Climate Alerts- ಹವಾಮಾನ ಇಲಾಖೆ ಘೋಷಿಸುವ ರೆಡ್, ಗ್ರೀನ್, ಯೆಲ್ಲೋ ಅಲರ್ಟ್​ಗಳ ಅರ್ಥವೇನು?

ಭಾರತೀಯ ಹವಾಮಾನ ಇಲಾಖೆಯು ನೀಡುವ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಯ ಸೇವೆಗಳಲ್ಲಿ ಬಳಸಲಾಗುವ ಬಣ್ಣಗಳು ಹವಾಮಾನದಲ್ಲಿನ ತೀವ್ರತೆಯ ನಿರೀಕ್ಷೆಯನ್ನು ಗ್ರಹಿಸಲು ಬಳಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಈ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆಯು(Meteorological Department) ಉತ್ತರಾಖಂಡ ಒಳಗೊಂಡಂತೆ ಸೋಮವಾರ ದೆಹಲಿಯಲ್ಲಿ ಹಳದಿ ಎಚ್ಚರಿಕೆ ಘೋಷಿಸಿದೆ. ಅದಕ್ಕೆ ಕಾರಣ ವಿಪರೀತ ಚಳಿ (Cold wind)ಗಾಳಿಯ ವಾತಾವರಣ. ಈ ಹಳದಿ ಎಚ್ಚರಿಕೆಯು ಹವಾಮಾನವು ಮತ್ತಷ್ಟು ವಿಷಮಿಸಬಹುದು ಎಂಬುದನ್ನೂ ಸೂಚಿಸುವುದರಿಂದ, ಜನರು ಮತ್ತಷ್ಟು ಜಾಗರೂಕರಾಗಿರಬೇಕಾಗುತ್ತದೆ. ಭಾರತೀಯ ಹವಾಮಾನ ಇಲಾಖೆಯು ಜಿಲ್ಲಾವಾರು ಮತ್ತು ಉಪ ವಿಭಾಗಾವಾರು ಎಚ್ಚರಿಕೆ, ಜಿಲ್ಲಾವಾರು ಮತ್ತು ಠಾಣಾವಾರು ಹವಾಮಾನ ಮುನ್ನೆಚ್ಚರಿಕೆ(Warning) ನೀಡುತ್ತದೆ. ಈ ಎಚ್ಚರಿಕೆಯು ದೇಶಾದ್ಯಂತದ ಹವಾಮಾನದ ಹಾಲಿ ಸ್ಥಿತಿ ವಿವರಿಸುತ್ತದಲ್ಲದೆ, ಮುಂದಿನ ಕೆಲವು ಗಂಟೆಗಳಲ್ಲಿ ಆಗಲಿರುವ ಹವಾಮಾನ ಬದಲಾವಣೆಯನ್ನು ಊಹಿಸುತ್ತದೆ. ಜಿಲ್ಲಾವಾರು ಆಗಲಿರುವ ಚಳಿ ಗಾಳಿ, ಸತತ 5 ದಿನಗಳ ಆಗಲಿರುವ ಭಾರಿ ಮಳೆಯ (Rainfall ) ಕುರಿತು ಭಾರತೀಯ ಹವಾಮಾನ ಇಲಾಖೆಯು ಬಣ್ಣಗಳಲ್ಲಿ ಎಚ್ಚರಿಕೆ ನೀಡುತ್ತದೆ. ಇದರಿಂದ ಜನಸಾಮಾನ್ಯರು ನಿರ್ದಿಷ್ಟ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಯನ್ನು(Weather conditions) ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಹವಾಮಾನ ಮುನ್ಸೂಚನೆ
ವಿವಿಧ ಬಗೆಯ ಬಣ್ಣದ ಎಚ್ಚರಿಕೆಗಳು ನಿರ್ದಿಷ್ಟ ಪ್ರದೇಶದ ಹವಾಮಾನ ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತದೆ. ಪ್ರಮಾಣಿತ ಕಾರ್ಯನಿರ್ವಹಣಾ ವ್ಯವಸ್ಥೆಯ ಪ್ರಕಾರ, ಭಾರತೀಯ ಹವಾಮಾನ ಇಲಾಖೆಯು ನೀಡುವ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಯ ಸೇವೆಗಳಲ್ಲಿ ಬಳಸಲಾಗುವ ಬಣ್ಣಗಳು ಹವಾಮಾನದಲ್ಲಿನ ತೀವ್ರತೆಯ ನಿರೀಕ್ಷೆಯನ್ನು ಗ್ರಹಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: Karnataka Weather Today: ಮೈ ನಡುಗುವ ಚಳಿಗೆ ಕರುನಾಡು ಗಢ ಗಢ

ಈ ಎಚ್ಚರಿಕೆಗಳನ್ನು ಆಡಳಿತ ಯಂತ್ರ ಹವಾಮಾನ ಸಂಬಂಧಿ ಪ್ರಾಕೃತಿಕ ವಿಕೋಪಗಳನ್ನು ನಿರ್ವಹಿಸಲು ತನ್ನ ಸಂಪನ್ಮೂಲಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಬಳಸಲಾಗುತ್ತದೆ.

ರೆಡ್‌ ಅಲರ್ಟ್‌: 24 ಗಂಟೆಯಲ್ಲಿ 70 ಮಿ.ಮೀ., 12 ಗಂಟೆಯಲ್ಲಿ 50 ಮಿ.ಮೀ. ಹಾಗೂ 6 ಗಂಟೆಗಳ ಅವಧಿಯಲ್ಲಿ 40 ಮಿ.ಮೀ. ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದ್ದರೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗುತ್ತದೆ.

ಹಸಿರು ಬಣ್ಣ: ಹಸಿರು ಬಣ್ಣ ಯಾವುದೇ ಎಚ್ಚರಿಕೆಯಿಲ್ಲ ಜನರು ಆರಾಮವಾಗಿ ಓಡಾಡಬಹುದು ಎಂಬುದನ್ನು ಪ್ರತಿನಿಧಿಸುತ್ತದೆ. ಇದರರ್ಥ ಯಾವುದೇ ಕ್ರಿಯೆಯ ಅಗತ್ಯವಿಲ್ಲವೆಂದು.

ಹಳದಿ ಬಣ್ಣ: ಈ ಬಣ್ಣವು ವೀಕ್ಷಣೆಯಲ್ಲಿರಿ ಎಂಬುದನ್ನು ಸೂಚಿಸುತ್ತದೆ. ಇದರರ್ಥ ಆಡಳಿತ ಯಂತ್ರವು ಮಾಹಿತಿ ನವೀಕರಿಸುತ್ತಿರಬೇಕು ಎಂದು. ಅಂದರೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ ಜನಸಾಮಾನ್ಯರು ಹೊರಬರುವ ಮುನ್ನ ಯೋಚಿಸಬೇಕು ಎಂಬುದಾಗಿದೆ.

ಕೇಸರಿಬಣ್ಣ: ಈ ಬಣ್ಣವು ಎಚ್ಚರವನ್ನು ಪ್ರತಿನಿಧಿಸುತ್ತದೆ ಮತ್ತು ಆಡಳಿತ ಯಂತ್ರಕ್ಕೆ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಸೂಚಿಸುತ್ತದೆ.

ಬಣ್ಣವು ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರಕ್ಕೆ ನಿರೀಕ್ಷಿಸಲಾಗಿರುವ ಹವಾಮಾನದ ಕುರಿತು ಸಂದೇಶ ನೀಡಿ, ಪ್ರಾಕೃತಿಕ ವಿಕೋಪ ಉಂಟು ಮಾಡುವ ಹಾನಿಯನ್ನು ಕಡಿತಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿರುವಂತೆ ಸೂಚಿಸುತ್ತದೆ.

ಇದನ್ನೂ ಓದಿ: Karnataka Weather Report Today: ರಾಜ್ಯದಲ್ಲಿ ಮುಂದುವರಿದ ಚಳಿ: ನಿಮ್ಮ ಜಿಲ್ಲೆಯ ವಾತಾವರಣ ಹೇಗಿದೆ?

ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
ಆರಾಮದಾಯಕ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ದೇಹದ ಉಷ್ಣತೆಯನ್ನು ನಿಯಂತ್ರಿಸಿ- ನಿಮ್ಮ ಕೈಗಳನ್ನು ಶುಚಿಯಾಗಿರಿಸಿ ಮತ್ತು ರೋಗಾಣು ಮುಕ್ತವಾಗಿರಿಸಿಕೊಳ್ಳಿ.
ಕೊಳಕು ಕೈಗಳಿಂದ ನಿಮ್ಮ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಮುಟ್ಟುವ ಅಭ್ಯಾಸ ಬಿಡಿ
ಗಾಳಿಯ ಗುಣಮಟ್ಟ ಉತ್ತಮವಾಗಿಲ್ಲದಿದ್ದರೆ ವಾಕಿಂಗ್ ಹೋಗಬೇಡಿ. ಮನೆಯಲ್ಲಿ ಏರೋಬಿಕ್ ವ್ಯಾಯಾಮ ಮಾಡಿ. ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿ.
ನಿಮ್ಮ ಮನೆಯಲ್ಲಿ ಧೂಳುಗಳನ್ನು ಸ್ವಚ್ಛ ಮಾಡಿ, ಅಲರ್ಜಿ ವಸ್ತುಗಳಿಂದ ದೂರವಿರಿ. ಹಾಸಿಗೆಗಳು, ಕಾರ್ಪೆಟ್‌ಗಳು, ದಿಂಬುಗಳು ಮತ್ತು ಸೋಫಾಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.-
ಧೂಮಪಾನ ಮಾಡಬೇಡಿ ಮತ್ತು ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ. ಯಾವಾಗಲೂ ಹೈಡ್ರೇಟೆಡ್ ಆಗಿರಿ. ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳಿ. ಅಪಾಯ ಹೆಚ್ಚು ಮಾಡುವ ಮನೆಮದ್ದುಗಳನ್ನು ಪ್ರಯತ್ನಿಸಬೇಡಿ.
Published by:vanithasanjevani vanithasanjevani
First published: