ಪ್ರಮಾಣಿಕತೆ ಮೆರೆದ ಬಾಲಕನಿಗೆ ನಟ 'ರಜನಿಕಾಂತ್'​ ನೀಡಿದ ಗಿಫ್ಟ್​ ಏನು ಗೊತ್ತಾ ?

news18
Updated:July 15, 2018, 9:21 PM IST
ಪ್ರಮಾಣಿಕತೆ ಮೆರೆದ ಬಾಲಕನಿಗೆ ನಟ 'ರಜನಿಕಾಂತ್'​ ನೀಡಿದ ಗಿಫ್ಟ್​ ಏನು ಗೊತ್ತಾ ?
news18
Updated: July 15, 2018, 9:21 PM IST
-ನ್ಯೂಸ್ 18 ಕನ್ನಡ

ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ, ಅದಕ್ಕಾಗಿಯೇ ಮಕ್ಕಳನ್ನು ದೇವರಿಗೆ ಸಮ ಎನ್ನುತ್ತಾರೆ. ತಮಿಳುನಾಡಿನ 7 ವರ್ಷದ ಯಾಸಿನ್ ಮೂಲಕ ಅದು ಮತ್ತೊಮ್ಮೆ ಸಾಬೀತಾಗಿದೆ.

ಇತ್ತೀಚೆಗೆ ಶಾಲೆಗೆ ಹೋಗುವ ದಾರಿಯಲ್ಲಿ ಯಾಸಿನ್​ಗೆ 50 ಸಾವಿರ ಹೊಂದಿರುವ ಪರ್ಸ್​ ಒಂದು ಬಿದ್ದು ಸಿಕ್ಕಿದೆ. ಸಿಕ್ಕಿರುವ ಪರ್ಸ್  ಅನ್ನು ಮುಗ್ದ ಮನಸಿನ​ ಬಾಲಕ ಶಾಲೆಯ ಪ್ರಿನ್ಸಿಪಾಲ್​ಗೆ ಒಪ್ಪಿಸಿದ್ದಾನೆ.  ಪ್ರಿನ್ಸಿಪಾಲ್ ಇದನ್ನು​ ಪೊಲೀಸ್​ ಸ್ಟೇಶನ್​ಗೆ ಹಸ್ತಾಂತರಿಸಿ, ಸಬಂಧಪಟ್ಟವರಿಗೆ ತಲುಪುವಂತೆ ನೋಡಿಕೊಂಡಿದ್ದಾರೆ.ಈ ಸುದ್ದಿಯು ತಮಿಳುನಾಡಿನಾದ್ಯಂತ ವೈರಲ್ ಆಗಿದೆ. 2ನೇ ತರಗತಿಯ ಯಾಸಿನ್​ನ ಪ್ರಮಾಣಿಕತೆ ಸಾಮಾಜಿಕ ತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇದನ್ನು ತಿಳಿದ ಸೂಪರ್ ಸ್ಟಾರ್ ನಟ  ರಜನಿಕಾಂತ್ ಭಾನುವಾರ ಯಾಸೀನ್ ಮತ್ತು ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ.

ಕಳ್ಳತನ ,ಮೋಸ, ವಂಚನೆ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ ಸಿಕ್ಕಿರುವ ಹಣ ತನ್ನದಲ್ಲ ಎಂದು ಹಿಂತಿರುಗಿಸಿರುವ ಯಾಸಿನ್​ನ ಪ್ರಯಾಣಿಕತೆಗೆ ರಜನಿ ಮೆಚ್ಚುಗೆ ಸೂಚಿಸಿ, ಅಭಿನಂದಿಸಿದ್ದಾರೆ.ಅಲ್ಲದೆ ಯಾಸಿನ್​ನ ಮುಂದಿನ​ ವಿದ್ಯಾಭ್ಯಾಸದ ಖರ್ಚು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಯಾಸಿನ್​ನ ಅಲ್ಲೇ ವಿದ್ಯಾಭ್ಯಾಸ ಮುಂದುವರಿಸಲಿ ಎಂದು ತಿಳಿಸಿರುವ ಮುಂದಿನ ವಿದ್ಯಭ್ಯಾಸದ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದಾರೆ.ಯಾಸಿನ್​ನ ಮುಂದಿನ ವಿದ್ಯಾಭ್ಯಾಸದ ವೆಚ್ಚ ಭರಿಸುವುದಾಗಿ ಪೋಷಕರಿಗೆ ಮಾತು ನೀಡಿರುವ ರಜನಿಕಾಂತ್ ಈ ಬಾಲಕನ ಪ್ರಯಾಣಿಕತೆ ಎಲ್ಲರಿಗೂ ದೊಡ್ಡ ಸ್ಪೂರ್ತಿಯಾಗಲಿ ಎಂದು ತಿಳಿಸಿದ್ದಾರೆ.​
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...