡೆಯನ್ನು ತೆಗೆದುಹಾಕಲು ಅವರು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾದರು, ಈ ಸಮಯದಲ್ಲಿ ಅವರು ತಮ್ಮ ಹೊಟ್ಟೆಯ 80 ಪ್ರತಿಶತವನ್ನು ಸಹ ಕಳೆದುಕೊಂಡರು. ಇದರಿಂದ ಅವರು ಚೇತರಿಸಿಕೊಳ್ಳಲು ಪ್ರಾರಂಭಿಸಿದಾಗ, ಅವರು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೊಂದಿರುವುದು ಕಂಡು ಬಂದಿತು. ಇದಕ್ಕಾಗಿ ಮತ್ತೆ ಅವರು 2005 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.

ಏರ್ಟೆಲ್ ಮ್ಯಾರಥಾನ್'ಗಳ ರಾಯಭಾರಿ ಕಿರೀಟ
ಆದಾಗ್ಯೂ, ಕಾಯಿಲೆಗಳ ಸಂಖ್ಯೆ ಹೆಚ್ಚಾದಂತೆ, ಅವರ ಸಂಕಲ್ಪವು ಬಲಗೊಂಡಿತು. ತನ್ನ ದೇಹವನ್ನು ಬಲಪಡಿಸಿಕೊಳ್ಳಲು ಅವರು ಪ್ರಾಣಾಯಾಮ ಆಸನವನ್ನು ಕರಗತ ಮಾಡಿಕೊಳ್ಳಲು ಪ್ರಾರಂಭಿಸಿದರು. ಅವರು ಹಲವಾರು ಮ್ಯಾರಥಾನ್ ಗಳನ್ನು ಓಡಿದರು ಮತ್ತು 2012 ರಲ್ಲಿ 1 ಗಂಟೆ 38 ನಿಮಿಷಗಳಲ್ಲಿ ಸರ್ಕ್ಯೂಟ್ ಪೂರ್ಣಗೊಳಿಸಿದಾಗ 'ಏರ್ಟೆಲ್ ಮ್ಯಾರಥಾನ್'ಗಳ ರಾಯಭಾರಿಯಾಗಿ ಕಿರೀಟವನ್ನು ಪಡೆದರು. ಈಗ ಅವರು ಕಪಾಲಭಾತಿಯೊಂದಿಗೆ ಏಕಕಾಲದಲ್ಲಿ ಪವನಮುಕ್ತಾಸನ, ಮಂಡುಕಾಸನ, ಮಾರ್ಕತಾಸನ ಮತ್ತು ಭುಜಂಗಾಸನವನ್ನು ಸಹ ಮಾಡುತ್ತಾರೆ.

ಇದನ್ನೂ ಓದಿ:  Unlimited Leave: ಉದ್ಯೋಗಿಗಳಿಗೆ ಬಂಪರ್ ಆಫರ್! 365 ದಿನಗಳ ವೇತನ ಸಹಿತ ರಜೆ ಘೋಷಿಸಿದ ಜನಪ್ರಿಯ ಕಂಪನಿ

ಕೋವಿಡ್ -19 ನಿಂದ ಸಾವಿರಾರು ಜನರು ಸಾವನ್ನಪ್ಪಿದ್ದರೆ, ನಿಯಮಿತ ಯೋಗ ಮತ್ತು ಓಟದಿಂದಾಗಿ ಮಾರಣಾಂತಿಕ ವೈರಸ್ ತನ್ನ ಮೇಲೆ ಪರಿಣಾಮ ಬೀರಲಿಲ್ಲ ಎಂದು ಸಿಂಗ್ ಹೇಳುತ್ತಾರೆ. "ಲಾಕ್ಡೌನ್ ಸಮಯದಲ್ಲಿಯೂ, ನಾನು ನಮ್ಮ ಅಪಾರ್ಟ್ಮೆಂಟ್ ನಲ್ಲಿ ಓಡುವುದನ್ನು ಮುಂದುವರಿಸಿದೆ ಮತ್ತು ಯೋಗಾಭ್ಯಾಸ ಮಾಡಿದೆ" ಎಂದು ಅವರು ಹೇಳುತ್ತಾರೆ.
Published by:Ashwini Prabhu
First published: